ಬಹುತೇಕ ಜಿಲ್ಲೆಯ ರೈತರಿಗೆ NDRF ಮಾರ್ಗಸೂಚಿ ಪ್ರಕಾರ ರಾಜ್ಯ ಮತ್ತು ಕೇಂದ್ರದಿಂದ ಬರ ಪರಿಹಾರದ ಹಣ ಜಮಾ ಅಗಿದ್ದು ಯಾವ ಬ್ಯಾಂಕ್ ಖಾತೆಗೆ(Parihara amount bank details) ಪರಿಹಾರದ ಹಣ ಜಮಾ ಅಗಿದೆ ಎಂದು ಹೇಗೆ ತಿಳಿದುಕೊಳ್ಳಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ನೇರ ನಗದು ವರ್ಗಾವಣೆಯ(DBT) ಮೂಲಕ ಫಲಾನುಭವಿಗಳಿಗೆ ಪರಿಹಾರದ ಹಣವನ್ನು “Bhoomi Online-Parihara” ತಂತ್ರಾಂಶದ ಮೂಲಕ ರೈತರ ಖಾತೆಗೆ ವರ್ಗಾಹಿಸಲಾಗಿದ್ದು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಅಕೌಂಟ್(bank account) ಹೊಂದಿರುವ ರೈತರಿಗೆ ಯಾವ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ ಎನ್ನುವ ಗೊಂದಲ ಇದ್ದು ಇದಕ್ಕೆ ಸೂಕ್ತ ಪರಿಹಾರವನ್ನು ಈ ಕೆಳಗೆ ವಿವರಿಸಲಾಗಿದೆ.
ರೈತರು ಈ ಮೊದಲು ಬರ ಪರಿಹಾರವಾಗಿ(bara parihara) ರೂ 2,000 ಯಾವ ಬ್ಯಾಂಕ್ ಅಕೌಂಟ್ ಗೆ ಜಮಾ ಅಗಿರುತ್ತದೆಯೋ ಅದೇ ಬ್ಯಾಂಕ್ ಖಾತೆಗೆ ಎರಡನೇ ಕಂತಿನ ಹಣ ಜಮಾ ಅಗಿರುತ್ತದೆ ಮತ್ತು ಆಧಾರ್ ಕಾರ್ಡ ಲಿಂಕ್ ಇರುವ ಬ್ಯಾಂಕ್ ಅಕೌಂಟ್ ಗೆ ಹಣ ಸಂದಾಯವಾಗಿರುತ್ತದೆ ಎಂದು. ಇದನ್ನು ಹೊರತುಪಡಿಸಿ ಈ ಲೇಖನದಲ್ಲಿ ವಿವರಿಸುವ ಮಾಹಿತಿಯನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲೇ ಪರಿಹಾರದ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎಂದು ಖಚಿತ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಇದನ್ನೂ ಓದಿ: Village administrative officer-1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!
Parihara amount bank details-ನಿಮ್ಮ ಮೊಬೈಲ್ ನಂಬರ್ ಹಾಕಿ ಬರ ಪರಿಹಾರ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ? ಎಂದು ತಿಳಿಯುವ ವಿಧಾನ:
ಕಂದಾಯ ಇಲಾಖೆಯ ಅಧಿಕೃತ “Bhoomi Online-Parihara” ವೆಬ್ಸೈಟ್ ಅನ್ನು ನಿಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಭೇಟಿ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಮನೆಯಲ್ಲೇ ಕುಳಿತು ಬರ ಪರಿಹಾರದ ಹಣ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ ಎಂದು ತಿಳಿಯಬಹುದು.
Step-1: ಮೊದಲಿಗೆ ಈ Parihara amount bank details check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ “Bhoomi Online-Parihara” ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು ಇದಾದ ಬಳಿಕ ಪ್ರಥಮ ಹಂತದಲ್ಲಿ “Year/ವರ್ಷ”- 2023-24 ಎಂದು, Season- ಮುಂಗಾರು/Kharif, Calamity/ವಿಪತ್ತಿನ ವಿಧ- Drought/ಬರ ಎಂದು ಆಯ್ಕೆ ಮಾಡಿಕೊಂಡು Get Data/ಹುಡುಕು ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: ತದನಂತರ “mobile number/ಮೊಬೈಲ್ ಸಂಖ್ಯೆ” ಕಾಲಂ ನಲ್ಲಿ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ಹಾಕಿ “Get data/ಹುಡುಕು” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Milk incentive-2024: ಹಾಲಿನ ಪ್ರೋತ್ಸಾಹ ಧನ ಬಿಡುಗಡೆ! ನಿಮಗೆ ಬಂತಾ ಚೆಕ್ ಮಾಡಿ!
Step-3: ಇಲ್ಲಿ ಯಾವ ಬ್ಯಾಂಕ್ ಖಾತೆಗೆ ಪರಿಹಾರದ ಹಣ ಜಮಾ ಅಗಿದೆ “ಬ್ಯಾಂಕಿನ ಹೆಸರು/Bank name” ಮತ್ತು ಫಲಾನುಭವಿ ವಿವರ, ಯಾವೆಲ್ಲ ಸರ್ವೆ ನಂಬರ್ ಗೆ ಪರಿಹಾರ ಜಮಾ ಅಗಿದೆ ಎನ್ನುವ ವಿವರವಾದ ಮಾಹಿತಿ ತೋರಿಸುತ್ತದೆ.
ವಿಧಾನ-2: Bank account balance check-ಬ್ಯಾಂಕ್ ಶಾಖೆಯ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ಹಣ ಜಮಾ ವಿವರ ತಿಳಿಯಿರಿ:
ರೈತರು ನೀವು ಬ್ಯಾಂಕ್ ಅಕೌಂಟ್ ಹೊಂದಿರುವ ಬ್ಯಾಂಕಿನ ಬ್ಯಾಲೆನ್ಸ್ ಚೆಕ್ ಸಹಾಯವಾಣಿ ಸಂಖ್ಯೆಗೆ ಬ್ಯಾಂಕ್ ಅಕೌಂಟ್ ತೆರೆಯುವಾಗ ನೋಂದಣಿ ಮಾಡಿಕೊಂಡಿರುವ ಮೊಬೈಲ್ ಪೋನ್ ನಿಂದ ಮಿಸ್ ಕಾಲ್ ಕೊಡುವ ಮೂಲಕ ನಿಮ್ಮ ಮೊಬೈಲ್ ಗೆ ಬ್ಯಾಂಕ್ ಅಕೌಂಟ್ ಬ್ಯಾಲೆನ್ಸ್ ಮೇಸೆಜ್ ಪಡೆದು ನಿಮಗೆ ಬರ ಪರಿಹಾರ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.
ಎಲ್ಲಾ ಬ್ಯಾಂಕ್ ನ ಬ್ಯಾಲೆನ್ಸ್ ಅನ್ನು ಮೇಸೆಜ್ ಮೂಲಕ ನಿಮ್ಮ ಮೊಬೈಲ್ ಗೆ ಪಡೆಯಲು ವಿವಿಧ ಬ್ಯಾಂಕಿನ ಸಹಾಯವಾಣಿ ಸಂಖ್ಯೆಯನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ: all Bank account balance check mobile numbers list