Lok Adalat- ಜಮೀನಿನ ಸಂಬಂಧಿಸಿದ ವ್ಯಾಜ್ಯಗಳು ಕೋರ್ಟನಲ್ಲಿದರೆ ಈ ದಿನ ಅಂತಿಮ ತೀರ್ಪು ಪಡೆಯಬಹುದು!

ಜಮೀನಿನ ಸಂಬಂಧಿಸಿದ ವ್ಯಾಜ್ಯಗಳು ಕೋರ್ಟನಲ್ಲಿದರೆ ಈ ದಿನ ಅಂತಿಮ ತೀರ್ಪು ಪಡೆಯಬಹುದು ಹೌದು ರೈತ ಭಾಂದವರೇ ಅನೇಕ ವರ್ಷಗಳಿಂದ ಇತ್ಯರ್ಥವಾಗದ ಸಿವಿಲ್ ಪ್ರಕರಣಗಳನ್ನು ಮುಕ್ತಾಯಗೊಳಿಸಲು "ರಾಷ್ಟ್ರೀಯ ಲೋಕ್ ಅದಾಲತ್‌(Lok Adalat)" ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲಾ ಜಿಲ್ಲೆಗಳ ನ್ಯಾಯಾಲಯದಲ್ಲಿ ಆಯೋಜನೆ ಮಾಡಲಾಗುತ್ತಿದೆ.

Lok Adalat- ಜಮೀನಿನ ಸಂಬಂಧಿಸಿದ ವ್ಯಾಜ್ಯಗಳು ಕೋರ್ಟನಲ್ಲಿದರೆ ಈ ದಿನ ಅಂತಿಮ ತೀರ್ಪು ಪಡೆಯಬಹುದು!
Lok Adalat -2024

ಜಮೀನಿನ ಸಂಬಂಧಿಸಿದ ವ್ಯಾಜ್ಯಗಳು ಕೋರ್ಟನಲ್ಲಿದರೆ ಈ ದಿನ ಅಂತಿಮ ತೀರ್ಪು ಪಡೆಯಬಹುದು ಹೌದು ರೈತ ಭಾಂದವರೇ ಅನೇಕ ವರ್ಷಗಳಿಂದ ಇತ್ಯರ್ಥವಾಗದ ಸಿವಿಲ್ ಪ್ರಕರಣಗಳನ್ನು ಮುಕ್ತಾಯಗೊಳಿಸಲು "ರಾಷ್ಟ್ರೀಯ ಲೋಕ್ ಅದಾಲತ್‌(Lok Adalat)" ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಜಿಲ್ಲಾ ಜಿಲ್ಲೆಗಳ ನ್ಯಾಯಾಲಯದಲ್ಲಿ ಆಯೋಜನೆ ಮಾಡಲಾಗುತ್ತಿದೆ.

ಏನಿದು ರಾಷ್ಟ್ರೀಯ ಲೋಕ್ ಅದಾಲತ್‌? ಹೇಗೆ ನಡೆಯುತ್ತದೆ? ಯಾವ ದಿನಾಂಕದಂದು ನಡೆಯುತ್ತದೆ? ಇಲ್ಲಿ ಹೇಗೆ ನಾವು ಜಮೀನಿನ ಸಂಬಂಧಿಸಿದ ವ್ಯಾಜ್ಯಗಳಿಗೆ ಅಂತಿಮ ತೀರ್ಪನ್ನು ಪಡೆದುಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಗ್ರಾಮೀಣ ಭಾಗದ ರೈತರು ತಮ್ಮ ಅಕ್ಕ-ಪಕ್ಕದ ಜಮೀನು ಮಾಲೀಕರ ನಡುವೆ ಮತ್ತು ಅಣ್ಣ-ತಮ್ಮಂದಿರ ನಡುವೆ ಜಮೀನು ಹಂಚಿಕೆ ವಿಚಾರಕ್ಕೆ ಕೋರ್ಟ ನಲ್ಲಿ ಪ್ರಕರಣ ದಾಖಲಿಸಿ ಆನೇಕ ವರ್ಷಗಳು ಕಳೆದರು ನಿಮ್ಮ ಪ್ರಕರಣಕ್ಕೆ ಅಂತಿಮ ತೀರ್ಪು ಬರದಿಂದಂತಹ ಪ್ರಕರಣಗಳನ್ನು ಈ "ಜಿಲ್ಲಾ ನ್ಯಾಯಾಲಯದ ಮಟ್ಟದಲ್ಲಿ ನಡೆಯುವ ಲೋಕ್ ಅದಾಲತ್‌" ನಲ್ಲಿ ಮಂಡಿಸಿ ಅಂತಿಮ ತೀರ್ಪು ಅಥವಾ ರಾಜಿ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

Lok Adalat date- ರಾಷ್ಟ್ರೀಯ ಲೋಕ್ ಅದಾಲತ್‌ ಯಾವ ದಿನ ನಡೆಯುತ್ತದೆ:

ಈ ಮೊದಲು ರಾಜ್ಯದ ಎಲ್ಲಾ ಜಿಲ್ಲೆಗಳ ನ್ಯಾಯಾಲಯದಲ್ಲಿ ದಿನಾಂಕ: 09 ಮಾರ್ಚ 2024 ರಂದು ಲೋಕ್ ಅದಾಲತ್‌ ಅನ್ನು ಹಮ್ಮಿಕೊಳ್ಳಲಾಗಿತ್ತು ಈಗ ದಿನಾಂಕ: 16 ಮಾರ್ಚ 2024 ರಂದು ಲೋಕ್ ಅದಾಲತ್‌ ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Copra msp price- ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಪುನಃ ನೋಂದಣಿಗೆ ಅವಕಾಶ! ಎಷ್ಟು ದಿನ ಅವಕಾಶ ನೀಡಲಾಗಿದೆ?

About Lok Adalat-ಏನಿದು ರಾಷ್ಟ್ರೀಯ ಲೋಕ್ ಅದಾಲತ್‌? 

ಬಹಳ ದಿನದಿಂದ ಹಾಗೆಯೇ ಉಳಿದಿಕೊಂಡಿರುವ ಸಿವಿಲ್ ಇತ್ಯಾದಿ ವ್ಯಾಜ್ಯದ ಪ್ರಕರಣಗಳಿಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲು ದೂರುದಾರ ಹಾಗೂ ಇತರೆ ಪ್ರಕರಣಕ್ಕೆ ಸಂಬಂಧಪಟ್ಟ ಸದಸ್ಯರಿಗೆ ಕೋರ್ಟ್ ನಿಂದ ನೋಟಿಸ್ ನೀಡಿ ಈ ಲೋಕ್ ಅದಾಲತ್ ನಡೆಯುವ ದಿನದಂದು ಎಲ್ಲರೂ ಖುದ್ದು ನ್ಯಾಯಾಲದ ಮುಂದೆ ಹಾಜರಾಗಿ ಪ್ರಕರಣಕ್ಕೆ ಮುಕ್ತಾಯಕ್ಕೆ ಅಂತಿಮ ತೀರ್ಪನ್ನು ಅಥವಾ ರಾಜಿ ಅಗುವುದಿದ್ದರೆ ರಾಜಿ ಅಗಿ ಕೋರ್ಟ್ ಪ್ರಕರಣ ಮುಗಿಸಿಕೊಳ್ಳಬಹುದು.

ಇದನ್ನೂ ಓದಿ: Scholarship application- ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!

Lok Adalat helpline- ಹೆಚ್ಚಿನ ಮಾಹಿತಿಗಾಗಿ:

ಸಹಾಯವಾಣಿ ಸಂಖ್ಯೆ- 15100 ಮತ್ತು 1800-425-90900 ಜಾಲತಾಣ https://kslsa.kar.nic.in/ ಅಥವಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಅಥವಾ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಲಾಗಿದೆ.