India Post office Job- ಕರ್ನಾಟಕದ ಅಂಚೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ!

ಭಾರತೀಯ ಅಂಚೆ ಇಲಾಖೆಯು ಉದ್ಯೋಗ(India Post office jobs) ಹುಡುಕುತ್ತಿರುವವರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಖಾಲಿ ಇರುವ ಹಲವಾರು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ.

India Post office Job- ಕರ್ನಾಟಕದ ಅಂಚೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗವಕಾಶ!
India Post office jobs-2024

ಭಾರತೀಯ ಅಂಚೆ ಇಲಾಖೆಯು ಉದ್ಯೋಗ(India Post office jobs) ಹುಡುಕುತ್ತಿರುವವರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಖಾಲಿ ಇರುವ ಹಲವಾರು ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿದೆ.

ಅಂಚೆ ಇಲಾಖೆಯ ಈ ಹೊಸ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಅಧಿಕೃತ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಅರ್ಥೈಸಿಕೊಂಡು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: KLA Recruitment-2024: ಕರ್ನಾಟಕ ವಿಧಾನಸಭಾ ಸಚಿವಾಲಯದಲ್ಲಿ ಹೊಸ ನೇಮಕಾತಿಗೆ ಅಧಿಸೂಚನೆ ಪ್ರಕಟಣೆ!

India Post office Jobs 2024 - ನೇಮಕಾತಿ ವಿವರ 

• ನೇಮಕಾತಿ ಇಲಾಖೆ : ಭಾರತೀಯ ಅಂಚೆ ಇಲಾಖೆ (India Post Office)
• ನೇಮಕಾತಿ ಖಾಲಿ ಹುದ್ದೆಗಳ ಸಂಖ್ಯೆ : 27 ಹುದ್ದೆಗಳು 
• ಉದ್ಯೋಗ ಸ್ಥಳ : ಕರ್ನಾಟಕ (Karnataka)

India Post office job details-ಹುದ್ದೆಗಳ ವಿವರ:

ಭಾರತೀಯ ಅಂಚೆ ಇಲಾಖೆಯ, ಬೆಂಗಳೂರಿನಲ್ಲಿರುವ Mail Motor Service, Bengaluru ನಲ್ಲಿ ಸ್ಟಾಫ್ ಕಾರ್ ಡ್ರೈವರ್ (Staff Car Driver, Ordinary Grade) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. 

ಇದನ್ನೂ ಓದಿ: Post Office Recruitment 2024- 10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಗೆ ನೇಮಕಾತಿ!

Educational Qualification-ಶೈಕ್ಷಣಿಕ ಅರ್ಹತೆಗಳು: 

India Post ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ SSLC ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. 

Age limit for this job-ವಯೋಮಿತಿ ಮಾನದಂಡ: 

ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ ವಯೋಮಿತಿಯು ಈ ಕೆಳಕಂಡಂತಿರಬೇಕು. 

ಸಾಮಾನ್ಯ ವರ್ಗ : 27 ವರ್ಷ
ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ : 30 ವರ್ಷ
ಪ.ಜಾ./ಪ.ಪಂ./ಪ್ರವರ್ಗ-1 : 32 ವರ್ಷ

ಇದನ್ನೂ ಓದಿ: DBT Payment status- ಆಧಾರ್ ಕಾರ್ಡ ನಂಬರ್ ಹಾಕಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಿಳಿಯಿರಿ!

Monthly Salary-ವೇತನ ವಿವರ: 

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹19,900 ರಿಂದ ₹63,200 ರವರೆಗೆ ವೇತನವು ಇರಲಿದೆ. 

How to apply-ಅರ್ಜಿ ಸಲ್ಲಿಕೆ ವಿವರ: 

ನೀವು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದರೆ ಕೆಳಗೆ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು ನಿಗದಿತ ಅವಶ್ಯಕ ಮಾಹಿತಿಯನ್ನು ಭರ್ತಿ ಮಾಡಿ, ಸ್ವಯಂ ದೃಢೀಕರಿಸಿದ ದಾಖಲಾತಿಗಳೊಂದಿಗೆ ಅರ್ಜಿಯನ್ನು The Manager Mail Motor Service, Bengaluru-560001 ವಿಳಾಸಕ್ಕೆ ಕೊನೆಯ ದಿನಾಂಕವಾದ 14 ಮೇ 2024ರ ಒಳಗಾಗಿ ಅಂಚೆ ಮುಖಾಂತರ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Weather- ಮುಂದಿನ 3 ದಿನ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

Website links-ನೇಮಕಾತಿಗೆ ಪ್ರಮುಖ ಲಿಂಕ್ ಗಳು : 

ಅಧಿಸೂಚನೆ & ಅರ್ಜಿ ನಮೂನೆ : Download Now
ಅಧಿಕೃತ ಜಾಲತಾಣ : Click here