Horticulture department Schemes- ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಯಡಿ ಅರ್ಜಿ ಅಹ್ವಾನ!

Horticulture department Schemes 2023: ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ(NHM) ವಿವಿಧ ಘಟಕಗಳನ್ನು ಅನುಷ್ಥಾನ ಮಾಡಲು ರೈತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ(NHM Scheme), ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY Scheme), ನರೇಗಾ(mgnrega Scheme), ಎಣ್ಣೆ ತಾಳೆ ವ್ಯವಸಾಯ ಯೋಜನೆ(Oil palm) ಯೋಜನೆಯಡಿ ವಿವಿಧ ಘಟಕಗಳನ್ನು ಅನುಷ್ಥಾನ ಮಾಡಲು ರೈತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ನಮ್ಮ ರಾಜ್ಯದಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಪಟ್ಟ ಸಬ್ಸಿಡಿ ಯೋಜನೆ ಮತ್ತು ತಾಂತ್ರಿಕ ಸಲಹೆಗಳನ್ನು ನೀಡಲು ತೋಟಗಾರಿಕೆ ಇಲಾಖೆಯನ್ನು(Horticulture Department) ಸ್ಥಾಪನೆ ಮಾಡಲಾಗಿದ್ದು ಈ ಇಲಾಖೆಯ ಮುಖಾಂತರ ಪ್ರತಿ ವರ್ಷ ಹಲವು ಯೋಜನಗಳನ್ನು ಅನುಷ್ಥಾನ ಮಾಡಲು ಆಗಸ್ಟ್ ತಿಂಗಳಲ್ಲಿ ರೈತರಿಂದ ಅರ್ಜಿ ಆಹ್ವಾನ ಮಾಡಲಾಗುತ್ತದೆ.

ಇದರಂತೆ ಈ ವರ್ಷ ಅಂದರೆ 2023-24 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ(NHM Scheme), ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY Scheme), ನರೇಗಾ(mgnrega Scheme), ಎಣ್ಣೆ ತಾಳೆ ವ್ಯವಸಾಯ ಯೋಜನೆ(Oil palm) ಯೋಜನೆಯಡಿ ಸಹಾಯಧನ ಆಧಾರಿತ ಯೋಜನೆ ಅನುಷ್ಥಾನಕ್ಕೆ ಅರ್ಜಿ ಸ್ವೀಕಾರ ಆರಂಭಿಸಲಾಗಿರುತ್ತದೆ.

NHM Scheme- ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಕೈಗೊಳ್ಳಬವುದಾದ ಕಾರ್ಯಕ್ರಮಗಳು:

ರೈತರು ಈ ಯೋಜನೆಯಡಿ ಸಹಾಯಧನದಲ್ಲಿ ಕಾಳು ಮೆಣಸು, ಅಂಗಾಂಶ ಬಾಳೆ, ತರಕಾರಿ, ಹೂವುಗಳು ಹೊಸ ಪ್ರದೇಶ ವಿಸ್ತರಣೆ ಮತ್ತು ಕೃಷಿ ಹೊಂಡ, ಪ್ಯಾಕ್ ಹೌಸ್, ಪಾಲಿಹೌಸ್ ನಿರ್ಮಾಣ ಮಾಡಿಕೊಳ್ಳಬವುದು ಜೊತೆಗೆ  ಪ್ರಾಥಮಿಕ ಸಂಸ್ಕರಣಾ ಘಟಕಗಳನ್ನು ಸಹ ಸ್ಥಾಪನೆ ಮಾಡಿಕೊಳ್ಳಬವುದಾಗಿದೆ.

ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು?

ಜಮೀನಿನ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪುಸ್ತಕದ ಜೆರಾಕ್ಸ್ ಪ್ರತಿಯೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಹೋಬಳಿವಾರು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Gruhalakshmi Amount: ಗೃಹಲಕ್ಷ್ಮೀ ಯೋಜನೆಯಡಿ ಯಾರಿಗೆಲ್ಲ ಸಿಗಲಿದೆ ಮೊದಲನೆ ಕಂತಿನ ಹಣ? ಅಂತಿಮ ಪಟ್ಟಿ ಬಿಡುಗಡೆ!

PMKSY Scheme- ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ:

ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ 75ರಷ್ಟು ಸಹಾಯಧನ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ ಶೇ 90% ಸಹಾಯಧನದಲ್ಲಿ ಹನಿ ನೀರಾವರಿ ಘಟಕವನ್ನು ಸ್ಥಾಪನೆ ಮಾಡಲು ಅವಕಾಶವಿರುತ್ತದೆ.

ಅದರೆ ಪ್ರದೇಶವಾರು ನಿಗದಿಪಡಿಸಿರುವ ಬೆಳೆಗಳಿಗೆ ಮಾತ್ರ ಹನಿ ನೀರಾವರಿ ಅಳವಡಿಸಿಕೊಳ್ಳಲು ಅವಕಾಶವಿರುತ್ತದೆ ಆಸಕ್ತ ರೈತರು ಒಮ್ಮೆ ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು.

ಈ ಮೇಲೆ ಎರಡು ಯೋಜನೆಗಳು ಆಯಾ ತಾಲ್ಲೂಕಿನ ಅನುದಾನ ಲಭ್ಯತೆ ಆಧಾರದ ಮೇಲೆ ಅನುಷ್ಥಾನ ಮಾಡಲಾಗುತ್ತಿದ್ದು ರೈತರಿಗೆ ಲಭ್ಯ ಅನುದಾನದ ಪ್ರಕಾರ ಸಹಾಯಧನವನ್ನು ಒದಗಿಸಲಾಗುತ್ತದೆ.

ಯೋಜನೆಗಳು  ಅವಕಾಶ
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ(NHM )  ಕಾಳು ಮೆಣಸು, ಅಂಗಾಂಶ ಬಾಳೆ, ತರಕಾರಿ, ಹೂವುಗಳು ಹೊಸ ಪ್ರದೇಶ ವಿಸ್ತರಣೆ ಮತ್ತು ಕೃಷಿ ಹೊಂಡ, ಪ್ಯಾಕ್ ಹೌಸ್, ಪಾಲಿಹೌಸ್ ನಿರ್ಮಾಣ
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ(PMKSY)  ವಿವಿಧ ತೋಟಗಾರಿಕೆ ಮತ್ತು ತರಕಾರಿ ಬೆಳೆಗಳಲ್ಲಿ ಹನಿ ನೀರಾವರಿ ಘಟಕ ಸ್ಥಾಪನೆ ಮಾಡಬವುದು.
ನರೇಗಾ(mgnrega) ಅಡಿಕೆ, ಕಾಳುಮೆಣಸು, ತೆಂಗು, ನುಗ್ಗೆ , ಗುಲಾಬಿ ಸೇರಿದಂತೆ ಹಲವು ಬೆಳೆಗಳ ಬೆಳೆ ವಿಸ್ತರಣೆಗೆ ಅವಕಾಶವಿದೆ.
ಎಣ್ಣೆ ತಾಳೆ ವ್ಯವಸಾಯ ಯೋಜನೆ(Oil palm) ತಾಳೆ ಬೆಳೆಯಲು ಸಹಾಯಧನ.
ತೋಟಗಾರಿಕೆ ಇಲಾಖೆ ವೆಬ್ಸೈಟ್  https://horticulturedir.karnataka.gov.in
ಸಹಾಯವಾಣಿ ಸಂಖ್ಯೆ  1902

Mgnrega Scheme-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ):

ಈ ಯೋಜನೆಯಡಿ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರು ನರ್ಸರಿಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಹಾಗೂ ರೈತರಿಗೆ ವಿವಿಧ ತೋಟಗಾರಿಕೆ ಬೆಳೆಗಳನ್ನು ನಾಟಿ ಮಾಡಲು ಅವಕಾಶವಿದೆ.

ಯಾವೆಲ್ಲ ಬೆಳೆಗಳಿಗೆ ಅವಕಾಶವಿದೆ?


 
ಗಮನಿಸಿ: ಕೆಲವು ನಿಬಂಧನೆಗಳು ಅನ್ವಯವಾಗುತ್ತದೆ ಈ ಯೋಜನೆಯ ಕಾಮಗಾರಿ ಅನುಷ್ಠಾನದಲ್ಲಿ ಒಣ ಬೇಸಾಯ,ಮಳೆಯಾಶ್ರಿತ,ಅರೆ ನೀರಾವರಿ,ಮಲೆನಾಡು ಪ್ರದೇಶಗಳು ಎಂದು ವಿಂಗಡಣೆ ಮಾಡಲಾಗಿದ್ದು ಇದರ ಆಧಾರದ ಮೇಲೆ ಜಿಲ್ಲಾವಾರು ಕಾಮಗಾರಿ ಅನುಷ್ಠಾನವಾಗುತ್ತದೆ. ಒಮ್ಮೆ ಈ ಕೆಳಗೆ ತಿಳಿಸಿರುವ ಸಹಾಯವಾಣಿಗೆ ಕರೆಮಾಡಿ ನಿಮ್ಮ ಭಾಗದಲ್ಲಿ ಲಭ್ಯವಿರುವ ಕಾಮಗಾರಿಯ ಮಾಹಿತಿ ತಿಳಿದುಕೊಳ್ಳಬವುದು.

ಸಹಾಯವಾಣಿ ಸಂಖ್ಯೆ: 18004258666

Oil palm Scheme- ಎಣ್ಣೆ ತಾಳೆ ವ್ಯವಸಾಯ ಯೋಜನೆ:

ಈ ಯೋಜನೆಯಡಿ ತಾಳೆ ಬೆಳೆ ಬೆಳೆಯಲು ರೈತರಿಗೆ ಅರ್ಥಿಕ ಸಹಾಯಧನ ನೀಡಲಾಗುತ್ತಿದ್ದು, ಸಸಿ ನೆಟ್ಟ ನಂತರ ಮುಂದಿನ  ನಾಲ್ಕು ವರ್ಷದವರೆಗೆ ಸಹಾಯಧನ ಒದಗಿಸಲಾಗುತ್ತದೆ.

ಮೊದಲ ವರ್ಷ ಸಸಿ ಖರೀದಿ ಮಾಡಲು ರೈತರಿಗೆ ಪ್ರತಿ ಗಿಡಕ್ಕೆ ಒಟ್ಟು 2.5 ಎಕರೆಯವರೆಗೆ ಗಿಡ ಒಂದಕ್ಕೆ ಶೇ 85% ಸಹಾಯಧನ ಕೊಡಲಾಗುತ್ತದೆ. 

ನಂತರ ಮೊದಲನೇ ವರ್ಷದಿಂದ ನಾಲ್ಕು ವರ್ಷದವರೆಗೆ ಸಸಿಗಳ ನಿರ್ವಹಣೆಗೆ ಗೊಬ್ಬರ  ವೆಚ್ಚದ ಶೇ 50% ಸಹಾಯಧನ ನೀಡಲಾಗುತ್ತದೆ.

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

ಬರಗಾಲ ಘೋಷಣೆ, 113 ತಾಲೂಕುಗಳ ಪ್ರಾಥಮಿಕ ಪಟ್ಟಿ ಬಿಡುಗಡೆ! ಜಂಟಿ ಸಮೀಕ್ಷೆ ಪ್ರಾರಂಭ.

ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ!

ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

 Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!