Ration eligible and illegible list: ಅಹಾರ ಇಲಾಖೆಯಿಂದ ಪಡಿತರ ಚೀಟಿಯ ಅರ್ಹ ಮತ್ತು ಅನರ್ಹ ಪಟ್ಟಿ ಬಿಡುಗಡೆ!

ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಜಿಲ್ಲಾವಾರು ಪ್ರತಿ ತಿಂಗಳ ರದ್ದಾದ ಪಡಿತರ ಚೀಟಿ ಪಟ್ಟಿಯನ್ನು (Ration card list) ಮತ್ತು ಅರ್ಹ ರೇಷನ್ ಕಾರ್ಡ ಪಟ್ಟಿಯನ್ನು ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಣೆ ಮಾಡಲಾಗಿದೆ.

ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಜಿಲ್ಲಾವಾರು ಪ್ರತಿ ತಿಂಗಳ ರದ್ದಾದ ಪಡಿತರ ಚೀಟಿ ಪಟ್ಟಿಯನ್ನು (Ration card list) ಮತ್ತು ಅರ್ಹ ರೇಷನ್ ಕಾರ್ಡ ಪಟ್ಟಿಯನ್ನು ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಣೆ ಮಾಡಲಾಗಿದೆ.

ಇದರಂತೆ ಈ ತಿಂಗಳ ಅರ್ಹ ಮತ್ತು ಅನರ್ಹ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು ಮನೆಯಲ್ಲೇ ಕುರಿತು ತಮ್ಮ ಮೊಬೈಲ್ ಮೂಲಕ ಆಹಾರ ಇಲಾಖೆಯ https://ahara.kar.nic.in ಈ ವೆಬ್ಸೈಟ್ ಭೇಟಿ ಮಾಡಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯೇ ಅಥವಾ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಬವುದು.

ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ಪಡಿತರ ಚೀಟಿಗೆ ಅನೇಕ ಜನ ನಕಲಿ ದಾಖಲೆಗಳನ್ನು ಸೃಷ್ಠಿಸಿ ಪಡಿತರ ಚೀಟಿ ಪಡೆಯಲು ಪ್ರಯನ್ನ ಮಾಡುತ್ತಿದ್ದು ಇದನ್ನು ನಿಯಂತ್ರಿಸಲು ಮತ್ತು ಈಗಾಗಲೇ ರೇಷನ್ ಕಾರ್ಡ ಪಡೆದು ಮಾರ್ಗಸೂಚಿ ಮೀರಿದ ಅನರ್ಹ ಗ್ರಾಹಕರ ದಾಖಲೆಗಳನ್ನು ಮರು ಪರಿಶೀಲನೆ ಮಾಡಿ ಆಹಾರ ಇಲಾಖೆಯಿಂದ ಪ್ರತಿ ತಿಂಗಳು  ಜಿಲ್ಲಾವಾರು ರೇಷರ್ ಕಾರ್ಡ ಪರಿಶೀಲನೆ ಮಾಡಿ ಅನರ್ಹ ರೇಷನ್ ಕಾರ್ಡಗಳನ್ನು ರದ್ದುಗೊಳಿಸಿ ಪಟ್ಟಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಣೆ ಮಾಡಲಾಗುತ್ತಿದೆ.

ರದ್ದಾದ ಪಟ್ಟಿಯಲ್ಲಿ ಹೆಸರಿರುವವರಿಗೆ ಸರಕಾರದಿಂದ ಪಡಿತರ ಚೀಟಿಗೆ ಸಿಗುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಕೆಳಗೆ ಪಡಿತರ ಚೀಟಿಯ ಅರ್ಹ ಮತ್ತು ಅನರ್ಹ ಪಟ್ಟಿಯನ್ನು ಹೇಗೆ ನೋಡಬವುದು ಎಂದು ವಿವರಿಸಲಾಗಿದೆ. ಈ ಮಾಹಿತಿ ಉಪಯುಕ್ತ ಎಂದು ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ 4 ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ.

ಇದನ್ನೂ ಓದಿ: Annabhagya September amount: ಅನ್ನಭಾಗ್ಯ ಯೋಜನೆ ಸೆಪ್ಟೆಂಬರ್ ತಿಂಗಳ ಹಣ ಬಿಡುಗಡೆ! ನಿಮ್ಮ ಖಾತೆಗೆ ಹಣ ಬಂದಿರುವುದನ್ನು ಚೆಕ್ ಮಾಡಿ.

Ration card ineligible list- ರದ್ದಾದ ಪಡಿತರ ಚೀಟಿ ಪಟ್ಟಿಯನ್ನು ಪಡೆಯುವ ವಿಧಾನ:

Step-1: ಮೊದಲಿಗೆ https://ahara.kar.nic.in/Home/EServices ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಜಾಲತಾಣ ಭೇಟಿ ಮಾಡಿ "ಇ-ಸೇವೆಗಳು" ವಿಭಾಗಕ್ಕೆ ಭೇಟಿ ಮಾಡಬೇಕು. ನಂತರ ಈ ಪೇಜ್ ನಲ್ಲಿ "ಇ-ಪಡಿತರ ಚೀಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕೆ ಇದೆ ಪುಟದಲ್ಲಿ ಕಾಣುವ "ರದ್ದುಗೊಳಿಸಲಾದ/ತಡೆಹಿಡಿಯಲಾದ ಪಟ್ಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ನಿಮ್ಮ ಜಿಲ್ಲೆ,ತಾಲ್ಲೂಕು,ತಿಂಗಳು, ವರ್ಷವನ್ನು ಆಯ್ಕೆ ಮಾಡಿಕೊಂಡು "GO" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಿಲ್ಲೆಯ ತಿಂಗಳುವರು ರದ್ದಾರ ಪಡಿತರ ಚೀಟಿ ಪಟ್ಟಿ ಗೋಚರಿಸುತ್ತದೆ.

ಇದನ್ನೂ ಓದಿ: PM-kisan amount- ಈ ರೀತಿ  ಸಂದೇಶ ಬಂದವರಿಗಿಲ್ಲಾ ಪಿ ಎಂ ಕಿಸಾನ್ ಯೋಜನೆ ಹಣ!

Ration card eligible list- ಅರ್ಹ ರೇಶನ್ ಕಾರ್ಡ ಪಟ್ಟಿಯನ್ನು ಪಡೆಯುವ ವಿಧಾನ:

Step-1: ಪ್ರಥಮದಲ್ಲಿ https://ahara.kar.nic.in/Home/EServices ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ಜಾಲತಾಣ ಭೇಟಿ ಮಾಡಿ "ಇ-ಸೇವೆಗಳು" ವಿಭಾಗಕ್ಕೆ ಭೇಟಿ ಮಾಡಬೇಕು. ತದನಂತರ ಈ ಪುಟದಲ್ಲಿ "ಇ-ಪಡಿತರ ಚೀಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.


Step-2: ನಂತರ ಇದೆ ಪೇಜ್ ನಲ್ಲಿ ಕಾಣುವ "ಹಳ್ಳಿ ಪಟ್ಟಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3:  ಇಲ್ಲಿ ಜಿಲ್ಲೆ,ತಾಲ್ಲೂಕು,ಗ್ರಾಮ ಪಂಚಾಯತ್,ಗ್ರಾಮ ವನ್ನು ಆಯ್ಕೆ ಮಾಡಿಕೊಂಡು "GO" ಬಟನ್ ಮೇಲೆ ಕ್ಲಿಕ್ ಮಾಡಿದರೆ ಹಳ್ಳಿವಾರು ಅರ್ಹ ಪಡಿತರ ಚೀಟಿ ಪಟ್ಟಿ ತೋರಿಸುತ್ತದೆ.

ರೇಷನ್ ಕಾರ್ಡ ರದ್ದಾಗಳು ಕಾರಣವೇನು?

1) ಆಹಾರ ಇಲಾಖೆಯಿಂದ ಜಾರಿಯಲ್ಲಿರುವ ಮಾರ್ಗಸೂಚಿಯನ್ನು ಪಾಲಿಸದೇ ಇರುವ ಫಲಾನುಭವಿಗಳ ರೇಷನ್ ಕಾರ್ಡ ಅನ್ನು ಪರಿಶೀಲಿಸಿ ಅನರ್ಹ ಕಾರ್ಡಗಳನ್ನು ರದ್ದು ಮಾಡಲಾಗಿದೆ.
ಪಡಿತರ ಚೀಟಿ ಕುರಿತು ಪ್ರಸುತ್ತ ಜಾರಿಯಲ್ಲಿರುವ ಆಹಾರ ಇಲಾಖೆಯ ಮಾರ್ಗಸೂಚಿಯನ್ನು ತಿಳಿಯಲು ಆಹಾರ ಇಲಾಖೆ https://ahara.kar.nic.in ವೆಬ್ಸೈಟ್ ಭೇಟಿ ಮಾಡಿ.

2) ಬಯೋಮೇಟ್ರಿಕ್ ಮಾಡಿಕೊಳ್ಳದೇ ಇರುವವರ ಅಥವಾ ಅರ್ಜಿ ಸಲ್ಲಿಸಿದ ನಂತರ ದಾಖಲಾತಿಗಳು ತಾಳೆ ಅಗದಿರುವರ ಅರ್ಜಿಗಳನ್ನು ಸಹ ರದ್ದು ಮಾಡಲಾಗಿರುತ್ತದೆ.

ಪ್ರಮುಖ ಲಿಂಕ್ ಗಳು:

Annabhagya DBT Status check: Click here
Gruhalakshmi application status check: Click here
Gruhajoyti yojana status check: Click here

ಗ್ಯಾರಂಟಿ ಯೋಜನೆಗಳ ಅಂಕಣಗಳು:

Gruhalakhsmi-2023: ಅರ್ಜಿ ಸಲ್ಲಿಸಿದರು ಗೃಹಲಕ್ಷ್ಮಿ ಹಣ ಜಮಾ ಅಗದಿರಲು ಕಾರಣವೇನು? ಇವರಿಗೆ ಹಣ ಯಾವಾಗ ಜಮಾ ಅಗಲಿದೆ!

Gruhalakshmi amount- ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬಂದಿರುವುದನ್ನು ಚೆಕ್ ಮಾಡುವುದು ಹೇಗೆ?

Anna bhagya DBT amount- 1.07 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಅನ್ನಭಾಗ್ಯ ಹಣ ವರ್ಗಾವಣೆ! ನಿಮಗೆ ಬಂತಾ? ಚೆಕ್ ಮಾಡಿ.

Gruha Lakshmi : ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.

Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

Electricity bill download: ಪ್ರತಿ ತಿಂಗಳ ಕರೆಂಟ್ ಬಿಲ್ ಅನ್ನು ನಿಮ್ಮ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಳ್ಳಬವುದು! ಇಲ್ಲಿದೆ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ | Release of canceled ration card list by food department