Milk incentive details-ಹಾಲಿನ ಪ್ರೋತ್ಸಾಹ ಧನ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ!

ಹಳ್ಳಿವಾರು ಹಾಲಿನ ಪ್ರೋತ್ಸಾಹ ಧನ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಮತ್ತು ಇಲ್ಲಿಯವರೆಗೆ ತಿಂಗಳುವಾರು ಎಷ್ಟು ಪ್ರೋತ್ಸಾಹ ಧನ ಬಂದಿದೆ? ಎನ್ನುವ ವಿವರವನ್ನು "ಮಾಹಿತಿ ಕಣಜ" ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

Milk incentive details-ಹಾಲಿನ ಪ್ರೋತ್ಸಾಹ ಧನ ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ!
Milk incentive-2024

ಹಳ್ಳಿವಾರು ಹಾಲಿನ ಪ್ರೋತ್ಸಾಹ ಧನ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಮತ್ತು ಇಲ್ಲಿಯವರೆಗೆ ತಿಂಗಳುವಾರು ಎಷ್ಟು ಪ್ರೋತ್ಸಾಹ ಧನ ಬಂದಿದೆ? ಎನ್ನುವ ವಿವರವನ್ನು "ಮಾಹಿತಿ ಕಣಜ" ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

ಸಹಕಾರಿ ಸಂಘಗಳಿಗೆ ರೈತರು ಪ್ರತಿ ತಿಂಗಳು ಹಾಕುವ ಹಾಲಿಗೆ ಒಟ್ಟು ಪೂರೈಕೆ ಮಾಡಿದ ಹಾಲಿನ ಮೊತ್ತವನ್ನು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯು ನೀಡುತ್ತದೆ ಇದರ ಜೊತೆಗೆ ರಾಜ್ಯ ಸರಕಾರದಿಂದ ಹೆಚ್ಚುವರಿಯಾಗಿ  ಒಟ್ಟು ಪೂರೈಕೆ ಮಾಡಿದ ಹಾಲಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. 

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ(KMF)ಗೆ ರೈತರು ಹಳ್ಳಿ ಮಟ್ಟದಲ್ಲಿ ಸ್ಥಾಪನೆ ಮಾಡಿರುವ ಸಹಕಾರಿ ಹಾಲು ಸಂಘಗಳ ಮೂಲಕ ದಿನ ನಿತ್ಯ ಹಾಲನ್ನು ಪೂರೈಕೆ ಮಾಡಲಾಗುತ್ತದೆ. ಆದರೆ ರೈತರು ಒಟ್ಟು ಪೂರೈಕೆ ಮಾಡುವ ಹಾಲಿಗೆ ಸರಕಾರದಿಂದ ಯಾವ ತಿಂಗಳು ಎಷ್ಟು ಪ್ರೋತ್ಸಾಹ ಧನ ಬಂದಿರುತ್ತದೆ ಎನ್ನುವ ಮಾಹಿತಿಯನ್ನು ಹೇಗೆ ತಿಳಿದುಕೊಳ್ಳಬೇಕು ಎಂದು ಅನೇಕ ಜನರಿಗೆ ತಿಳಿದಿರುವುದಿಲ್ಲ ಇಂದು ಈ ಅಂಕಣದಲ್ಲಿ ಈ ಕುರಿತು ಸಂಪೂರ್ಣ ವಿವರವನ್ನು ತಿಳಿಸಲಾಗಿದೆ.

ಇದನ್ನೂ ಓದಿ: Electricity bill- ನಿಮ್ಮ ಮನೆಯಲ್ಲಿ ಪ್ರತಿ ತಿಂಗಳು ಬಳಕೆಯಾದ ವಿದ್ಯುತ್ ಯೂನಿಟ್ ಎಷ್ಟು, ಬಿಲ್ ಮೊತ್ತವೇಷ್ಟು?ಎಂದು ತಿಳಿಯಲು ಇಲ್ಲಿದೆ ಡೈರೆಕ್ಟ್ ಲಿಂಕ್

Milk incentive- ಇಲ್ಲಿದೆ ಹಾಲಿನ ಪ್ರೋತ್ಸಾಹ ಧನ ಎಷ್ಟು ಬಂದಿದೆ? ಎಂದು ತಿಳಿಯುವ ವಿಧಾನ ಮತ್ತು ಅರ್ಹ ರೈತರ ಪಟ್ಟಿ:

ರೈತರು ತಿಂಗಳುವಾರು ತಮ್ಮ ಹಾಲಿನ ಪ್ರೋತ್ಸಾಹ ಧನ ಎಷ್ಟು ಬಂದಿದೆ ಎಂದು ತಿಳಿದುಕೊಳ್ಳಲು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ "ಮಾಹಿತಿ ಕಣಜ-Mahiti kanaja" ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಸಂಪೂರ್ಣ ವಿವರ ಪಡೆಯಬಹುದು.

Step-1: ಪ್ರಥಮದಲ್ಲಿ ಈ ಲಿಂಕ್ Milk incentive status check ಮೇಲೆ ಕ್ಲಿಕ್ ಮಾಡಿ ಅಧಿಕೃತ Mahiti kanaja ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹಾಲಿನ ಮಂಡಲಿ(Milk union), ವಿಭಾಗೀಯ ಕಚೇರಿ(Comp office), ಹಳ್ಳಿ/ಸಂಘ(Society) ಅನ್ನು ಆಯ್ಕೆ ಮಾಡಿಕೊಂಡು "Submit" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Gruha jyothi Yojana-ಉಚಿತ ವಿದ್ಯುತ್ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳಿಗೆ ಸರಕಾರದಿಂದ ಗುಡ್ ನ್ಯೂಸ್!

Step-2: "Submit" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಈ ಪುಟದಲ್ಲಿ ನೀವು ಪ್ರತಿ ನಿತ್ಯ ಹಾಲು ಪೂರೈಕೆ ಮಾಡುವ ಸಂಘದ ಎಲ್ಲಾ ಅರ್ಹ ಫಲಾನುಭವಿಗಳ ಪಟ್ಟಿ ಮತ್ತು ಹಾಲಿನ ಪ್ರೋತ್ಸಾಹ ಧನ ಎಷ್ಟು ಬಂದಿರುತ್ತದೆ? ಒಟ್ಟು ಪೂರೈಕೆ ಮಾಡಿದ ಹಾಲಿನ ವಿವರ ಎನ್ನುವ ಸಂಪೂರ್ಣ ವಿವರವನ್ನು ತೋರಿಸುತ್ತದೆ.

Step-3: ಇದೆ ಪೇಜ್ ನಲ್ಲಿ ಕೊನೆಯಲ್ಲಿ ಕಾಣಿಸುವ 1.2.3.4.5 ಪೇಜ್ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಪಟ್ಟಿಯಲ್ಲಿರುವ ಎಲ್ಲಾ ಹೆಸರನ್ನು ನೋಡಬವುದು ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Motor repair training-ಉಚಿತ ವಸತಿ ಸಹಿತ ಮೋಟಾರ್ ರೀವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ಉಪಯುಕ್ತ ಕೊಂಡಿಗಳು:

ಹಾಲಿನ ಪ್ರೋತ್ಸಾಹ ಧನ ಸ್ಥಿತಿ ಪರಿಶೀಲನೆ: Milk incentive status check

ಕ್ಷೀರಸಿರಿ ಅಧಿಕೃತ ವೆಬ್ಸೈಟ್: Click here

ಹಾಲಿನ ಪ್ರೋತ್ಸಾಹ ಧನ ಕುರಿತು ತಾಂತ್ರಿಕ ಸಮಸ್ಯೆಗಳಿಗೆ ಜಿಲ್ಲಾವಾರು ಸಹಾಯವಾಣಿ ಸಂಖ್ಯೆಗಳು: Click here

ಈ ಮಾಹಿತಿಯು ಉಪಯುಕ್ತವಾಗಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ಎಲ್ಲಾ ರೈತರಿಗೆ ಈ ಮಾಹಿತಿ ತಲುಪಿಸಲು ಸಹಕರಿಸಿ ಧನ್ಯವಾದಗಳು ಶುಭ ದಿನ.