ಜಮೀನಿನ ಮಾಲೀಕರ ವಿವರಕ್ಕೆ ಸಂಬಂಧಿಸಿದಂತೆ ಹಳೆಯ ವರ್ಷದ ಪಹಣಿ ಮತ್ತು ಮ್ಯುಟೇಷನ್ ವಿವರವನ್ನು(Mutation status) ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತುಕೊಂಡು ಸಂಪೂರ್ಣ ಮಾಹಿತಿಯನ್ನು ಅಂಗೈಯಲ್ಲಿ ಹೇಗೆ ತಿಳಿದುಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಆತ್ಮೀಯ ರೈತ ಬಾಂಧವರೇ ಜಮೀನಿನ ಮಾಲೀಕರ ವಿವರಕ್ಕೆ ಸಂಬಂಧಿಸಿದಂತೆ ಹಳೆಯ ವರ್ಷದ ಪಹಣಿ ಮತ್ತು ಮ್ಯುಟೇಷನ್ ವಿವರವನ್ನು ಉಚಿತವಾಗಿ ನಿಮ್ಮ ಮೊಬೈಲ್ ನಲ್ಲೇ ಕಂದಾಯ ಇಲಾಖೆ ವೆಬ್ಸೈಟ್ ಭೇಟಿ ಮಾಡಿ 2001 ರಿಂದ 2023 ರವರೆಗಿನ ಪಹಣಿ ಮತ್ತು ಮುಟೇಶನ್(Mutation status check) ಅಂದರೆ ಜಮೀನಿ ಯಾರ ಹೆಸರಿನಿಂದ ಯಾರಿಗೆ ವರ್ಗವಾಣೆ ಅಗಿದೆ ಎಂದು ಮತ್ತು ಇದರ ಜೊತೆ ಯಾವೆಲ್ಲಾ ಬ್ಯಾಂಕಗಳಲ್ಲಿ ಸಾಲ ತೆಗೆದುಕೊಳ್ಳಲಾಗಿದೆ ಎಂದು ತಿಳಿಯಬವುದು.
ಈ ಕುರಿತು ಯಾವೆಲ್ಲ ವಿಧಾನ ಅನುಸರಿಸಿ ನಿಮ್ಮ ಜಮೀನಿನ ಹಳೆಯ ಪಹಣಿ ಮತ್ತು ಮ್ಯುಟೇಷನ್ ವಿವರ ನೋಡಬಹುದು ಎಂದು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: Land Records- ಜಮೀನಿನ ಪೋಡಿ ಹೇಗೆ ಮಾಡಿಸಬೇಕು? ಪೋಡಿ ಎಂದರೇನು? ಇಲ್ಲಿದೆ ಸಂಪೂರ್ಣ ವಿವರ.
Mutation status: 2001 ರಿಂದ 2023 ರವರೆಗಿನ ಪಹಣಿ ವಿವರ ತಿಳಿಯಬವುದು:
ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ Mutation status ಈ ಲಿಂಕ್ ಓಪನ್ ಮಾಡಿ “Old year” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ನಂತರ ಇಲ್ಲಿ ನಿಮ್ಮ ಜಮೀನು ಇರುವ ಜಿಲ್ಲೆ-ತಾಲ್ಲೂಕು-ಹೋಬಳಿ-ಗ್ರಾಮವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸರ್ವೇ ನಂಬರ್ ನಮೂದಿಸಿ “Go” ಮೇಲೆ ಕ್ಲಿಕ್ ಮಾಡಿ. ತದನಂತರ ನಿಮ್ಮ ಸರ್ವೇ ನಂಬರನ ಹಿಸ್ಸಾವನ್ನು ಆಯ್ಕೆ ಮಾಡಿಕೊಂಡು ನಿಮಗೆ ಯಾವ ವರ್ಷದ ಅವದಿಯ ಪಹಣಿ ಬೇಕು ಎಂದು ಅಯ್ಕೆ ಮಾಡಬೇಕು.
ಈ ಆಯ್ಕೆಯ ನಂತರ ಯಾವ ವರ್ಷದ ಪಹಣಿ ವಿವರ ಎಂದು ಕ್ಲಿಕ್ ಮಾಡಿ “fetch Details” ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಪಹಣಿಯು ತೆರೆದುಕೊಳ್ಳುತ್ತದೆ. ಇಲ್ಲಿ ಪಹಣಿಯ 11 ಕಾಲಂ (ಋಣಗಳು)ನಲ್ಲಿ ಆ ವರ್ಷದಲ್ಲಿ ಯಾವ ಬ್ಯಾಂಕನಲ್ಲಿ ಸಾಲ ಎಷ್ಟು ಪಡೆದಿದಿರಿ ಹೀಗೆ ಅನೇಕ ಮಾಹಿತಿ ಪಡೆಯಬವುದು.
Mutation status check-2024: ಮ್ಯುಟೇಷನ್ ವಿವರ ತಿಳಿಯಲು ಈ ವಿಧಾನ ಅನುಸರಿಸಿ:
Mutation status check ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೇಲೆ ಬಲ ಬದಿಯಲ್ಲಿ ಕನ್ನಡ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಮ್ಯುಟೇಷನ್ ಪ್ರತಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ನಂತರ ಇಲ್ಲಿ ನಿಮ್ಮ ಜಮೀನು ಇರುವ ಜಿಲ್ಲೆ-ತಾಲ್ಲೂಕು-ಹೋಬಳಿ-ಗ್ರಾಮವನ್ನು ಆಯ್ಕೆ ಮಾಡಿಕೊಂಡು ನಿಮ್ಮ ಸರ್ವೇ ನಂಬರ್ ನಮೂದಿಸಿ
“ವಿವರಗಳನ್ನು ಕರೆತರು” ಮೇಲೆ ಕ್ಲಿಕ್ ಮಾಡಿ. ತದನಂತರ ನಿಮ್ಮ ಸರ್ವೇ ನಂಬರನ ಹಿಸ್ಸಾವಾರು ಮ್ಯುಟೇಷನ್ ವಿವರ ಗೋಚರಿಸುತ್ತದೆ. ಸರ್ವೇ ನಂಬರವಾರು ಹಿಸ್ಸಾ ಪಕ್ಕದಲ್ಲಿರುವ ಆಯ್ಕೆ ಮೇಲೆ ಒತ್ತಿ ಬಲ ಬದಿಯಲ್ಲಿರುವ “ಮುನ್ನೋಟ” ದ ಮೇಲೆ ಕ್ಲಿಕ್ ಮಾಡಿದಾಗ ಆ ವರ್ಷದ ಸಂಪೂರ್ಣ ಮ್ಯುಟೇಷನ್ ವಿವರದ ಪುಟ ತೆರೆದುಕೊಳ್ಳುತ್ತದೆ.
ಜಮೀನ ಇತರೇ ದಾಖಲೆಗಳನ್ನು ಇಲ್ಲಿ ಪಡೆಯಬವುದು:
ಮೇಲೆ ತಿಳಿಸಿದ ಪಹಣಿ ಮತ್ತು ಮ್ಯುಟೇಷನ್ ವಿವರಗಳ ಜೊತೆಯಲ್ಲಿ ಈ Click here ವೆಬ್ಸೈಟ್ ನಲ್ಲಿ ಇದನ್ನು ಹೊರತುಪಡಿಸಿ ಆಕಾರಬಂದ ,ಖಾತಾ ವಿವರ ಮತ್ತು ಸರ್ವೇ ದಾಖಲಾತಿಗಳನ್ನು ಸಹ ಪಡೆಯಬವುದು.