Ration card Status check- ಪಡಿತರ ಚೀಟಿ ತಿದ್ದುಪಡಿಗೆ ಬರೊಬ್ಬರಿ 3.18 ಲಕ್ಷ ಅರ್ಜಿಯಲ್ಲಿ 93 ಸಾವಿರ ತಿರಸ್ಕಾರ!ಅರ್ಜಿ ಸ್ಥಿತಿ ಚೆಕ್ ಮಾಡಲು ಇಲ್ಲಿದೆ ವೆಬ್ಸೈಟ್ ಲಿಂಕ್.

Ration card Status check: ರಾಜ್ಯ ಸರಕಾರದಿಂದ ನೂತನವಾಗಿ ಜಾರಿಯಗಿರುವ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಪರಿಣಾಮ ಚಾಲ್ತಿಯಲ್ಲಿರುವ ಕಾರ್ಡ್‌ಗಳ ತಿದ್ದುಪಡಿಗೆ ಅರ್ಜಿಗಳ ಮಹಾಪೂರವೇ ಹರಿದು ಬಂದಿದ್ದು, ಒಂದೇ ತಿಂಗಳಲ್ಲಿ 3.18 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ಇದಲ್ಲಿ ಅನರ್ಹ 93 ಸಾವಿರ ಅರ್ಜಿಗಳು ತಿರಸ್ಕಾರವಾಗಿವೆ.

ರಾಜ್ಯ ಸರಕಾರದಿಂದ ನೂತನವಾಗಿ ಜಾರಿಯಗಿರುವ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಪರಿಣಾಮ ಚಾಲ್ತಿಯಲ್ಲಿರುವ ಕಾರ್ಡ್‌ಗಳ ತಿದ್ದುಪಡಿಗೆ ಅರ್ಜಿಗಳ ಮಹಾಪೂರವೇ ಹರಿದು ಬಂದಿದ್ದು, ಒಂದೇ ತಿಂಗಳಲ್ಲಿ 3.18 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ಇದಲ್ಲಿ ಅನರ್ಹ 93 ಸಾವಿರ ಅರ್ಜಿಗಳು ತಿರಸ್ಕಾರವಾಗಿವೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಕಳೆದ ತಿಂಗಳ ಕೊನೆಯ ವಾರ ಮತ್ತು ಈ ತಿಂಗಳ(Setpember-2023) ಮೊದಲ 2 ವಾರ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ಮಾಡಿಕೊಡಲಾಗಿತ್ತು, ಚಾಲ್ತಿಯಲ್ಲಿರುವ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ, ಹೊಸದಾಗಿ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ ಮಾಡುವುದು, ವಿಳಾಸ ಬದಲಾವಣೆ ಇತ್ಯಾದಿಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 

ದೊಡ್ಡ ಸಂಖ್ಯೆಯಲ್ಲಿ ಜನರು ಅರ್ಜಿ ಸಲ್ಲಿಸಲು ಗ್ರಾಮ್ ಒನ್ ,ಕರ್ನಾಟಕ ಒನ್ ಕೇಂದ್ರಗಳಿಗೆ ಬಂದ ಕಾರಣ ಸರ್ವರ್ ಸಮಸ್ಯೆ ತಲೆದೂರಿತ್ತು ಇದರ ನಡುವೆಯು  ಲಕ್ಷಾಂತರ ಅರ್ಜಿಗಳು ಬಂದಿವೆ ಎನ್ನುತ್ತಾಎ ಇಲಾಖೆ ಅಧಿಕಾರಿಗಳು.

ಇದನ್ನೂ ಓದಿ: ಒಂದು ಭಾರಿಯು ಅನ್ನಭಾಗ್ಯ ಯೋಜನೆಯಡಿ ಹಣ ಜಮಾ ಅಗಿಲ್ಲವೇ? ಇಲ್ಲಿದೆ ಸೂಕ್ತ ಪರಿಹಾರ ಕ್ರಮಗಳು.

ಇಷ್ಟು ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಗೆ ಕಾರಣ:

1) ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕುಟುಂಬದ ಯಜಮಾನಿ ಪಡಿತರ ಚೀಟಿಯ ಮುಖ್ಯಸ್ಥರರಾಗಿರಬೇಕಾಗುತ್ತದೆ ಈ ಕಾರಣ ಇಲ್ಲಿಯವರೆಗೆ ಪಡಿತರ ಚೀಟಿಯಲ್ಲಿ ಮುಖ್ಯಸ್ಥರ ಹೆಸರನ್ನು  ಗಂಡು ಮಕ್ಕಳ ಹೆಸರು ಇದ್ದರು ಕುಟುಂಬದ ಮಹಿಳೆ ಹೆಸರಿಗೆ ಬದಲಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿರುತ್ತಾರೆ.

2) ಹಾಲಿ ರೇಷನ್ ಕಾರ್ಡ ನಲ್ಲಿರುವ ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದರೆ ಅಂತವರು ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. 

3) ರೇಷನ್ ಕಾರ್ಡಗೆ ಕುಟುಂಬದ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಸಹ ಅವಕಾಶವಿದ ಕಾರಣದಿಂದ. ಒಟ್ಟಾರೆ ಗ್ಯಾರಂಟಿ ಯೋಜನೆಯ ಪರಿಣಾಮ ಅರ್ಜಿಗಳ ಮಹಾಪೂರವೇ ಹರಿದು ಬಂದಿದೆ.

Ration card Status check-ರೇಷನ್ ಕಾರ್ಡ ತಿದ್ದುಪಡಿ ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:

ಪಡಿತರ ಚೀಟಿ ತಿದ್ದುಪಡಿಗೆ ಮತ್ತು ಹೊಸ ಸದಸ್ಯರ ಸೇರ್ಪಡೆ ಅರ್ಜಿ ಸಲ್ಲಿಸಿದವರು ಅಹಾರ ಇಲಾಖೆ ಈ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬವುದಾಗಿದೆ.

Step-1: ಮೊದಲಿಗೆ ಈ ಲಿಂಕ್ https://ahara.kar.nic.in/lpg/ ಮೇಲೆ ಕ್ಲಿಕ್ ಮಾಡಿ ಅರ್ಜಿ ಸ್ಥಿತಿ ಚೆಕ್ ಮಾಡುವ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು ನಂತರ ಇಲ್ಲಿ 3 ಲಿಂಕ್ ಕಾಣುತ್ತವೆ ಇದರಲ್ಲಿ ನಿಮ್ಮ ಜಿಲ್ಲೆಯ ಹೆಸರು ಇರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Step-2: ತದನಂತರ "ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ" (Ration Card Amendment Request Status) ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಬಳಸಿ ನಿಮ್ಮ ಪಡಿತರ ಚೀಟಿಯ ಬದಲಾವಣೆ ಕೋರಿಕೆಯ/ತಿದ್ದುಪಡಿ ಅರ್ಜಿಯ ಸ್ಥಿತಿಯನ್ನು ನೋಡಬವುದು.

 

Step-3: "ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ನಿಮ್ಮ Ration card ನಂಬರ್ ಮತ್ತು ಅರ್ಜಿಯ  Akcnowledgment No/ Akcnowledgment ಸಂಖ್ಯೆಯನ್ನು ಹಾಕಿ "GO" ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಸಲ್ಲಿಸಿದ ಅರ್ಜಿಯ ಸ್ಥಿತಿ ವಿವರ ತೋರಿಸುತ್ತದೆ.

ಇದನ್ನೂ ಓದಿ: 10ನೇ ತರಗತಿ ಪಾಸ್ ಅದವರಿಗೆ ಅರಣ್ಯ ಇಲಾಖೆ ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ!

3.18 ಲಕ್ಷ ಅರ್ಜಿಯಲ್ಲಿ 93 ಸಾವಿರ ಅರ್ಜಿ ತಿರಸ್ಕಾರ:

ಒಟ್ಟು ಸಲ್ಲಿಕೆಯಾದ 3.18 ಲಕ್ಷ ಅರ್ಜಿಗಳಲ್ಲಿ 1.17 ಲಕ್ಷ ಅರ್ಜಿಗಳನ್ನು ಪುರಸ್ಕ್ರತಗೊಳಿಸಲಾಗಿದ್ದು ಉಳಿದ 93 ಸಾವಿರ ಅನರ್ಹ ಅರ್ಜಿಗಳು ತಿರಸ್ಕೃತವಾಗಿವೆ.

ತಿದ್ದುಪಡಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ:

ಸದ್ಯ ತಿದ್ದುಪಡಿಗೆ ಅರ್ಜಿ ಸಲ್ಲಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ತಿದ್ದುಪಡಿಗೆ ಅವಕಾಶ ನೀಡಲಾಗುವುದು ಎಂದು ಆಹಾರ ಇಲಾಖೆಯ ಸಾರ್ವಜನಿಕ ವಿತರಣೆ (ವಿಜಿಲೆನ್ಸ್) ಹೆಚ್ಚುವರಿ ನಿರ್ದೇಶಕ ಜ್ಞಾನೇಂದ್ರಕುಮಾರ್ ಗಂಗ್ವಾರ್ ಮಾಹಿತಿ ಹಂಚಿಕೊಂಡಿದ್ದಾರೆ.

ಗ್ಯಾರಂಟಿ ಯೋಜನೆಗಳ ಅಂಕಣಗಳು:

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

Gruha Lakshmi : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department