Pension amount-ಮಾಸಿಕ ಪಿಂಚಣಿ ಪಾವತಿ ವಿಧಾನದಲ್ಲಿ ಬದಲಾವಣೆ! ಈ ಫಲಾನುಭವಿಗಳಿಗೆ ಮಾತ್ರ ಸಿಗಲಿದೆ ಈ ತಿಂಗಳ ಪಿಂಚಣಿ ಹಣ!

ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಈ ಹಿಂದೆ ವಿವಿಧ ಯೋಜನೆ ಪಿಂಚಣಿಗಳಿಗೆ(Pension amount) ಸಂಬಂಧಿಸಿದ ಫಲಾನುಭವಿಗಳಿಗೆ ಖಾಜಾನೆ 2ರ ಮುಖಾಂತರ ಪಿಂಚಣಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿತ್ತು ಅದರೆ ಈ ತಿಂಗಳಿನಿಂದ "ಆಧಾರ್ ಆಧಾರಿತ ಡಿ.ಬಿ.ಟಿ ಮೂಲಕ ಪಿಂಚಣಿ(Pinchani amount) ಪಾವತಿ ಮಾಡಲಾಗುತ್ತದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೆಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ಹೊರಡಿಸಿದ್ದಾರೆ.

ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಈ ಹಿಂದೆ ವಿವಿಧ ಯೋಜನೆ ಪಿಂಚಣಿಗಳಿಗೆ(Pension amount) ಸಂಬಂಧಿಸಿದ ಫಲಾನುಭವಿಗಳಿಗೆ ಖಾಜಾನೆ 2ರ ಮುಖಾಂತರ ಪಿಂಚಣಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿತ್ತು ಅದರೆ ಈ ತಿಂಗಳಿನಿಂದ "ಆಧಾರ್ ಆಧಾರಿತ ಡಿ.ಬಿ.ಟಿ ಮೂಲಕ ಪಿಂಚಣಿ(Pinchani amount) ಪಾವತಿ ಮಾಡಲಾಗುತ್ತದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೆಶನಾಲಯದ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಅರ್ಥಿಕವಾಗಿ ಹಿಂದುಳಿದ ಮತ್ತು ಹಿರಿಯ ನಾಗರಿಕರಿಗೆ, ಇತರೆ ಯೋಜನೆ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಆಯಾ ಯೋಜನೆಯಡಿ ನಿಗಧಿಪಡಿಸಿರುವ ಪಿಂಚಣಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಆದರೆ ನೈಜ ಫಲಾನುಭವಿಗಳಿಗೆ ಪ್ರತಿ ತಿಂಗಳು ಶೀಘ್ರದಲ್ಲೇ ಅವರ ಖಾತೆಗೆ ಪಿಂಚಣಿ ಹಣವನ್ನು ತಲುಪಿಸುವ ಉದ್ದೇಶದಿಂದ ಈ ಹಿಂದೆ ಹಣ ಪಾವತಿ ಮಾಡಲು ಅನುಸರಿಸುತ್ತಿರುವ ವಿಧಾನದ ಬದಲಿಗೆ ಈ ತಿಂಗಳಿನಿಂದ ಆಧಾರ್ ಆಧಾರಿತ ಡಿ.ಬಿ.ಟಿ ಮೂಲಕ ಪಿಂಚಣಿ ಪಾವತಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲವು ನಿರ್ಧರಿಸಿದೆ.

ಇದನ್ನೂ ಓದಿ: Yuva nidhi amount-ಯುವನಿಧಿ ಯೋಜನೆಯ ಮೊದಲ ಕಂತಿನ ಹಣ ವರ್ಗಾವಣೆಗೆ ಡೇಟ್ ಫಿಕ್ಸ್!

Pension amount-2024: ಈ ಫಲಾನುಭವಿಗಳಿಗೆ ಮಾತ್ರ ಸಿಗಲಿದೆ ಈ ತಿಂಗಳ ಪಿಂಚಣಿ ಹಣ:

ಹಾಗಾದರೆ ಪಿಂಚಣಿ ಪಡೆಯುತ್ತಿರುವ ಅರ್ಹ ಫಲಾನುಭವಿಗಳು ಪಿಂಚಣಿ ಪಡೆತಲು ಯಾವ ಕ್ರಮ ಅನುಸರಿಸಬೇಕು? ಈ "ಆಧಾರ್ ಆಧಾರಿತ ಡಿ.ಬಿ.ಟಿ ಮೂಲಕ ಪಿಂಚಣಿ ಪಾವತಿ" ಮೂಲಕ ಹಣ ಪಡೆಯಲು ಪಿಂಚಣಿದಾರರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ / NPCI Mapping ಆಗಿರುವ ಬ್ಯಾಂಕ್ / ಅಂಚೆ ಖಾತೆ ಹೊಂದಿದ್ದರೆ ಸಾಕು ನಿಮಗೆ ಪಿಂಚಣಿ ಹಣ ನೇರ ನಗದು ವರ್ಗಾವಣೆ(DBT)ಮೂಲಕ ಜಮಾ ಅಗುತ್ತದೆ.

Karnataka Pension Yojana- ಈ ಹಿಂದೆ ಪಿಂಚಣಿ ಹಣ ವರ್ಗಾವಣೆ ಹೇಗೆ ಮಾಡಲಾಗುತ್ತಿತ್ತು?

ಪಿಂಚಣಿ ನಿರ್ದೇಶನಾಲಯದಿಂದ  ಈ ಹಿಂದೆ ವಿವಿಧ ಪಿಂಚಣಿಗಳಿಗೆ ಸಂಬಂಧಿಸಿದ ಫಲಾನುಭವಿಗಳಿಗೆ ನವೆಂಬರ್ 2023ರ ಮಾಹೆಯವರೆಗೆ ಖಾಜಾನೆ 2ರ ಮುಖಾಂತರ ಪಿಂಚಣಿ ಹಣವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು ಈ ವಿಧಾನವು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರಿಂದ ಆಧಾರ್ ಆಧಾರಿತ ಪಿಂಚಣಿ ವ್ಯವಸ್ಥೆ ಮೂಲಕ ಪಿಂಚಣಿ ಪಾವತಿ ಮಾಡಲು ಇಲಾಖೆಯು ನಿರ್ಧರಿಸಿ.

ಇದನ್ನೂ ಓದಿ: Parihara list-2024: ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಬರ ಪರಿಹಾರ! ನಿಮ್ಮ ಹೆಸರಿದಿಯಾ ಚೆಕ್ ಮಾಡಿ.

Pension DBT Status- ಇನ್ನು ಮುಂದೆ ಪಿಂಚಣಿ ಪಾವತಿಗೆ ಈ ವಿಧಾನ ಅನುಸರಿಸಲಾಗುತ್ತದೆ:

ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯವು  ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಮಾಹಿತಿಯನ್ವಯ 2023ನೇ ಡಿಸೆಂಬರ್ 30ರ ಸರ್ಕಾರಿ ಆದೇಶದನ್ವಯ ಆಧಾರ್ ಆಧಾರಿತ ಪಿಂಚಣಿ ವ್ಯವಸ್ಥೆಯನ್ನು ಡಿಸೆಂಬರ್ 2023ರಿಂದ ಜಾರಿಗೆ ತರಲಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಜೋಡಣೆ / NPCI Mapping ಆಗಿರುವ ಬ್ಯಾಂಕ್ / ಅಂಚೆ ಖಾತೆಗೆ ಕೇಂದ್ರೀಕೃತವಾಗಿ ಆಧಾರ್ ಆಧಾರಿತ ಡಿ.ಬಿ.ಟಿ ವ್ಯವಸ್ಥೆಯಡಿ ಡಿಸೆಂಬರ್ 2023ರ ಮಹೆಯ ಪಿಂಚಣಿ ಪಾವತಿಯಾಗಲಿದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೆಶನಾಲಯದ ನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ: free skill training- ಉಚಿತ ಬ್ಯೂಟೀಷಿಯನ್, ಜಿಮ್ ಟ್ರೈನರ್, ವೀಡಿಯೋಗ್ರಫಿ ತರಬೇತಿಗೆ ಅರ್ಜಿ ಆಹ್ವಾನ!

ನಿಮ್ಮ ಮೊಬೈಲ್ ನಲ್ಲೇ ಪಿಂಚಣಿ ಹಣ ಬಂದಿದಿಯೋ ಇಲ್ಲವೋ ಎಂದು ತಿಳಿಯುವ ವಿಧಾನ:

ಪಿಂಚಣಿ ಪಡೆಯುತ್ತಿರುವ ಅರ್ಹ ಫಲಾನುಭವಿಗಳು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಅಧಿಕೃತ ಜಾಲತಾಣ ಭೇಟಿ ಮಾಡಿ ಪ್ರತಿ ತಿಂಗಳ ಪಿಂಚಣಿ ಹಣ ವರ್ಗಾವಣೆಯ ಸಂಪೂರ್ಣ ವಿವರವನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿಯಬವುದುದಾಗಿದೆ.

ಪ್ರತಿ ತಿಂಗಳ ಪಿಂಚಣಿ ಹಣ ವರ್ಗಾವಣೆಯ ಸಂಪೂರ್ಣ ವಿವರ ತಿಳಿಯುವ ವಿಧಾನ: click here

ಇದನ್ನೂ ಓದಿ: First installment drought relief: ಮೊದಲ ಕಂತಿನ ಬರ ಪರಿಹಾರ ಹಣ ಜಮಾ ನಿಮಗೂ ಬಂದಿರುವುದು ಚೆಕ್ ಮಾಡಿ!