Gruhalakshmi- ಅರ್ಜಿ ಸಲ್ಲಿಸಿದ ಬಳಿಕವು ಗೃಹಲಕ್ಷ್ಮಿ ಹಣ ಬರಲಿಲ್ಲ ಎಂದು ಚಿಂತಿಸಬೇಡಿ, ಈ ದಿನಾಂಕದಂದು ಒಟ್ಟಿಗೆ ಜಮಾ ಆಗುತ್ತೆ 4 ಸಾವಿರ.

ರಾಜ್ಯ ಸರಕಾರದಿಂದ ಆಗಸ್ಟ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ(gruhalakshmi 1st instalment0 ನೋಂದಣಿ ಮಾಡಿಕೊಂಡ ಪಡಿತರ ಚೀಟಿ ಯಜಮಾನಿಯರ ಖಾತೆಗೆ ಮೊದಲನೇ ಕಂತಿನ  ಹಣವನ್ನು ವರ್ಗಾವಣೆ ಮಾಡಲಾಗಿತ್ತು.

ರಾಜ್ಯ ಸರಕಾರದಿಂದ ಆಗಸ್ಟ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆಯಡಿ(gruhalakshmi 1st instalment0 ನೋಂದಣಿ ಮಾಡಿಕೊಂಡ ಪಡಿತರ ಚೀಟಿ ಯಜಮಾನಿಯರ ಖಾತೆಗೆ ಮೊದಲನೇ ಕಂತಿನ  ಹಣವನ್ನು ವರ್ಗಾವಣೆ ಮಾಡಲಾಗಿತ್ತು.

ಅದರೆ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸಿದ 9 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಮೊದಲನೆ ಕಂತಿನ ರೂ 2,000 ವರ್ಗಾವಣೆ ಅಗಿರಲ್ಲಿಲ, ಈ ಫಲಾನುಭವಿಗಳಿಗೆ ಮೊದಲನೇ ಕಂತಿನ ಹಣ ಯಾವಾಗ ಜಮಾ? ಅಗಲಿದೆ ಮತ್ತು ಇವರು ಹಣ ವರ್ಗಾವಣೆ ಸಂಬಂಧಪಟ್ಟಂತೆ ಯಾವೆಲ್ಲ ಕ್ರಮ ಅನುಸರಿಸಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿರುವ ಮಾಹಿತಿಯನ್ನು ಈ ಕೆಳಗೆ  ವಿವರಿಸಲಾಗಿದೆ. 

ಈ ಯೋಜನೆಗೆ  ಇದುವರೆಗೆ ಬರೋಬ್ಬರಿ 1.14 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದು ಈ ಪೈಕಿ 9 ಲಕ್ಷ ಫಲಾನುಭವಿಗಳಿಗೆ ಇನ್ನೂ ಹಣ ವರ್ಗಾವಣೆ ಅಗದ ಕಾರಣ ಅನೇಕ ಜನರಲ್ಲಿ ಗೊಂದಲ ಉಂಟಾಗಿದ್ದು ನಮಗೆ ಯಾವಾಗ ಹಣ ಸಿಗುತ್ತದೆ ಎಂದು ಮತ್ತು ಅರ್ಜಿ ಸ್ಥತಿ ಕುರಿತು ಎಲ್ಲಿ ಚೆಕ್ ಮಾಡಬೇಕು ಎಂದು ಸರಿಯಾದ ಮಾಹಿತಿ ಸಿಗದಂತಾಗಿದೆ.

ಇನ್ನೂ 'ಗೃಹಲಕ್ಷ್ಮಿ' ಹಣ ಬರಲಿಲ್ಲ ಎಂದು ಮಹಿಳೆಯರು ಚಿಂತಿಸುವ ಅಗತ್ಯವಿಲ್ಲ, ಇನ್ನು ಮುಂದೆ ಒಂದು ತಿಂಗಳು ಬಾಕಿ ಹಣ ಪೆಂಡಿಂಗ್ ಇದ್ದರೆ ಒಂದೇ ಬಾರಿಗೆ ಬಾಕಿ ತಿಂಗಳು ಸೇರಿ 2 ತಿಂಗಳ ಹಣವನ್ನು ಪ್ರತಿ ತಿಂಗಳು 15 ನೇ ತಾರೀಕಿಗೆ ಗೃಹಲಕ್ಷ್ಮಿ ಹಣವನ್ನು ತಲುಪಿಸಲು ಪ್ರಯತ್ನಿಸುತ್ತೇವೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Ration Card update: ಇಂದಿನಿಂದ ರೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ! ಯಾವೆಲ್ಲ ದಾಖಲಾತಿಗಳು  ಬೇಕಾಗುತ್ತದೆ?

ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲು ಪ್ರತಿ ದಿನವೂ ಕೂಡ ಹಣದ ವರ್ಗಾವಣೆಗೆ ಲಿಮಿಟ್ ಇರುವುದರಿಂದ ಮೊದಲನೇ ಕಂತಿನ ಹಣ ತಲುಪಿಸುವುದು ತಡವಾಗುತ್ತಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 30ರ ಒಳಗೆ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ವರ್ಗಾವಣೆ ಅಗಲಿದೆ. ಇದರ ಜೊತೆಯಲ್ಲಿ ಅರ್ಜಿ ಸಲ್ಲಿಸಿದವರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗಿಲ್ಲ ಎಂದರೆ ಅಥವಾ ಆಧಾರ್ ಲಿಂಕ್ ಆಗಿದ್ದರು ಆ ಖಾತೆ ಆಕ್ಟಿವ್ ಆಗಿಲ್ಲ ಎಂದರೆ ಇದನ್ನು ತಪ್ಪದೇ ಸರಿಪಡಿಸಿಕೊಳ್ಳಬೇಕು.

Gruhalakshmi total amount- ಇಲ್ಲಿಯವರೆಗೆ ಈ ಯೋಜನೆಗೆ ಎಷ್ಟು ಹಣ ಬಿಡುಗಡೆ ಮಾಡಲಾಗಿದೆ?

ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನರಿಗೆ ಮಾಸಿಕ 2 ಸಾವಿರ ರೂಪಾಯಿ ಅರ್ಥಿಕ ನೆರವು ವರ್ಗಾವಣೆ ಮಾಡಲಾಗುತ್ತಿದ್ದು, ಈ ಯೋಜನೆಗಾಗಿ ಅರ್ಥಿಕ  ಇಲಾಖೆಯಿಂದ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಅವಧಿಗೆ 4600 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. 2023 -24 ನೇ ಸಾಲಿಗೆ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ 17500 ಕೋಟಿ ರೂ. ನಿಗದಿ ಮಾಡಲಾಗಿದ್ದು, ಮೊದಲ ಕಂತು 4375 ಕೋಟಿ ರೂ. ಬಿಡುಗಡೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯೋಜನೆಗೆ ಸಂಬಂಧಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ಷರತ್ತು ವಿಧಿಸಿ ಮೊದಲ ಕಂತಿನ ಅನುದಾನ 4,600 ಕೋಟಿ ರೂ. ಬಿಡುಗಡೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: Crop insurance status: ಬೆಳೆ ವಿಮೆ ಕುರಿತು ಈ ರೀತಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬಂದಿದೆಯೇ? ಹಾಗಾದರೆ ಇದಕ್ಕೆ ಪರಿಹಾರವೇನು?

Gruhalakshmi application status- ನಿಮ್ಮ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಹಣ ಜಮಾ ಅಗಿದಿಯೋ ಇಲ್ಲವೂ? ಎಂದು ಮಾಹಿತಿ ತಿಳಿದುಕೊಳ್ಳಲು ಇದವರೆಗೆ ಅಧಿಕೃತ ಜಾಲತಾಣ ಅಥವ ಸಹಾಯವಾಣಿ ಇರುವುದಿಲ್ಲ ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಲಕರ್ ಶೀಘ್ರದಲ್ಲೇ ಇದಕ್ಕೆ ಸೂಕ್ತ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಅದರೆ ಅಲ್ಲಿಯವರೆಗೆ ಅರ್ಜಿದಾರರು ಈ https://www.krushikamitra.com/Gruhalakshmi-status ಲಿಂಕ್ ಮೇಲೆ ಕ್ಲಿಕ್ ಮಾಡಿ ಅ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿ ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳಬವುದು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಅಂಕಣಗಳು:

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

Gruha Lakshmi : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department