Package trip from bangalore: ರಾಜ್ಯ ಸರಕಾರದಿಂದ ಕಾಶಿ ಯಾತ್ರೆ ಸೇರಿ ಒಟ್ಟು 3 ಯಾತ್ರೆಗೆ 5,000 ದಿಂದ 30,000 ಅರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನ!

Package trip from bangalore: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಕಾಶಿ ಯಾತ್ರೆ, ಕೈಲಾಸ ಮಾನಸ ಸರೋವರ ಯಾತ್ರೆ, ಚಾರ್ ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದ ಸಹಾಯಧನವನ್ನು ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬವುದು.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ಕಾಶಿ ಯಾತ್ರೆ, ಕೈಲಾಸ ಮಾನಸ ಸರೋವರ ಯಾತ್ರೆ, ಚಾರ್ ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದ ಸಹಾಯಧನವನ್ನು ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬವುದು.

2023-24ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು(kailash mansarovar yatra) ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ ರೂ.30,000/-ಗಳಂತೆ ಸರ್ಕಾರದ ಸಹಾಯಧನವನ್ನು ನೀಡುವ ಕುರಿತು ಅರ್ಜಿಗಳನ್ನು ದಿನಾಂಕ: 6.11.2023ರಿಂದ ಆಹ್ವಾನಿಸಲಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬವುದು?

  • ಯಾತ್ರಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರತಕ್ಕದ್ದು.
  • ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಆಪ್‌ಲೋಡ್ ಮಾಡಬೇಕಾದ ದಾಖಲೆಗಳು:
  • ಒಂದು ಭಾವಚಿತ್ರ (ಪಾಸ್‌ ಪೋರ್ಟ್‌ ಅಳತ)
  • ಆಧಾರ್ ಗುರುತಿನ ಚೀಟಿ
  • ಚುನಾವಣಾ ಗುರುತಿನ ಚೀಟಿ
  • ರೂ. 20/-ಗಳ ಛಾಪಾ ಕಾಗದದಲ್ಲಿ ಸ್ವ-ದೃಢೀಕರಣ
  • ಸದರಿ ಯಾತ್ರೆಯನ್ನು ಕೇಂದ್ರ ಸರ್ಕಾರದ ಮಾರ್ಗವಾಗಿ ತೆರಳಿದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ದೃಢೀಕರಣವನ್ನು ನೀಡತಕ್ಕದ್ದು
  • ಯಾತ್ರೆಯನ್ನು ನೇಪಾಳ / ಟಿಬೆಟ್ ಮಾರ್ಗವಾಗಿ ತೆರಳಿದ್ದಲ್ಲಿ ಲಾಹ್ಸ, ಚೈನಾ ಸರ್ಕಾರದ ವತಿಯಿಂದ ನೀಡಲಾದ (C.I.P.S.C) 'ಪ್ರತಿಯನ್ನು
    ಒದಗಿಸತಕ್ಕದ್ದು
  • ಗ್ರೂಪ್ ವೀಸಾ (Group Visa)
  • ಪಾಸ್‌ಪೋರ್ಟ್‌ನ ಮೊದಲ ಹಾಗೂ ಕೊನೆಯ ಪ್ರತಿ, ಮತ್ತು ಸೀಲ್ ಇರುವಂತಹ ಪ್ರತಿಯ ಕಲರ್ ಜೆರಾಕ್ಸ್

ಯಾತ್ರಾರ್ಥಿಯ ಆಧಾರ್ ಸಂಖ್ಯೆಯು, ಕಡ್ಡಾಯವಾಗಿ ಬ್ಯಾಂಕ್‌ಗೆ ಸೀಡ್ ಆಗಿರತಕ್ಕದ್ದು.

ಅರ್ಜಿ ಸಲ್ಲಿಸಲು ಲಿಂಕ್: Apply Now 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 3.12.2023 ಸಂಜೆ 4:00 ಗಂಟೆಯೊಳಗೆ

ಅನುದಾನ ಲಭ್ಯತೆಗೆ ಅನುಗುಣವಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಅನುದಾನವನ್ನು ವಿತರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Social Welfare Department: ಕೃಷಿ ಜಮೀನು ಖರೀದಿಸಲು ಭೂ ಒಡೆತನ ಯೋಜನೆಯಡಿ ಶೇ 50 ಸಹಾಯಧನದಲ್ಲಿ 25 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

(2) Kashi yatra-ಕಾಶಿ ಯಾತ್ರೆ - 2023

ದಿನನಿತ್ಯ ಈ ರೀತಿಯ ಉಪಯುಕ್ತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್> WhatsApp channel ಮಾಡಿ ಕೃಷಿಕಮಿತ್ರ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ.

ಕಾಶಿ ಯಾತ್ರೆಗೆ ಕರ್ನಾಟಕ ಸರ್ಕಾರದ ಸಹಾಯಧನ ಯೋಜನೆಯು ಸರ್ಕಾರದ ಕಾರ್ಯಕ್ರಮವಾಗಿದ್ದು, ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ತೆರಳುವ ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳಿಗೆ 5,000 ರೂ. ಅರ್ಥಿಕ ಸಹಾಯಧನ ನೀಡಲಾಗುತ್ತದೆ.

ಯಾತ್ರಾ ಯೋಜನೆಗೆ ಅರ್ಜಿ ಸಲ್ಲಿಸಲು ರೂ 25 ನೋಂದಣಿ ಶುಲ್ಕ ಪಾವತಿಸಬೇಕು. ನಿಮ್ಮ ಅರ್ಜಿಯನ್ನು ಅನುಮೋದಿಸಿದ ನಂತರ ಈ ಶುಲ್ಕವನ್ನು ಮರುಪಾವತಿಸಲಾಗುವುದು.

ಅರ್ಜಿ ಸಲ್ಲಿಸಲು ಲಿಂಕ್: Apply Now

ಕಾಶಿ ಯಾತ್ರೆ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

  • ಯಾತ್ರೆಗೆ ನೋಂದಾಯಿಸುವ ಸಮಯದಲ್ಲಿ ನಿಮ್ಮ ಮೊಬೈಲಿನ ಲೊಕೇಶನ್ ಶೇರಿಂಗ್ ಆನ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
  • ದಯವಿಟ್ಟು ನೋಂದಣಿ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
  • ನಿಮ್ಮ ಸ್ವಂತ ಸ್ಥಳ ದಿಂದ  ಪ್ರಯಾಣವನ್ನು ಪ್ರಾರಂಭಿಸುವ ಮೊದಲು ದಯವಿಟ್ಟು ಅಪ್ಲಿಕೇಶನ್ ಪ್ರಕ್ರಿಯೆಯ 1 ಮತ್ತು 2 ಹಂತಗಳನ್ನು ಭರ್ತಿ ಮಾಡಿ.
  • ಅರ್ಜಿಯ  ಹಂತ 1 ರಲ್ಲಿ ನಿಮ್ಮ ಗುರುತಿನ ವಿವರಗಳನ್ನು ಭರ್ತಿ ಮಾಡಬೇಕು.
  • ಅರ್ಜಿಯ ಹಂತ 2 ರಲ್ಲಿ ಅಗತ್ಯವಿರುವ ಡಾಕ್ಯುಮೆಂಟ್ಗಳನ್ನೂ ಅಪ್‌ಲೋಡ್ ಮಾಡಬೇಕು.
  • ನೀವು ಯಾತ್ರಾ ಸ್ಥಳವನ್ನು(ಕಾಶಿ/ವಾರಾಣಸಿ) ತಲುಪಿದ ನಂತರ ನಿಮ್ಮ ಅರ್ಜಿಯ ಹಂತ 3 ಅನ್ನು ಪೂರ್ಣಗೊಳಿಸಿ.
  • ನಮ್ಮಇಲಾಖೆಯ ವೆಬ್‌ಸೈಟ್ ನೀವು ಪ್ರಯಾಣವನ್ನು ಪ್ರಾರಂಭಿಸಿದಾಗ ಮತ್ತು ಯಾತ್ರಾ ಸ್ಥಳವನ್ನು ತಲುಪಿದಾಗ  ನಿಮ್ಮ ಜಿಯೋಲೊಕೇಶನ್ ಮಾಹಿತಿಯನ್ನು  ಸಂಗ್ರಹಿಸುತ್ತದೆ ಮತ್ತು ಪರಿಶೀಲಿಸುತ್ತದೆ.
  • ನಿಮ್ಮನ್ನು (ಸೆಲ್ಫಿ) ಒಳಗೊಂಡಿರುವ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕ ಯಾತ್ರಾ ಸ್ಥಳದಲ್ಲಿ  ನಿಮ್ಮ ಉಪಸ್ಥಿತಿಯನ್ನು ಖಚಿತಪಡಿಸಿ ಮತ್ತು  ಫೋಟೋದ ಹಿನ್ನೆಲೆಯಲ್ಲಿ ದೇವಾಲಯದ ಪ್ರಮುಖ ಸ್ಥಳವನ್ನು ಕಾಣುವಂತೆ ನೋಡಿಕೊಳ್ಳಿ.
    ಯಾತ್ರಾಸ್ಥಳದಲ್ಲಿ ನಿಮಗೆ ಯಾವುದೇ ರೀತಿಯ ತೊಂದರೆಯಾದಲ್ಲಿ, ದಯವಿಟ್ಟು  ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ.
  • ಕರ್ನಾಟಕ ಸರ್ಕಾರವು ನೀಡುತ್ತಿರುವ ಸಹಾಯ ಧನವನ್ನು  ಪಡೆಯಲು  ನಿಮ್ಮ ಅರ್ಜಿಯನ್ನು ಸಲ್ಲಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
    ದಯವಿಟ್ಟು ಗಮನಿಸಿ,ಈ ಯೋಜನೆಯು ಕರ್ನಾಟಕದ ನಿವಾಸಿಗಳಿಗೆ ಮಾತ್ರ ಅನ್ವವಯಿಸುತ್ತದೆ.

ಕರ್ನಾಟಕ ಸರ್ಕಾರವು ನೀಡುವ ಪ್ರಯೋಜನಗಳನ್ನು ಪಡೆಯಲು, ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅದನ್ನು ಮಾಡಲಾಗಿದೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. 

ಇದನ್ನೂ ಓದಿ: New ration card-  ಆಹಾರ ಇಲಾಖೆಯಿಂದ ಗ್ರಾಹಕರಿಗೆ ಸಿಹಿ ಸುದ್ದಿ!

ಯೋಜನೆ   ಅರ್ಜಿ ಸಲ್ಲಿಸಲು ಲಿಂಕ್
ಕೈಲಾಸ ಮಾನಸ ಸರೋವರ ಯಾತ್ರೆ  Apply Now 
ಕಾಶಿ ಯಾತ್ರೆ   Apply Now 
ಚಾರ್ ಧಾಮ್ ಯಾತ್ರಾ   Apply Now 

(3)Chardham yatra- ಚಾರ್ ಧಾಮ್ ಯಾತ್ರಾ -2023

ಇದನ್ನೂ ಓದಿ: Karnataka Drought Fund : ರಾಜ್ಯ ಸರಕಾರದಿಂದ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ! ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ?

ಉತ್ತರಾಖಂಡದ ಚಾರ್ ಧಾಮ್‌ಗಳಿಗೆ ಪ್ರಯಾಣಿಸುವ ಕರ್ನಾಟಕ ರಾಜ್ಯದ ಯಾತ್ರಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಹಣಕಾಸಿನ ನೆರವು ನೀಡುತ್ತದೆ.

ಉತ್ತರಾಖಂಡದ ಈ ನಾಲ್ಕುಚಾರ್ ಧಾಮಗಳು ಹಿಂದೂ ಯಾತ್ರಾ ಸ್ಥಳಗಳಾಗಿವೆ:

  • ಯಮುನೋತ್ರಿ
  • ಗಂಗೋತ್ರಿ
  • ಕೇದಾರನಾಥ್
  • ಬದ್ರಿನಾಥ್

ಅರ್ಜಿ ಸಲ್ಲಿಸಲು ಲಿಂಕ್: Apply Now 

ಚಾರ್ ಧಾಮ್ ಯಾತ್ರಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

  • ಅರ್ಜಿಯ  ಹಂತ 1 ರಲ್ಲಿ ನಿಮ್ಮ ಗುರುತಿನ ವಿವರಗಳನ್ನು ಭರ್ತಿ ಮಾಡಬೇಕು.
  • ಅರ್ಜಿಯ ಹಂತ 2 ರಲ್ಲಿ ಅಗತ್ಯವಿರುವ ಡಾಕ್ಯುಮೆಂಟ್ಗಳನ್ನೂ ಅಪ್‌ಲೋಡ್ ಮಾಡಬೇಕು.
  • ದಯವಿಟ್ಟು ನೀವು ಉತ್ತರಾಖಂಡ ಸರ್ಕಾರವು ನಿಮಗೆ ನೀಡುವ  ಯಾತ್ರಾ ಪತ್ರವನ್ನು ಹೊಂದಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
    ಕರ್ನಾಟಕ ಸರ್ಕಾರವು ನೀಡುತ್ತಿರುವ ಸಹಾಯ ಧನವನ್ನು  ಪಡೆಯಲು  ನಿಮ್ಮ ಅರ್ಜಿಯನ್ನು ಸಲ್ಲಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
    ದಯವಿಟ್ಟು ಗಮನಿಸಿ,ಈ ಯೋಜನೆಯು ಕರ್ನಾಟಕದ ನಿವಾಸಿಗಳಿಗೆ ಮಾತ್ರ ಅನ್ವವಯಿಸುತ್ತದೆ.
  • 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮಾತ್ರ ಅರ್ಜಿಯನ್ನು ಹಾಕಲು ಅರ್ಹರಾಗಿರುತ್ತಾರೆ .

ಈ ಮೇಲಿನ ಯೋಜನಗಳ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ವೆಬ್ಸೈಟ್ ಭೇಟಿ: www.karnatakayatras.com