LIC Policy renewal- ಎಲ್ ಐ ಸಿ ಯಿಂದ ಗ್ರಾಹಕರಿಗೆ ಬಂಪರ್ ಆಫರ್!

LIC Policy renewal: ಅನಿವಾರ್ಯ ಸಂದರ್ಭಗಳಿಂದಾಗಿ ನಿಮ್ಮ ನೆಚ್ಚಿನ ಎಲ್‌ಐಸಿ ಪಾಲಿಸಿಯ ಕಂತು(lic premium payment) ಕಟ್ಟದೇ ಅದು ಮಧ್ಯದಲ್ಲೇ ಲ್ಯಾಪ್ಸ್ ಆಗಿದೆಯೇ? ಅದಕ್ಕೆ ಮರುಜೀವ ನೀಡಲು ಈಗ LIC ಯಿಂದ ಅವಕಾಶ ಮಾಡಿಕೊಡಲಾಗಿದೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಅನಿವಾರ್ಯ ಸಂದರ್ಭಗಳಿಂದಾಗಿ ನಿಮ್ಮ ನೆಚ್ಚಿನ ಎಲ್‌ಐಸಿ ಪಾಲಿಸಿಯ ಕಂತು ಕಟ್ಟದೇ, ಅದು ಮಧ್ಯದಲ್ಲೇ ಲ್ಯಾಪ್ಸ್ ಆಗಿದೆಯೇ? ಅದಕ್ಕೆ ಮರುಜೀವ ನೀಡಲು ಈಗ ಅವಕಾಶವಿದೆ.

ನಿಮ್ಮ ಎಲ್‌ಐಸಿ ಪಾಲಿಸಿಯ ಪ್ರೀಮಿಯಂ(lic policy renewal) ಕಟ್ಟದೇ ಲ್ಯಾಫ್ಸ್‌ ಆಗಿದ್ದರೆ, ಈ ಪಾಲಿಸಿಯನ್ನು ನವೀಕರಿಸಲು ನಿಮಗೆ ಅವಕಾಶವಿದೆ. ಭಾರತೀಯ ಜೀವ ವಿಮಾ ನಿಗಮವು (LIC) ಲ್ಯಾಫ್ಸ್‌ ಆಗಿರುವ ವಿಮೆಗಳ ನವೀಕರಣಕ್ಕೆ ವಿಶೇಷ ಅಭಿಯಾನ ಆರಂಭಿಸಿದೆ. ಸೆಪ್ಟೆಂಬರ್‌ 1 ರಿಂದ 30ರವರೆಗೆ ಲ್ಯಾಪ್ಸ್‌ ಆಗಿರುವ ಪಾಲಿಸಿಗಳನ್ನು ನವೀಕರಿಸಬಹುದು. ಈ ಕುರಿತು ವಿವರವಾದ ಮಾಹಿತಿಯನ್ನೂ ಈ ಅಂಕಣದಲ್ಲಿ ತಿಳಿಯೋಣ.

ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಲ್ಯಾಪ್ಸ್ ಆಗಿರುವ ವೈಯಕ್ತಿಕ ಪಾಲಿಸಿಗಳ ಪುನರು ಜೀವನಕ್ಕಾಗಿ ವಿಶೇಷ ಅಭಿಯಾನವನ್ನು ಎಲ್‌ಐಸಿಯ 67ನೇ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಪಾಲಿಸಿಗಳ ಪುನರುಜ್ಜಿವನ ಯೋಜನೆಗೆ ಸಂಸ್ಥೆ ಮುಂದಾಗಿದೆ. ಪಾಲಿಸಿದಾರರು ಈ ಸಂದರ್ಭವನ್ನು ಬಳಸಿಕೊಳ್ಳಬಹುದು. ಎಂದಿನಂತೆ ವಿಮೆ ರಕ್ಷೆಯನ್ನು ಮುಂದುವರಿಸಬಹುದು ಎಂದು ಸಂಸ್ಥೆ ತಿಳಿಸಿದೆ.  

ಇದನ್ನೂ ಓದಿ: Solar pump set subsidy- ಸೋಲಾರ್ ಪಂಪ್ ಸೆಟ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ನಿಮ್ಮ ಪಾಲಿಸಿ ಯಾವಾಗ ಲ್ಯಾಫ್ಸ್‌ ಆಗುತ್ತವೆ?

ಸಾಮಾನ್ಯವಾಗಿ, ನೀವು ನಿಗದಿತ ಪ್ರೀಮಿಯಂ(LIC policy Premium) ಅನ್ನು ನಿಗದಿತ ದಿನಾಂಕದಂದು ಅಥವಾ ಗ್ರೇಸ್ ಅವಧಿ ಯೊಳಗೆ ನಿಯಮಿತವಾಗಿ ಪಾವತಿಸಬೇಕಾಗುತ್ತದೆ. ನೀವು ಹಾಗೆ ಮಾಡದಿದ್ದರೆ, ನಿಮ್ಮ ಪಾಲಿಸಿಯ ಮಾನ್ಯತೆ ರದ್ದಾಗುತ್ತದೆ. ಪಾಲಿಸಿದಾರರಿಗೆ 15 ಮತ್ತು 30 ದಿನಗಳ ನಡುವಿನ ಗ್ರೇಸ್ ಅವಧಿಯನ್ನು ಸಾಮಾನ್ಯವಾಗಿ ನೀಡಲಾಗಿರುತ್ತದೆ. ಗ್ರೇಸ್ ಅವಧಿಯಲ್ಲಿಯೂ ವ್ಯಕ್ತಿಗಳು ಪ್ರೀಮಿಯಂಗಳನ್ನು ಪಾವತಿಸಲು ವಿಫಲರಾದಾಗ ಮಾತ್ರ ಪಾಲಿಸಿ ಲ್ಯಾಪ್ಸ್ ಆಗುತ್ತದೆ.

ಲ್ಯಾಪ್ಸ್‌ ಆದ LIC ಪಾಲಿಸಿಯನ್ನು ನವೀಕರಿಸುವುದು ಹೇಗೆ?

1 ಪಾಲಿಸಿದಾರರು ವಿಳಂಬ ಪಾವತಿ ಬಡ್ಡಿಯನ್ನು ಪಾವತಿಸುವ ಮೂಲಕ ನೇರವಾಗಿ ವಿಮಾದಾರರೊಂದಿಗೆ ತಮ್ಮ ಪಾಲಿಸಿಗಳನ್ನು ಪುನಃ ಸಕ್ರಿಯಗೊಳಿಸಬಹುದು.
2 ಕಾಲಕಾಲಕ್ಕೆ ನಿಗಮವು ನಿಗದಿಪಡಿಸಿದ ದರದಲ್ಲಿ ಬಡ್ಡಿ ಹಾಗೂ ಎಲ್ಲ ಬಾಕಿ ಇರುವ ಪ್ರೀಮಿಯಂಗಳನ್ನು ಪಾವತಿಸಿದ ನಂತರ ಯೋಜನಾ ಷರತ್ತುಗಳ ಪ್ರಕಾರ ಲ್ಯಾಪ್ಸ್‌ ಆದ ಪಾಲಿಸಿಯನ್ನು ನವೀಕರಿಸಬಹುದು.
3 ಎಲ್‌ಐಸಿ ವಿಮೆಯ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು, ಪಾಲಿಸಿದಾರರು ಏಜೆಂಟ್‌ಗಳಿಗೆ ಕರೆ ಮಾಡಬಹುದು ಅಥವಾ ನೇರವಾಗಿ ಎಲ್‌ಐಸಿ ಶಾಖೆಗೆ ಹೋಗಬಹುದು.
4 ವಿಮಾದಾರರ ಗ್ರಾಹಕ ಸೇವಾ ವಿಭಾಗವನ್ನು ಸಂಪರ್ಕಿಸುವ ಮೂಲಕ ಪುನರುಜ್ಜೀವನದ ಕಾರ್ಯವಿಧಾನಗಳ ಬಗ್ಗೆ ಸಹ ವಿಚಾರಿಸಬಹುದು.
5 ಪಾಲಿಸಿಯ ನವೀಕರಣ ಉದ್ದೇಶಕ್ಕಾಗಿ ಅಗತ್ಯವಿರುವ ವೈದ್ಯಕೀಯ ವರದಿಗಳು ಹಾಗೂ ವಿಶೇಷ ರಿಪೋರ್ಟ್ಸ್‌ಗಳ ವೆಚ್ಚವನ್ನು ಜೀವ ವಿಮಾದಾರರು ಭರಿಸುತ್ತಾರೆ.

ಇದನ್ನೂ ಓದಿ: Ration Card Update- ರೇಷನ್ ಕಾರ್ಡ ತಿದ್ದುಪಡಿ ಕುರಿತು ಸಿಹಿ ಸುದ್ದಿ ನೀಡಿದ ರಾಜ್ಯ ಸರಕಾರ!

ಈ ಅವಧಿಯಲ್ಲಿ ನಿಮ್ಮ ಪಾಲಿಸಿ ನವೀಕರಣ ಮಾಡುವುದರಿಂದಾಗುವ ಲಾಭಗಳೇನು?

ಈ ಅವಧಿಯಲ್ಲಿ ಗ್ರಾಹಕರು ತಮ್ಮ ಪಾಲಿಸಿ ಲ್ಯಾಪ್ಸ್ ಅಗಿರುವುದನ್ನು ಮರು ನವೀಕರಣ ಮಾಡಿಕೊಂಡರೆ ಈ ಹಿಂದೆ ನೀವು ಪಾಲಿಸಿ ಪ್ರಾರಂಭ ಮಾಡಿದ ವರ್ಷದಿಂದ ನಿಮಗೆ ಲಾಭಾಂಶ ಸಿಗುತ್ತದೆ ಹೆಚ್ಚುವರಿ ಯಾವುದೇ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ ಈ ಕಾರಣದಿಂದಾಗಿದೆ ಒಂದೆರಡು ಕಂತು ಪ್ರಿಮೀಯಂ ಕಟ್ಟಿ ನಂತರದ ವರ್ಷಗಳಲ್ಲಿ ಪ್ರಿಮೀಯಂ ಕಟ್ಟದೇ ಇರುವವರು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬವುದಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ LIC ಅಧಿಕೃತ ಜಾಲತಾಣ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ.
LIC Helpline numbers:- +91-22-68276827, 8976862090(Whatsapp only)

ಗ್ಯಾರಂಟಿ ಯೋಜನೆಗಳ ಅಂಕಣಗಳು:

Gruhalakshmi status check: ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದ್ದರು, ಗೃಹಲಕ್ಷ್ಮಿ ಹಣ  ಜಮಾ ಆಗದಿದ್ದರೆ ಏನು ಮಾಡಬೇಕು?

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

Gruha Lakshmi : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department