MSP ragi rate-2023: ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟಕ್ಕೆ ಈ ವರ್ಗದ ರೈತರಿಗೂ ಅವಕಾಶ! ಬೆಲೆ ಪ್ರತಿ ಕ್ವಿಂಟಾಲ್ ಗೆ 3846 ರೂ.

MSP ragi rate-2023: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಈ ವರ್ಷ ರೈತರಿಂದ ರಾಗಿ ಖರೀದಿಗೆ ಈ ಹಿಂದೆ ಇದ್ದ ನಿಯಮವನ್ನು ಸಡಿಲಿಕೆ ಮಾಡಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಈ ವರ್ಷ ರೈತರಿಂದ ರಾಗಿ ಖರೀದಿಗೆ ಈ ಹಿಂದೆ ಇದ್ದ ನಿಯಮವನ್ನು ಸಡಿಲಿಕೆ ಮಾಡಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಹೊಸ ಮಾರ್ಗಸೂಚಿಯಲ್ಲಿ ಯಾವೆಲ್ಲ ಸಡಿಲಿಕೆ ನೀಡಲಾಗಿದೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಈ ಹಿಂದಿನ 2 ವರ್ಷ ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿಸಲು ನಾನಾ ಹಲವು ಷರತ್ತುಗಳನ್ನು ಸರಕಾರದಿಂದ ವಿಧಿಸಲಾಗಿತ್ತು ಆದರೆ ಈ ಬಾರಿ ಕೆಲವು ಷರತ್ತುಗಳನ್ನು ಸಡಿಲಿಕೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ.

ಇದನ್ನೂ ಓದಿ: Bara Parihara-2023: ರಾಜ್ಯ ಸರಕಾರದಿಂದ ಮೊದಲ ಕಂತಿನ ಬರ ಪರಿಹಾರ! ರೈತರಿಗೆ ಮೊದಲನೇ ಕಂತಿನಲ್ಲಿ ಎಷ್ಟು ಹಣ ಸಿಗಲಿದೆ?

ಬೆಂಬಲ ಬೆಲೆಯಲ್ಲಿ ರಾಗಿ ಮಾರಾಟ ಮಾಡಲು ಎಲ್ಲಾ ವರ್ಗದ ರೈತರಿಗೂ ಅವಕಾಶ!

ಕಳೆದೆರಡು ವರ್ಷದಿಂದ ಬೆಂಬಲ ಬೆಲೆ ಯೋಜನೆಯಡಿ ಕನಿಷ್ಠ ಬೆಂಬಲ ಬೆಲೆ ಮಾರಾಟದ ದರದಲ್ಲಿ ಕೇವಲ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಮಾತ್ರ ರಾಗಿಯನ್ನು ಸರಕಾರ ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಿಕೊಳ್ಳುತಿತ್ತು ಅದರೆ ಈ ವರ್ಷ ಈ ನಿಯಮವನ್ನು ಸಡಿಲಿಕೆ ಮಾಡಿ ಇನ್ನು ಮುಂದೆ ಎಲ್ಲಾ ವರ್ಗದ ಅಂದರೆ ದೊಡ್ಡ ರೈತರು ಅಂದರೆ 5 ಎಕರೆಗಿಂತಲು ಹೆಚ್ಚಿನ ಜಮೀನನ್ನು ಹೊಂದಿರುವ ರೈತರು ಸಹ ಈ ವರ್ಷ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ರಾಗಿ ಮಾರಾಟ ಮಾಡಬವುದಾಗಿದೆ.

ಇದನ್ನೂ ಓದಿ: Irrigation Facility Subsidy: ನೀರಾವರಿ ಸೌಲಭ್ಯಕ್ಕೆ 75,000/- ರೂ. ಸಹಾಯಧನಕ್ಕೆ ಅರ್ಜಿ ಆಹ್ವಾನ

MSP ragi rate: ರಾಗಿಗೆ ಬೇಡಿಕೆ ಹೆಚ್ಚು!

ಕಳೆದ 2 ವರ್ಷ ಸಣ್ಣ ರೈತರಿಂದ ಮಾತ್ರ  ರಾಗಿಯನ್ನು ಸರಕಾರ ಖರೀದಿ ಮಾಡುತ್ತಿತು ಅದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೇಡಿಕೆಯಿರುವುದರಿಂದ ಎಲ್ಲಾ ವರ್ಗದ ರೈತರಿಂದ ರಾಗಿ ಖರೀದಿ ಮಾಡಲು ಮುಂದಾಗಿದೆ.

ಹಲವು ಯೋಜನೆಯಡಿ ನಾಗರಿಕರಿಗೆ ರಾಗಿಯನ್ನು ವಿತರಣೆ ಮಾಡಲು ದೇಶದ ವಿವಿಧ ರಾಜ್ಯಗಳಿಂದ ನಮ್ಮ ರಾಜ್ಯದ ರಾಗಿ ಸರಬರಾಜು ಮಾಡಲು ಬೇಡಿಕೆಯಿರುವ ಕಾರಣ ಈ ವರ್ಷ ಹೆಚ್ಚಿನ ಪ್ರಮಾಣದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲು ಸರಕಾರ ಯೋಜನೆಯನ್ನು ಹಾಕಿಕೊಂಡಿದ್ದೆ.

ಕೇರಳ, ಮೇಘಾಲಯ ಸೇರಿದಂತೆ ಅನೇಕ ರಾಜ್ಯಗಳಿಂದ ಈಗಾಗಲೇ ರಾಗಿ ಸರಬರಾಜು ಮಾಡುವುದಕ್ಕೆ ಬೇಡಿಕೆ ಬಂದಿರುತ್ತದೆ.

ಇದನ್ನೂ ಓದಿ: Nigamada Yojane-ಸ್ವಯಂ ಉದ್ಯೋಗ ನೇರಸಾಲ, ಸ್ವಾವಲಂಬಿ ಸಾರಥಿ ಯೋಜನೆ ಸೇರಿ ಇತರೆ ಎಲ್ಲಾ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

ಎಕರೆಗೆ 10 ಕ್ವಿಂಟಾಲ್ ಖರೀದಿ:

ಸಣ್ಣ ಮತ್ತು ದೊಡ್ಡ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್ ನಂತೆ ರಾಗಿ ಖರೀದಿ ಮಾಡಲು ಈಗಾಗಲೇ ಕೃಷಿ ಉತ್ಪನ್ನ ಮಾರುಕಟ್ಟೆ ಹತ್ತಿರ ಖರೀದಿ ಕೇಂದ್ರಗಳನ್ನು ತೆರೆದು 01 ಡಿಸೆಂಬರ್ ರಿಂದ 31 ಡಿಸೆಂಬರ್ ರ ವರೆಗೆ ರೈತರ ನೊಂದಣಿ ಮಾಡಿಕೊಳ್ಳಲು ಸರಕಾರದಿಂದ ಆದೇಶ ಹೊರಡಿಸಲಾಗಿದೆ.

MSP ragi rate-2023: ಕಳೆದ ವರ್ಷಕ್ಕಿಂತ 268 ರೂ ಬೆಲೆ ಏರಿಕೆ!

ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ರಾಗಿಯನ್ನು ಖರೀದಿ ಮಾಡಲು 3578 ರೂ ಅನ್ನು ಕೇಂದ್ರ ಸರಕಾರ ನಿಗದಿಪಡಿಸಲಾಗಿತ್ತು ಅದರೆ ಈ ವರ್ಷ 268 ರೂ ಬೆಲೆ ಹೆಚ್ಚಳ ಮಾಡಿ ಪ್ರತಿ ಕ್ವಿಂಟಾಲ್ ಗೆ ರೂ 3,846 ರಂತೆ ರೈತರಿಂದ ರಾಗಿ ಖರೀದಿ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: Ujjwala Yojana-2023: ಉಜ್ವಲ ಯೋಜನೆಯಡಿ ಗ್ಯಾಸ್ ಸಬ್ಸಿಡಿ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಖರೀದಿ ಯಾವಾಗಿನಿಂದ ಪ್ರಾರಂಭ:

ರೈತರಿಂದ ರ‍ಾಗಿ ಖರೀದಿ ಮಾಡಲು 01 ಡಿಸೆಂಬರ್ ರಿಂದ 31 ಡಿಸೆಂಬರ್ ರ ವರೆಗೆ ರೈತರ ನೊಂದಣಿ ಮಾಡಿಕೊಂಡು 01 ಜನವರಿ ಯಿಂದ 31 ಮಾರ್ಚ ವರೆಗೆ ರೈತರಿಂದ ರಾಗಿ ಖರೀದಿ ಮಾಡಲು ಸರಕಾರ ಯೋಜನೆಯನ್ನು ಹಾಕಿಕೊಂಡಿದೆ.

ಈ ಸಂಬಂಧ ರಾಗಿ ಬೆಳೆದಿರುವ ರೈತರು ಕೂಡಲೇ ನಿಮ್ಮ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರವನ್ನು ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಪಹಣಿ/ಉತಾರ್, ಪ್ರೂಟ್ಸ್ ಐಡಿ ಸಮೇತ ಭೇಟಿ ಮಾಡಿ ನೊಂದಣಿ ಮಾಡಿಕೊಳ್ಳಿ.

ಇದನ್ನೂ ಓದಿ: Parihara list-ಬರ ಪರಿಹಾರ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ! ಈ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಹೆಸರಿದ್ಯಾ? ಚೆಕ್ ಮಾಡಿ.