ಕಂದಾಯ ಇಲಾಖೆ ಮೂಲಕ ಜಮೀನಿನ ದಾಖಲಾತಿಗೆ ಸಂಬಂಧಿಸಿದ ವಿವಿಧ ಬಗ್ಗೆಯ ಸೇವೆಗಳಿಗೆ ಶುಲ್ಕ ಪಾವತಿ ದರ ಪಟ್ಟಿಯನ್ನು ಸರಕಾರದಿಂದ ಪ್ರಕಟಿಸಲಾಗಿದೆ.
ಸಾರ್ವಜನಿಕರಿಂದ 11 ಇ , ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ಮತ್ತು ಹದ್ದುಬಸ್ತು ಹಾಗೂ ಸ್ವಾವಲಂಬಿ ಯೋಜನೆಯನ್ವಯ್ ಸ್ವೀಕರಿಸುವ ಅರ್ಜಿಗಳ ಸೇವಾ ಶುಲ್ಕ ಪಾವತಿ ದರ ಪಟ್ಟಿಯನ್ನು ಸರಕಾರದಿಂದ ಪ್ರಕಟಿಸಲಾಗಿದೆ.
ಸೇವಾ ಶುಲ್ಕ ಪಾವತಿ ದರ ಪಟ್ಟಿಯ ಅಧಿಕೃತ ಅದೇಶದ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: Agri startup scheme-ಕೃಷಿ ಇಲಾಖೆಯಿಂದ ಕೃಷಿ ನವೋದ್ಯಮ ಯೋಜನೆಯಡಿ ಅರ್ಜಿ ಆಹ್ವಾನ! ಶೇ 50% ಸಹಾಯಧನ 50 ಲಕ್ಷದವರೆಗೆ.
revenue department- ಅರ್ಜಿ ಶುಲ್ಕದ ಕುರಿತು ಸರಕಾರದ ಆದೇಶದ ವಿವರ ಈ ಕೆಳಗಿನಂತಿದೆ:
ಮೋಜಿಣಿ ವ್ಯವಸ್ಥೆಯಡಿ ಸಾರ್ವಜನಿಕರು ಅಳತೆ ಕೋರಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕವನ್ನು ನಿಗಧಿಪಡಿಸಲಾಗಿತ್ತು ಹಾಗೆಯೇ ಪರವಾನಗಿ ಭೂಮಾಪಕರಿಗೆ ಪ್ರತಿ ಅರ್ಜಿಗೆ ಪಾವತಿಸುತ್ತಿರುವ ಸೇವಾ ಶುಲ್ಕವನ್ನು 800 ರಿಂದ 1200 ಗಳಿಗೆ ಹಾಗೂ ಬಹುಮಾಲೀಕತ್ವದ ಪ್ರತಿ ಹೆಚ್ಚುವರಿ ಬ್ಲಾಕಿಗೆ ರೂ 150 ರಿಂದ 200 ಗಳಿಗೆ ಪರಿಷ್ಕರಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ: New year-2024: ಹೊಸ ವರ್ಷ ಇಂದಿನಿಂದ ಯಾವೆಲ್ಲ ವಸ್ತುಗಳು ದುಬಾರಿ? ಯಾವೆಲ್ಲ ನಿಯಮದಲ್ಲಿ ಬದಲಾವಣೆ!
ತದನಂತರ ಮೋಜಿನಿ ವ್ಯವಸ್ಥೆಯಡಿ ಸಲ್ಲಿಸುವ ಅರ್ಜಿಗಳ ಅಳತೆ ಶುಲ್ಕವನ್ನು ಪುನರ್ ಪರಿಷ್ಕರಿಸಿ ಅರ್ಜಿ ಶುಲ್ಕವನ್ನು ಕಡಿಮೆಗೊಳಿಸಿ ಈ ಕೆಳಕಡಂತೆ ನಿಗಧಿಪಡಿಸಲಾಗಿದೆ.
ಸಾರ್ವಜನಿಕರು ತಮ್ಮ ಸ್ವಂತ ಖಾಸಗಿ ಜಮೀನಿನಲ್ಲಿ ‘ಸ್ನಾವಲಂಬಿ ಆಪ್’ ಮೂಲಕ ಸ್ವಯಂ ಸರ್ವೆ ಮಾಡಿಕೊಳ್ಳುವ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಈ ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ ಮೇಲೆ ಓದಲಾದ ಕ್ರ.ಸಂ. (7) ರ ಆದೇಶದಲ್ಲಿ ಪ್ರತಿ ಅರ್ಜಿಗೆ ರೂ.1000/- ಮೊತ್ತವನ್ನು ಅರ್ಜಿ ಶುಲ್ಕವನ್ನಾಗಿ ನಿಗದಿಪಡಿಸಿ ಆದೇಶಿಸಲಾಗಿದೆ.
ಮೇಲಿನ ಸರ್ಕಾರದ ಆದೇಶಗಳಲ್ಲಿ ಅರ್ಜಿ ಶುಲ್ಕವನ್ನು ನಿರ್ದಿಷ್ಟವಾಗಿ ಪಹಣಿ ಕಾಲಂ-3 ಅಥವಾ ಕಾಲಂ-9 ವಿಸ್ತೀರ್ಣಕ್ಕೆ ಅನುಗುಣವಾಗಿ ಪಾವತಿಸಿಕೊಳ್ಳಬೇಕೆ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ ಸ್ವಾವಲಂಬಿ ಯೋಜನೆಯಡಿಯಲ್ಲಿ ಸಲ್ಲಿಸುವ ಅರ್ಜಿಗಳಿಗೆ ಪಹಣಿಯ(Land survey) ಕಾಲಂ-3 ರಲ್ಲಿನ ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಪಾವತಿಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಇದನ್ನೂ ಓದಿ: LPG cylinder ekyc-ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ!
ಅದೇ ರೀತಿಯಲ್ಲಿ, ನಾಗರಿಕರು ಅಳತೆ ಕೋರಿ ಸಲ್ಲಿಸುವ ವಿವಿಧ ಅರ್ಜಿಗಳಿಗೆ ಪಹಣಿ ಕಾಲಂ-9 ರ ವಿಸ್ತೀರ್ಣಕ್ಕೆ ಶುಲ್ಕ ಪಾವತಿಸಿಕೊಳ್ಳುವ ಬದಲಾಗಿ ಏಕರೂಪ ಶುಲ್ಕ ಪದ್ಧತಿಯನ್ನು ಅನುಸರಿಸುವ ಸಲುವಾಗಿ ಪಹಣಿಯ ಕಾಲಂ-3 ರ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಲೆಕ್ಕ ಹಾಕಿ ಪಾವತಿಸಿಕೊಳ್ಳಲು ಮೋಜಿಣಿ ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ.
ಆದರೆ ಪಹಣಿಯ ಕಾಲಂ-3 ರ ವಿಸ್ತೀರ್ಣ ಹೆಚ್ಚಿಗೆ ಇದ್ದು ಸಾರ್ವಜನಿಕರ ಹಕ್ಕಿನ ವಿಸ್ತೀರ್ಣ ಕಡಿಮೆ ಇದ್ದು, ಪೂರ್ಣ ವಿಸ್ತೀರ್ಣಕ್ಕೆ ಅರ್ಜಿ ಶುಲ್ಕವನ್ನು ಪಾವತಿಸಿಕೊಳ್ಳುತ್ತಿರುವ ಕಾರಣ ಸಾರ್ವಜನಿಕರಿಗೆ ಹೊರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಅಲ್ಲದೆ, 2023 ರ ಡಿಸೆಂಬರ್ ಮಾಹೆಯಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಅರ್ಜಿ ಶುಲ್ಕ ಹೆಚ್ಚಾಗಿರುವ ಕುರಿತು ಮಾನ್ಯ ಸದಸ್ಯರುಗಳು ಸದನದಲ್ಲಿ ಪ್ರಸ್ತಾಪಿಸಿರುತ್ತಾರೆ. ಜೊತೆಗೆ, ಅರ್ಜಿದಾರರು / ಜನಪ್ರತಿನಿಧಿಗಳಿಂದಲೂ ಸಹ ಪೋಡಿ ಶುಲ್ಕ, ಹೆಚ್ಚುವರಿಯಾಗಿ ಪಾವತಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಸಹ ಸ್ವೀಕೃತವಾಗಿರುತ್ತವೆ.
ಈ ಮೇಲ್ಕಂಡ ಎಲ್ಲಾ ಸೇವೆಗಳನ್ನು ಸರ್ಕಾರಕ್ಕೆ ಹೊರೆಯಾಗದಂತೆ ಸಾರ್ವಜನಿಕರಿಗೆ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಅನುವಾಗುವಂತೆ ಸರ್ಕಾರಿ ಭೂಮಾಪಕರ ಜೊತೆಗೆ ಪರವಾನಗಿ ಭೂಮಾಪಕರನ್ನು ಸಹ ಆಯ್ಕೆ ಮಾಡಿಕೊಳ್ಳಲಾಗಿದೆ. ಪರವಾನಗಿ ಭೂಮಾಪಕರು ನೀಡುವ ಸೇವೆಗೆ ಸಾರ್ವಜನಿಕರು ಪಾವತಿಸುವ ಶುಲ್ಕದಿಂದಲೇ ನಿಗಧಿತ ಸೇವಾ ಶುಲ್ಕವನ್ನು ಪಾವತಿಸಲಾಗುತ್ತಿದೆ.
ಪ್ರಸ್ತುತ ಪೋಡಿ ಮುಕ್ತ ಗ್ರಾಮ ಅಭಿಯಾನ ಯೋಜನೆಯಡಿಯಲ್ಲಿ ಬಹುಮಾಲೀಕತ್ವ ಪಹಣಿಯಲ್ಲಿರುವ ಹಕ್ಕುದಾರರಿಗೆ ಶುಲ್ಕ ರಹಿತವಾಗಿ ಪೋಡಿ ಮಾಡಿಕೊಡುವ ಯೋಜನೆ ಜಾರಿಯಲ್ಲಿರುತ್ತದೆ. ಇದಲ್ಲದೆ ಅಲಿನೇಷನ್, ದರಖಾಸ್ತು ಪೋಡಿಗೆ ಸಂಬಂಧಿಸಿದಂತೆ ಮಂಜೂರಿ ಸಮಯದಲ್ಲಿಯೇ ಅರ್ಜಿದಾರರಿಂದ ಪೋಡಿ ಶುಲ್ಕ ಭರಿಸಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: free driving training-ಉಚಿತ ವಸತಿ ಊಟ ಸಹಿತ 30 ದಿನಗಳ ಲಘು ಮತ್ತು ಭಾರಿ ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ!
ಈ ಹಿನ್ನೆಲೆಯಲ್ಲಿ, ಮೋಜಿಣಿ ವ್ಯವಸ್ಥೆಯಡಿ ಸ್ವೀಕೃತವಾಗುವ ಅಳತೆ ಅರ್ಜಿಗಳಿಗೆ ಸಂಬಂಧಿಸಿದಂತೆ ಶುಲ್ಕ ಪಾವತಿಸಿಕೊಳ್ಳುವ ಕುರಿತು ಸರ್ಕಾರದ ಸೂಕ್ತ ನಿರ್ದೇಶನ ಕೋರಿ ಮೇಲೆ ಓದಲಾದ ಕ್ರ.ಸಂ. (8) ರ ಕಡತದಲ್ಲಿ ಆಯುಕ್ತರು, ಭೂಮಾಪನ ಇಲಾಖೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಆಯುಕ್ತರು, ಭೂಮಾಪನ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಮೇಲೆ ಓದಲಾದ ಕ್ರ.ಸಂ (4) ಮತ್ತು (5) ರ ಸರ್ಕಾರದ ಆದೇಶಗಳಲ್ಲಿ ಮೋಜಿಣಿ ವ್ಯವಸ್ಥೆಯಡಿಯಲ್ಲಿ ಸ್ವೀಕರಿಸುವ ವಿವಿಧ ರೀತಿಯ ಅಳತೆ / ಹದ್ದುಬಸ್ತು ಅರ್ಜಿಗಳಿಗೆ ನಿಗದಿಪಡಿಸಿರುವ ಮೋಜಿಣಿ ಶುಲ್ಕವನ್ನು ಪಾವತಿಸಿಕೊಳ್ಳುವ ಕುರಿತು ಈ ಕೆಳಕಂಡಂತೆ ಆದೇಶಿಸಿದೆ.
ಇದನ್ನೂ ಓದಿ: Farm Pond application-ಶೇ 90 ಸಹಾಯಧನದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ಮಾಡಿಕೊಳ್ಳಲು ರೈತರಿಂದ ಅರ್ಜಿ ಆಹ್ವಾನ!
ಸ್ವಾವಲಂಬಿ’ ಯೋಜನೆಯಡಿ ಸ್ವಇಚ್ಛೆಯಿಂದ ಸ್ಕೆಚ್ ತಯಾರಿಸಲು ಸಲ್ಲಿಸುವ ಪ್ರತಿ ಅರ್ಜಿಗೆ ರೂ.1000/- ಮೊತ್ತವನ್ನು ಅರ್ಜಿ ಶುಲ್ಕವನ್ನಾಗಿ ನಿಗದಿಪಡಿಸಿ ಆದೇಶಿಸಿರುವುದನ್ನು ಮುಂದುವರೆಸಿದೆ.
ಈ ಆದೇಶವು ದಿನಾಂಕ: 01-01-2024 ರಿಂದ ಭವಿಷ್ಯಾನ್ನಯವಾಗಿ ಜಾರಿಯಾಗಲಿದ್ದು, ಈಗಾಗಲೇ ಅಳತೆಗಾಗಿ ಸ್ವೀಕೃತವಾಗಿ ಬಾಕಿ ಇರುವ ಪ್ರಕರಣಗಳಿಗೆ ಅನ್ವಯಿಸುವಂತಿಲ್ಲ ಎಂದು ಆದೇಶದಲ್ಲಿ ಉಲೇಖಿಸಲಾಗಿದೆ.
ಆದೇಶದ ಪ್ರತಿಗಳು:
ಇದನ್ನೂ ಓದಿ: Self Employment Loan: ಸ್ವಯಂ-ಉದ್ಯೋಗ ನೇರ ಸಾಲ ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ 5 ಕೋಟಿ ನೇರ ನಗದು ವರ್ಗಾವಣೆ- ಸಚಿವ ಕೃಷ್ಣಬೈರೇಗೌಡ