Scholarship application- ಕಾರ್ಮಿಕ ಮಂಡಳಿಯಿಂದ ರೂ. 10,000ರವರೆಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಯಿಂದ ವಿದ್ಯಾರ್ಥಿವೇತನ(Scholarship application) ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Scholarship application- ಕಾರ್ಮಿಕ ಮಂಡಳಿಯಿಂದ ರೂ. 10,000ರವರೆಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Scholarship application

ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ(Labour department) ವಿದ್ಯಾರ್ಥಿವೇತನ(Scholarship application) ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಾರ್ಮಿಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯವನ್ನು ಪ್ರತಿ ವರ್ಷ ಮಂಡಳಿಯಿಂದ ನೀಡಲಾಗುತ್ತಿದೆ.

ಅದರಂತೆ 2023-24 ನೇ ಸಾಲಿನಲ್ಲಿ ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನ ಸಹಾಯವನ್ನು(Education Assistance) ಪಡೆಯಲು ಎಲ್ಲಾ ಅರ್ಹ ಫಲಾನುಭವಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ (SSP)ದ ಮೂಲಕ ಅರ್ಜಿಯನ್ನು 31-05-2024 ರೊಳಗೆ ಸಲ್ಲಿಸತಕ್ಕದ್ದು ಎಂದು ಮಂಡಳಿಯಿಂದ ಪ್ರಕಟಣೆ ಹೊರಡಿಸಲಾಗಿದೆ. 

ಇದನ್ನೂ ಓದಿ: Milk Incentive-2024: ಹಾಲಿನ ಪ್ರೋತ್ಸಾಹ ಧನ ಅಕೌಂಟ್ ಗೆ ಜಮಾ ಅಗಿರುವುದನ್ನು ಹೇಗೆ ಚೆಕ್ ಮಾಡುವುದು?

ಇದನ್ನೂ ಓದಿ: Free sewing machine training- ಮಹಿಳೆಯರಿಗೆ 30 ದಿನ ಉಚಿತ ಹೊಲಿಗೆ ತರಬೇತಿ ಪಡೆಯಲು ಅರ್ಜಿ ಆಹ್ವಾನ!

2023-24 ನೇ ಸಾಲಿಗಾಗಿ ಈಗಾಗಲೇ ಎಸ್ ಎಸ್ ಪಿ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಪುನಃ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಕಾರ್ಮಿಕ ಮಂಡಳಿಯ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

2023-24 ನೇ ಸಾಲಿನಲ್ಲಿ ಅರ್ಹ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ(Labour department karnataka) ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನ ಸಹಾಯವನ್ನು ಎಸ್ ಎಸ್ ಪಿ ತಂತ್ರಾಂಶದ ಮೂಲಕ ನೀಡಲು ಅನುಕೂಲವಾಗುವಂತೆ ಮಂಡಳಿಯಲ್ಲಿ ನೋಂದಣಿಯಾಗಿರುವ ಎಲ್ಲಾ ಕಾರ್ಮಿಕರು https://kbocwwb.karnataka.gov.in ಲಿಂಕ್ ಅನ್ನು ಉಪಯೋಗಿಸಿಕೊಂಡು ಮಂಡಳಿಯ ತಂತ್ರಾಂಶದಲ್ಲಿ Already Existing Seva Sindhu Construction Worker / E-Karmika Construction Worker ಮತ್ತು ಉಲ್ಲೇಖ (Reference No.) ಸಂಖ್ಯೆಯನ್ನು ನಮೂದಿಸಿ ಆಧಾರ್ ಸಂಖ್ಯೆಯನ್ನು ಲಿಂಕ್ (ಸೀಡ್) ಮಾಡತಕ್ಕದ್ದು.

Link: https://kbocwwb.karnataka.gov.in/schemesHomePage

ಇದನ್ನೂ ಓದಿ: School admission- ಉಚಿತವಾಗಿ  12 ಸಾವಿರ ಸೀಟ್ ಗಳಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

NPCI mapping- ಆಧಾರ್ ಲಿಂಕ್ ಮಾಡಲು ಸೂಚನೆ:

ಮಂಡಳಿಯಿಂದ ಶೈಕ್ಷಣಿಕ ಧನ ಸಹಾಯವನ್ನು ಪಡೆಯಲು ಇದು ಆತ್ಮವಶ್ಯಕವಾಗಿರುವುದರಿಂದ ಈಗಾಗಲೇ ಆಧಾ‌ರ್ ಸಂಖ್ಯೆಯನ್ನು ಲಿಂಕ್ (Aadhar link) ಮಾಡದೇ ಇರುವ ಎಲ್ಲಾ ಕಾರ್ಮಿಕರು ಕಡ್ಡಾಯವಾಗಿ ದಿನಾಂಕ: 30-06-2024 ರೊಳಗಾಗಿ ಆಧಾರ್ ಸಂಖ್ಯೆಯನ್ನು ಲಿಂಕ್ (ಸೀಡ್) ಮಾಡತಕ್ಕದ್ದು.

ಇದಲ್ಲದೆ, ಎಲ್ಲಾ ನೋಂದಾಯಿತ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿ NPCI (National Payments Corporation of India) ಮ್ಯಾಪಿಂಗ್ ಮಾಡಿಸತಕ್ಕದ್ದು. ಆಧಾ‌ರ್ ಸೀಡ್ ಹಾಗೂ NPCI ಮಾಡಿಸದೇ ಇರುವ ಕಾರ್ಮಿಕರಿಗೆ ಶೈಕ್ಷಣಿಕ ಧನ ಸಹಾಯ ನೀಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಕಡ್ಡಾಯವಾಗಿ ಸೀಡಿಂಗ್ ಮಾಡಿಸತಕ್ಕದ್ದು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: Agriculture university courses- ಕೃಷಿ ವಿಶ್ವವಿದ್ಯಾನಿಲಯ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಸಲು ವಿಧಾನ:

ವಿದ್ಯಾರ್ಥಿಗಳು ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ SSP Portal ಅನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು 31 ಮೇ 2024 ಕೊನೆಯ ದಿನ!

Education Assistance details- ಮಂಡಳಿಯಿಂದ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ?

1) ಪ್ರೌಢಶಾಲೆಗಳಿಗೆ (8ನೇ ತರಗತಿಯಿಂದ 10ನೇ ತರಗತಿವರೆಗೆ)- ರೂ.3,000/- 
2) PUC/ITI/Dip./TCH ಕೋರ್ಸ್‌ ಗಳಿಗೆ- ರೂ. 4,000/- 
3) ಪದವಿ ಕೋರ್ಸ್‌ಗಳಿಗೆ- ರೂ. 5,000/- 
4) ಸ್ನಾತಕೋತ್ತರ ಕೋರ್ಸ್‌ಗಳಿಗೆ- ರೂ. 6,000/- 
5) ಎಂಜಿನಿಯರಿಂಗ್/ವೈದ್ಯಕೀಯ ಕೋರ್ಸ್‌ಗಳು- ರೂ. 10,000/- ನೀಡಲಾಗುತ್ತದೆ (ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 50% ಮತ್ತು SC/ST ವರ್ಗದ ಅಭ್ಯರ್ಥಿಗಳಿಗೆ 45% ಅಂಕಗಳನ್ನು ನಿಗದಿಪಡಿಸಲಾಗಿದೆ).

ಇದನ್ನೂ ಓದಿ: Revenue Department- ಕಂದಾಯ ಇಲಾಖೆಗೆ ಡಿಜಿಟಲ್ ಸ್ಪರ್ಶ! ಏನಿದು ನೂತನ ಮಾದರಿ? ಇಲ್ಲಿದೆ ಸಂಪೂರ್ಣ ವಿವರ.

ಹೆಚ್ಚಿನ ಮಾಹಿತಿಗಾಗಿ:

ಅಧಿಕೃತ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ: Click here
ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ (SSP): Apply Now

Labour department helpline number- ಕಾರ್ಮಿಕ ಇಲಾಖೆ ಸಹಾಯವಾಣಿ: 155124