gruha joytio status check: ಗೃಹಜ್ಯೋತಿ ಅರ್ಜಿ ಸಲ್ಲಿಸಿರುವುದು ಸರಿಯಾಗಿದೆಯೇ?ಮತ್ತು ಅರ್ಜಿ ಸ್ಥಿತಿ ತಿಳಿಯುವುದು ಹೇಗೆ?

ರಾಜ್ಯ ಸರಕಾರದಿಂದ ಗೃಹ ಜ್ಯೋತಿ(gruhajoyti) ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ನೀವು ಸಲ್ಲಿಸಿದ ಅರ್ಜಿ ಸರಿಯಾಗಿದೆಯೇ? ಮತ್ತು ಅರ್ಜಿಯ ಸ್ಥಿತಿ(gruhajoyti application status check) ತಿಳಿಯುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಗೃಹಜ್ಯೋತಿ ಅರ್ಜಿ ಸಲ್ಲಿಸಿರುವುದು ಸರಿಯಾಗಿದೆಯೇ?ಮತ್ತು  ಅರ್ಜಿ ಸ್ಥಿತಿ ತಿಳಿಯುವ ವಿಧಾನ- How to check gruha jyothi application status:

https://sevasindhugs.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ವೆಬ್ಸೈಟ್ ಭೇಟಿ ಮಾಡಿ ನಂತರ "ಗೃಹ ಜ್ಯೋತಿ"(Gruha joyti) ಯೋಜನೆಗೆ ಅರ್ಜಿ ಸಲ್ಲಿಸುವ ಮುಖಪುಟ ತೆರೆದುಕೊಳ್ಳುತ್ತದೆ, ನಂತರ ಇಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ ಮೇಲೆ ಕ್ಲಿಕ್ ಮಾಡಬೇಕು.

ಇದಾದ ನಂತರ ನಿಮ್ಮ ಇಂಧನ ಇಲಾಖೆಯ ವಿಭಾಗವನ್ನು ಆಯ್ಕೆಯನ್ನು ಮಾಡಿಕೊಳ್ಳಿ Bescom/mescom/Cesc/Hescom/Hresc/Gescom ಇದರಲ್ಲಿ ಒಂದನ್ನು ಆಯ್ಕೆ ಮಾಡಬೇಕು.

ನಂತರ "Enter Your Acccount ID" ಆಯ್ಕೆಯಲ್ಲಿ ನಿಮ್ಮ ಕರೆಂಟ್ ಬಿಲ್ ನಲ್ಲಿ ನಮೂದಿಸಿರುವ "ಗ್ರಾಹಕರ ಸಂಖ್ಯೆ/Account ID" ಹಾಕಿ "Check Status" ಮೇಲೆ ಕ್ಲಿಕ್ ಮಾಡಬೇಕು.

ಇಲ್ಲಿ ನಿಮ್ಮ ಅರ್ಜಿ ಸಲ್ಲಿಕೆಯಾಗಿದ್ದರೆ ನೀವು ಅರ್ಜಿ ಸಲ್ಲಿಸದ ದಿನಾಂಕದ ವಿವರ ಅರ್ಜಿ, ರೆಪ್ರೆನ್ಸ್ ನಂಬರ್, ಮತ್ತು ಅರ್ಜಿ ಸ್ಥಿತಿ/Status: "our application for GruhaJyothi Scheme is received and sent to ESCOM for processing" ಎಂದು ಗೊಚರಿಸುತ್ತದೆ.

"our application for GruhaJyothi Scheme is received and sent to ESCOM for processing" ಈ ರೀತಿ ಬಂದಲ್ಲಿ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆ, ಅರ್ಜಿಯು ಪರಿಶೀಲನೆ ಹಂತದಲ್ಲಿದೆ ಎಂದು.

ಇದನ್ನೂ ಓದಿ: ಪ್ರಮುಖ ಸುದ್ದಿ: ಗೃಹಜ್ಯೋತಿ ಜುಲೈ 25 ರೊಳಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಆಗಸ್ಟ್ ತಿಂಗಳ ವಿದ್ಯುತ್ ಉಚಿತ.

ಅರ್ಜಿ ಸಲ್ಲಿಕೆಯಾಗದಿದ್ದಲಿ ಈ ರೀತಿ ಬರುತ್ತದೆ:

ಗ್ರಾಹಕರ ಸಂಖ್ಯೆ/Account ID ಹಾಕಿದ ನಂತರ "Data Not Found. Please Register to GruhaJyothi Scheme!" ಎಂದು ಗೋಚರಿಸಿದರೆ, ಗೃಹಜ್ಯೋತಿ ಯೋಜನಗೆ ಅರ್ಜಿ ಸಲ್ಲಿಸಬೇಕು ಅಥವಾ ಈ ಹಿಂದೆ ಅರ್ಜಿ ಸಲ್ಲಿಸಿರುವುದು ಸರಿಯಾಗಿಲ್ಲ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ(Gruhajoyti helpline):

ಸಹಾಯವಾಣಿಗಳು- Gruha Joyti helpline numbers: 08022279954 / 8792662814 / 8792662816

ಗೃಹ ಜ್ಯೋತಿ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ಯಾವುದೇ ಗೊಂದಲ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂದು ನಿಮಗೆ ತಿಳಿಯದಿದಲ್ಲಿ ಈ ಸಹಾಯವಾಣಿಗೆ ಸಂಪರ್ಕಿಸಬವುದು.

ಇದರ ಜೊತೆಗೆ ಅರ್ಜಿ ಸಲ್ಲಿಸುವಾಗ ಸರ್ವರ್ ಸಮಸ್ಯೆ ಇತರೆ ಕಾರಣಗಳಿಂದ ಅರ್ಜಿ ಸಲ್ಲಿಸಲ ಅಗದಿದ್ದಲ್ಲಿ ಮತ್ತು ಅರ್ಜಿ ಸ್ವಿಕೃತಿ ದೊರೆಯದಿದ್ದಲ್ಲಿ ಮೇಲೆ ನಮೂದಿಸಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸೂಕ್ತ ಸಲಹೆಯನ್ನು ಪಡೆಯಬವುದು.