ಉಚಿತ 30 ದಿನದ ಪಂಪ್ ಸೆಟ್ ವೈರಿಂಗ್ ಮತ್ತು ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ | Free Pump Set Wiring and Repair Training

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ಉಚಿತ ಪಂಪ್ ಸೆಟ್ ವೈರಿಂಗ್ ಮತ್ತು ರಿಪೇರಿ ತರಬೇತಿಗೆ(Pump Set Wiring and Repair Training) ಅರ್ಜಿ ಆಹ್ವಾನ ಮಾಡಲಾಗಿದೆ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾವತಿಯಿಂದ ಆಸಕ್ತ ಅಭ್ಯರ್ಥಿಗಳಿಂದ 30 ದಿನಗಳ ಉಚಿತ ಪಂಪ್ ಸೆಟ್ ವೈರಿಂಗ್ ಮತ್ತು ರಿಪೇರಿ ತರಬೇತಿಗೆ(Pump Set Wiring and Repair Training) ಅರ್ಜಿ ಆಹ್ವಾನ ಮಾಡಲಾಗಿದೆ.

ಗ್ರಾಮೀಣ ಭಾಗದ ನಿರೂದ್ಯೋಗಿ ಯುವಕರಿಗೆ ಸ್ವ-ಉದ್ಯೋಗ ಆರಂಭಿಸಲು ಸೂಕ್ತ ಮಾರ್ಗದರ್ಶನ ಮತ್ತು ಪ್ರಾರಂಭಿಕ ಹಂತದಲ್ಲಿ ಅರ್ಥಿಕ ಸಹಾಯಧನಕ್ಕೆ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಪಡೆಯಲು ಇತ್ಯಾದಿ ವಿಷಯಗಳ ಕುರಿತು ಅಧಿಕೃತ ಸಂಪನ್ಮೂಲ ವ್ಯಕ್ತಿಗಳಿಂದ ಈ ತರಬೇತಿಯಲ್ಲಿ ಅಗತ್ಯ ಮಾಹಿತಿಯನ್ನು ಕೊಡಲಾಗುತ್ತದೆ.

ಮಾರುಕಟ್ಟೆಯಲ್ಲಿ ಪಂಪ್ ಸೆಟ್ ವೈರಿಂಗ್ ಮತ್ತು ರಿಪೇರಿ ಕೆಲಸಕ್ಕೆ ಬಹು ಬೇಡಿಕೆ- Pump Set Wiring and Repair Training

ಮಾರುಕಟ್ಟೆಯಲ್ಲಿ ಪಂಪ್ ಸೆಟ್ ವೈರಿಂಗ್ ಮತ್ತು ರಿಪೇರಿ ಮಾಡುವವರಿಗೆ ಹೆಚ್ಚು ಬೇಡಿಕೆ ಇದೆ. ಏಕೆಂದರೆ ಕಳೆದ 5 ವರ್ಷಗಳಿಂದ ಗಣನೀಯ ಪ್ರಮಾಣದಲ್ಲಿ ಪಂಪ್ ಸೆಟ್ ಬಳಕೆ ಏರಿಕೆಯಾಗಿದ್ದು, ರೈತರು ಹೆಚ್ಚು ಹೆಚ್ಚು ಬೋರ್ವೆಲ್ ಕೋರೆಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪಂಪ್ ಸೆಟ್ ವೈರಿಂಗ್ ಮತ್ತು ರಿಪೇರಿ ಉದ್ಯಮದಲ್ಲಿ ಬಹು ಬೇಡಿಕೆ ಇರುತ್ತದೆ. ಈ ಕ್ಷೇತ್ರದಲ್ಲಿ ಉದ್ದಿಮೆಯನ್ನು ಪ್ರಾರಂಭಿಸಬೇಕು ಎಂದು ಆಸಕ್ತಿಯಿರುವವರು ಈ ಸುವರ್ಣ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಲಿ.

ಪಂಪ್ ಸೆಟ್ ವೈರಿಂಗ್ ಮತ್ತು ರಿಪೇರಿ ತರಬೇತಿ ಅವಧಿ:

ಈ ತರಬೇತಿಯು ದಿನಾಂಕ: 23 ಆಗಸ್ಟ್ 2023 ರಿಂದ ಆರಂಭವಾಗಿ 21 ಸಪ್ಟೆಂಬರ್ 2023ರಕ್ಕೆ ಮುಕ್ತಾಯವಾಗುತ್ತದೆ.

ತರಬೇತಿ ಸ್ಥಳ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮುಟಾ, ಉತ್ತರಕನ್ನಡ ಜಿಲ್ಲೆ, ಕರ್ನಾಟಕ.

ಇದನ್ನೂ ಓದಿ: ಗೃಹ ಲಕ್ಷ್ಮೀ ಯೋಜನೆಯಡಿ ಹಣ ವರ್ಗಾವಣೆಗೆ ದಿನಾಂಕ ಬದಲಾವಣೆ ಸಾಧ್ಯತೆ | Gruhalakshmi amount release date

ವಯಸ್ಸಿನ ಮಿತಿ:

ಈ ತರಬೇತಿಯಲ್ಲಿ 18 ರಿಂದ 45 ವರ್ಷದ ಒಳಗಿನವರು ಭಾಗವಹಿಸಬವುದು.

ತರಬೇತಿಯು ಸಂಪೂರ್ಣ ಉಚಿತ:

ಈ ತರಬೇತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೂ ವಸತಿ ಸಹಿತಿ ಊಟದ ವ್ಯವಸ್ಥೆಯು ಸಂಪೂರ್ಣ ಉಚಿತವಾಗಿರುತ್ತದೆ.

ಯಾವೆಲ್ಲ ವಿಷಯಗಳ ಕುರಿತು ತರಬೇತಿ ಪಡೆಯಬವುದು?

ಅಭ್ಯರ್ಥಿಗಳು ಈ ತರಬೇತಿ ಭಾಗವಹಿಸುವ ಮೂಲಕ ಪಂಪ್ ಸೆಟ್ ವೈರಿಂಗ್ ಮತ್ತು ರಿಪೇರಿ ಜೊತೆಗೆ ಗೃಹಬಳಕೆಯ ವಿದ್ಯುತ್ ಉಪಕರಣಗಳಾದ ಮಿಕ್ಸರ್, ಗ್ಯ್ರಾಂಡರ್, ಪ್ಯಾನ್ ರಿಪೇರಿ ಮಾಡುವುದರ ಕುರಿತು ತರಬೇತಿ ಪಡೆಯಬವುದು.

ಅರ್ಜಿ ಎಲ್ಲಿ ಸಲ್ಲಿಸಬೇಕು ಮತ್ತು ಅಗತ್ಯ ದಾಖಲಾತಿ ಮಾಹಿತಿ:

ಆಸಕ್ತರು 9538281989/ 9449860007/ 991678382 ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಅಗತ್ಯ ಮಾಹಿತಿ ತಿಳಿಸಿ ಅರ್ಜಿ ಸಲ್ಲಿಸಬವುದು.

ಗ್ರಾಮೀಣ ಭಾಗದ BPL ಕಾರ್ಡ ಹೊಂದಿರುವವರಿಗೆ ಮೊದಲ ಆದ್ಯತೆ ಇರುತದೆ. ಅಭ್ಯರ್ಥಿಗಳು ನಾಲ್ಕು ಪಾಸ್ ಪೋರ್ಟ ಸೈಜ್ ಪೋಟೋ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ, ಆಧಾರ್ ಕಾರ್ಡ, ಪಾನ್ ಕಾರ್ಡ ಇವುಗಳ ಎರಡು ಜೆರಾಕ್ಸ್ ಪ್ರತಿಯನ್ನು ತರಬೇತಿಗೆ ಹಾಜರಾಗುವ ಸಮಯದಲ್ಲಿ ತೆಗೆದುಕೊಂಡು ಹೋಗಬೇಕು.

ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ,ಕುಮಟಾ ವೆಬ್ಸೈಟ್ ಭೇಟಿ ಮಾಡಿ: https://synd-rseti-kumta.business.site/

ಇದನ್ನೂ ಓದಿ: ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವರ್ಷಕ್ಕೆ 20 ರೂ ಕಟ್ಟಿದರೆ 2 ಲಕ್ಷ ವಿಮಾ ಸೌಲಭ್ಯ | PMSBY Insurance Scheme