Guarantee Yojana-2024: ಗೃಹಲಕ್ಷ್ಮಿ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

ಅರ್ಹ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ(Guarantee Yojana-2024) ಹಣ ಬಿಡುಗಡೆ ಕುರಿತು ಸಾರ್ವಜನಿಕ ವಲಯದಲಿ ಉದ್ಬವಿಸಿರುವ ಗೊಂದಲಕ್ಕೆ ಸೂಕ್ತ ಸ್ಪಷ್ಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Guarantee Yojana-2024: ಗೃಹಲಕ್ಷ್ಮಿ ಹಣ ಬಿಡುಗಡೆ ದಿನಾಂಕ ಪ್ರಕಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!
Karnataka Guarantee Yojana-2024

ಅರ್ಹ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ(Guarantee Yojana-2024) ಹಣ ಬಿಡುಗಡೆ ಕುರಿತು ಸಾರ್ವಜನಿಕ ವಲಯದಲಿ ಉದ್ಬವಿಸಿರುವ ಗೊಂದಲಕ್ಕೆ ಸೂಕ್ತ ಸ್ಪಷ್ಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳ ರೂ 2,000 ಅರ್ಥಿಕ ನೆರವನ್ನು ಅರ್ಹ ಅರ್ಜಿದಾರರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಸ್ಪಷ್ಟನೆ ವಿವರವನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.

ಸಾರ್ವಜನಿಕ ವಲಯದಲ್ಲಿ ಇನ್ನು ಮುಂದೆ ಗ್ಯಾರಂಟಿ ಯೋಜನೆಯ ಹಣ ಬರುವುದಿಲ್ಲ! ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ, ಸರಕಾರದ ಬಳಿ ಈ ಯೋಜನೆಗಳಿಗೆ ಬಳಕೆ ಮಾಡಲು ಹಣದ ಕೊರತೆಯಿದೆ ಎನ್ನುವ ಗೊಂದಲಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Crop insurance last date-ಈ ಬೆಳೆಗಳಿಗೆ ಬೆಳೆ ವಿಮೆ ಕಟ್ಟಲು ಇನ್ನು 15-30 ದಿನ ಮಾತ್ರ ಬಾಕಿ ಇದೆ!

Guarantee schemes-2024: ಯಾವುದೇ ಕಾರಣಕ್ಕೂ ಐದು ಗ್ಯಾರಂಟಿ ಯೋಜನೆಗಳು ನಿಲ್ಲಿಸುವುದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 

ಗ್ಯಾರಂಟಿ ಯೋಜನೆ ಸ್ಥಗಿತ ವದಂತಿ ಕುರಿತು ಮತ್ತು ಗೃಹಲಕ್ಷ್ಮಿ ರೂ 2,000 ಹಣ ಬಿಡುಗಡೆ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಐದು ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುವುದಿಲ್ಲ ಮತ್ತು ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳ ಮಾಸಿಕ ರೂ 2,000 ಹಣ ಬಿಡುಗಡೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಏಪ್ರಿಲ್-2024 ತಿಂಗಳ ಹಣ ಮೇ 1ರಂದು ಜಮಾ ಅಗಿದೆ ಜೂನ್ ತಿಂಗಳ ಹಣ ಈಗಾಗಲೇ ಖಜಾನೆ ಖಾತೆಗೆ ವರ್ಗಾವಣೆ ಮಾಡಲಾಗಿದ್ದು ಎಲ್ಲಾ ಫಲಾನುಭವಿಗಳ ಖಾತೆಗೆ ಇನ್ನು ಒಂದೆರಡು ದಿನದಲ್ಲಿ ಜಮಾ ಅಗಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: karnataka dam water level: ಕರ್ನಾಟಕ ಜಲಾಶಯಗಳ ನೀರಿನ ಮಟ್ಟ ಮತ್ತು ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಮಾಹಿತಿ!

How to check gruhalakshmi status-ಗೃಹಲಕ್ಷ್ಮಿ ಯೋಜನೆಯಡಿ ಹಣ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

ಅರ್ಜಿದಾರರು ಈ DBT Karnataka app link ಲಿಂಕ್ ಮೇಲೆ ಕ್ಲಿಕ್ ಮಾಡಿ ಡಿಬಿಡಿ ಕರ್ನಾಟಕ(DBT karnataka) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಅಧಾರ್ ಕಾರ್ಡ ನಂಬರ್ ಅನ್ನು ಹಾಕಿ ಪಾವತಿ ಸ್ಥಿತಿ/Payment Status ಬಟನ್ ಮೇಲೆ ಕ್ಲಿಕ್ ಮಾಡಿ ಈ ಯೋಜನೆಯಡಿ ರೂ 2,000 ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

ಅಥವಾ ನೀವು ಯಾವ ಬ್ಯಾಂಕ್ ನಲ್ಲಿ ಅಕೌಂಟ್ ಹೊಂದಿರುತ್ತಿರೋ ಆ ಬ್ಯಾಂಕ್ ನ ಬ್ಯಾಲೆನ್ಸ್ ಚೆಕ್ ಸಹಾಯವಾಣಿಗೆ ಕರೆ ಮಾಡಿ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಅಗಿದಿಯೋ ಇಲ್ಲವೋ? ಎನ್ನುವ ವಿವರವನ್ನು ಪಡೆಯಬಹುದು.

ಇದನ್ನೂ ಓದಿ: RTC aadhar link-2024: ರೈತರ ಜಮೀನುಗಳಿಗೆ ಆಧಾರ್ ಲಿಂಕ್!

Gruhalakshmi list- ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿ:

ಅರ್ಜಿದಾರರು ಈ ಲಿಂಕ್ Gruhalakshmi list ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ "ಇ-ಪಡಿತರ ಚೀಟಿ" ಬಟನ್ ಮೇಲೆ ಕ್ಲಿಕ್ ಮಾಡಿ ಹಳ್ಳಿ ಪಟ್ಟಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಬಳಿಕ ನಂತರದ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯತ್, ಹಳ್ಳಿಯ ಹೆಸರನ್ನು ಆಯ್ಕೆ ಮಾಡಿಕೊಂಡು "Go" ಬಟನ್ ಮೇಲೆ ಕ್ಲಿಕ್ ಮಾಡಿದರೆ ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳ ನಿಮ್ಮ ಹಳ್ಳಿಯ ಪಟ್ಟಿ ತೋರಿಸುತ್ತದೆ.