ಭಾರತೀಯ ರೈಲ್ವೆ ಇಲಾಖೆಯು ಪ್ರತಿ ವರ್ಷವೂ ನಿರುದ್ಯೋಗಿಗಳಿಗೆ ಹಲವು ಉದ್ಯೋಗವಕಾಶಗಳನ್ನು ನೀಡುತ್ತಿದ್ದು 1,376 ಅರೆವೈದ್ಯಕೀಯ ಹುದ್ದೆಗಳ ನೇಮಕಾತಿಯ(Railway job application-2024) ಜೊತೆಗೆ ಇದೀಗ ಮತ್ತೆ ಭರ್ಜರಿ 8,113 ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ.
ಚೀಪ್ ಕಮರ್ಷಿಯಲ್ ಕಂ ಟಿಕೇಟ್ ಸೂಪರ್ವೈಸರ್, ಸ್ಟೇಷನ್ ಮಾಸ್ಟರ್, ಕ್ಲರ್ಕ್ ಹುದ್ದೆಗಳು ಸೇರಿದಂತೆ ವಿವಿಧ 8,113 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಒಟ್ಟು ಹುದ್ದೆಗಳಲ್ಲಿ 496 ಹುದ್ದೆಗಳನ್ನು ಕರ್ನಾಟಕ ರಾಜ್ಯಕ್ಕೆ ಮೀಸಲಿಡಲಾಗಿದೆ.
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು, ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ, ಹುದ್ದೆಗಳ ವಿವರ ಹಾಗೂ ನೇಮಕಾತಿಯ ವಿವಿಧ ವಿವರವನ್ನು ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: labour card- ಕಾರ್ಮಿಕ ಕಾರ್ಡ ನೋಂದಣಿಗೆ ವೆಬ್ಸೈಟ್ ಲಿಂಕ್ ಬಿಡುಗಡೆ!
Railway Department Job Notification 2024 – ಹುದ್ದೆಗಳ ವಿವರ :
• ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ – 1,736 ಹುದ್ದೆಗಳು
• ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 732 ಹುದ್ದೆಗಳು
• ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ – 1,507 ಹುದ್ದೆಗಳು
• ಗೂಡ್ಸ್ ಟ್ರೈನ್ ಮ್ಯಾನೇಜರ್ – 3,144 ಹುದ್ದೆಗಳು
• ಸ್ಟೇಷನ್ ಮಾಸ್ಟರ್ – 994 ಹುದ್ದೆಗಳು
Education Qualification-ಹುದ್ದೆಗಳಿಗೆ ಅನುಗುಣವಾಗಿ ನಿಗದಿಸಿದ ಶೈಕ್ಷಣಿಕ ಅರ್ಹತೆಗಳು :
ಚೀಪ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್ ಹುದ್ದೆಗಳು, ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ ಹುದ್ದೆಗಳು, ಗೂಡ್ಸ್ ಟ್ರೈನ್ ಮ್ಯಾನೇಜರ್ ಹುದ್ದೆಗಳು, ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಮುಗಿಸಿದ್ದರೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ ಟೈಪಿಸ್ಟ್ ಕೆಟಗರಿಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಕಂಪ್ಯೂಟರ್ ಟೈಪಿಂಗ್ ಮಾಡುವ ಜ್ಞಾನ ಹೊಂದಿರುವುದು ಕಡ್ಡಾಯವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Union Bank Apprenticeship- ಯೂನಿಯನ್ ಬ್ಯಾಂಕ್ ನಲ್ಲಿ ಪದವಿ ಮುಗಿಸಿದವರಿಗೆ ಸಂಬಳದ ಜೊತೆಗೆ ಉದ್ಯೋಗ ತರಬೇತಿ!
Age limit-ವಯೋಮಿತಿ ವಿವರ:-
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು 18 ರಿಂದ 36 ವರ್ಷದ ಒಳಗಿನ ಅಭ್ಯರ್ಥಿಗಳ ಮಾತ್ರ ಅರ್ಹರಿರುತ್ತಾರೆ. ಸಾಮಾನ್ಯವಾಗಿ ಎಲ್ಲಾ ನೇಮಕಾತಿಗೆ ನೀಡುವಂತೆ ವರ್ಗಗಳಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಇರಲಿದೆ.
Application fee-ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ:-
• ಮೀಸಲಾತಿ ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.250
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 500
ನೇಮಕಾತಿ ಪ್ರಕ್ರಿಯೆಯಲ್ಲಿ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ ₹29,200/- ರಿಂದ ₹35,400/- ರವರೆಗೆ ಹುದ್ದೆಗಳಿಗೆ ಅನುಗುಣವಾಗಿ ವೇತನವು ಸಿಗಲಿದೆ.
ಇದನ್ನೂ ಓದಿ: Mission Vatsalya Yojana- ಈ ರೀತಿಯ ಮಕ್ಕಳಿಗೆ ಈ ಯೋಜನೆಯಡಿ ಸಿಗುತ್ತೆ ವರ್ಷಕ್ಕೆ ರೂ 48,000 ಸಾವಿರ!
ಅರ್ಜಿ ಸಲ್ಲಿಸಲು ಸಪ್ಟೆಂಬರ್ 14, 2024 ರಿಂದ ಆರಂಭವಾಗಿದ್ದು ಅಕ್ಟೋಬರ್ 15, 2024ರ ವರೆಗೆ ಅವಕಾಶ ನೀಡಲಾಗಿದೆ. ಅರ್ಹರಿರುವ ಎಲ್ಲಾ ಅಭ್ಯರ್ಥಿಗಳು ನಿಗದಿತ ಈ ಕೊನೆಯ ದಿನಾಂಕದ ಒಳಗಾಗಿಯೇ ಅರ್ಜಿ ಸಲ್ಲಿಸಬೇಕು.
Useful webside links-ನೇಮಕಾತಿಯ ಪ್ರಮುಖ ಲಿಂಕುಗಳು :
• ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ – www.rrbbnc.gov.in
• ಅಧಿಕೃತ ಪ್ರಕಟಣೆ – Download Now
ಇದನ್ನೂ ಓದಿ: Guest lecturer jobs in bangalore- ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ!