PM Usha Scholarship 2024: PUC ಪಾಸಾದವರಿಗೆ ಕೇಂದ್ರದಿಂದ 20 ಸಾವಿರ ವಿದ್ಯಾರ್ಥಿವೇತನ!

July 27, 2024 | Siddesh

ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪಾಸಾಗಿ ಮೂರು ವರ್ಷಗಳ ಪದವಿ ಶಿಕ್ಷಣ ಮಾಡಲು ಇಚ್ಚಿಸಿರುವ ವಿದ್ಯಾರ್ಥಿಗಳಿಗೆ 20,000 ರೂ. ವಿದ್ಯಾರ್ಥಿ ವೇತನ ನೀಡಲು ಅರ್ಜಿ(PM Usha Scholarship application) ಆಹ್ವಾನಿಸಿದೆ.

"ಪ್ರಧಾನಮಂತ್ರಿ ಉಷಾ ವಿದ್ಯಾರ್ಥಿವೇತನ"(PM Usha Scholarship 2024) ಎಂಬ ಹೆಸರಿನಲ್ಲಿ ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕೇಂದ್ರವನ್ನು ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿ ವೇತನ ಸಿಗಲಿದೆ.

ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣದಿಂದ ಮಕ್ಕಳ ವಿಧ್ಯಾಬ್ಯಾಸಕ್ಕೆ ಎಷ್ಟು ಹಣ ಇದ್ದರು ಕಡಿಮೆಯೇ ಎನ್ನುವಂತಾಗಿದೆ ಅದ್ದರಿಂದ ವಿದ್ಯಾರ್ಥಿಗಳು ಸರಕಾರದಿಂದ ಲಭ್ಯವಿರುವ ವಿದ್ಯಾರ್ಥಿವೇತನ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದಾಗ ಅರ್ಜಿ ಸಲ್ಲಿಸಿ ಈ ಯೋಜನೆಯಡಿ ಅರ್ಥಿಕ ನೆರವನ್ನು ಪಡೆದುಕೊಳ್ಳಬಹುದು.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು, ಅರ್ಜಿ ಸಲ್ಲಿಸುವ ಆನ್ಲೈನ್ ಲಿಂಕ್, ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಿ.

ಇದನ್ನೂ ಓದಿ: Krishi mela dharwad-2024: ಧಾರವಾಡ ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ಮಾಹಿತಿ!

Pm usha scholarship eligibility criteria- ಪಿ. ಎಂ ಉಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹತೆಗಳು : 

PM Usha Scholarship 2024-25 : ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ 80% ಕ್ಕಿಂತಲೂ ಹೆಚ್ಚು ಅಂಕ ಗಳಿಸಿ, ಮೂರು ವರ್ಷದ ಪದವಿ ಶಿಕ್ಷಣ ಮಾಡಬಯಸುವವರು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು.

Scholarship amount details-ಆಯ್ಕೆಯಾದವರಿಗೆ ಸಿಗುವ ವಿದ್ಯಾರ್ಥಿ ವೇತನದ ಮೊತ್ತ : 

ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಈ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಈ ಕೆಳಗಿನಂತೆ ವಿದ್ಯಾರ್ಥಿ ವೇತನ ಸಿಗಲಿದೆ.
• ಪದವಿಯ ಮೊದಲ ಶೈಕ್ಷಣಿಕ ವರ್ಷದಲ್ಲಿ - ₹12,000/-
• ನಂತರದ 2ನೇ ಹಾಗೂ 3ನೇ ಶೈಕ್ಷಣಿಕ ವರ್ಷದಲ್ಲಿ - ₹20,000/-

ಇದನ್ನೂ ಓದಿ: Parihara amount-2024: ಮಳೆಯಿಂದ ಉಂಟಾದ ನಷ್ಟಕ್ಕೆ ರಾಜ್ಯ ಸರಕಾರದಿಂದ 775 ಕೋಟಿ ಅನುದಾನ!ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ!

Required Documents for application-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು : 

• ವಿದ್ಯಾರ್ಥಿಯ ಆಧಾರ್ ಕಾರ್ಡ್ 
• 10ನೇ ಹಾಗೂ 12ನೇ ತರಗತಿಯ ಅಂಕ ಪಟ್ಟಿ 
• ಪದವಿ ಶಿಕ್ಷಣ ಸೇರಿದ ಶೈಕ್ಷಣಿಕ ದಾಖಲಾತಿಗಳು 
• ಭಾವಚಿತ್ರ 
• ಫೋನ್ ನಂಬರ್ 

Last date for application-ಕೊನೆಯ ದಿನಾಂಕ: ಅರ್ಜಿ ಸಲ್ಲಿಸಲು ಅರ್ಹರಿರುವ ವಿದ್ಯಾರ್ಥಿಗಳು 31ನೇ ಅಕ್ಟೋಬರ್ 2024ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Southern Railway Recruitment-2024: ದಕ್ಷಿಣ ರೈಲ್ವೆ ಇಲಾಖೆಯಿಂದ 2438 ಹುದ್ದೆಗಳ ನೇಮಕಾತಿ!

Important links-ಪ್ರಮುಖ ಲಿಂಕ್ ಗಳು : 

ಅರ್ಜಿ ಸಲ್ಲಿಕೆಯ ಲಿಂಕ್/online application link - Apply Now


• ಸಹಾಯವಾಣಿ/Helpline number - 080-23311330

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: