Pre Matric Scholarship- ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ!

2023-24 ಸಾಲಿಗೆ ಪ್ರೀ ಮೆಟ್ರಿಕ್/ಮೆಟ್ರಿಕ್ ಪೂರ್ವ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

2023-24 ಸಾಲಿಗೆ ಪ್ರೀ ಮೆಟ್ರಿಕ್/ಮೆಟ್ರಿಕ್ ಪೂರ್ವ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನಿಸಲಾಗಿದೆ.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಲ್ಲಿಸಲು SSP ತಂತ್ರಾಂಶದಲ್ಲಿ ಅವಕಾಶ ಮಾಡಿಕೊಡಲಾಗಿದ್ದು ಇದರ ಜೊತೆಗೆ ಈಗಾಗಲ್ಲೇ ಅರ್ಜಿ ಸಲ್ಲಿಸಿದ್ದರೆ ನವೀಕರಣಕ್ಕು ಅವಕಾಶವಿರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಹ ವಿದ್ಯಾರ್ಥಿಗಳು SSP website ಮೂಲಕ ಅಗತ್ಯ ದಾಖಲಾತಿ ಮಾಹಿತಿಯನ್ನು ಭರ್ತಿ ಮಾಡಿ ತಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬವುದಾಗಿದೆ. ಅರ್ಜಿ ಸಲ್ಲಿಸಲು ಯಾವೆಲ್ಲ ವಿಧಾನವನ್ನು ಅನುಸರಿಸಬೇಕು ಮತ್ತು ಅಗತ್ಯ ದಾಖಲಾತಿಗಳು ಯಾವುವು? ಸಂಬಂಧಪಟ್ಟ ಇಲಾಖೆಗಳ ಸಹಾಯವಾಣಿ ಸಂಖ್ಯೆಯನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PM-kisan amount- ಈ ರೀತಿ  ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!

Required Documents for Scholarship- ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:

1) ವಿದ್ಯಾರ್ಥಿಗಳ ಎಸ್.ಎ.ಟಿ.ಎಸ್ ಗುರುತಿನ ಸಂಖ್ಯೆ.
2) ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ ಅಥವಾ ಇಐಡಿ ಸಂಖ್ಯೆ.
3) ಮೊಬೈಲ್ ನಂಬರ್
4) ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

Pre Matric Scholarship 2023-24 Application- ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವ ವಿಧಾನ: 

ಮೆಟ್ರಿಕ್ ಪೂರ್ವ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕ ಅಗತ್ಯ ದಾಖಲಾತಿ ಮಾಹಿತಿಯನ್ನು ಹಾಕಿ ಅರ್ಜಿ ಸಲ್ಲಿಸಬವುದಾಗಿದೆ.

Step-1: ಮೊದಲಿಗೆ ಈ https://ssp.karnataka.gov.in/student ಲಿಂಕ್ ಮೇಲೆ ಕ್ಲಿಕ್ ಮಾಡಿ SSP ವೆಬ್ಸೈಟ್ ಭೇಟಿ ಮಾಡಬೇಕು ತದನಂತರ ಈಗಾಗಲೇ SSP ತಂತ್ರಾಂಶದಲ್ಲಿ ಖಾತೆ ಹೊಂದಿರುವವರು ನೇರವಾಗಿ usear Id ಮತ್ತು password ಮತ್ತು captcha code ನಮೂದಿಸ್ ಲಾಗಿನ್ ಅಗಬವುದು. ಮೊದಲ ಭಾರಿಗೆ ಈ ವೆಬ್ಸೈಟ್ ಭೇಟಿ ಮಾಡಿತ್ತಿರುವವರು "ವಿದ್ಯಾರ್ಥಿಗಳು ಖಾತೆಯನ್ನು ಸೃಜಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ "Enter Student SATS ID" ಹಾಕಿ usear Id ಮತ್ತು password ಅನ್ನು ಸೃಜಿನೆ ಮಾಡಿಕೊಳ್ಳಬೇಕು.

Step-2: ಲಾಗಿನ್ ಅದ ಬಳಿಕ ವಿದ್ಯಾರ್ಥಿಗಳ ಎಸ್.ಎ.ಟಿ.ಎಸ್ ಗುರುತಿನ ಸಂಖ್ಯೆ, ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ ಅಥವಾ ಇಐಡಿ ಸಂಖ್ಯೆ,ಮೊಬೈಲ್ ನಂಬರ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ವಿವರ ಭರ್ತಿ ಮಾಡಿ ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Gruhalakhsmi-2023: ಅರ್ಜಿ ಸಲ್ಲಿಸಿದರು ಗೃಹಲಕ್ಷ್ಮಿ ಹಣ ಜಮಾ ಅಗದಿರಲು ಕಾರಣವೇನು? ಇವರಿಗೆ ಹಣ ಯಾವಾಗ ಜಮಾ ಅಗಲಿದೆ!

ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:

ಅರ್ಜಿ ಸಲ್ಲಿಸಿದ ಬಳಿಕ ವಿದ್ಯಾರ್ಥಿಯ SATS ಗುರುತಿನ ಸಂಖ್ಯೆಯನ್ನು ನಮೂದಿಸಿ ನಂತರ ಆಯವ್ಯಯ ವರ್ಷ ಆಯ್ಕೆ ಮಾಡಿ ನಂತರ "ಹುಡುಕು" ಬಟನ್ ಮೇಲೆ ಕ್ಲಿಕ್ ಮಾಡಿ ನೀವು ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಬವುದು. Click here for Pre Matric Scholarship Status check

ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಶಾಲಾ ಕಾಲೇಜುಗಳ ಲಾಗಿನ್ ಮುಖಾಂತರ ಅನುಮೋದಿಸಿ ವಿಲೇವಾರಿ ಮಾಡಲಾಗುತ್ತದೆ. 

ವಿದ್ಯಾರ್ಥಿ ವೇತನದ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆಗಳು: 

  • ಸಮಾಜ ಕಲ್ಯಾಣ ಇಲಾಖೆ- 9008400010 / 9008400078
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ- 080-22261789
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- 080-22535931
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ- 080-22374836 / 8050770005

ಗ್ಯಾರಂಟಿ ಯೋಜನೆಗಳ ಅಂಕಣಗಳು:

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

Gruha Lakshmi : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department