ರೈತರು ತಮ್ಮ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ ಬರಪರಿಹಾರದ ಇನ್ಪುಟ್ ಸಬ್ಸಿಡಿ ಹಣ ಎಷ್ಟು(Parihara Input subsidy amount) ಬಂದಿದೆ ಎಂದು ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಕಳೆದ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿದ ಬರ ಪರಿಸ್ಥಿತಿಗೆ ರೈತರಿಗೆ ಅರ್ಥಿಕವಾಗಿ ನೆರವು ನೀಡಲು ಜಮೀನಿನ ಒಟ್ಟು ವಿಸ್ತೀರ್ಣದ ಅನುಗುಣವಾಗಿ ಇನ್ಪುಟ್ ಸಬ್ಸಿಡಿ ಪರಿಹಾರವನ್ನು ಜಮಾ ಮಾಡಲಾಗಿದ್ದು, ಈ ಕೆಳಗೆ ನಿಮ್ಮ ಜಮೀನಿನ ಸರ್ವೆ ಅನ್ನು ಹಾಕಿ ಸ್ಟೇಟಸ್ ಚೆಕ್ ಮಾಡುವ ವಿಧಾನ ತಿಳಿಸಲಾಗಿದೆ.
ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿಪಡಿಸಿರುವ Parihara ತಂತ್ರಾಂಶವನ್ನು ಪ್ರವೇಶ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಬರಪರಿಹಾರ ಇನ್ಪುಟ್ ಸಬ್ಸಿಡಿ ಹಣದ ಜಮಾ ವಿವರದ ಸಂಪೂರ್ಣ ಮಾಹಿತಿಯನ್ನು ಬೆರಳ ತುದಿಯಲ್ಲಿ ತಿಳಿದುಕೊಳ್ಳಬಹುದು.
ಇದನ್ನೂ ಓದಿ: Pumpset Adhar link-ಕೃಷಿ ಪಂಪ್ ಸೆಟ್ ಗೆ ಆಧಾರ್ ಕಾರ್ಡ ಲಿಂಕ್! ಇಲ್ಲಿದೆ ಸಂಪೂರ್ಣ ಮಾಹಿತಿ!
Input subsidy amount-2024: ಸರಕಾರದಿಂದ ಬರಪರಿಹಾರದ ಇನ್ಪುಟ್ ಸಬ್ಸಿಡಿ ಎಷ್ಟು ಜಮಾ ಮಾಡಲಾಗಿದೆ?
1) ಮೊದಲ ಹಂತದಲ್ಲಿ ರೂ 2,000 ಜಮಾ ಮಾಡಲಾಗಿದೆ.
2) ಎರಡನೇ ಹಂತದಲ್ಲಿ ಪ್ರತಿ ಎಕರೆಗೆ ರೂ 7,500/- ರಿಂದ 8,500/- ರವರೆಗೆ ಜಮಾ ಮಾಡಲಾಗಿದೆ.
3) ಇನ್ನು ಮೂರನೇ ಹಂತದಲ್ಲಿ ಅತೀ ಸಣ್ಣ ರೈತರಿಗೆ ಜೀವನೋಪಯ ಪರಿಹಾರವನ್ನು ರೂ 3,000/- ಜಮಾ ಮಾಡುವ ಕಾರ್ಯವು ಪ್ರಗತಿಯಲ್ಲಿದೆ ಎಂದು ಸಂಬಂದಪಟ್ಟ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
Input subsidy amount-ನಿಮ್ಮ ಸರ್ವೆ ನಂಬರ್ ಹಾಕಿ ಇನ್ಪುಟ್ ಸಬ್ಸಿಡಿ ಎಷ್ಟು ಬಂದಿದೆ ಎಂದು ತಿಳಿಯಿರಿ!
ಕಂದಾಯ ಇಲಾಖೆಯ ಅಧಿಕೃತ ಪರಿಹಾರ ವೆಬ್ಸೈಟ್ ಅನ್ನು ರೈತರು ಪ್ರವೇಶ ಮಾಡಿ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಬರಪರಿಹಾರದ ಇನ್ಪುಟ್ ಸಬ್ಸಿಡಿ ನಿಮ್ಮ ಖಾತೆಗೆ ಎಷ್ಟು ಜಮಾ ಅಗಿದೆ ಎಂದು ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.
Step-1: ಪ್ರಥಮ ಹಂತದಲ್ಲಿ Input subsidy amount ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ Parihara ಜಾಲತಾಣವನ್ನು ಭೇಟಿ ಮಾಡಬೇಕು.
ತದನಂತರ Parihara Payment Reports ಕಾಲಂ ನಲ್ಲಿ ಕಾಣುವ “2023 Kharif(Drought) season” ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಇದನ್ನೂ ಓದಿ: June gruhalakshmi amount-2024: ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ! ಇಲ್ಲಿದೆ ಹೊಸ ಅಪ್ಡೇಟ್!
Step-2: ಮೇಲಿನ ಹಂತಗಳು ಪೂರ್ಣಗೊಳಿಸಿದ ಬಳಿಕ “Year/ವರ್ಷ: 2023-24”, “Season/ಋತು: Kharif/ಮುಂಗಾರು”, “Calamity Type/ವಿಪತ್ತಿನ ವಿಧ: Drought/ಬರ” ಎಂದು ಆಯ್ಕೆ ಮಾಡಿಕೊಂಡು “Get Data/ಹುಡುಕು” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-3: ಇದಾದ ನಂತರ “Search By/ಹುಡುಕು” ವಿಭಾಗದಲ್ಲಿ “Survey Number/ಸರ್ವೆ ನಂಬರ್” ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಇದೆ ಪೇಜ್ ನಲ್ಲಿ ಕೆಳಗೆ ಕಾಣುವ “Search By Survey Number/ಸರ್ವೆ ನಂಬರ್ ಮೂಲಕ ಹುಡುಕಿ” ವಿಭಾಗದಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಸರ್ ನಾಕ್, ಹಿಸ್ಸಾ ನಂಬರ್ ಹಾಕಿ “Fetch/ಪಡೆಯಿರಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-4: ಬಳಿಕ ಇಲ್ಲಿ ನಿಮ್ಮ ಆಧಾರ್ ಸಂಖ್ಯೆ ಕೊನೆಯ ನಾಲ್ಕು ಸಂಖ್ಯೆ ತೋರಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ಈ ಸರ್ವೆ ನಂಬರ್ ಮೇಲೆ ಎಷ್ಟು ಬರ ಪರಿಹಾರದ ಇನ್ಪುಟ್ ಸಬ್ಸಿಡಿ ಎಷ್ಟು ಜಮಾ ಅಗಿದೆ? ಹಣ ನಿಮ್ಮ ಖಾತೆಗೆ ಪಾವತಿಯಾದ ದಿನಾಂಕ, ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆ ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿ ತೋರಿಸುತ್ತದೆ.
ಇದನ್ನೂ ಓದಿ: Gruhalakshmi Yojana-2024: ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಗುರುತಿನ ಚೀಟಿ ಪರಿಗಣಿಸಲು ಅನುಮೋದನೆ!