HAL Jobs Notification-2024: ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ ನಿಂದ 182 ಹುದ್ದೆಗಳ ನೇಮಕಾತಿ!

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಟೆಕ್ನಿಷಿಯನ್ ಹಾಗೂ ಆಪರೇಟರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಮಾಹಿತಿ  ಇಲ್ಲಿದೆ.

HAL Jobs Notification-2024: ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ ನಿಂದ 182 ಹುದ್ದೆಗಳ ನೇಮಕಾತಿ!
HAL Jobs Notification-2024

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಟೆಕ್ನಿಷಿಯನ್ ಹಾಗೂ ಆಪರೇಟರ್ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಮಾಹಿತಿ  ಇಲ್ಲಿದೆ.

Hindustan Aeronautics Limited - ಭಾರತ ದೇಶದ ಸಾರ್ವಜನಿಕ ವಲಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾಗಿದ್ದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಈ ಕಂಪನಿಯಲ್ಲಿ ಖಾಲಿ ಇರುವ ಟೆಕ್ನಿಷಿಯನ್ Technician ಮತ್ತು ಆಪರೇಟರ್ Operator  ಹುದ್ದೆಗಳ ನೇಮಕಾತಿಯ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಶೈಕ್ಷಣಿಕ ಅರ್ಹತೆಗಳು ವಯೋಮಿತಿ ಅರ್ಹತೆಗಳು ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ನೀಡಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಜೂನ್ 12ನೇ ತಾರೀಖಿನ ಒಳಗಾಗಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Parihara amount-2024: ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ!

ನೇಮಕಾತಿ ವಿವರ : Recruitment Details 

• ನೇಮಕಾತಿ ಸಂಸ್ಥೆ : ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 
• ಖಾಲಿ ಹುದ್ದೆಗಳ ಸಂಖ್ಯೆ : 182 ಹುದ್ದೆಗಳು 
• ಅರ್ಜಿ ಸಲ್ಲಿಸುವುದು : ಆನ್ಲೈನ್ ಮುಖಾಂತರ 

ಹುದ್ದೆಗಳ ಮಾಹಿತಿ - Vacancy Details 

 ಒಟ್ಟು 182 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಹುದ್ದೆಗಳ ವಿಂಗಡಣೆಯು ಈ ಕೆಳಗಿನಂತಿವೆ.
• ಟೆಕ್ನಿಷಿಯನ್ (Technician) - 46 ಹುದ್ದೆ 
• ಆಪರೇಟರ್ (Operator) - 136 ಹುದ್ದೆ 

ಇದನ್ನೂ ಓದಿ: RTC adhar link-2024: ರೈತರು ಸರಕಾರದ ಯಾವುದೇ ಸೌಲಭ್ಯ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಅರ್ಹತೆಗಳು - ಖಾಲಿ ಇರುವ ಟೆಚ್ನಿಷಿಯನ್  ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮಾ (Diploma) ಮುಗಿಸಿರಬೇಕು. ಅದೇ ರೀತಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು ಅಭ್ಯರ್ಥಿಗಳು ಸಂಬಂಧಪಟ್ಟ ವಿಷಯದಲ್ಲಿ ಐಟಿಐ (ITI) ಪೂರ್ಣಗೊಳಿಸಬೇಕು.  

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ಮತ್ತು ಗರಿಷ್ಠ 28 ವರ್ಷದ ಒಳಗಿರಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮನುಸಾರ ವಯೋಮಿತಿ ಸಡಿಲಿಕೆ Age relaxation ಇರುತ್ತದೆ. 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜೂನ್ 12, 2024

ಮಾಸಿಕ ವೇತನ - ಈ ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನವು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಇರಲಿದೆ.
• ಟೆಕ್ನಿಷಿಯನ್ ಹುದ್ದೆಗಳಿಗೆ - ₹46,511/-
• ಆಪರೇಟರ್ ಹುದ್ದೆಗಳಿಗೆ - ₹44,544/-

ಇದನ್ನೂ ಓದಿ: How to link pan card aadhar card: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರಿಗೆ ಶಾಕಿಂಗ್ ನ್ಯೂಸ್!

How to apply - ಅರ್ಜಿ ಸಲ್ಲಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಜೂನ್ 12ರ ಒಳಗಾಗಿ ಅರ್ಜಿ  ಸಲ್ಲಿಸಬೇಕು.

ಪ್ರಮುಖ ಲಿಂಕ್ ಗಳು : 

• ಅರ್ಜಿ ಸಲ್ಲಿಸುವ ಲಿಂಕ್ : Click here

• ನೋಟಿಫಿಕೇಶನ್ : Download Now