Home guard: 10 ನೇ ತರಗತಿ ಪಾಸಾದವರಿಗೆ 247 ಹೋ ಗಾರ್ಡ ಹುದ್ದೆಗೆ ಅರ್ಜಿ ಆಹ್ವಾನ!

Home guard application: 10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ 247 ಗೃಹರಕ್ಷಕ/ಗೃಹರಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

10 ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ 247 ಗೃಹರಕ್ಷಕ/ಗೃಹರಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳದಲ್ಲಿ ಖಾಲಿ ಇರುವ ಗೃಹರಕ್ಷಕ/ಗೃಹರಕ್ಷಕಿ ಸ್ವಯಂ ಸೇವಕ ಸದಸ್ಯರ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: Parihara list-2024: ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಬರ ಪರಿಹಾರ! ನಿಮ್ಮ ಹೆಸರಿದಿಯಾ ಚೆಕ್ ಮಾಡಿ.

Home guard notification-2024: ನೇಮಕಾತಿಯ ವಿವರ ಹೀಗಿದೆ:

ಒಟ್ಟು ಹುದ್ದೆಗಳು: 247
ಹುದ್ದೆಯ ಹೆಸರು: ಗೃಹರಕ್ಷಕ/ಗೃಹರಕ್ಷಕಿ 
ನೇಮಕಾತಿ ಇಲಾಖೆ: ಜಿಲ್ಲಾ ಗೃಹರಕ್ಷಕ ದಳ, ಚಿಕ್ಕಮಗಳೂರು.

Home guard application- ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

(1) ಅರ್ಜಿದಾರರ ವಯಸ್ಸು ಕನಿಷ್ಥ 19 ರಿಂದ 50 ವರ್ಷದ ಒಳಗಿರಬೇಕು.

(2) ಅಭ್ಯರ್ಥಿಯು 10 ನೇ ತರಗತಿ ಉತ್ತೀರ್ಣರಾಗಿರಬೇಕು.

(3) ಗೃಹರಕ್ಷಕ ಸದಸ್ಯರಾಗ ಬಯಸುವವರು ತಮ್ಮ ವಾಸ ಸ್ಥಳದಿಂದ ತಾವು ಸೇರ ಬಯಸುವ ಘಟಕಕ್ಕೆ 6 ಕಿ ಮೀ ವ್ಯಾಪ್ತಿಯ ಒಳಗಿರಬೇಕು.

ಇದನ್ನೂ ಓದಿ: free skill training- ಉಚಿತ ಬ್ಯೂಟೀಷಿಯನ್, ಜಿಮ್ ಟ್ರೈನರ್, ವೀಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

(4) ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರಬಾರದು.

(5) ದೃಡಕಾಯರಾಗಿದ್ದು ಆರೋಗ್ಯವಂತರಾಗಿರಬೇಕು.

(6) ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು.

ಇದನ್ನೂ ಓದಿ: Gruhalakshmi status-2024: ರೇಷನ್ ಕಾರ್ಡ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಎಷ್ಟು? ಜಮಾ ಅಗಿದೆ ಎಂದು ತಿಳಿಯಬವುದು.

Required documents for Home guard-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ಅರ್ಜಿದಾರರ ಆಧಾರ್ ಕಾರ್ಡ
  • ವಿದ್ಯಾರ್ಹತೆ ಪ್ರಮಾಣ ಪತ್ರ/ಅಂಕಪಟ್ಟಿ.
  • ಜನ್ಮ ದಿನಾಂಕದ ದೃಡೀಕರಣ
  • ವೈದ್ಯಕೀಯ ಪ್ರಮಾಣ ಪತ್ರ
  • ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಪೋಟೋ

ಎಲ್ಲಿ ಅರ್ಜಿ ಸಲ್ಲಿಸಬೇಕು?

ಮೇಲಿ ತಿಳಿಸಿರುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ದಿನಾಂಕ: 31 ಜನವರಿ 2024 ರ ಒಳಗಾಗಿ ನಿಮ್ಮ ವ್ಯಾಪ್ತಿಯ ಗೃಹರಕ್ಷಕ ಘಟಕಾಧಿಕಾರಿಯವರಿಗೆ ಕಚೇರಿ, ಗೃಹರಕ್ಷಕ ದಳ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Labour card application-ಲೇಬರ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ! ಒಂದು ಕಾರ್ಡ ಅನೇಕ ಪ್ರಯೋಜನಗಳು.

ಹುದ್ದೆಗೆ ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಬಳಿಕ ದಾಖಲಾತಿಗಳನ್ನು ಪರೀಶಿಲಿಸಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

Last date- ಅರ್ಜಿ ಸಲ್ಲಿಸಲು ಕೊನೆಯ ದಿನ: 31-01-2024

ಹೆಚ್ಚಿನ ಮಾಹಿತಿಗಾಗಿ: 

ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಅಗ್ನಿಶಾಮಕ ಇಲಾಖೆ ಪಕ್ಕ, ಕೆ ಎಂ ರಸ್ತೆ ಚಿಕ್ಕಮಗಳೂರು ಇಲ್ಲಿ ಸಹಾಯಕ ಬೋಧಕರಾದ ಶ್ರೀ ಕರಿಬಸಪ್ಪ ಎಂ , ಮೊ 8151914734 ಹಾಗೂ ಕಚೇರಿ ಸಂಖ್ಯೆ: 9164283747 ಸಂಪರ್ಕಿಸಬವುದು.

ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!