HSRP number plate last date- ರಾಜ್ಯ ಸರಕಾರದಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕೊನೆಯ ದಿನಾಂಕ ಪ್ರಕಟ!

HSRP number plate last date- ರಾಜ್ಯ ಸರಕಾರದಿಂದ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಕೊನೆಯ ದಿನಾಂಕ ಪ್ರಕಟ!

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಹೆಚ್‌ಎಸ್‌ಆರ್‌ಪಿ ಅಳವಡಿಸಲು ರಾಜ್ಯ ಸರಕಾರದಿಂದ ಮತ್ತೊಮ್ಮೆ ಪರಿಷ್ಕೃತ ಕೊನೆಯ ದಿನವನ್ನು ಅಧಿಕೃತವಾಗಿ ನಿಗದಿಪಡಿಸಿ ಪ್ರಕಟಣೆ ಹೊರಡಿಸಲಾಗಿದೆ.  

ರಾಜ್ಯದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಶಿತ ನೋಂದಣಿ ಫಲಕವನ್ನು (High Security Registration Plates HSRP) ಅಳವಡಿಸುವುದು ಕಡ್ಡಾಯವಾಗಿದ್ದು, ಹೆಚ್‌ಎಸ್‌ಆರ್‌ಪಿ ಅಳವಡಿಕೆಗೆ ಫೆಬ್ರವರಿ 17 ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಮೇ 31 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

HSRP number plate last date- 31 ಮೇ 2024 ಕೊನೆಯ ದಿನಾಂಕ.

ಸಾರ್ವಜನಿಕರು ತಮ್ಮ ಬೈಕ್ ಮತ್ತು ಕಾರು ಇತರೆ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ ವಾಹನಗಳಿಗೆ ಅತಿ ಸುರಕ್ಶಿತ ನೋಂದಣಿ ಫಲಕವನ್ನು (High Security Registration Plates HSRP) ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ  31 ಮೇ 2024 ದು ಕೊನೆಯ ದಿನಾಂಕವಾಗಿದೆ. 

HSRP number plate helpline- ಸಹಾಯವಾಣಿಯನ್ನು ಸಂಪರ್ಕಿಸಿ:

ಸಾರ್ವಜನಿಕರು ಆನ್‌ಲೈನ್ ಮೂಲಕ ಹೆಚ್.ಎಸ್.ಆರ್.ಪಿ. ಪಡೆಯಲು ತೊಂದರೆಗಳಾದಲ್ಲಿ ದೂರವಾಣಿ ಸಂಖ್ಯೆ 94498 63429, 94498 63429 ಮೂಲಕ ಸಹಾಯವಾಣಿಯನ್ನು ಕಛೇರಿ ಕಾರ್ಯದ ಸಮಯ ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆ ಸಂಪರ್ಕಿಸಬಹುದಾಗಿದೆ.

ಸಾರ್ವಜನಿಕರು https://transport.karnataka.gov.in ಅಥವಾ  www.siam.in ವೆಬ್ಸೈಟ್ ಭೇಟಿ ಮಾಡಿ ವಾಹನಗಳಿಗೆ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಲು ಆನ್‌ಲೈನ್ ಮೂಲಕ ವಿವರಗಳನ್ನು ಒದಗಿಸಿ ಹೆಚ್‌ಎಸ್‌ಆರ್‌ಪಿ ಅಳವಡಿಸುವ ದಿನಾಂಕ, ವಾಹನ ಡೀಲರ್ ಕೇಂದ್ರದ ಹೆಸರು ಮತ್ತು ವಿಳಾಸವನ್ನು ಖಚಿತ ಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. 

ಈ ವೆಬ್-ಸೈಟ್ ಮೂಲಕ ಹೆಚ್‌ಎಸ್‌ಆರ್‌ಪಿ ಅಳವಡಿಸಿದ್ದಲ್ಲಿ ಮಾತ್ರ ಹೆಚ್‌.ಎಸ್‌ಆರ್‌ಪಿ ನೋಂದಣಿ ಫಲಕಗಳು ಮಾನ್ಯತೆ ಹೊಂದಿರುತ್ತವೆ. ಇನ್ನಿತರೆ ಯಾವುದೇ ವೆಬ್ ಪೋರ್ಟಲ್ ಉಪಯೋಗಿಸಿ ಬುಕ್ ಮಾಡಿದ್ದಲ್ಲಿ ಅವುಗಳು ಅನಧಿಕೃತ ನೋಂದಣಿ ಫಲಕಗಳಾಗುತ್ತವೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.