KRP portal-ಕೇಂದ್ರ ಸರಕಾರದಿಂದ ರೈತರಿಗೆ ಸಾಲ ವಿತರಣೆಗೆ ಏಕೀಕೃತ ಪೋರ್ಟಲ್ ಗೆ ಚಾಲನೆ!

ಕೇಂದ್ರ ಸರಕಾರದಿಂದ ರೈತರಿಗೆ ಸಾಲ ವಿತರಣೆ ಮತ್ತು ಬಡ್ಡಿ ಸಹಾಯಧನ ಸೇರಿದಂದ ರೈತರ ದತ್ತಾಂಶ ನಿರ್ವಹಣೆ ಸಂಬಂಧ ಕಿಸಾನ್ ಕ್ರೇಡಿಟ್ ಕಾರ್ಡ(KCC) ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಥಾನ ಮಾಡಲು ರೈತರಿಗೆ ಅನುಕೂಲ ಮಾಡುವ ದೇಸೆಯಲ್ಲಿ KRP Portal ಏಕೀಕೃತ ಪೂರ್ಟಲ್ ಅನ್ನು ಜಾರಿಗೆ ತರಲಾಗಿದೆ.

ಕೇಂದ್ರ ಸರಕಾರದಿಂದ ರೈತರಿಗೆ ಸಾಲ ವಿತರಣೆ ಮತ್ತು ಬಡ್ಡಿ ಸಹಾಯಧನ ಸೇರಿದಂದ ರೈತರ ದತ್ತಾಂಶ ನಿರ್ವಹಣೆ ಸಂಬಂಧ ಕಿಸಾನ್ ಕ್ರೇಡಿಟ್ ಕಾರ್ಡ(KCC) ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಥಾನ ಮಾಡಲು ರೈತರಿಗೆ ಅನುಕೂಲ ಮಾಡುವ ದೇಸೆಯಲ್ಲಿ KRP Portal ಏಕೀಕೃತ ಪೂರ್ಟಲ್ ಅನ್ನು ಜಾರಿಗೆ ತರಲಾಗಿದೆ.

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ. ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಸಾಲ (KCC & MISS) ಮತ್ತು ಬೆಳೆ ವಿಮೆ (PMFBY/RWBCIS) ಒಗೂಡಿಸುವ ಏಕೀಕೃತ ಪೋರ್ಟಲ್ ಗೆ ನಿನ್ನೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. 

ಈ ಪೋರ್ಟಲ್ (KRP portal)ಮೂಲಕ ರೈತರ ದತ್ತಾಂಶ, ಸಾಲ ವಿತರಣೆ ಮಾಹಿತಿ, ಬಡ್ಡಿ ಸಹಾಯಧನ ಮತ್ತು ಯೋಜನೆಯ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ.

ಈ ಯೋಜನೆ ಅನುಷ್ಥಾನದ ಮೂಲಕ ಕೆಸಿಸಿ ಸಾಲ ಖಾತೆದಾರರಿಗೆ ಸಂಬಂಧಿಸಿದ ಮಾಹಿತಿ ಈಗ ಕಿಸಾನ್ ಲೋನ್(Kcc loan) ಪೋರ್ಟಲ್ನಲ್ಲಿ ಸದಾ ಲಭ್ಯವಿರುತ್ತದೆ. ಈ ಸೌಲಭ್ಯವು ಈ ಹಿಂದೆ ಲಭ್ಯವಿರಲಿಲ್ಲ, ಇದರಿಂದ ಮುಂದೆಎಲ್ಲಾ ಕೆಸಿಸಿ ಖಾತೆದಾರರ ಪರಿಶೀಲನೆಯನ್ನು ಆಧಾರ್ ಮೂಲಕ ಮಾಡಲಾಗುತ್ತದೆ. ಇದು ಅರ್ಹ ರೈತರಿಗೆ ಸಾಲವನ್ನು ನೀಡಲು ಸಹಕರಿಯಾಗಿದೆ. 

ಇದನ್ನೂ ಓದಿ: Agriculture Land information: ನಿಮ್ಮ ಜಮೀನಿಗೆ ಹೋಗಲು ಕಾಲು ದಾರಿ ಮತ್ತು ಬಂಡಿ ದಾರಿ ಅಳತೆ ಎಷ್ಟು ಎಂದು ತಿಳಿಯುವುದು ಹೇಗೆ?

ಈ PM Kisan Rin Portal ಮೂಲಕ ಬಡ್ಡಿ ಸಹಾಯಧನ ಕ್ಲೇಮ್ ಗಳನ್ನು ನೇರವಾಗಿ ಫಲಾನುಭವಿಗೆ ಪಾವತಿಸುವ ವ್ಯವಸ್ಥೆಯು ಇರುತ್ತದೆ. ಅದೇ ಸಮಯದಲ್ಲಿ, ಈ ಪೋರ್ಟಲ್ ಮೂಲಕ ಯೋಜನೆಯ ಫಲಾನುಭವಿಗಳು ಮತ್ತು ತಪ್ಪಿಹೋದ ರೈತರನ್ನು ನಿರ್ಣಯಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ.

ಈ ಯೋಜನೆಯ ಮುಖ್ಯಾಂಶಗಳು ಹೀಗಿವೆ:

1.ಕಿಸಾನ್ ರಿನ್ ಪೋರ್ಟಲ್ (KRP)

ಕಿಸಾನ್ ರಿನ್ ಪೋರ್ಟಲ್ (KRP), ಅನೇಕ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ, ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಅಡಿಯಲ್ಲಿ ಕ್ರೆಡಿಟ್ ಸೇವೆಗಳನ್ನು ಸರಳಿಕರಿಸಲು ಈ ಪೋರ್ಟಲ್ ಅನ್ನು ಸಿದ್ಧಪಡಿಸಲಾಗಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ರೈತರ ಡೇಟಾ, ಸಾಲ ವಿತರಣೆಯ ನಿರ್ದಿಷ್ಟತೆಗಳು, ಬಡ್ಡಿ ಸಬ್ವೆನ್ಶನ್ ಕ್ಲೈಮ್‌ಗಳು ಮತ್ತು ಸ್ಕೀಮ್ ಬಳಕೆಯ ಪ್ರಗತಿಯ ಸಮಗ್ರ ನೋಟವನ್ನು ನೀಡುತ್ತದೆ, ಹೆಚ್ಚು ಕೇಂದ್ರೀಕೃತ ಮತ್ತು ಪರಿಣಾಮಕಾರಿ ಕೃಷಿ ಸಾಲಕ್ಕಾಗಿ ಬ್ಯಾಂಕ್‌ಗಳೊಂದಿಗೆ ತಡೆರಹಿತ ಏಕೀಕರಣವನ್ನು ಉತ್ತೇಜಿಸುತ್ತದೆ.

PM Kisan Rin Portal : Click here

2.ಮನೆ ಮನೆಗೆ KCC ಅಭಿಯಾನ:

ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯ ಪ್ರಯೋಜನಗಳನ್ನು ಭಾರತದಾದ್ಯಂತ ಪ್ರತಿ ರೈತರಿಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಅಭಿಯಾನವಾದ "ಘರ್ ಘರ್ ಕೆಸಿಸಿ ಅಭಿಯಾನ್" ಆರಂಭ ಮಾಡಲಾಗಿದ್ದು. ಈ ಅಭಿಯಾನವು ಸಾರ್ವತ್ರಿಕ ಆರ್ಥಿಕ ಒಳಗೊಳ್ಳುವಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ, ಪ್ರತಿಯೊಬ್ಬ ರೈತರು ತಮ್ಮ ಕೃಷಿ ಅನ್ವೇಷಣೆಗಳನ್ನು ಹೆಚ್ಚಿಸುವ ಸಾಲ ಸೌಲಭ್ಯಗಳಿಗೆ ಅಡೆತಡೆಯಿಲ್ಲದ ಸಾಲವನ್ನು ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. KCC ಖಾತೆದಾರರಲ್ಲದ PM KISAN ಫಲಾನುಭವಿಗಳನ್ನು ಈ ಯೋಜನೆಯಡಿ ತರವುದು ಮತ್ತು ಅರ್ಹ PM ಕಿಸಾನ್ ಫಲಾನುಭವಿ ರೈತರಲ್ಲಿ KCC ಖಾತೆಗಳ ಹೊಂದಲು ಉತ್ತೇಜಿನ ನೀಡುವುದು ಈ ಅಭಿಯಾನವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ: ಬರಗಾರ ಘೋಷಣೆ: ಯಾವೆಲ್ಲ ಸವಲತ್ತು ಸಿಗಲಿದೆ ಈ ಪಟಿಯಲ್ಲಿರುವ ತಾಲ್ಲೂಕುಗಳಿಗೆ!

ಕಿಸಾನ್ ಕ್ರೇಡಿಟ್ ಕಾರ್ಡ(KCC) ಸಾಲ ವಿತರಣೆ ಯೋಜನೆಯ:

ಈ ಯೋಜನೆಯಡಿ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ 3 ಲಕ್ಷದವರೆಗೆ ಬೆಳೆ ಸಾಲ ಪಡೆಯಬವುದು. ಮತ್ತು ಕೃಷಿ ಪೂರಕ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆಗೆ 2 ಲಕ್ಷದ ವರೆಗೆ ಸಾಲ ಪಡೆಯಬವುದುದಾಗಿದೆ.

ಕಿಸಾನ್ ಕ್ರೇಡಿಟ್ ಕಾರ್ಡ(KCC) ಸಾಲ ವಿತರಣೆ ಯೋಜನೆ ಈ ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಬವುದು ಎಷ್ಟು ಸಾಲ ವಿತರಣೆ ಮಾಡಲಾಗುತ್ತದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಸಂಫೂರ್ಣ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

About Kisan credit card Scheme: Click here

ಅಂಕಿ-ಸಂಖ್ಯೆ ಮಾಹಿತಿ:

ಮಾರ್ಚ್ 2023 ರಂತೆ ಕೆಸಿಸಿ ಖಾತೆಗಳ ಒಟ್ಟು ಸಂಖ್ಯೆ 7.35 ಕೋಟಿಗಳಾಗಿದ್ದು, ಒಟ್ಟು ಮಂಜೂರಾದ ಸಾಲದ ಮಿತಿ ರೂ. 8.85 ಲಕ್ಷ ಕೋಟಿ ಇರುತ್ತದೆ.

ಈ ಯೋಜನೆ ಅನುಷ್ಥಾನಕ್ಕೆ ಬ್ಯಾಂಕ್ ಸಹಯೋಗದ ವಿವರ: ಗ್ರಾಮೀಣ ಭಾಗದ ಬ್ಯಾಂಕ್ - ನಗರ ಪ್ರದೇಶದ ಬ್ಯಾಂಕ್- ಸಹಕಾರಿ ಬ್ಯಾಂಕ್-

ರೈತರಿಂದ ಒಟ್ಟು  ಸಲ್ಲಿಕೆಯಾದ ಅರ್ಜಿಗಳು: ಗ್ರಾಮೀಣ ಭಾಗದ ಬ್ಯಾಂಕ್ - 107.7 ಲಕ್ಷ , ವಾಣೀಜ್ಯ ಬ್ಯಾಂಕ್- 146.1 ಲಕ್ಷ,  ಸಹಕಾರಿ ಬ್ಯಾಂಕ್- 193 ಲಕ್ಷ.

ವಸ್ತುನಿಷ್ಠ ಮೇಲ್ವಿಚಾರಣೆ ಮತ್ತು ಸಮರ್ಥ ಸಾಲ ವಿತರಣೆಗಾಗಿ ಕಿಸಾನ್ ರಿನ್ ಪೋರ್ಟಲ್ (ಕೆಆರ್‌ಪಿ), ಘರ್ ಘರ್ ಕೆಸಿಸಿ ಅಭಿಯಾನದಂತಹ ಯೋಜನೆಗಳ ಮೂಲಕ ರೈತರ ಆದಾಯವನ್ನು ಉಳಿಸಿಕೊಳ್ಳುವ ಮತ್ತು ದ್ವಿಗುಣಗೊಳಿಸುವ ಗುರಿಯನ್ನು ಕೇಂದ್ರ ಸರಕಾರದಿಂದ ಹಾಕಿಕೊಳ್ಳಲಾಗಿದೆ. 

ಕೃಷಿಕರಿಗೆ ಸಂಬಧಿಸಿದ ಇತರೆ ಯೋಜನೆಗಳ ಅಂಕಣಗಳು:

Crop insurance status: ಬೆಳೆ ವಿಮೆ ಕುರಿತು ಈ ರೀತಿ ನಿಮ್ಮ ಮೊಬೈಲ್ ಗೆ ಮೆಸೇಜ್ ಬಂದಿದೆಯೇ? ಹಾಗಾದರೆ ಇದಕ್ಕೆ ಪರಿಹಾರವೇನು?

FID Number: ರೈತರು ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಎಫ್.ಐ.ಡಿ. (FID) ನಂಬರ್ ಕಡ್ಡಾಯ!

Crop survey details- ಕೃಷಿ ಇಲಾಖೆಯಿಂದ ಸರ್ವೆ ನಂಬರ್ ವಾರು ಬೆಳೆ ಸಮೀಕ್ಷೆ ವಿವರ ಬಿಡುಗಡೆ! ನಿಮ್ಮ ಜಮೀನಿನ ಬೆಳೆ ವಿವರ ಚೆಕ್ ಮಾಡಿ.

ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಸಹಾಯಧನಕ್ಕೆ ರೈತರಿಂದ ಅರ್ಜಿ ಆಹ್ವಾನ!

ನಿಮ್ಮ ಹಳ್ಳಿಯಲ್ಲಿ ಯಾವ ಸರ್ವೆ ನಂಬರ್ ಎಲ್ಲಿ ಬರುತ್ತದೆ ಎಂದು ಹೇಗೆ ತಿಳಿಯುವುದು?

ಮೀನುಗಾರಿಕೆ ಇಲಾಖೆಯಿಂದ ಶೇ. 40% ಮತ್ತು ಶೇ. 60% ರಷ್ಟು ಸಹಾಯಧನ ಯೋಜನೆಗಳಿಗೆ ಅರ್ಜಿ ಅಹ್ವಾನ.

Sheep Farming schemes: ಕುರಿ ಮತ್ತು ಮೇಕೆ ಸಾಕಾಣಿಕೆಗೆ ಯಾವೆಲ್ಲ ಯೋಜನೆಯಡಿ ಸಾಲ ಮತ್ತು ಸಹಾಯಧನ ಪಡೆಯಬವುದು?

 Nrega scheme Information-2023: ಉದ್ಯೋಗ ಖಾತರಿ ಯೋಜನೆ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಕುಟುಂಬ ಗರಿಷ್ಠ ರೂ. 2.50 ಲಕ್ಷದವರೆಗೆ ಸೌಲಭ್ಯ!

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

Chaff cutter subsidy: ಶೇ 50% ಸಬ್ಸಿಡಿಯಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!