KSRTC Job Notification-2023: ಸರಕಾರಿ ಉದ್ಯೋಗಾಂಕ್ಷಿಗಳಿಗೆ ಶುಭ ಸುದ್ದಿ, 8 ವರ್ಷದ ಬಳಿಕ ಕರ್ನಾಟಕ ಸಾರಿಗೆ ನಿಗಮಕ್ಕೆ 6,500 ಹುದ್ದೆ ನೇಮಕಾತಿಗೆ ಅನುಮೋದನೆ!

KSRTC Job-2023: ರಾಜ್ಯ ಸರಕಾರವು ವಿವಿಧ ವಿಭಾಗವಾರು ಸಾರಿಗೆ ಸಂಸ್ಥೆಗೆ ಡ್ರೈವರ್ ಕಮ್ ಕಂಡಕ್ಟರ್. ತಾಂತ್ರಿಕ ಸಿಬ್ಬಂದಿ, ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಥಿಕ ಅನುಮೋದನೆ ನೀಡಲಾಗಿದೆ.

ksrtc recruitment: ರಾಜ್ಯ ಸರಕಾರದಿಂದ 8 ವರ್ಷದ ಬಳಿಕ ಕರ್ನಾಟಕ ಸಾರಿಗೆ ನಿಗಮಕ್ಕೆ 6,500 ಹುದ್ದೆ ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ. 2016 ರಿಂದ ಇಲ್ಲಿಯವರೆಗೆ ಒಟ್ಟು 8 ವರ್ಷ ಸಂಸ್ಥೆಯ ಯಾವುದೇ ಹುದ್ದೆಗೆ ನೇಮಕಾತಿ ಅಗಿರಲ್ಲಿಲ್ಲ. 

ಇದಕ್ಕೆ ಸಂಬಂಧಪಟ್ಟಂತೆ ಈ ರಾಜ್ಯ ಸರಕಾರವು ವಿವಿಧ ವಿಭಾಗವಾರು ಸಾರಿಗೆ ಸಂಸ್ಥೆಗೆ ಡ್ರೈವರ್ ಕಮ್ ಕಂಡಕ್ಟರ್. ತಾಂತ್ರಿಕ ಸಿಬ್ಬಂದಿ, ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಥಿಕ ಅನುಮೋದನೆ ನೀಡಲಾಗಿದೆ.

ನೂತನ ಸರಕಾರ ಅಸ್ತಿತ್ವಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದ ಬಳಿಕ ಕರ್ನಾಟಕ ಸಾರಿಗೆ ನಿಗಮದ ಬಸ್ಸಿನಲ್ಲಿ ಪ್ರಯಾಣಿಸುವ ಜನರ ಸಂಖ್ಯೆಯು ದೊಡ್ಡ ಮಟ್ಟದಲ್ಲಿ ಏರಿಕೆಯಾದ ಕಾರಣ ಇದನ್ನು ಸಮರ್ಥವಾಗಿ ನಿಬಾಯಿಸಲು ವಿವಿಧ ಸಾರಿಗೆ ಸಂಸ್ಥೆಗೆ ಸಿಬ್ಬಂದಿಯ  ಮತ್ತು ನೂತನ ಬಸ್ಸಿನ ಅವಶ್ಯಕತೆ ಇರುವುದರಿಂದ ಈ ಎರಡಕ್ಕೂ ರಾಜ್ಯ ಸರಕಾರ ಅನುಮೋದನೆ ನೀಡಿದೆ.

ಇದನ್ನೂ ಓದಿ: Bele parihara status- 2019 ರಿಂದ ಇಲ್ಲಿಯವರೆಗೆ ಎಷ್ಟು ಬಾರಿ ಬೆಳೆ ಹಾನಿ ಪರಿಹಾರ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

ಈ ಕುರಿತು KSRTC ಎಕ್ಸ್ ಖಾತೆಯೆಲ್ಲಿ ಮಾಹಿತಿ ಹಂಚಿಕೊಂಡಿದ್ದು,13669 ಖಾಲಿ ಹುದ್ದೆಗಳಿದ್ದವು. ಈ ಬಗ್ಗೆ 13000 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಾರಿಗೆ ಸಂಸ್ಥೆಗಳಿಗೆ ಅನುಮತಿ ನೀಡುವಂತೆ ಸರ್ಕಾರವನ್ನು ಕೋರಲಾಗಿತ್ತು, ಅದರಂತೆ ಮೊದಲನೇ ಹಂತದಲಿ., 6500 ಚಾಲನಾ ಸಿಬ್ಬಂದಿಗಳಿಗೆ ಹಾಗೂ 300 ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರದಿಂದ ಅನುಮತಿ ದೊರಕಿದೆ ಎಂದು ಪೋಸ್ಟ್ ಮಾಡಲಾಗಿದೆ. 

ksrtc recruitment-2023: ಸಂಸ್ಥೆವಾರು ಹುದ್ದೆಗಳ ನೇಮಕಾತಿ ವಿವರ ಹೀಗಿದೆ:

1) KSRTC: ಡ್ರೈವರ್ ಕಮ್ ಕಂಡಕ್ಟರ್ :- 2000

2) ತಾಂತ್ರಿಕ ಸಿಬ್ಬಂದಿ :- 300

3) NWKRTC :- ಡ್ರೈವರ್ ಕಮ್ ಕಂಡಕ್ಟರ್:- 2000

4) BMTC :- ಕಂಡಕ್ಟರ್ 2500

ಇದನ್ನೂ ಓದಿ: Rabi MSP price- 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರಕಾರ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

ಪ್ರಸ್ತುತ KKRTC ಅಲ್ಲಿ ಈಗಾಗಲೇ 1619 ಚಾಲನಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಚಾಲನಾ ಪರೀಕ್ಷೆ ನಡೆಯುತ್ತಿದ್ದು, ಜನವರಿ 2024 ರ ಕೊನೆಯಲ್ಲಿ ಅಂತಿಮ ಆಯ್ಕೆಪಟ್ಟಿ, ಬಿಡುಗಡೆಗೊಳಿಸಲಾಗುವುದು ಎಂದು ಸಂಸ್ಥೆವತಿಯಿಂದ ತಿಳಿಸಲಾಗಿದೆ.

ಇದರ ಜೊತೆಯಲ್ಲಿ KKRTC ಯಲಿ 300 ಕಂಡಕ್ಟರ್ ಗಳ ನೇಮಕಾತಿಗೆ ಅನುಮತಿ ದೊರಕಿದ್ದು, ಅಧಿಸೂಚನೆ ಹೊರಡಿಸುವ ಹಂತದಲ್ಲಿದೆ.
ಒಟ್ಟಾರೆ 8719 ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಚಾಲನೆ ದೊರೆತಿದೆ.

ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯ ಇತ್ಯಾದಿ ವಿವರದ ಮಾಹಿತಿಯ ಅಧಿಕೃತ ಅಧಿಸೂಚನೆಯು ಇನ್ನು ಕೆಲವು ದಿನಗಳಲ್ಲಿ ಹೊರಡಿಸಲಾಗುತ್ತದೆ ಎಂದು KSRTC ಸಂಸ್ಥೆಯ ಎಕ್ಸ್(Twitter) ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಪ್ರತಿನಿತ್ಯ ನಮ್ಮ ಪುಟದಿಂದ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ> krushikamitra whatsapp channel ನಮ್ಮ ವಾಟ್ಸಾಪ್ ಚಾನಲ್ ಪಾಲೋ ಮಾಡಿ.

KSRTC ಹುದ್ದೆಯ ನೇಮಕಾತಿಯ ಮಾಹಿತಿ ಪ್ರತಿ:

X(Twitter) post: Click here

ಇದನ್ನೂ ಓದಿ: Cancelled ration card list-ಅಕ್ಟೋಬರ್ ತಿಂಗಳ ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಚೆಕ್ ಮಾಡಿ.

KSRTC New bus- ಹೊಸ ಬಸ್ ಖರೀದಿಗೆ ಸೂಚನೆ:

ಕಳೆದ ಬಜೆಟ್ ನಲ್ಲಿ ಹೊಸ ಬಸ್ ಖರೀದಿಗೆ ಈಗಾಗಲೇ ಸರಕಾರವು 500 ಕೋಟಿ ಹಣವನ್ನು ಮೀಸಲಿಡಲಾಗಿದ್ದು ಈ ಅನುದಾನವನ್ನು ಬಳಕೆ ಮಾಡಿಕೊಂಡು ಶೀಘ್ರವಾಗಿ ಒಟ್ಟು 5,675 ಹೊಸ ಬಸ್ಸುಗಳನ್ನು ಖರೀದಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಶನಿವಾರ ಸಾರಿಗೆ ನಿಗಮಕ್ಕೆ ಸೂಚನೆ ನೀಡಿದ್ದಾರೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ನಿಗಮದ ಬಸ್ಸಿನಲ್ಲಿ ಸಂಚಾರಿಸು ಪ್ರಯಾಣಿಕ ಸಂಕ್ಯೆಯು ಶೇ 15% ಹೆಚ್ಚಳವಾಗಿದ್ದು ಹೊಸ ಬಸ್ ಖರೀದಿ ಮಾಡುವುದರಿಂದ ಪ್ರಯಾಣಿಕರಿಗೆ ಸಂಚಾರಕ್ಕೆ ಅನುಕೂಲವಾಗಲು ಬಸ್ ಸಂಚಾರಕ್ಕೆ ಹೆಚ್ಚುವರಿ ವೇಳಾಪಟ್ಟಿಯನ್ನು ಸಿದ್ದಪಡಿಸಲು ಸಹಕಾರಿಯಾಗಲಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ KSRTC ನಿಗಮದ ವೆಬ್ಸೈಟ್ ಭೇಟಿ ಮಾಡಲು: click here