PM-Surya Ghar yojana- ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನದ ವಿವರ.

ಪಿಎಂ ಸೂರ್ಯ ಘರ್ ಯೋಜನೆಯಡಿ(Pm Surya Ghar Rooftop Solar yojana) ಸಹಾಯಧನದಲ್ಲಿ ಮನೆ ಮೇಲ್ಚಾವಣಿಗೆ ಸೋಲಾರ್ ಅನ್ನು ಅಳವಡಿಸಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಈ ಯೋಜನೆಯಡಿ ಎಷ್ಟು ಸಬ್ಸಿಡಿ ಪಡೆಯಬಹುದು? ಮತ್ತು ಈ ಯೋಜನೆಯ ಕುರಿತು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

PM-Surya Ghar yojana- ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನದ ವಿವರ.
PM-Surya Ghar yojana application-2024

ಪಿಎಂ ಸೂರ್ಯ ಘರ್ ಯೋಜನೆಯಡಿ(Pm Surya Ghar Rooftop Solar yojana) ಸಹಾಯಧನದಲ್ಲಿ ಮನೆ ಮೇಲ್ಚಾವಣಿಗೆ ಸೋಲಾರ್ ಅನ್ನು ಅಳವಡಿಸಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಈ ಯೋಜನೆಯಡಿ ಎಷ್ಟು ಸಬ್ಸಿಡಿ ಪಡೆಯಬಹುದು? ಮತ್ತು ಈ ಯೋಜನೆಯ ಕುರಿತು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು. ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಯೋಜನೆಯ  ಕುರಿತು ಪತ್ರಿಕಾ ಗೋಷ್ಥಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಯೋಜನೆಯನ್ನು ಗ್ರಾಮೀಣ ಮತ್ತು ನಗರ ಮಟ್ಟದಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರ 75,000 ಕೋಟಿ ರೂ ಅನುದಾನ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಮನೆಯ ಮೇಲ್ಛಾವಣಿ ಮೇಲೆ ಸೌರ ವ್ಯವಸ್ಥೆ ಅಳವಡಿಸುವ ಪಿಎಂ ಸೂರ್ಯಘರ್ ಯೋಜನೆಗೆ ಸರ್ಕಾರದಿಂದ 75,000 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಇದರೊಂದಿಗೆ, ಯೋಜನೆ ಅತಿಶೀಘ್ರದಲ್ಲೇ ಚಾಲನೆಗೆ ಬರುವುದು ಸನ್ನಿಹಿತವಾಗಿದೆ. ಪಿಎಂ ಸೂರ್ಯಘರ್ ಯೋಜನೆಯಲ್ಲಿ ಒಂದು ಮನೆಗೆ 300 ಯೂನಿಟ್​ಗಳವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ಅಳವಡಿಸಲು ಈ ಯೋಜನೆಯಲ್ಲಿ ಗುರಿ ಹಾಕಲಾಗಿದೆ ಎಂದು ಮಾಹಿತಿ ತಿಳಿಸಿದ್ದಾರೆ.

ಇದನ್ನೂ ಓದಿ: RTC adhar link- ಪಹಣಿ/RTC ಮತ್ತು ಆಧಾರ್ ಜೋಡಣೆಗೆ ಕಂದಾಯ ಇಲಾಖೆಯಿಂದ ನೂತನ ಕ್ರಮ: ಸಚಿವ ಕೃಷ್ಣಬೈರೇಗೌಡ.

PM-Surya Ghar yojana Subsidy amount- ಈ ಯೋಜನೆಯಡಿ ಎಷ್ಟು ಸಹಾಯಧನ ಸಿಗುತ್ತದೆ?

1) 1 ಕೆವಿ 2 ಕಿಲೋ ವ್ಯಾಟ್ ಸಾಮರ್ಥ್ಯದ ಸಿಸ್ಟಂಗೆ(per 1 kW up to 2 kW, 0-150 Monthly Electricity Consumption (units))- Rs 30,000 to Rs 60,000/-

2) 2 ಕೆವಿ 2-3 ಕಿಲೋ ವ್ಯಾಟ್ ಸಾಮರ್ಥ್ಯದ ಸಿಸ್ಟಂಗೆ(per 2 kW to 3 kW, 150-300 Monthly Electricity Consumption (units))- Rs 60,000 to Rs 78,000/-

3) 3 ಕೆವಿ ಗಿಂತ ಹೆಚ್ಚಿನ 3 ಕೆವಿ ಗಿಂತ ಹೆಚ್ಚಿನ ಕಿಲೋ ವ್ಯಾಟ್ ಸಾಮರ್ಥ್ಯದ ಸಿಸ್ಟಂಗೆ(Above 3 kW, Above 300 Monthly Electricity Consumption (units))- Rs. 78,000/-

ಇದನ್ನೂ ಓದಿ: Agriculture officer recruitment-2024: ಕೃಷಿ ಇಲಾಖೆಯಲ್ಲಿ ಖಾಲಿ ಇರುವ 750 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

Required details for application- ಅರ್ಜಿ ಸಲ್ಲಿಸಲು ಬೇಕಾಗುವ ವಿವರಗಳು: 

1) ಮನೆ ವಿದ್ಯುತ್ ಬಿಲ್ 
2) ಅರ್ಜಿದಾರರ ಅಧಾರ್ 
3) ಬ್ಯಾಂಕ್ ಪಾಸ್ ಬುಕ್ 

How to apply PM surya ghar yojana- ಪಿಎಂ ಸೂರ್ಯಘರ್ ಯೋಜನೆಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ:

Step-1: ಪ್ರಥಮದಲ್ಲಿ ಈ PM surya ghar application ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿಎಂ ಸೂರ್ಯ ಘರ್ ಯೋಜನೆಯ ಅಧಿಕೃತ ವೆಬ್​ಸೈಟ್​ ಅನ್ನು ಭೇಟಿ ಮಾಡಬೇಕು. ನಂತರ ಮುಖಪುಟದಲ್ಲಿ ಕಾಣುವ Apply For Rooftop Solar ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ನಂತರ Registration for Login ವಿಭಾಗದಲ್ಲಿ ರಾಜ್ಯ: Karnataka ನಿಮ್ಮ ಜಿಲ್ಲೆ, ಹೆಸ್ಕಾಂ ಅನ್ನು ಆಯ್ಕೆ ಮಾಡಿಕೊಂಡು ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ ಗ್ರಾಹಕರ ಸಂಖ್ಯೆಯನ್ನು ಹಾಕಿ "Next" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Panchamitra Whatsapp Chat- ಪಂಚಮಿತ್ರ ವಾಟ್ಸಾಪ್ ಚಾಟ್ ಬೆರಳ ತುದಿಯಲ್ಲೇ ಅರ್ಜಿ ಸಲ್ಲಿಸಲು ವಾಟ್ಸಾಪ್ ಚಾಟ್ ಬಿಡುಗಡೆ!

Step-3: ಇದಾದ ಬಳಿಕ Consumer Number & Mobile Number ಮತ್ತು Rooftop Solar as per the form ಅನ್ನು ಭರ್ತಿ ಮಾಡಿ Next ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಇದಾದ ಬಳಿಕ DISCOM ನಿಂದ ನಿಮ್ಮ ಅರ್ಜಿ ಅನುಮೋದನೆ ಕೊಂಡ ಬಳಿಕ ಮುಂದಿನ ಹಂತಕ್ಕೆ ನಿಮ್ಮ ಅರ್ಜಿ ಕಳುಹಿಸಲಾಗುತ್ತದೆ(Wait for the feasibility approval from DISCOM. Once you get the feasibility approval install the plant by any of the registered vendors in your DISCOM)

Step-5: ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗಿ, ಅನುಮೋದನೆ ಆಗುವವರೆಗೂ ಕಾಯಬೇಕಾಗುತ್ತದೆ. ಅನುಮೋದನೆ ಸಿಕ್ಕ ಬಳಿಕ ನಿಮ್ಮ ಡಿಸ್ಕಾಮ್​ಗೆ ನೊಂದಾಯಿತವಾದ ಯಾವುದಾದರೂ ಸೋಲಾರ್ ಕಂಪನಿಯವರು ಬಂದು ಮನೆಗೆ ಸೋಲಾರ್ ಅಳವಡಿಸುತ್ತಾರೆ. 

ಇದನ್ನೂ ಓದಿ: KSRTC driver job-KSRTC ಯಲ್ಲಿ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ!

Step-6: ಈ ಸೋಲಾರ್​ಗೆ ನಿಮ್ಮ ಕೈಯಿಂದಲೆ ಹಣ ಕೊಡಬೇಕಾಗುತ್ತದೆ. ಸೋಲಾರ್ ಸ್ಥಾಪನೆಯಾದ ಬಳಿಕ ಅದರ ವಿವರವನ್ನು ಪಿಎಂ ಸೂರ್ಯ ಘರ್ ವೆಬ್​ಸೈಟ್​ಗೆ ಹೋಗಿ ಸಲ್ಲಿಸಬೇಕು, ಬಳಿಕ ನೆಟ್ ಮೀಟರ್​ಗೆ ಅರ್ಜಿ ಸಲ್ಲಿಸಬೇಕು. ನೆಟ್ ಮೀಟರ್ ಇನ್ಸ್​ಟಾಲ್ ಆಗಿ ಡಿಸ್ಕಾಮ್​ನಿಂದ ಪರಿಶೀಲನೆ ಆದ ಬಳಿಕ ಕಮಿಷನಿಂಗ್ ಸರ್ಟಿಫಿಕೇಟ್ ಜನರೇಟ್ ಆಗುತ್ತದೆ. ಕಮಿಷನಿಂಗ್ ರಿಪೋರ್ಟ್ ಸಿಕ್ಕ ಬಳಿಕ ಬ್ಯಾಂಕ್ ಅಕೌಂಟ್ ವಿವರ ಸಲ್ಲಿಸಬೇಕು. ಕ್ಯಾನ್ಸಲ್ ಚೆಕ್ ಅನ್ನೂ ಒದಗಿಸಬೇಕು. ಇದಾಗಿ 30 ದಿನದೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಸಿಗುತ್ತದೆ.

ಉಪಯುಕ್ತ ವೆಬ್ಸೈಟ್ ಲಿಂಕ್:

ಅರ್ಜಿ ಸಲ್ಲಿಸಲು ಲಿಂಕ್: Apply Now
ಪಿಎಂ ಸೂರ್ಯ ಘರ್ ಯೋಜನೆಯ ಅಧಿಕೃತ ವೆಬ್ಸೈಟ್ ಲಿಂಕ್: Click here
ಪಿಎಂ ಸೂರ್ಯ ಘರ್ ಯೋಜನೆಯ ಅನುಷ್ಥಾನ ಮಾಹಿತಿ: Click here