Pension eKYC: ಇನ್ನು ಮುಂದೆ ಪ್ರತಿ ತಿಂಗಳು ಪಿಂಚಣಿ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಒಂದೊಮ್ಮೆ ಇ-ಕೆವೈಸಿ ಮಾಡಿಕೊಳ್ಳದಿದ್ದರೆ ಪಿಂಚಣಿ (Pension eKYC) ಹಣ ವರ್ಗಾವಣೆ ಸ್ಥಗಿತವಾಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ  ಸೇರಿದಂತೆ ಇತರೆ ಪಿಂಚಣಿ ಪಡೆಯುತ್ತಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ

ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ , ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಇತರೆ ಯೋಜನೆಗಳಡಿ ಮಾಸಿಕ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್(Aadhar link) ಮಾಡುವ ಮೂಲಕ ಇ-ಕೆವೈಸಿ ಮಾಡಿಕೊಳ್ಳುವಂತೆ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಒಂದೊಮ್ಮೆ ಇ-ಕೆವೈಸಿ ಮಾಡಿಕೊಳ್ಳದಿದ್ದರೆ ಪಿಂಚಣಿ (Pension eKYC) ಹಣ ವರ್ಗಾವಣೆ ಸ್ಥಗಿತವಾಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ  ಸೇರಿದಂತೆ ಇತರೆ ಪಿಂಚಣಿ ಪಡೆಯುತ್ತಿರುವವರು ತಪ್ಪದೇ ಈ ಮಾಹಿತಿ ತಿಳಿಯಿರಿ

ರಾಜ್ಯ ಸರಕಾರದಿಂದ ನಾಗರಿಕರಿಗೆ ಅರ್ಥಿಕ ನೆರವು ನೀಡುವ ದೇಸೆಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಗಳ ನಿರ್ದೇಶನಾಲಯದಡಿ ಮಾಸಿಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಪ್ರಸುತ್ತ ಈ  ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕ ವೃದ್ಧರು, ವಿಧವೆಯರು ಮತ್ತು ಅಂಗವಿಕಲರು ಹಾಗೂ ಅವಿವಾಹಿತ ಮಹಿಳೆಯರಿಗೆ ಅರ್ಥಿಕವಾಗಿ ಸಹಾಯ ನೀಡಲಾಗುತ್ತಿದೆ. 

ಇದನ್ನೂ ಓದಿ: Business loan- ಸ್ವಂತ ಬಿಸಿನೆಸ್ ಆರಂಭಿಸಲು ಸಬ್ಸಿಡಿಯಲ್ಲಿ ರೂ.2.00ಲಕ್ಷಗಳವರೆಗೆ ಸಾಲ ನೀಡಲು ಅರ್ಜಿ ಆಹ್ವಾನ!

ಇ-ಕೆವೈಸಿ ಏಕೆ ಮಾಡಿಸಬೇಕು?

ಸಂಬಂಧಪಟ್ಟ ಇಲಾಖೆಯಿಂದ ಕಾಲ ಕಾಲಕ್ಕೆ ಯೋಜನೆಯಡಿ ಹಣ ವರ್ಗಾವಣೆ ಮಾಡಲಾಗುತ್ತಿರುವ ಅರ್ಹ ಫಲಾನುಭವಿಗಳ ನೈಜತೆಯನ್ನು ದೃಡೀಕರಿಸಲು ಇ-ಕೆವೈಸಿ ಮಾಡಿಸಬೇಕಾಗುತ್ತದೆ.

ಇ-ಕೆವೈಸಿ/ಆಧಾರ್ ಜೋಡಣೆ ಎಲ್ಲಿ ಮಾಡಿಸಬೇಕು?

ಸದ್ಯ ಅಂಗವಿಕಲರ ಪಿಂಚಣಿ(Disability Pay), ವಿಧವಾ ವೇತನ , ಸಂಧ್ಯಾ ಸುರಕ್ಷಾ (Sandhya Suraksha Pay), (Manaswini Pay), ಮೈತ್ರಿ (Maitrhi Pay),ವೃದ್ಧರು, ಅಂಗವಿಕಲರು, ವೃದ್ಧಾಪ್ಯ ವೇತನ (Old Age Pay) ಪಡೆಯುತ್ತಿರುವ ಅನೇಕ ಜನರ ಆಧಾರ್ ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಅಗಿರುವುದಿಲ್ಲ ಇದರಿಂದ ಇಂತಹ ಫಲಾನುಭವಿಗಳಿಗೆ DBT ಮೂಲಕ ಹಣ ವರ್ಗಾವಣೆಗೆ ತೊಡಕು ಉಂಟಾಗಿರುವುದರಿಂದ ಮುಂದಿನ ತಿಂಗಳುಗಳಲ್ಲಿ ಪಿಂಚಣಿ ಹಣ ಪಡೆಯಲು ಇಂತಹ ಫಲಾನುಭವಿಗಳು ತಪ್ಪದೇ ನಿಮ್ಮ ಬ್ಯಾಂಕ್ ಖಾತೆಯಿರುವ ಶಾಖೆಗೆ ಭೇಟಿ ಮಾಡಿ NPCI ಮ್ಯಾಪಿಂಗ್ ಮಾಡಿಸಿಕೊಳ್ಳಿ.

ಇದನ್ನೂ ಓದಿ: ಒಂದು ಭಾರಿಯು ಅನ್ನಭಾಗ್ಯ ಯೋಜನೆಯಡಿ ಹಣ ಜಮಾ ಅಗಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ ಕ್ರಮಗಳು.

ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಅಗಿದಿಯೋ ಇಲ್ಲವೋ ಎಂದು ತಿಳಿಯುವ ವಿಧಾನ:

ಇಲ್ಲಿ ಕ್ಲಿಕ್ ಮಾಡಿ> DBT karnakataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ Aadhar number ಮತ್ತು OTP ನಮೂದಿಸಿ ಲಾಗಿನ್ ಅಗಿ aadhar and bank seeding details ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಅಧಾರ್ ಲಿಂಕ್ / NPCI mapping ಅಗಿದಿಯೋ ಇಲ್ಲವೋ ಎಂದು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬವುದು.

ಪಿಂಚಣಿ ಐಡಿ ಹಾಕಿ ನಿಮ್ಮ ಪಿಂಚಣಿ ಸ್ಥಿತಿ ತಿಳಿಯುವ ವಿಧಾನ:

ಇಲ್ಲಿ ಕ್ಲಿಕ್ ಮಾಡಿ> Pension Status Check ಕ್ಲಿಕ್ ಮಾಡಿ ಸಾಮಾಜಿಕ ಮತ್ತು ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಬಳಿಯಿರುವ ಮಂಜೂರಿ ಪತ್ರದ "Beneficiary ID" ಯನ್ನು ನಮೂದಿಸಿ ನಂತರ ಕ್ಯಾಪ್ಚರ್ ಕೋಡ ಹಾಕಿ "Search" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಿಂಚಣಿ ಸ್ಥಿತಿಯನ್ನು ತಿಳಿದುಕೊಳ್ಳಬವುದು.

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆ: 155245

ಪ್ರಮುಕ ಲಿಂಕ್ ಗಳು:

ಪಿಂಚಣಿ ಹಣ ವರ್ಗಾವಣೆ ಸ್ಥಿತಿ/Pension Status check> Click here
ಹಳ್ಳಿವಾರು ಪಿಂಚಣಿದಾರರ ಪಟ್ಟಿ/Village wise Pension Beneficiary list> Click here

ಇದನ್ನೂ ಓದಿ: How to do GruhaLakshmi eKYC- ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು eKYCಗಾಗಿ ವೆಬ್ಸೈಟ್ ಲಿಂಕ್ ಬಿಡುಗಡೆ! ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.