Ration Card Update- ರೇಷನ್ ಕಾರ್ಡ ತಿದ್ದುಪಡಿ ಕುರಿತು ಸಿಹಿ ಸುದ್ದಿ ನೀಡಿದ ರಾಜ್ಯ ಸರಕಾರ!

August 24, 2023 | Siddesh

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಈ ಹಿಂದೆ ಪಡಿತರ ಚೀಟಿ ತಿದ್ದುಪಡಿ(Ration card) ಮತ್ತು ಕುಟುಂಬದ ಯಜಮಾನಿ ಹೆಸರು ಬದಲಾವಣೆಗೆ ಆಗಸ್ಟ್ 21 ಕೊನೆಯ ದಿನಾಂಕ ಎಂದು ಆದೇಶ ಹೊರಡಿಸಲಾಗಿತ್ತು.

ಆದರೆ ಈಗ ರೇಷನ್ ಕಾರ್ಡ ತಿದ್ದುಪಡಿಗೆ ಹೆಚ್ಚುವರಿ 10 ದಿನಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಪ್ರಕಟಣೆಯನ್ವಯ ಸಾರ್ವಜನಿಕರು ಪಡಿತರ ಚೀಟಿ ತಿದ್ದುಪಡಿ ಮತ್ತು ಕುಟುಂಬದ ಯಜಮಾನಿ ಬದಲಾವಣೆಗೆ ಅರ್ಜಿ ಸಲ್ಲಿಸಲು  01 ಸೆಪ್ಟಂಬರ್  ರಿಂದ 10 ಸೆಪ್ಟಂಬರ್ ರವರೆಗೆ ಅವಕಾಶ ಮಾಡಿಲಾಗಿದೆ.

ದಿನಾಂಕ ವಿಸ್ತರಣೆಗೆ ಕಾರಣಗಳು ಹೀಗಿವೆ:

ಅತೀ ಹೆಚ್ಚು ಸಂಖ್ಯೆಯಲ್ಲಿ ಸಾರ್ವಜನಿಕರು ತಿದ್ದುಪಡಿ ಪಡಿಕೊಳ್ಳುವುದು ಇರುವುದರಿಂದ ಈ ಹಿಂದೆ ನಿಗದಿಪಡಿಸಿದ 4 ದಿನದ ಕಾಲಾವಕಾಶದಲ್ಲಿ ಸರ್ವರ್ ಸಮಸ್ಯೆಯಿಂದ ಅನೇಕ ಜನರಿಗೆ ಇನ್ನು ಅರ್ಜಿ ಸಲ್ಲಿಸಲು ಅಗದಿರುದರಿಂದ ಹೆಚ್ಚುವರಿ 10 ದಿನ ನೀಡಲಾಗಿದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಜಿದಾರರು ಅಗತ್ಯ ದಾಖಲೆಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್(Grama one) ಅಥವಾ ಸಿ.ಎಸ್.ಸಿ(CSC) ಕೇಂದ್ರ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು. ಈ ಕೇಂದ್ರಗಳು ಬೆಳಗ್ಗೆ 9-30 ರಿಂದ ಸಂಜೆ 6-30 ರ ವರೆಗೆ ಕಾರ್ಯ ನಿರ್ವಹಿಸುತ್ತವೆ ಗ್ರಾಮ್ ಒನ್ ಸ್ವಲ್ಪ ಹೆಚ್ಚಿನ ಸಮಯದವರೆಗೆ ಸಹ ಕಾರ್ಯನಿರ್ವಹಿಸುತ್ತವೆ.

ಇದನ್ನೂ ಓದಿ: Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

ನೀವು ಸಲ್ಲಿಸಿದ ಅರ್ಜಿಯನ್ನು ಚೆಕ್ ಮಾಡುವ ವಿಧಾನ ಹೇಗೆ?

ನೀವು ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಹಾಕಲಾಗಿದಿಯೇ? ಅದರ ಸ್ಥಿತಿಯನ್ನು ಹೇಗೆ ಪರಿಶೀಲಿಸಬೇಕು? ಯಾವ ವೆಬ್ಸೈಟ್ ಭೇಟಿ ಮಾಡಬೇಕು?

Step-1: ಅರ್ಜಿದಾರರು ತಮ್ಮ ಅರ್ಜಿಯ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಈ ಲಿಂಕ್ https://ahara.kar.nic.in/lpg/ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ಜಾಲತಾಣ ಭೇಟಿ ಮಾಡಬೇಕು.

Step-2: ನಂತರ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ತದನಂತರ "ಪಡಿತರ ಚೀಟಿಯ ಬದಲಾವಣೆ ಕೋರಿಕೆಯ ಸ್ಥಿತಿ" ಕ್ಲಿಕ್ ಮಾಡಿ "Ration card number"  ಮತ್ತು "Akcnowledgment No"(ಅರ್ಜಿಯ ಸ್ವೀಕೃತಿ ಸಂಖ್ಯೆ) ಹಾಕಿ "GO" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಯಶ್ವಿಸಿಯಾಗಿ ಸಲ್ಲಿಕೆ ಆಗಿದಿಯೋ ಇಲ್ಲವೋ? ಎಂದು ನಿಮ್ಮ ಅರ್ಜಿಯ ಸ್ಥಿತಿ ಪರಿಶೀಲನೆ ಮಾಡಿಕೊಳ್ಳಬವುದು. 

ಗಮನಿಸಿ: ಈ ವೆಬ್ಸೈಟ್ ಬೆಳಗ್ಗೆ 8-00 ರಿಂದ ರಾತ್ರಿ 8-00 ಗಂಟೆಯ ವರೆಗೆ ಮಾತ್ರ ತೆರೆದಿರುತ್ತದೆ. ಇದನ್ನು ಹೊರತುಪಡಿಸಿ ಬಾಕಿ ಸಮಯದಲ್ಲಿ ಸ್ಥಗಿತಗೊಳಿಸಲಾಗಿರುತ್ತದೆ.

ಇನ್ನು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬವುದು:

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಈ https://ahara.kar.nic.in/
ಜಾಲತಾಣ ಭೇಟಿ ಮಾಡಿ ನಿಮ್ಮ ಪಡಿತರ ಚೀಟಿ ಕುರಿತು ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲಿ ಕುಳಿತು ತಿಳಿದುಕೊಳ್ಳಬವುದಾಗಿದೆ.

ಈ ಅಂಕಣಗಳನ್ನು ಓದಿ:- ರೇಷನ್ ಕಾರ್ಡ ಕುರಿತು ನಮ್ಮ ಪುಟದ ಇತರೆ ಅಂಕಣಗಳು:

WhatsApp Group Join Now
Telegram Group Join Now
Share Now: