MSP price-ರೈತರಿಗೆ ಸಿಹಿ ಸುದ್ದಿ 4 ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ! ಯಾವ ಬೆಳೆಗೆ ಎಷ್ಟು ಬೆಲೆ?

ಪ್ರಥಮ ಬಾರಿ ಒಂದೇ ಬಾರಿಗೆ 4 ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ(MSP price-2024) ಖರೀದಿ ಮಾಡಲು ರಾಜ್ಯ ಸರಕಾರದಿಂದ ತಿರ್ಮಾನ ಮಾಡಲಾಗಿದ್ದು, ಈ ಕುರಿತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ರವರು ಹಂಚಿಕೊಂಡಿರುವ ಅಧಿಕೃತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. MSP price list-2024, bembala bele, Sunflower msp, Green gram msp, Soybean msp, long grain msp, Sunflower msp price, Green gram msp price, Soybean msp price, long grain msp price,

MSP price-ರೈತರಿಗೆ ಸಿಹಿ ಸುದ್ದಿ 4 ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ! ಯಾವ ಬೆಳೆಗೆ ಎಷ್ಟು ಬೆಲೆ?
MSP price list-2024

ಪ್ರಥಮ ಬಾರಿ ಒಂದೇ ಬಾರಿಗೆ 4 ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ(MSP price-2024) ಖರೀದಿ ಮಾಡಲು ರಾಜ್ಯ ಸರಕಾರದಿಂದ ತಿರ್ಮಾನ ಮಾಡಲಾಗಿದ್ದು, ಈ ಕುರಿತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ರವರು ಹಂಚಿಕೊಂಡಿರುವ ಅಧಿಕೃತ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ಕು ಬೆಳೆಗಳನ್ನು ಬೆಂಬಲ ಬೆಲೆ(bembala bele) ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಹೆಸರುಕಾಳು, ಸೂರ್ಯಕಾಂತಿ, ಸೋಯಾಬಿನ್ ಮತ್ತು ಉದ್ದಿನಕಾಳನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡಲಾಗುತ್ತಿದೆ. ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಪ್ರಕ್ರಿಯೆ ಆರಂಭಿಸಲು ಸೆಪ್ಟೆಂಬರ್ 5ರಂದು ಆದೇಶ ಹೊರಡಿಸಲಾಗಿದೆ ಎಂದು ಮಾಹಿತಿ ಹಂಚಿಕೊಡಿದ್ದಾರೆ.

ಇದನ್ನೂ ಓದಿ: Post office bank- ಈ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದರೆ ಸಾಕು ಎಲ್ಲಾ ಯೋಜನೆಯ ಹಣ ಸುಲಭವಾಗಿ ಜಮಾ ಅಗುತ್ತದೆ!

Bembala beleyalli Kharidi- ಯಾವ ಬೆಳೆಗೆ ಎಷ್ಟು ಬೆಲೆ ನಿಗದಿ ಮಾಡಲಾಗಿದೆ?

1) ಸೂರ್ಯಕಾಂತಿ(Sunflower)- ರೂ 7,280/- 
2) ಹೆಸರುಕಾಳು(Green gram)- ರೂ 8,682/-
3) ಸೋಯಾಬಿನ್‍(Soybean)- ರೂ 4,892/- 
4) ಉದ್ದಿನ ಕಾಳು(llong grain)- ರೂ 7,400/- 

ಈ ಮೇಲೆ ತಿಳಿಸಿರುವ ದರದಲ್ಲಿ ರೈತರಿಂದ ನೇರವಾಗಿ ಸೂರ್ಯಕಾಂತಿ(Sunflower),ಹೆಸರುಕಾಳು(Green gram), ಸೋಯಾಬಿನ್‍(Soybean), ಉದ್ದಿನ ಕಾಳು(long grain) ಖರೀದಿ ಮಾಡಲಾಗುತ್ತದೆ.

ಈಗಾಗಲೇ ಹೆಸರುಕಾಳು ಮತ್ತು ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರಾಜ್ಯ ಸರ್ಕಾರ ಖರೀದಿ ಏಜನ್ಸಿಗಳನ್ನು ನೇಮಕ ಮಾಡಲಾಗಿದ್ದು. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಮತ್ತು 10 ಕ್ವಿಂಟಲ್ ಹೆಸರುಕಾಳು ಖರೀದಿ ಮಾಡಲಾಗುತ್ತದೆ. 

ಇದನ್ನೂ ಓದಿ: Life insurance yojana-2024: ಅಪಘಾತ ವಿಮೆ ಇಲ್ಲದಿದ್ದರೂ ಸಿಗುತ್ತೆ ಈ ಯೋಜನೆಯಡಿ 2 ಲಕ್ಷ!

ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬಿನ್‍ಗೆ ಕ್ವಿಂಟಲ್‍ಗೆ ರೂ 4,892/- ಹಾಗೂ ಉದ್ದಿನ ಕಾಳಿಗೆ ಕ್ವಿಂಟಲ್‍ಗೆ ರೂ 7,400/- ಬೆಲೆ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಸುಮಾರು 10 ಲಕ್ಷ ಕ್ವಿಂಟಲ್ ಸೋಯಾಬಿನ್ ಮತ್ತು 2 ಲಕ್ಷ ಕ್ವಿಂಟಲ್ ಉದ್ದಿನಕಾಳು ಖರೀದಿ ಮಾಡಲಾಗುವುದು ಎಂದು ಸಚಿವರು ಮಾಹಿತಿ ತಿಳಿಸಿದರು.

2024-25ನೇ ಸಾಲಿನಲ್ಲಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 4.72 ಲಕ್ಷ ಮೆಟ್ರಿಕ್ ಟನ್ ಸೋಯಾಬಿನ್ ಹಾಗೂ 0.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 0.40 ಲಕ್ಷ ಮೆಟ್ರಿಕ್ ಟನ್ ಉದ್ದಿನಕಾಳು ಇಳುವರಿ ನಿರೀಕ್ಷೆ ಮಾಡಲಾಗಿತ್ತು ಎಂದು ತಿಳಿಸಿದರು.

ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್ ಗೆ ರೂ 8,682 ರೂ. ಹಾಗೂ ಸೂರ್ಯಕಾಂತಿಗೆ ರೂ 7,280 ನಿಗದಿಪಡಿಸಲಾಗಿದೆ. ಹೆಸರುಕಾಳು ಖರೀದಿಗೆ 172 ಖರೀದಿ ಕೇಂದ್ರ ಗುರುತಿಸಲಾಗಿದ್ದು, 1982 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸೂರ್ಯಕಾಂತಿ ಖರೀದಿಗೆ 19 ಖರೀದಿ ಕೇಂದ್ರ ಗುರುತಿಸಲಾಗಿದ್ದು, 461 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕೊಬ್ಬರಿ ಖರೀದಿಯಲ್ಲೂ ಈ ಬಾರಿ ಪ್ರಮುಖ ಪಾತ್ರ ವಹಿಸಲಾಗಿದ್ದು, ಇದೇ ಮೊದಲ ಬಾರಿಗೆ ಮಿಲ್ಲಿಂಗ್ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Greengram msp price-2024: ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ ಗೆ ರೂ 8,682 ರಂತೆ ಹೆಸರುಕಾಳು ಖರೀದಿಗೆ ಆದೇಶ!

ರೈತರು ಬೆಂಬಲ ಬೆಲೆಯಲ್ಲಿ ಈ ಮೇಲೆ ತಿಳಿಸಿರುವ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಕೂಡಲೇ ಹತ್ತಿರ ಕೃಷಿ ಮಾರುಕಟ್ಟಯನ್ನು ಭೇಟಿ ಮಾಡಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಬೇಕು.

agriculture commodity msp sale registration process-ನೊಂದಣಿ ಮಾಡಿಕೊಳ್ಳುವ ಪ್ರಕ್ರಿಯೆ:

ಈ ಬೆಳೆಗಳನ್ನು ಬೆಳೆದಿರುವ ರೈತರು ಪ್ರಥಮದಲ್ಲಿ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಕೃಷಿ ಉತ್ಪನ್ನ ಮಾರುತಟ್ಟೆಯನ್ನು ಅಥವಾ ಖರೀದಿ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು.

Documenst for MSP-ಒದಗಿಸಬೇಕಾಗದ ದಾಖಲೆಗಳು:

1) ಅರ್ಜಿದಾರರ ರೈತರ ಅಧಾರ್ ಕಾರ್ಡ ಪ್ರತಿ.

2) ಬ್ಯಾಂಕ್ ಪಾಸ್ ಬುಕ್ ಪ್ರತಿ.

3) ಜಮೀನಿ ಪಹಣಿ/ಉತಾರ್/RTC.

4) FID ನಂಬರ್ ರಚನೆಯಾಗಿರಬೇಕು( FID ನಂಬರ್ ರಚನೆಯಾಗದಿದ್ದಲ್ಲಿ ಒಮ್ಮೆ ನಿಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ FID ನಂಬರ್ ಅನ್ನು ರಚನೆ ಮಾಡಿಕೊಳ್ಳಬೇಕು)

ಇದನ್ನೂ ಓದಿ: Grama panchayath helpline- ಗ್ರಾಮ ಪಂಚಾಯತಿಯ ಎಲ್ಲಾ ಸೌಲಭ್ಯದ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ!

MSP money transfer- ಹಣ ಪಾವತಿ ಹೇಗೆ ಮಾಡಲಾಗುತ್ತದೆ?

ಒಮ್ಮೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಖರೀದಿ ಕೇಂದ್ರ/ಮಾರುಕಟ್ಟೆಯಲ್ಲಿ ನೊಂದಣಿ ಮಾಡಿಕೊಂಡು ಬಳಿಕ ಈ ದಿನ ತಮ್ಮ ಉತ್ಪನ್ನಗಳನ್ನು ಖರೀದಿ ಕೇಂದ್ರಕ್ಕೆ ತರುವಂತೆ ಸೂಚನೆ ನೀಡಲಾಗುತ್ತದೆ ರೈತರು ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ ಬಳಿಕ 15-20 ದಿನದ ಒಳಗಾಗಿ ನೇರ ನಗದು ವರ್ಗಾವಣೆ(dbt money transfer) ಮೂಲಕ ರೈತರ ಬ್ಯಾಂಕ್ ಖಾತೆಗ ಹಣ ಜಮಾ ಅಗುತ್ತದೆ.