Krishi Mela Bengalore-2023: ಬೆಂಗಳೂರು ಕೃಷಿ ಮೇಳಕ್ಕೆ ಡೇಟ್ ಪಿಕ್ಸ್! ಈ ಭಾರಿಯ ಮೇಳದ ವಿಶೇಷತೆಗಳೇನು?

Krishi Mela Bengalore-2023: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳುರು ಕರ್ನಾಟಕ ಸರ್ಕಾರದ ಕೃಷಿ, ಜಲಾನಯನ ಅಭಿವೃದ್ಧಿ ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು, ನಬಾರ್ಡ್ ಮತ್ತು ಕರ್ನಾಟಕ ಹಾಲು ಮಹಾಮಂಡಲಿ ಇವರ ಸಂಯುಕ್ತ ಆಶ್ರಯದಲ್ಲಿ "ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು" ಎನ್ನುವ ಘೋಷವಾಕ್ಯ ದಡಿ ಈ ಭಾರಿಯ ಕೃಷಿಮೇಳವನ್ನು ಆಯೋಜನೆ ಮಾಡಲಾಗಿದೆ.

Krishi Mela Bengalore-2023: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳುರು ಕರ್ನಾಟಕ ಸರ್ಕಾರದ ಕೃಷಿ, ಜಲಾನಯನ ಅಭಿವೃದ್ಧಿ ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಅರಣ್ಯ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು, ನಬಾರ್ಡ್ ಮತ್ತು ಕರ್ನಾಟಕ ಹಾಲು ಮಹಾಮಂಡಲಿ ಇವರ ಸಂಯುಕ್ತ ಆಶ್ರಯದಲ್ಲಿ "ಆಹಾರ-ಆರೋಗ್ಯ-ಆದಾಯಕ್ಕಾಗಿ ಸಿರಿಧಾನ್ಯಗಳು" ಎನ್ನುವ ಘೋಷವಾಕ್ಯ ದಡಿ ಈ ಭಾರಿಯ ಕೃಷಿಮೇಳವನ್ನು ಆಯೋಜನೆ ಮಾಡಲಾಗಿದೆ.

ದಿನಾಂಕ: ನವೆಂಬರ್ 17, 18, 19 ಮತ್ತು 20, 2023 ಒಟ್ಟು ನಾಲ್ಕು ದಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ), ಬೆಂಗಳೂರು ಆವರಣದಲ್ಲಿ ಸಮಯ: ಬೆಳಿಗ್ಗೆ 9.00 ರಿಂದ ಸಂಜೆ 6.00 ಗಂಟೆಯವರೆಗೆ ಮೇಳವನ್ನು ಏರ್ಪಡಿಸಲಾಗಿದ್ದು, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿ.ಕ.ಏ.ಕೆ.) ದಿನಾಂಕ: 17-11-2023 ರಿಂದ 20-11-2023 ರವರೆಗೆ ಪ್ರತಿ ದಿನ ಬೆಳಗ್ಗೆ 9.00 ರಿಂದ ಸಂಜೆ 6.00 ಗಂಟೆಯವರೆಗೆ ಮೇಳ ಜರುಗಲಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.

Krishi Mela Bengalore-ಈ ಭಾರಿಯ ಕೃಷಿ ಮೇಳದ ಪ್ರಮುಖ ಆಕರ್ಷಣೆಗಳು:

* ಕೃಷಿಯಲ್ಲಿ ನೂತನ ತಂತ್ರಜ್ಞಾನಗಳ ಮಾಹಿತಿ

* ಜಲಾಯನ ನಿರ್ವಹಣೆ

* ತೋಟಗಾರಿಕೆ ಬೆಳೆಗಳ ಮತ್ತು ನಿಖರ ಕೃಷಿ ಪ್ರಾತ್ಯಕ್ಷಿಕೆಗಳು

* ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಣೆ

* ಸಿರಿಧಾನ್ಯಗಳು ಹಾಗೂ ಮಹತ್ವ

* ಔಷಧೀಯ ಮತ್ತು ಸುಗಂಧಯುಕ್ತ ಸಸ್ಯಗಳು

* ನೂತನವಾಗಿ ಬಿಡುಗಡೆಯಾದ ವಿವಿಧ ಬೆಳೆ ತಳಿಗಳ ಪ್ರಾತ್ಯಕ್ಷಿಕೆಗಳು.

ಇದನ್ನೂ ಓದಿ: October Pension amount-2023: 77.6 ಲಕ್ಷ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ಪಿಂಚಣಿ ಹಣ ಜಮೆ! ನಿಮಗೆ ಬಂತಾ ಚೆಕ್ ಮಾಡಿ.

* ಮಳೆ ಹಾಗೂ ಮೇಲ್ವಾವನಿ ನೀರಿನ ಕೊಯ್ದು.

* ಸಮಗ್ರ ಪೀಡೆ ರೋಗ ಹಾಗೂ ಪೋಷಕಾಂಶಗಳು ನಿರ್ವಹಣೆ

* ಮಣ್ಣು ಪರೀಕ್ಷೆಗನುಗುಣವಾಗಿ ಬೆಳೆ ಸ್ಪಂದನೆ ಪ್ರಾತ್ಯಕ್ಷಿಕೆ

* ಕೃಷಿಯಲ್ಲಿ ಡೋನ್ ಬಳಕೆ

* ಜೈವಿಕ ಹಾಗೂ ನವೀಕರಿಸಲ್ಪಡುವ ಇಂಧನಗಳು

* ಸಾವಯವ ಕೃಷಿ ಪದ್ಧತಿಗಳು

* ಮಾರುಕಟ್ಟೆ ನೈಪುಣ್ಯತೆ ಮಾಹಿತಿ

* ಕೊಯ್ಲಿನೋತ್ತರ ತಾಂತ್ರಿಕತೆಗಳು, ಕೃಷಿ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ

* ಬಿತ್ತನೆ ಬೀಜಗಳ ಮೊಳಕೆ ಪರೀಕ್ಷೆ ಹಾಗೂ ಶೇಖರಣೆ

* ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ

* ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ

* ಹವಾಮಾನ ಚತುರ ಕೃಷಿ

* ಖುಷಿ ಬೇಸಾಯಕ್ಕೆ ಸೂಕ್ತವಾದ ಬೆಳೆ ಪದ್ಧತಿಗಳು

* ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳು

* ರೈತರ ಅವಿಷ್ಕಾರಗಳು ಮತ್ತು ಕೃಷಿ ನವೋಧ್ಯಮಗಳು

* ಮಣ್ಣು ರಹಿತ ಕೃಷಿ

* ರೈತರ ಕೃಷಿ ತಾಂತ್ರಿಕ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ

* ರೈತರಿಂದ ರೈತರಿಗಾಗಿ ಚರ್ಚಾಗೋಷ್ಠಿ ಮತ್ತು ಕೃಷಿ ಪರಿಕರಗಳು ಹಾಗೂ ಪ್ರಕಟಣೆಗಳು ಮಾರಾಟಕ್ಕೆ ಲಭ್ಯವಿರುತ್ತದೆ.

ಇದನ್ನೂ ಓದಿ: load shedding: ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದ ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ ನೀಡಿದ ರಾಜ್ಯ ಸರಕಾರ!

bengalore krishi mela date-ನಾಲ್ಕು ದಿನಗಳ ಕೃಷಿಮೇಳದ ಕಾರ್ಯಕ್ರಮಗಳ ವಿವರ:

17-11-2023 (ಶುಕ್ರವಾರ): ಬೆಳಿಗ್ಗೆ 11.00:- ಉದ್ಘಾಟನೆ ಹಾಗೂ ರಾಜ್ಯಮಟ್ಟದ ರೈತ ಪ್ರಶಸ್ತಿಗಳ  ಪ್ರದಾನ ಸಮಾರಂಭ.
ಪ್ರಶಸ್ತಿಗಳ ಪ್ರದಾನ ಸಮಾರಂಭ ಮಧ್ಯಾಹ್ನ 2.30:- ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ/ರೈತ ಮಹಿಳಾ ಪ್ರಶಸ್ತಿಗಳು 

18-11-2023 (ಶನಿವಾರ): ಬೆಳಿಗ್ಗೆ 10.30:- ರೈತರಿಂದ ರೈತರಿಗಾಗಿ ಚರ್ಚಾ ಗೋಷ್ಟಿ ಸಾಂಪ್ರದಾಯಿಕ ಸಿರಿಧಾನ್ಯಗಳು : ಭವಿಷ್ಯದ ಬೆಳೆಗಳು

ಮಧ್ಯಾಹ್ನ 2.00:- ಪ್ರಶಸ್ತಿಗಳ ಪ್ರದಾನ ಸಮಾರಂಭ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ/ರೈತ ಮಹಿಳಾ ಪ್ರಶಸ್ತಿಗಳು. ಮತ್ತು ಅತ್ಯುತ್ತಮ ವೈಜ್ಞಾನಿಕ ಲೇಖನಗಳಿಗೆ ಡಾ. ಆರ್.ದ್ವಾರಕೀನಾಥ್ ಮತ್ತು ಪ್ರೋ. ಬಿ.ವಿ.ವೆಂಕಟರಾವ್ ಪ್ರಶಸ್ತಿಗಳು.

19-11-2023 (ಭಾನುವಾರ): ಬೆಳಿಗ್ಗೆ 10.30: ರೈತರಿಂದ ರೈತರಿಗಾಗಿ ಚರ್ಚಾ ಗೋಷ್ಠಿ ಬರ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು.

ಮಧ್ಯಾಹ್ನ 2.00:- ಪ್ರಶಸ್ತಿಗಳ ಪ್ರದಾನ ಸಮಾರಂಭ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ/ರೈತ ಮಹಿಳಾ ಪ್ರಶಸ್ತಿಗಳು.

20-11-2023 (ಸೋಮವಾರ): ಬೆಳಿಗ್ಗೆ 10.30:- ರೈತರಿಂದ ರೈತರಿಗಾಗಿ ಚರ್ಚಾ ಗೋಷ್ಠಿ ಗ್ರಾಮೀಣಯುವಕರಿಗೆ ಕೃಷಿ ಪೂರಕ ಉದ್ದಿಮೆಯಾಗಿ: ಬೀಜೋತ್ಪಾದನೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ.

ಮಧ್ಯಾಹ್ನ 2.30:- ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ರೈತ/ರೈತ ಮಹಿಳಾ ಪ್ರಶಸ್ತಿಗಳು.

ಇದನ್ನೂ ಓದಿ: sheep and goat training- ಶೇ 50% ಸಹಾಯಧನದಲ್ಲಿ ಕುರಿ-ಆಡು ಸಾಕಾಣಿಕೆ ಆರಂಭಿಸಲು ಇಲ್ಲಿದೆ ಸುವರ್ಣಾವಕಾಶ!

ವಿಶೇಷ ಸೂಚನೆಗಳ ವಿವರ ಹೀಗಿದೆ:

1. ಬೆಂಗಳೂರು ಕೆಂಪೇಗೌಡ ಬಸ್‌ ನಿಲ್ದಾಣದಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿ.ಕೆ. ಎ.ಕೆ) ಪ್ರವೇಶ ದ್ವಾರಕ್ಕೆ ಈ ಕೆಳಕಂಡ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್‌ಗಳ ಸಂಚಾರವಿರುತ್ತದೆ.

ಬಸ್ ಗಳ ಸಂಖ್ಯೆ: 277, 280, 281, 283, 284.284. 28423, 2842, 2848. 285,2850,286, 289, 289,2980, 299, 402

2. ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಪ್ರವೇಶ ದ್ವಾರದಿಂದ ಕೃಷಿಮೇಳದ ಸ್ಥಳಕ್ಕೆ ಹೋಗಲು ಕೃಷಿ ವಿಶ್ವವಿದ್ಯಾನಿಲಯದ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ

3. ನಿಗದಿತ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಇನ್ನು ಹೆಚ್ಚಿನ ಮಾಹಿತಿ ಮತ್ತು ಸ್ಟಾಲ್ ಬುಕಿಂಗಾಗಿ: click here

ಇದನ್ನೂ ಓದಿ: free sewing machine scheme-2023: ಉಚಿತವಾಗಿ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!