LPG cylinder Ekyc-ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯಲು ಡಿ,31 ರ ಒಳಗಾಗಿ ಇ-ಕೆವೈಸಿ ವೈರಲ್ ಸುದ್ದಿ ಕುರಿತು ಅಧಿಕಾರಿಗಳಿಂದ ಸ್ಪಷ್ಟನೆ!

LPG cylinder Ekyc: ಪ್ರಸ್ತುತ ಡಿಜಿಟಲ್ ಜಗತ್ತಿನಲ್ಲಿ ಅದರಲ್ಲೂ ಹೆಚ್ಚು ಜನ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಅಪ್ಲಿಕೇಶನ್ ಗಳಲ್ಲಿ ಸುದ್ದಿಯು ಬಹು ಬೇಗನೆ ವೈರಲ್ ಅಗಿಬಿಡುತ್ತವೆ ಜನರು ಒಂದು ಸುದ್ದಿ ತಮಗೆ ಬಂದ ಬಳಿಕ ಅದರ ಸತ್ಯಸತ್ಯತೆ ಅನ್ನು ಖಚಿತಪಡಿಸಿಕೊಳ್ಳದೇ ಬೇರೊಬ್ಬರಿಗೆ ಶೇರ್ ಮಾಡಿಬಿಡುತ್ತಾರೆ.

ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಗ್ರಾಹಕರು ಡಿಸೆಂಬರ್ 31 ರ ಒಳಗಾಗಿ ತಮ್ಮ ಗ್ಯಾಸ್ ಏಜೆನ್ಸಿ ಕಚೇರಿಗಳನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಕೊಂಡರೆ ಮಾತ್ರ  ಜನವರಿ 01 ರ ಬಳಿಕ ಸಬ್ಸಿಡಿಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಬವುದು ಇಲ್ಲವಾದಲ್ಲಿ ಪೂರ್ತಿ ಹಣ ಪಾವತಿ ಮಾಡಿ ಗ್ಯಾಸ್ ಖರೀದಿ ಮಾಡಬೇಕು ಎಂದು ವಾಟ್ಸಾಪ್ ಗುಂಪುಗಳಲ್ಲಿ ಸಂದೇಶ ವೈರಲ್ ಅಗುತ್ತಿದ್ದು

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಖಚಿತ ಮಾಹಿತಿಯನ್ನು ಈ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಪ್ರಸ್ತುತ ಡಿಜಿಟಲ್ ಜಗತ್ತಿನಲ್ಲಿ ಅದರಲ್ಲೂ ಹೆಚ್ಚು ಜನ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಅಪ್ಲಿಕೇಶನ್ ಗಳಲ್ಲಿ ಸುದ್ದಿಯು ಬಹು ಬೇಗನೆ ವೈರಲ್ ಅಗಿಬಿಡುತ್ತವೆ ಜನರು ಒಂದು ಸುದ್ದಿ ತಮಗೆ ಬಂದ ಬಳಿಕ ಅದರ ಸತ್ಯಸತ್ಯತೆ ಅನ್ನು ಖಚಿತಪಡಿಸಿಕೊಳ್ಳದೇ ಬೇರೊಬ್ಬರಿಗೆ ಶೇರ್ ಮಾಡಿಬಿಡುತ್ತಾರೆ.

ಗ್ಯಾಸ್ ಸಿಲಿಂಡರ್ ಇ-ಕೆವೈಸಿ ವಿಚಾರದಲ್ಲಿಯು ಇದೆ ಅಗಿದೆ ಈ ಕೆಳಗಿನ ಚಿತ್ರದಲ್ಲಿರುವ ಸಂದೇಶವು ಬಹು ಬೇಗನೆ ರಾಜ್ಯ ವ್ಯಾಪಿ ವೈರಲ್ ಅಗಿದ್ದು ಇದರ ಪರಿಣಾಮದಿಂದಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಇ-ಕೆವೈಸಿ ಮಾಡಿಕೊಳ್ಳಲು ಜಮಾಯಿಸುತ್ತಿದ್ದಾರೆ.

ಇದನ್ನೂ ಓದಿ: Secondary agriculture-ಕೃಷಿ ಇಲಾಖೆಯಿಂದ ಶೇ 50 ಸಬ್ಸಿಡಿಯಲ್ಲಿ ನರ್ಸರಿ ಸೇರಿದಂತೆ ಹಲವು ಯೋಜನೆಗೆ ಅರ್ಜಿ  ಆಹ್ವಾನ!

LPG cylinder Ekyc-ವಾಟ್ಸಾಪ್ ನಲ್ಲಿ ವೈರಲ್ ಅದ ಸಂದೇಶ ಹೀಗಿದೆ:

ಡಿಸೆಂಬರ್ 31 ರ ಒಳಗಡೆ ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಅದಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕ ಅಥವಾ ಆಧಾರ್ ಕಾರ್ಡ್ ಈ ಮೂರು ದಾಖಲೆಗಳನ್ನು ತೆಗೊಂಡು ನಿಮ್ಮ ಹತ್ತಿರದ ಗ್ಯಾಸ್ ನೀಡುವ ಎಜೆನ್ಸಿ ಬಳಿ ಹೋಗಿ KYC ಮಾಡಿಸಬೇಕು.

ಮಾಡಿಸಿದರೆ ನಿಮಗೆ ಜನವರಿ1 ರಿಂದ ಸಬ್ಸಿಡಿ ಬರುತ್ತದೆ. ಈಗ ಇರುವ ಸಿಲಿಂಡ‌ರ್ ಗೆ 903 ರಿಂದ 500 ಸಿಗುತ್ತದೆ. Kyc ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಕಮರ್ಷಿಯಲ್ ಆಗಿ ಮಾರ್ಪಟ್ಟು 1400 ಕ್ಕೆ ಪಡೆದುಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ಯಾಸ್ ಏಜೆನ್ಸಿಗೆ ಸಂಪರ್ಕಿಸಿ ಎನ್ನುವ ಸಂದೇಶವು ವಾಟ್ಸಾಪ್ ಗುಂಪುಗಳಲ್ಲಿ ವೈರಲ್ ಅಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿವ ಸಂಬಂಧಪಟ್ಟ ಅಧಿಕಾರಿಗಳು ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮಾತ್ರ ಡಿಸೆಂಬರ್ 31ರೊಳಗೆ KYC ಮಾಡಿಸಬೇಕು. ಉಳಿದ ಗ್ರಾಹಕರು KYC ಮಾಡಿಸಬೇಕಾದ ಅಗತ್ಯವಿಲ್ಲ. ಒಂದು ವೇಳೆ ಕೆವೈಸಿ ಮಾಡಿಸದಿದ್ದರೆ ಕಮರ್ಷಿಯಲ್ ಆಗಿ ಬದಲಾಗುತ್ತದೆ ಎಂಬುದು ಸುಳ್ಳು. ಅಂತವರು ಗೃಹಬಳಕೆಯ ಗ್ರಾಹಕರಾಗಿಯೇ ಮುಂದುವರೆಯುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: Ration card list-2023: ಜಿಲ್ಲಾವಾರು ವಿತರಣೆಯಾಗದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ!

ಇನ್ನು ಈ ಬಗ್ಗೆ ಉಜ್ವಲ ಯೋಜನೆಯ ನೋಡಲ್ ಅಧಿಕಾರಿ ರಾಹುಲ್ ಕೂಡ ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ವಾಟ್ಸಪ್ ಸಂದೇಶದಲ್ಲಿ ಹುರುಳಿಲ್ಲ. ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತಿದೆ. ಅವರು ಮಾತ್ರ ಆಧಾರ ದೃಢೀಕರಿಸಬೇಕು. ಹಾಗಾಗಿ ಉಳಿದ ಗ್ರಾಹಕರು ಗೊಂದಲಕ್ಕೊಳಗಾಗುವುದು ಬೇಡ ಎಂದು ತಿಳಿಸಿದ್ದಾರೆ.

LPG Ekyc-ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರ:

ಈಗಾಗಲೇ ಬಹುತೇಕ ಮನೆ ಬಳಕೆಗೆ ಸಿಲಿಂಡರ್ ಗಳನ್ನು ಉಜ್ವಲ ಯೋಜನೆಯಡಿ ಗ್ರಾಹಕರು ಪಡೆಯುವಾಗ ಇ-ಕೆವೈಸಿ ಮಾಡಿಯೇ ಸಿಲಿಂಡರ್ ಗಳನ್ನು ನೀಡಲಾಗಿದ್ದು ಬಿಟ್ಟು ಹೋಗಿರುವ ಗ್ರಾಹಕರು ಮಾತ್ರ ಅಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್ , ಮೊಬೈಲ್ ನಂಬರ್ ಸಮೇತ ನೀವು ಪ್ರತಿ ತಿಂಗಳು ಗ್ಯಾಸ್ ಪಡೆಯುವ ಏಜೆನ್ಸಿಯನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಕೊಳ್ಳಬೇಕು ಈ ಕುರಿತು ನಿಮ್ಮ ಮನೆಗೆ ಪ್ರತಿ ತಿಂಗಳು ಗ್ಯಾಸ್ ನೀಡುವ ಗ್ಯಾಸ್ ಏಜೆನ್ಸಿಯ ಪ್ರತಿನಿಧಿಯ ಬಳಿ ವಿಚಾರಿಸಬಹುದು.

ಇದನ್ನೂ ಓದಿ: Ayushman Bharat Yojana: ಈ ಕಾರ್ಡ ನಿಮ್ಮ ಬಳಿಯಿದ್ದಲ್ಲಿ 5 ಲಕ್ಷದವರೆಗೆ ಅರ್ಥಿಕ ನೆರವು ಪಡೆಯಬವುದು!