HESCOM Job application- ಹೆಸ್ಕಾಂ ನಿಂದ 338 ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನ!

August 9, 2024 | Siddesh
HESCOM Job application- ಹೆಸ್ಕಾಂ ನಿಂದ 338 ಹುದ್ದೆಗಳನ್ನು ಭರ್ತಿಗೆ ಅರ್ಜಿ ಆಹ್ವಾನ!
Share Now:

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ, ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇಮಕಾತಿ(HESCOM Recruitment 2024 ) ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 338 ಹುದ್ದೆಗಳು ಖಾಲಿಯಿದ್ದು, ಅರ್ಜಿ ಸಲ್ಲಿಸಲು ಕೇವಲ ಇನ್ನೂ 11 ದಿನಗಳ ಕಾಲಾವಕಾಶ ನೀಡಲಾಗಿದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ(HESCOM job notification) ಖಾಲಿಯಾಗುವ ವೇದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು, ನೊಂದಣಿ ಪ್ರಕ್ರಿಯೆ ಹೇಗೆ? ಆಯ್ಕೆಯಾದವರಿಗೆ ಸಿಗುವ ಸ್ಟೈಪೆಂಡ್ ಹಾಗೂ ವಿವಿಧ ನೇಮಕಾತಿಯ ವಿವರವನ್ನು ಕೆಳಗೆ ನೀಡಲಾಗಿದೆ.

ಅರ್ಹ ಅಭ್ಯರ್ಥಿಗಳಿಗೆ ಒಂದು ವರ್ಷದ ಉದ್ಯೋಗ ತರಬೇತಿ ಜೊತೆಗೆ ಸ್ಟೈಪೆಂಡ ನೀಡಲು, ಖಾಲಿ ಇರುವ ಆಪ್ರೆಂಟಿಸ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: scholarship application- ಈ ಯೋಜನೆಯಡಿ ಪ್ರತಿ ತಿಂಗಳು ರೂ 4,000 ಸಾವಿರ ವಿದ್ಯಾರ್ಥಿ ವೇತನ ಪಡೆಯಬಹುದು!

HESCOM Recruitment Information- ನೇಮಕಾತಿ ವಿವರ 

• ನೇಮಕಾತಿ ಇಲಾಖೆ - ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ 
• ಒಟ್ಟು ಖಾಲಿ ಹುದ್ದೆಗಳು - 338 ಹುದ್ದೆಗಳು 
• ಅರ್ಜಿ ಸಲ್ಲಿಕೆ - ಆನ್ಲೈನ್ ಮೂಲಕ 

ಹುದ್ದೆಗಳ ವಿವರ: Vacancy Details 

• ಪದವಿ ಮುಗಿಸಿದವರಿಗೆ - 200 ಹುದ್ದೆಗಳು 
• ಡಿಪ್ಲೋಮಾ ಮುಗಿಸಿದವರಿಗೆ - 138 ಹುದ್ದೆಗಳು 

Education Qualification-ಶೈಕ್ಷಣಿಕ ಅರ್ಹತೆಗಳು - 

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾ ಮುಗಿಸಿರುವವರು ಅರ್ಜಿ ಸಲ್ಲಿಸಲು ಅರ್ಹರು.

ಇದನ್ನೂ ಓದಿ: Free fast food training-ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!

Age limits- ವಯೋಮಿತಿ- ಅಪ್ರೆಂಟಿಸ್ ಶಿಪ್ ಕಾಯ್ದೆಯ ಅನುಸಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಆಯ್ಕೆಯಾದವರಿಗೆ ಸಿಗುವ ಸ್ಟೈಪಂಡ ಎಷ್ಟು?

ಇಂಜಿನಿಯರಿಂಗ್ ಪದವಿ ಮುಗಿಸಿರುವ ಅಭ್ಯರ್ಥಿಗಳಿಗೆ ಮಾಸಿಕ 9 ಸಾವಿರ ರೂಪಾಯಿ ವೇತನವನ್ನು ನೀಡಲಾಗುತ್ತದೆ ಹಾಗೂ ಡಿಪ್ಲೋಮಾ ಮುಗಿಸಿದವರಿಗೆ 8 ಸಾವಿರ ವೇತನವನ್ನು ನೀಡಲಾಗುತ್ತದೆ.

HESCOM job notification- ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು, ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದವರಿಗೆ ಇಮೇಲ್ ಮುಖಾಂತರ ಮಾಹಿತಿಯನ್ನು ತಿಳಿಸಲಾಗುತ್ತದೆ.

ಇದನ್ನೂ ಓದಿ: Gruhalakshmi hana- ಈ ಜಿಲ್ಲೆಯವರಿಗೆ ಮೊದಲ ಹಂತದಲ್ಲಿ ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ!

Selection method- ನೊಂದಣಿ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನ್ಯಾಷನಲ್ ಅಪ್ಪ್ರಂಟಿಸ್ ಶಿಪ್ ಟ್ರೈನಿಂಗ್ ಸ್ಕೀಮ್ (NATS) ಪೋರ್ಟಲ್  ನಲ್ಲಿ ನೊಂದಾಯಿಸಿಕೊಂಡು, ನಂತರ ಹೆಸ್ಕಾಂನ ಅಧಿಕೃತ ಜಾಲತಾಣದಲ್ಲಿ ಅರ್ಜಿ ಸಲ್ಲಿಸಬೇಕು.

Important dates- ಪ್ರಮುಖ ದಿನಾಂಕಗಳು: 

• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 20 ಆಗಸ್ಟ್ 2024
• ಆಯ್ಕೆ ಪಟ್ಟಿ ಬಿಡುಗಡೆ ದಿನಾಂಕ - 27 ಆಗಸ್ಟ್ 2024
• ದಾಖಲಾತಿ ಪರಿಶೀಲನೆ ದಿನಾಂಕ - 09 ಸೆಪ್ಟೆಂಬರ್ 2024

Website links- ಪ್ರಮುಖ ಲಿಂಕುಗಳು : 

• NATS ಜಾಲತಾಣ - Click here
• ಹೆಸ್ಕಾಂ ಜಾಲತಾಣ - Click here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: