New Ration card- ಸರಕಾರದಿಂದ ಹೊಸ ರೇಷನ್ ಕಾರ್ಡ ವಿತರಣೆಗೆ ದಿನಾಂಕ ನಿಗದಿ!

New Ration card: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇದ್ದ ಕಾರಣ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಯಾರಿಗೂ ಪಡಿತರ ಚೀಟಿ ವಿತರಣೆ ಮಾಡಿರಲ್ಲಿಲ್ಲ ಈಗ ರಾಜ್ಯ ಸರಕಾರದಿಂದ ಹೊಸ ರ‍ೇಷನ್ ಕಾರ್ಡ ವಿತರಣೆಗೆ ಚಾಲನೆ ನೀಡಲಾಗಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇದ್ದ ಕಾರಣ ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಯಾರಿಗೂ ಪಡಿತರ ಚೀಟಿ ವಿತರಣೆ ಮಾಡಿರಲ್ಲಿಲ್ಲ ಈಗ ರಾಜ್ಯ ಸರಕಾರದಿಂದ ಹೊಸ ರ‍ೇಷನ್ ಕಾರ್ಡ ವಿತರಣೆಗೆ ಚಾಲನೆ ನೀಡಲಾಗಿದೆ.

ಈ ಕುರಿತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಕೆ. ಎಚ್ ಮುನಿಯಪ್ಪನವರು ಹಂಚಿಕೊಂಡಿರುವ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: FID number- FID ನಂಬರ್ ನಲ್ಲಿ ದಾಖಲಿಸಿರುವ ವಿವರ ತಿದ್ದುಪಡಿಗೆ ರೈತರಿಗೆ ಅವಕಾಶ!

New Ration card-ಇನ್ನು 15 ದಿನದೊಳಗೆ ಹೊಸ ಪಡಿತರ ಚೀಟಿ:

ಈಗಾಗಲೇ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿ ಕಾಯುತ್ತಿರುವ ಫಲಾನುಭವಿಗಳಿಗೆ ಸರಕಾರ ಸಿಹಿ ಸುದ್ದಿ ನೀಡಿದ್ದು ಇನ್ನು 15 ದಿನದೊಳಗೆ ಅರ್ಹ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ ದೊರೆಯಲಿದೆ.

ಈ ಕುರಿತು ಸರಕಾರದ ವಾರ್ತಾ ಇಲಾಖೆಯ ಎಕ್ಸ್ ಖಾತೆಯಲ್ಲಿ ಮಾಹಿತಿ ಪ್ರಕಟವಾಗಿದ್ದು ಚುನಾವಣೆ ಅಂಗವಾಗಿ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು ಇನ್ನು 15 ದಿನದ ಒಳಗಾಗಿ ಸಲ್ಲಿಕೆಯಾದ ಎಲ್ಲಾ ಅರ್ಜಿಗಳ ಪರಿಶೀಲಿಸಿ ಹೊಸ ರೇಷನ್ ಕಾರ್ಡಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಕೆ. ಎಚ್ ಮುನಿಯಪ್ಪನವರು ಹೇಳಿದಾರೆ.

ಇದನ್ನೂ ಓದಿ: HSRP number plate: ಫೆಬ್ರವರಿ 2024ರ ಒಳಗಾಗಿ ನಿಮ್ಮ ಬೈಕ್, ವಾಹನಗಳಿಗೆ ಈ ರೀತಿಯ ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

New Ration card list-ಜಿಲ್ಲಾವಾರು ವಿತರಣೆಯಾಗದ ರೇಷನ್ ಕಾರ್ಡ ಪಟ್ಟಿ ನೋಡುವ ವಿಧಾನ:

ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಆ ಜಿಲ್ಲೆಯಲ್ಲಿ ವಿತರಣೆಯಾದಗ ರೇಷನ್ ಕಾರ್ಡ ಪಟ್ಟಿಯನ್ನು ನೋಡಬವುದು.

Step-1: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Ration card list ಆಹಾರ ಇಲಾಖೆಯ ಜಾಲತಾಣ ಭೇಟಿ ಮಾಡಬೇಕು ಬಳಿಕ "ಇ-ಪಡಿತರ ಚೀಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "ವಿತರಣೆಯಾದ ಹೊಸ ಪಡಿತರ ಚೀಟಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಆಯ್ಕೆ ಮಾಡಿಕೊಂಡು "GO/ಮುಂದೆ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ವಿತರಣೆಯಾಗದೆ ಹಾಗೆಯೇ ಉಳಿದಿರುವ ಜಿಲ್ಲಾವಾರು ಪಡಿತರ ಚೀಟಿಯ ಪಟ್ಟಿ ತೋರಿಸುತ್ತದೆ.

ಇದನ್ನೂ ಓದಿ: Crop loan-ರಾಜ್ಯ ಸರಕಾರದಿಂದ ರೈತರ ಸಾಲದ ಬಡ್ಡಿ ಮನ್ನಾ! ಈ ಪಟ್ಟಿಯಲ್ಲಿರುವವರಿಗೆ ಪ್ರಯೋಜನ

New Ration card status-ರೇಷನ್ ಕಾರ್ಡ ಅರ್ಜಿಯ ಸ್ಥಿತಿ ಚೆಕ್ ಮಾಡುವ ವಿಧಾನ:

ಈಗಾಗಲೇ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಿದವರು ಅಥವಾ ಹೊಸದಾಗಿ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವವರು ತಾವುಗಳು ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಪರಿಶೀಲಿಸಬವುದಾಗಿದೆ.

Step-1: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ New Ration card status ಆಹಾರ ಇಲಾಖೆಯ ಜಾಲತಾಣ ಭೇಟಿ ಮಾಡಬೇಕು ಬಳಿಕ "ಇ-ಸ್ಥಿತಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಬಳಿಕ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಪೇಜ್ ನಲ್ಲಿ ಮೊದಲಿಗೆ ಕಾಣೂವ "ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಇದಾದ ಬಳಿಕ ಅರ್ಜಿ ಸಲ್ಲಿಸಿದ ಬಳಿಕ ನೀಡುವ Acknowledgment No ಅನ್ನು ಹಾಕಿ "Go' ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಚೆಕ್ ಮಾಡಬವುದು.

ಇದನ್ನೂ ಓದಿ: akrama sakrama yojane- ಅಕ್ರಮ-ಸಕ್ರಮ ಯೋಜನೆಯಡಿ 4 ಲಕ್ಷ ಕೃಷಿ ಪಂಪ್ ಸೆಟ್ ಗೆ ವಿದ್ಯುತ್: ಇಂದನ ಸಚಿವ ಕೆ ಜೆ ಚಾರ್ಜ್