Raita vidya nidhi scholarship- ಈ ವರ್ಗದ ಮಕ್ಕಳಿಗೂ ರೈತ ವಿದ್ಯಾನಿಧಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ(Raita vidya nidhi scholarship yojana) ಸೌಲಭ್ಯ ಪಡೆಯಲು ಅನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

Raita vidya nidhi scholarship- ಈ ವರ್ಗದ ಮಕ್ಕಳಿಗೂ ರೈತ ವಿದ್ಯಾನಿಧಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ!
Raita vidya nidhi scholarship application

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ(Raita vidya nidhi scholarship yojana) ಸೌಲಭ್ಯ ಪಡೆಯಲು ಅನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದ ಒಳಗಾಗಿ SSP ವೆಬ್ಸೈಟ್ ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯಡಿ(Raita vidya nidhi) ವಿದ್ಯಾರ್ಥಿವೇತನ ಪಡೆದುಕೊಳ್ಳಬಹುದು. ಮೊದಲು ಕೃಷಿ ಭೂಮಿ ಹೊಂದಿರುವ ರೈತರ ಮಕ್ಕಳಿಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು ನಂತರ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ಸಹ ಈ ಯೋಜನೆಯಡಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿವೇತನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಕೆ ವಿಧಾನ ಹೇಗಿರುತ್ತದೆ? ಅಗತ್ಯ ದಾಖಲಾತಿಗಳೇನು? ಈ ಯೋಜನೆಯ ಮಾರ್ಗಸೂಚಿ ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: PM-kisan-2024: ಕಿಸಾನ್ ಸಮ್ಮಾನ್ ರೂ 2,000 ಪಡೆಯಲು ಅರ್ಹರಿರುವ ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ!

Raita vidya nidhi scholarship scheme- ಈ ವರ್ಗದ ಮಕ್ಕಳಿಗೂ ರೈತ ವಿದ್ಯಾನಿಧಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ:

2023-24 ನೇ ಸಾಲಿನಲ್ಲಿ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಹಾಗೂ ಭೂರಹಿತ ಕೃಷಿ ಕಾರ್ಮಿಕರ ವಿದ್ಯಾನಿಧಿ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಲು ಕರ್ನಾಟಕ ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನು ಹೊರಡಿಸಿದೆ.

ಮಾರ್ಗಸೂಚಿ ಅನ್ವಯ ಸಾಮಾನ್ಯ ವರ್ಗಕ್ಕೆ ಸೇರಿದ ಮತ್ತು ಇತರೆ ಯಾವುದೇ ಇಲಾಖೆಯ (ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಇತ್ಯಾದಿ) ಶಿಷ್ಯ ವೇತನವನ್ನು ಪಡೆಯದೇ ಇರುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ (SSP)ಸಲ್ಲಿಸಬಹುದಾಗಿದೆ. 

ರೈತರು ಹಾಗೂ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದ ವಾರ್ಷಿಕ ಆದಾಯ ರೂ.2.50,000/-(ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳು) ಮೀರದಿರುವ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.

ಇದನ್ನೂ ಓದಿ: Horticulture training- 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ! ರೂ 1,750 ಮಾಸಿಕ ಶಿಷ್ಯವೇತನ.

Raita vidya nidhi application- ಎಲ್ಲಿ ಅರ್ಜಿ ಸಲ್ಲಿಸಬೇಕು?
 
ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ (SSP) ವಿದ್ಯಾರ್ಥಿಗಳ ಲಾಗಿನ್ ನಲ್ಲಿ ತಮ್ಮ ಪ್ರಮಾಣ ಪತ್ರಗಳ ಸಮೇತ ಅರ್ಜಿ ಸಲ್ಲಿಸಲು ಫೆಬ್ರವರಿ 29,2024 ಕೊನೆಯ ದಿನವಾಗಿದೆ. ಉಳಿದಂತೆ ಈ ಹಿಂದಿನ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಅರ್ಹ ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಾನಿಧಿ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Last date for Raita vidya nidhi- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಅರ್ಜಿ ಸಲ್ಲಿಸಲು 29 ಫೆಬ್ರವರಿ 2024 ಕೊನೆಯ ದಿನವಾಗಿದೆ.

ಇದನ್ನೂ ಓದಿ: Senior citizen bus pass- ಹಿರಿಯ ನಾಗರಿಕರಿಗೆ ರಿಯಾಯಿತಿ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

Raita vidya nidhi scholarship details-ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ ಯಾವ ಕೋರ್ಸ್ ಗೆ ಎಷ್ಟು ನೀಡಲಾಗುತ್ತದೆ:

1) 8,9,10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ರೂ 2,000.

2) ಪಿಯುಸಿ/ಐಟಿಐ/ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರೂ 2,500 ವಿದ್ಯಾರ್ಥಿನಿಯರಿಗೆ ರೂ 3,000.

3) ಬಿ.ಎ/ಬಿ.ಎಸ್.ಸಿ/ಬಿ.ಕಾಂ ಇನ್ನತರೆ ಪದವಿ ವಿದ್ಯಾರ್ಥಿಗಳಿಗೆ ರೂ 5,000 ವಿದ್ಯಾರ್ಥಿನಿಯರಿಗೆ ರೂ 5,500.

4) ಎಲ್.ಎಲ್.ಬಿ/ಪ್ಯಾರಾಮೆಡಿಕಲ್/ಬಿ.ಫಾರ್ಮ್/ನರ್ಸಿಂಗ್ ಇನ್ನಿತರೆ ವೃತಿಪರ ಕೋರ್ಸುಗಳಿಗೆ ವಿದ್ಯಾರ್ಥಿಗಳಿಗೆ ರೂ 7,500 ವಿದ್ಯಾರ್ಥಿನಿಯರಿಗೆ ರೂ 8,000.

5) ಎಂ.ಬಿಬಿ.ಎಸ್/ಬಿ.ಇ/ಬಿ.ಟೆಕ್/ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸುಗಳಿಗೆ ವಿದ್ಯಾರ್ಥಿಗಳಿಗೆ ರೂ 10,000 ವಿದ್ಯಾರ್ಥಿನಿಯರಿಗೆ ರೂ 11,000.

ಇದನ್ನೂ ಓದಿ: Yashaswini card- ಯಶಸ್ವಿನಿ ಕಾರ್ಡ ಮಾಡಿಸಿಕೊಳ್ಳುವವರಿಗೆ ಇದು ಕೊನೆಯ ಅವಕಾಶ! 5 ಲಕ್ಷ ಉಚಿತ ನಗದು ರಹಿತ ಚಿಕಿತ್ಸೆ.

Raita vidya nidhi Application link- ಈ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಲು ವಿಧಾನ:

ವಿದ್ಯಾರ್ಥಿಗಳು ತಮ್ಮ ತಂದೆ/ತಾಯಿ ಅಥವಾ ಯಾರ ಹೆಸರಿನಲ್ಲಿ ಜಮೀನು ಇರುತ್ತದೆಯೋ ಅವರು ಪ್ರೂಟ್ಸ್(Fruits-https://fruits.karnataka.gov.in/) ತಂತ್ರಾಂಶದಲ್ಲಿ ನೊಂದಣಿಯಾಗಿ  FID ಸಂಖ್ಯೆಯನ್ನು ಹೊಂದಿರಬೇಕು ಜೊತೆಗೆ ಪಡಿತರ ಚೀಟಿ ವಿತರಿಸುವ ಕುಟುಂಬ ರ್ಪೋಟಲ್(Kutumba-https://kutumba.karnataka.gov.in/kn/Index) ನಲ್ಲಿ ನೊಂದಣಿಕೊಂಡು ರಾಜ್ಯ ವಿದ್ಯಾರ್ಥಿ ವೇತನ(SSP Portal- https://ssp.postmatric.karnataka.gov.in/) ತಂತ್ರಾಂಶದಲ್ಲಿ ವಿದ್ಯಾರ್ಥಿಗಳು ನೊಂದಣಿಯಾಗಿರಬೇಕು.

ಭೂರಹಿತ ಕೃಷಿ ಕಾರ್ಮಿಕರು ತಂದೆ ಅಥವಾ ತಾಯಿ ಪ್ರೂಟ್ಸ್(Fruits-https://fruits.karnataka.gov.in/) ತಂತ್ರಾಂಶದಲ್ಲಿ ನೊಂದಣಿಯಾಗಿರಬೇಕು ಮತ್ತು ನರೇಗಾ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರಬೇಕು.

ಈ ಯೋಜನೆಯಡಿ ವಿಧ್ಯಾರ್ಥಿ ವೇತನ ಪಡೆಯಲು ಯಾವುದೇ ಪ್ರತ್ಯೇಕ   ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ ರಾಜ್ಯ ವಿದ್ಯಾರ್ಥಿ ವೇತನ(SSP Portal) ತಂತ್ರಾಂಶ ಹಾಗೂ ಕೃಷಿ ಇಲಾಖೆಯಲ್ಲಿ ರೈತರು ನೋಂದಾವಣೆಯಾಗಿರುವ ಪ್ರೂಟ್ಸ್(Fruits) ತಂತ್ರಾಂಶ ಮತ್ತು ಪಡಿತರ ಚೀಟಿ ವಿತರಿಸುವ ಕುಟುಂಬ ರ್ಪೋಟಲ್ ಈ ಮೂರು ತಂತ್ರಾಂಶಗಳ ದತ್ತಾಂಶದ ಸಂಗ್ರಹಿಸಿ ಅರ್ಹ ಪಲಾನುಭಾವಿಗಳಿಗೆ ನೇರವಾಗಿ ತಮ್ಮ ಖಾತೆಗೆ ಹಣ ವರ್ಗವಾಣೆ ಮಾಡಲಾಗುತ್ತದೆ. 

ಇದನ್ನೂ ಓದಿ: PM kisan 16th installment- ಪಿ ಎಂ ಕಿಸಾನ್ ಯೋಜನೆಯ 16ನೇ ಕಂತಿನ ರೂ 2,000 ಈ ದಿನ ರೈತರ ಖಾತೆಗೆ ಜಮಾ ಅಗಲಿದೆ! ಇಲ್ಲಿದೆ ಅರ್ಹ ರೈತರ ಪಟ್ಟಿ ನೋಡಲು ವೆಬ್ಸೈಟ್ ಲಿಂಕ್. 

ಹೆಚ್ಚಿನ ಮಾಹಿತಿಗಾಗಿ:

Raita vidya nidhi scholarship helpline- ರೈತ ವಿದ್ಯಾನಿಧಿ ಕೃಷಿ ಇಲಾಖೆ ಸಹಾಯವಾಣಿ: 1800 425 3553
ರೈತ ವಿದ್ಯಾನಿಧಿಗೆ ಅರ್ಜಿ ಸಲ್ಲಿಸಲು SSP Portal- Click here
SSP ಪೋರ್ಟಲ್ ನಲ್ಲಿ ಖಾತೆಗೆ ರಚನೆ ಮಾಡಿಕೊಳ್ಳಲು ಬಳಕೆದಾರ ಕೈಪಿಡಿ: Download Now