Pension amount Status check- 77 ಲಕ್ಷ ನಾಗರಿಕರಿಗೆ ಸೆಪ್ಟೆಂಬರ್ ತಿಂಗಳ ಪಿಂಚಣಿ ಹಣ ಜಮಾ! ನಿಮಗೆ ಬಂತಾ ಚೆಕ್ ಮಾಡಿ.

Pension amount Status check: ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಯೋಜನೆಗಳನ್ನು ನಿರ್ದೇಶನಾಲಯ ವಿಭಾಗದಿಂದ ರಾಜ್ಯದ ಒಟ್ಟು ಸೆಪ್ಟೆಂಬರ್ ತಿಂಗಳ ಪಿಂಚಣಿ ಹಣವನ್ನು(Pinchani yojanegalu) ಜಮಾ ಮಾಡಲಾಗಿದೆ.

ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಯೋಜನೆಗಳನ್ನು ನಿರ್ದೇಶನಾಲಯ ವಿಭಾಗದಿಂದ ರಾಜ್ಯದ ಒಟ್ಟು 77,63,513 ನಾಗರಿಕರಿಗೆ ಸೆಪ್ಟೆಂಬರ್ ತಿಂಗಳ ಪಿಂಚಣಿ ಹಣವನ್ನು(Pinchani yojanegalu) ಜಮಾ ಮಾಡಲಾಗಿದೆ.

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ, ವಿಧವಾ ಪಿಂಚಣಿ ಯೋಜನೆ, ಅಂಗವಿಕಲ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನ, ಮನಸ್ವಿನಿ, ಮೈತ್ರಿ, ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ ಯೋಜನೆ, ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ ಯೋಜನೆ, ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಮಾಸಿಕ ಪಿಂಚಣಿ ಯೋಜನೆ ಗಳಲ್ಲಿ ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ನಿಮಗೆ ಹಣ ಬಂದಿರುವುದನ್ನು ನಿಮ್ಮ ಮೊಬೈಲ್ ನಲ್ಲೇ ಹೇಗೆ ಪರಿಶೀಲಿಸಿಕೊಳ್ಳಬವುದು ಎಂದು ಈ ಅಂಕಣದಲ್ಲಿ ತಿಳಿಸಲಾಗಿದೆ.

Karnataka pension schemes-2023: ಯಾವ ಯೋಜನೆಗೆ ಎಷ್ಟು ಹಣ ವರ್ಗಾವಣೆ ಮಾಡಲಾಗುತ್ತದೆ?

1)ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ- A) 60 ರಿಂದ 64 ವರ್ಷದ ಒಳಗಿನವರಿಗೆ- Rs. 800 , B) 65ವರ್ಷ ಮೇಲ್ಪಟ್ಟವರಿಗೆ- Rs. 1,200 
2)ವಿಧವಾ ಪಿಂಚಣಿ ಯೋಜನೆ- Rs. 800
3)ಅಂಗವಿಕಲ ಪಿಂಚಣಿ- Rs. 800 ರಿಂದ Rs. 2000 ರವರೆಗೆ.
4)ಸಂಧ್ಯಾ ಸುರಕ್ಷಾ ಯೋಜನ- Rs. 1200
5)ಮನಸ್ವಿನಿ- Rs. 800
6)ಮೈತ್ರಿ- Rs. 800
7)ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ ಯೋಜನೆ- Rs. 800
8)ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ ಯೋಜನೆ- Rs. 10,000
9)ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಮಾಸಿಕ ಪಿಂಚಣಿ ಯೋಜನೆ- Rs. 2000 ರಿಂದ Rs. 4000 ರವರೆಗೆ.

ಇದನ್ನೂ ಓದಿ: Karnataka guarantee schemes: ಈ ಪಟ್ಟಿಯಲ್ಲಿ ಹೆಸರಿಲ್ಲದವರಿಗಿಲ್ಲ ಅನ್ನಭಾಗ್ಯ,ಗೃಹಲಕ್ಷ್ಮಿ ಹಣ! ಇಲ್ಲಿದೆ ಪರಿಷ್ಕೃತ ರೇಷನ್ ಕಾರ್ಡ ಪಟ್ಟಿ.

ನಿಮ್ಮ ಮೊಬೈಲ್ ನಲ್ಲಿ ಸೆಪ್ಟೆಂಬರ್ ತಿಂಗಳ ಪಿಂಚಣಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ನಾಗರಿಕರು ರಾಜ್ಯ ಸರಕಾರದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಯೋಜನೆಗಳನ್ನು ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಪಿಂಚಣಿ ಯೋಜನೆಯಡಿ ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು.

ಪಿಂಚಣಿ ಯೋಜನೆಯಡಿ ಹಣ ವರ್ಗಾವಣೆ ಸ್ಥಿತಿ ತಿಳಿಯಲು ಪಿಂಚಣಿದಾರರ Beneficiary ID ಬೇಕಾಗುತ್ತದೆ ಮೊದಲು ಈ ಐಡಿಯನ್ನು ತೆಗೆದುಕೊಂಡು ನಂತರ ಈ ಐಡಿ ಹಾಕಿ ಹೇಗೆ ಪರಿಶೀಲಿಸಬೇಕು ಎಂದು ಈ ಕೆಳಗಿ ವಿವರಿಸಲಾಗಿದೆ.

Pension amount Status check- ಪಿಂಚಣಿದಾರರ Beneficiary ID ಪಡೆಯುವ ವಿಧಾನ: 

ಗಮನಿಸಿ: ಮೊದಲಿಗೆ ಕ್ರೋಮ್ ಬಳಕೆ ಮಾಡುವವರು ತಮ್ಮ ಮೊಬೈಲ್ ನಲ್ಲಿ "Desktop view" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಈ ವೆಬ್ಸೈಟ್ ನೋಡಬೇಕು.

ಇದನ್ನೂ ಓದಿ: Aditya Birla Capital Scholarship- ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ರೂ 60,000 ರವರೆಗೆ  ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!

Step-1: ಈ ಲಿಂಕ್ https://dssp.karnataka.gov.in/dssp ಮೇಲೆ ಕ್ಲಿಕ್ ಮಾಡಿ ಪಿಂಚಣಿ ಪಡೆಯುತ್ತಿರುವ ನಾಗರಿಕರ ಜಿಲ್ಲೆ, ತಾಲ್ಲೂಕು, ಗ್ರಾಮೀಣ/ನಗರ, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಇದೆ ಪುಟದಲ್ಲಿ ಗೋಚರಿಸುವ ಕ್ಯಾಪ್ಚರ್ ಕೋಡ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-2: ಈ ಮೇಲಿನ ಹಂತ ಮುಗಿದ ಬಳಿಕ ಈ ಪುಟದಲ್ಲಿ ನೀವು ಆಯ್ಕೆ ಮಾಡಿದ ಗ್ರಾಮದ ಪಿಂಚಣಿದಾರರ ಐಡಿ ಹೆಸರು ಇತ್ಯಾದಿ ವಿವರ ಗೋಚರಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇರುವ ಕಾಲಂ ನ ಪಿಂಚಣಿದಾರರ Beneficiary ID ಅನ್ನು ಒಂದು ಕಡೆ ನಮೂದಿಸಿಕೊಳ್ಳಬೇಕು. ಈ ವಿಧಾನ ಅನುಸರಿಸಿ ಪ್ರಥಮದಲ್ಲಿ Beneficiary ID ಪಡೆಯಬೇಕಾಗುತ್ತದೆ.



ಸೆಪ್ಟೆಂಬರ್ ತಿಂಗಳ ಪಿಂಚಣಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಪಿಂಚಣಿದಾರರ ಐಡಿ ಅನ್ನು ಪಡೆದ ಬಳಿಕ ಈ ಕೆಳಗೆ ವಿವರಿಸಿರುವ ಹಂತಗಳನ್ನು ಪೂರ್ಣಗೊಳಿಸಿ ನಿಮಗೆ ಸೆಪ್ಟೆಂಬರ್ ತಿಂಗಳ ಪಿಂಚಣಿ ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು.

Step-1:https://dssp.karnataka.gov.in/dssp/Beneficiary_Status.aspx ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊದಲಿಗೆ ಪಿಂಚಣಿದಾರರ Beneficiary ID ಅನ್ನು ನಮೂದಿಸಬೇಕು ನಂತರ ಅಲ್ಲೇ ಕಾಣುವ ಕ್ಯಾಪ್ಚರ್ ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ಪುಟದಲ್ಲಿ ನಿಮಗೆ ಎಷ್ಟು ಹಣ ಜಮಾ ಅಗಿದೆ, ಯಾವ ದಿನದಂದು ಹಣ ವರ್ಗಾವಣೆ ಅಗಿದೆ, UTR ನಂಬರ್, ಬ್ಯಾಂಕ್ ಖಾತೆಯ ಮೊದಲ ಸಂಖ್ಯೆ, ಕೊನೆಯಲ್ಲಿ ಪಾವತಿ ಸ್ಥಿತಿ/Payment statu- "Success" ಎಂದು ತೋರಿಸುತ್ತದೆ.

ಇದನ್ನೂ ಓದಿ:  Free laptop scheme-2023: ಉಚಿತ ಲ್ಯಾಪ್‌ಟಾಪ್ ಪಡೆಯಲು ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಸೆ.27 ಕೊನೆಯ ದಿನ.

ಇದೆ ಪುಟದಲ್ಲಿ ಇಲ್ಲಿಯವರೆಗೆ ಎಷ್ಟು ಹಣ ಜಮಾ ಅಗಿದೆ ಅದರ ಕುರಿತು ಸಹ ಸಂಪೂರ್ಣ ವಿವರ ತೋರಿಸುತ್ತದೆ.

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಯೋಜನೆ ಇತಿಹಾಸ:

1880 ರ ವರ್ಷದಲ್ಲಿ ಚಾನ್ಸೆಲರ್ ಆಟೋವನ್ ಬಿಸ್ಮಾರ್ಕ, ಜರ್ಮನಿ ದೇಶದ ದುರ್ಬಲ ಮತ್ತು ಅಸಹಾಯಕ ಜನತೆಗಾಗಿ ಸಾಮಾಜಿಕ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿತ್ತು.ನಂತರ ಬೇರೆ ಯೂರೋಪಿಯನ್ ದೇಶಗಳು ತಮ್ಮ ದೇಶದ ನಾಗರಿಕರ ಹಿತಾಸಕ್ತಿಗಾಗಿ ಹಾಗೂ ಜನತೆಯ ಏಳಿಗೆಗಾಗಿ ಈ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡವು. ತದನಂತರದಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ(UK) ಅಧ್ಯಕ್ಷ ಫ್ರಾಂಕ್ಲಿನ್ ರೂಸ್ ವೆಲ್ಟ್, ಸಾಮಾಜಿಕ ಭದ್ರತಾ ಕಾನೂನನ್ನು 1935ನೇ ಇಸವಿಯಲ್ಲಿ ಜಾರಿಗೆ ತಂದರು.

ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಅಶಕ್ತ ವೃದ್ಧರ ರಕ್ಷಣೆಗಾಗಿ 1965 ನೇ ಇಸವಿಯಲ್ಲಿ ರೂ. 40/- ರಂತೆ ಮಾಸಿಕ ಪಿಂಚಣಿಯನ್ನು ನೀಡುತ್ತಾ ಬಂದಿದ್ದು. ಅಲ್ಲದೆ ಅಂಗವಿಕಲರ ಸಾಮಾಜಿಕ ಭದ್ರತೆಗಾಗಿ 1979ರಲ್ಲಿ ಹಾಗೂ ನಿರ್ಗತಿಕ ವಿಧವೆಯರ ರಕ್ಷಣೆಗಾಗಿ 1984ರಲ್ಲಿ ರೂ.40/-ರಂತೆ ಮಾಸಿಕ ಪಿಂಚಣಿಯನ್ನು ಜಾರಿಗೆ ತರಲಾಗಿತ್ತು.

ಗ್ಯಾರಂಟಿ ಯೋಜನೆಗಳ ಅಂಕಣಗಳು:

Gruhalakshmi status check: ನಿಮ್ಮ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿದ್ದರು, ಗೃಹಲಕ್ಷ್ಮಿ ಹಣ  ಜಮಾ ಆಗದಿದ್ದರೆ ಏನು ಮಾಡಬೇಕು?

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?

Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

Gruha Lakshmi : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department