Ration card news: ಈ ಹಿಂದೆ ಆಹಾರ ಇಲಾಖೆಯಿಂದ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ವಿಭಾಗವಾರು ಒಟ್ಟು 9 ದಿನ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು ಅದರೆ ಈ ಭಾರಿಯು ಸರ್ವರ್ ಸಮಸ್ಯೆಯಿಂದ ಕೆಲವೇ ಗ್ರಾಹಕರಗೆ ಮಾತ್ರ ಅರ್ಜಿ ಹಾಕಲು ಸಾಧ್ಯವಾಗಿತ್ತು.
ಈ ಸಂಬಂಧ ಇನ್ನು ಅರ್ಜಿ ಸಲ್ಲಿಸಲು ಹೆಚ್ಚು ಜನರು ಇರುವುದರಿಂದ ಮತ್ತೊಮೆ ವಿಭಾಗವಾರು ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಯಾವ ಜಿಲ್ಲೆಗೆ ಯಾವ ದಿನಾಂಕ ನಿಗದಿ ಮಾಡಲಾಗಿದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಬೇಕಾಗುವ ದಾಖಲಾತಿಗಳೇನು? ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: October Pension amount-2023: 77.6 ಲಕ್ಷ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ಪಿಂಚಣಿ ಹಣ ಜಮೆ! ನಿಮಗೆ ಬಂತಾ ಚೆಕ್ ಮಾಡಿ.
ಕಲಬುರಗಿ ಸರ್ವರ್ ವಿಭಾಗ:
ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗ ಜಿಲ್ಲೆಗಳಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ದಿನಾಂಕ 16-10-2023 ರಿಂದ 18-10-2023 ರವರೆಗೆ ಅವಕಾಶ ಮಾಡಿಕೊಡಲಾಗಿದೆ.
ಬೆಳಗಾವಿ/ಮೈಸೂರು ಸರ್ವರ್ ವಿಭಾಗ:
ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರಕನ್ನಡ, ವಿಜಯಪುರ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ದಿನಾಂಕ 19-10-2023 ರಿಂದ 21-10-2023 ರವರೆಗೆ ಅವಕಾಶ ಮಾಡಿಕೊಡಲಾಗಿದೆ.
ತಿದ್ದುಪಡಿಗೆ ಸಾರ್ವಜನಿಕರು ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬವುದು:
> ಕರ್ನಾಟಕ ಒನ್(Karnataka one)
> ಬೆಂಗಳೂರು ಒನ್(Bengalore one)
> ಗ್ರಾಮ ಒನ್(Gram one)
ಯಾವೆಲ್ಲ ತಿದ್ದುಪಡಿಗೆ ಅರ್ಜಿ ಸಲ್ಲಿಸಬವುದು?
1) ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರು ಸೇರ್ಪಡೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬವುದು.
2) ) ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರು ತೆಗೆದುಹಾಕುವುದಕ್ಕೆ.
3) ರೇಷನ್ ಕಾರ್ಡ್ ವಿಳಾಸ ಬದಲಾವಣೆ ಮಾಡುವುದಕ್ಕೆ.
4) ರೇಷನ್ ಕಾರ್ಡ್ ನ ಕುಟುಂಬ ಮುಖ್ಯಸ್ಥರ ಬದಲಾವಣೆ ಕೋರಿ ಅರ್ಜಿ ಸಲ್ಲಿಸಬವುದು.
ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರಿಸಲು ಬೇಕಾಗುವ ದಾಖಲಾತಿಗಳೇನು?
1) 6 ವರ್ಷದ ಒಳಗಿನ ಮಗುವನ್ನು ಸೇರ್ಪಡೆ ಮಾಡಲು ಜನ್ಮ ದಾಖಲೆ(Birth certificate), ಆದಾರ್ ಕಾರ್ಡ್ ಪ್ರತಿ ಮತ್ತು ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು.
2) 6 ವರ್ಷದ ಮೇಲೆ ಇದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಆದಾರ ಕಾರ್ಡ್ ಪ್ರತಿ ಸಲ್ಲಿಸಬೇಕು.
ಇದನ್ನೂ ಓದಿ: sheep and goat training- ಶೇ 50% ಸಹಾಯಧನದಲ್ಲಿ ಕುರಿ-ಆಡು ಸಾಕಾಣಿಕೆ ಆರಂಭಿಸಲು ಇಲ್ಲಿದೆ ಸುವರ್ಣಾವಕಾಶ!