Parihara list-ಬೆಳೆ ಪರಿಹಾರದ ಹಣ ಜಮಾ ಅಗಿರುವ ಫಲಾನುಭವಿ ರೈತರ ಪಟ್ಟಿ ಬಿಡುಗಡೆ!

January 27, 2024 | Siddesh

ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾಗಿ ಸಂಭವಿಸುವ ಬೆಳೆ ಮತ್ತು ಆಸ್ತಿ-ಪಾಸ್ತಿ ನಷ್ಟಕ್ಕೆ ರಾಜ್ಯ ಸರಕಾರದಿಂದ ಪರಿಹಾರವನ್ನು(bele parihara) ನೀಡಲು ಪರಿಹಾರ ತಂತ್ರಾಂಶವನ್ನು ಬಳಕೆ ಮಾಡಲಾಗುತ್ತದೆ. ಈ ವೆಬ್ಸೈಟ್ ನಲ್ಲಿ ಬೆಳೆ ಪರಿಹಾರದ ಹಣ ಜಮಾ ಅಗಿರುವ ಫಲಾನುಭವಿ ರೈತರ ಪಟ್ಟಿ ಪ್ರಕಟಿಸಲಾಗಿರುತ್ತದೆ.

ಸಾರ್ವಜನಿಕರು ಈ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಿ ವಿವಿಧ ಬಗ್ಗೆಯ ಪರಿಹಾರ ಅರ್ಜಿಗಳ ಸ್ಥಿತಿ ಮತ್ತು ಹಣ ವರ್ಗಾವಣೆ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದಾಗಿದೆ.

ಈ ಜಾಲತಾಣವು ಕಂದಾಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿದ್ದು ಅತೀಯಾದ ಮಳೆಯಿಂದ ಮತ್ತು ಪ್ರಕೃತಿ ವಿಕೋಪಗಳಿಂದ ಸಾರ್ವಜನಿಕರ ಮನೆ, ಅಸ್ತಿ-ಪಾಸ್ತಿ ಮತ್ತು ಬೆಳೆ ಹಾನಿಯಾದ ಸಂದರ್ಭದಲ್ಲಿ ಪಾರದರ್ಶಕವಾಗಿ ಪರಿಹಾರದ ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು "ಪರಿಹಾರ ತಂತ್ರಾಂಶವನ್ನು" ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ: Gruhalakshmi pending amount-ಈ ಕೆಲಸ ಮಾಡಿದ ಬಳಿಕ ನನ್ನ ಖಾತೆಗೆ ಒಂದೇ ಬಾರಿಗೆ ಬಾಕಿ ಕಂತಿನ ಎಲ್ಲಾ ಗೃಹಲಕ್ಷ್ಮಿ ಯೋಜನೆ ಹಣ ಬಂತು!

Parihara website- ಯಾವೆಲ್ಲ ಪರಿಹಾರವನ್ನು ಈ ತಂತ್ರಾಂಶದಲ್ಲಿ  ನಿರ್ವಹಿಸಲಾಗುತ್ತದೆ?

1) ಬರ ಪರಿಹಾರ.
2) ಪ್ರವಾಹ/ಹೆಚ್ಚು ಮಳೆಯಿಂದಾಗುವ ಹಾನಿ ಪರಿಹಾರ.
3) ರೋಗ-ಕೀಟದಿಂದಾ ಉಂಟಾಗುವ ಹಾನಿ.
4) ಭೂ-ಕುಸಿತ.

Parihara list-2024: ಬೆಳೆ ಪರಿಹಾರದ ಹಣ ಜಮಾ ಅಗಿರುವ ಫಲಾನುಭವಿ ರೈತರ ಪಟ್ಟಿ ಪಡೆಯುವ ವಿಧಾನ:

ರೈತರು ಈ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹಳ್ಳಿಯ ರೈತರಿಗೆ ಯಾವ ವರ್ಷ? ಎಷ್ಟು ಪರಿಹಾರದ ಮೊತ್ತ ಜಮಾ ಅಗಿದೆ ಎಂದು ತಿಳಿದುಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ Parihara status check ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ "ಪರಿಹಾರ" ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. ಇದಾದ ಬಳಿಕ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು ನೀವು ನೋಡಬೇಕಾದ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: Gruhalakshmi status-2024: ರೇಷನ್ ಕಾರ್ಡ ನಂಬರ್ ಹಾಕಿ ಗೃಹಲಕ್ಷ್ಮಿ ಹಣ ಎಷ್ಟು? ಜಮಾ ಅಗಿದೆ ಎಂದು ತಿಳಿಯಬವುದು.

Step-2: ತದನಂತರ ಮುಂಗಾರು(Kharif) ಹಿಂಗಾರು(Rabi) ಬೇಸಿಗೆ(Summer) ಇವುಗಳಲ್ಲಿ ಒಂದು ಹಂಗಾಮನ್ನು ಆಯ್ಕೆ ಮಾಡಿಕೊಂಡು ಪರಿಹಾರದ ವಿಧ ಆಯ್ಕೆ ಮಾಡಿ "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯ ಪರಿಹಾರ ಹಣ ಜಮಾ ಅಗಿರುವ ರೈತರ ಫಲಾನುಭವಿ ಪಟ್ಟಿ ತೋರಿಸುತ್ತದೆ.

ವಿಶೇಷ ಸೂಚನೆ: ಪರಿಹಾರದ ವಿಧ(Select Calamity) ಆಯ್ಕೆಯಲ್ಲಿ "Flood" ಎಂದರೆ ಹೆಚ್ಚು ಮಳೆಯಿಂದ ಅಗಿರುವ ಹಾನಿ "Drought" ಎಂದರೆ ಮಳೆ ಕೊರತೆಯಿಂದ ಬರ ಉಂಟಾಗಿ ಅಗಿರುವ "Heavy rain" ಹಾನಿ ಎಂದರೆ ಅತೀಯಾದ ಮಳೆಯಿಂದ ಅಗಿರುವ ಹಾನಿ ಪರಿಹಾರ ಎಂದು.

ಪರಿಹಾರ ಪಟ್ಟಿಯಲ್ಲಿ ಫಲಾನುಭವಿ ರೈತರ ಹೆಸರು ಅಧಾರ್ ಕಾರ್ಡ ಸಂಖ್ಯೆಯ ಕೊನೆಯ ನಾಲ್ಕು ನಂಬರ್ ಮತ್ತು ಜಮಾ ಅಗಿರುವ ಪರಿಹಾರದ ಮೊತ್ತ, ಪಾವತಿ ಸ್ಥಿತಿ ತೋರಿಸುತ್ತದೆ. 

Step-3: ಇದೇ ಪುಟದಲ್ಲಿ ಕೊನೆಯಲ್ಲಿ ಕಾಣುವ "View Status" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಯಾವ ಸರ್ವೆ ನಂಬರ್ ಗೆ ಪರಿಹಾರ ಹಣ ಜಮಾ ಅಗಿದೆ ಅನ್ನುವ ಮಾಹಿತಿಯನ್ನು ಸಹ ನೋಡಬಹುದಾಗಿದೆ.

Parihara status-2024: ಪರಿಹಾರ ಅರ್ಜಿ ಯಾವ ಹಂತದಲ್ಲಿದೆ ಎಂದು ಚೆಕ್ ಮಾಡುವ ವಿಧಾನ:

ನೀವೇನಾದರು ಬೆಳೆ ಹಾನಿ ಸಂಭವಿಸಿದಾಗ ನಿಮ್ಮ ಹತ್ತಿರದ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ/ಕೃಷಿ ಇಲಾಖೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ಈ ಕೆಳಗಡೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ Parihara status ಮೇಲೆ ಒತ್ತಿ ಪರಿಹಾರ ವೆಬ್ಸೈಟ್ ಭೇಟಿ ಮಾಡಿದ ಬಳಿಕ ಇಲ್ಲಿ ಎರಡು ಆಯ್ಕೆಗಳು ತೋರಿಸುತ್ತವೆ ಇಲ್ಲಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬೇಕು

Step-2: ನಂತರ "ಪರಿಹಾರ ವಿಧ/Calamity Type" ಆಯ್ಕೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು "ವರ್ಷ/Year" ಆಯ್ಕೆ ಮಾಡಿ ಅರ್ಜಿದಾರರ ಅಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ ಪಕ್ಕದಲೇ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "ವಿವರವನ್ನು ಪಡೆಯಲು" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಪರಿಹಾರದ ಅರ್ಜಿ ಯಾವ ಹಂತದಲ್ಲಿದೆ ಎಂದು ತೋರಿಸುತ್ತದೆ.

ಇದನ್ನೂ ಓದಿ: ಕೇರಾ ಸುರಕ್ಷಾ ರೂ. 94/- ಪಾವತಿ ಮಾಡಿ 5 ಲಕ್ಷ ವಿಮಾ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: