Secondary agriculture-ಕೃಷಿ ಇಲಾಖೆಯಿಂದ ಶೇ 50 ಸಬ್ಸಿಡಿಯಲ್ಲಿ ನರ್ಸರಿ ಸೇರಿದಂತೆ ಹಲವು ಯೋಜನೆಗೆ ಅರ್ಜಿ ಆಹ್ವಾನ!

ಪ್ರಸ್ತುತ ವರ್ಷದಿಂದ ಕೃಷಿ ಜೊತೆಗೆ ಇತರ ಉಪಕಸುಬುಗಳನ್ನು ಉತೇಜನ ನೀಡಲು ಕೃಷಿ ಇಲಾಖೆಯಿಂದ "ಸೆಕೆಂಡರಿ ಕೃಷಿ ನಿರ್ದೇಶನಾಲಯ" ಎನ್ನುವ ಹೊಸ ವಿಭಾಗವನ್ನು ಜಾರಿಗೆ ತರಲಾಗಿದ್ದು ಈ ವಿಭಾಗದ ಮೂಲಕ 50% ಸಹಾಯಧನದಲ್ಲಿ ಅನೇಕ ಯೋಜನೆಗಳನ್ನು ಅನುಷ್ಥಾನ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ಪ್ರಸ್ತುತ ವರ್ಷದಿಂದ ಕೃಷಿ ಜೊತೆಗೆ ಇತರ ಉಪಕಸುಬುಗಳನ್ನು ಉತೇಜನ ನೀಡಲು ಕೃಷಿ ಇಲಾಖೆಯಿಂದ "ಸೆಕೆಂಡರಿ ಕೃಷಿ ನಿರ್ದೇಶನಾಲಯ" ಎನ್ನುವ ಹೊಸ ವಿಭಾಗವನ್ನು ಜಾರಿಗೆ ತರಲಾಗಿದ್ದು ಈ ವಿಭಾಗದ ಮೂಲಕ 50% ಸಹಾಯಧನದಲ್ಲಿ ಅನೇಕ ಯೋಜನೆಗಳನ್ನು ಅನುಷ್ಥಾನ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ.

ರೈತರು ಕೃಷಿಯಲ್ಲಿ ನಿರಂತರವಾಗಿ ಸ್ಥಿತ ಆದಾಯವನ್ನು ಪಡೆಯಲು ಏಕ ಬೆಳೆ ಅಥವಾ ಕೇವಲ ಒಂದೇ ಮೂಲದ ಆದಾಯದ ಮೇಲೆ ಹೆಚ್ಚು ಅವಲಂಬನೆ ಅಗಿರದೇ ಕೃಷಿ ಉಪಕಸುಬುಗಳಲ್ಲಿ ಸಹ ಹೆಚ್ಚು ತೂಡಗಿಕೊಳ್ಳುವುದು ಪ್ರಸ್ತುತ ಸನ್ನಿವೇಶಗಳಲ್ಲಿ ಅತೀ ಮುಖ್ಯವಾಗಿದೆ.

ಏಕೆಂದರೆ ಒಂದೇ ಬೆಳೆ ಅಥವಾ ಒಂದೇ ಅದಾಯದ ಮೂಲದ ಮೇಲೆ ಅತೀಯಾದ ಅವಲಂಬನೆ ಅರ್ಥಿಕವಾಗಿ ನಷ್ಟ ಉಂಟು ಮಾಡುತ್ತದೆ, ಮಾರುಕಟ್ಟೆ ಏರಿಲಿತ, ಬೆಳೆಗಳಿಗೆ ರೋಗ-ಕೀಟ ಸಮಸ್ಯೆ, ಹವಾಮಾನ ಬದಲಾವಣೆ ಇಂತಹ ಸಮಸ್ಯೆಗಳಿಂದ ರೈತರು ಪಾರಾಗಲು ಕೃಷಿ ಉಪಕಸುಬುಗಳಲ್ಲಿ ತೂಡಗಿಕೊಳ್ಳುವುದು ಅತ್ಯಗತ್ಯ.

ಇದನ್ನೂ ಓದಿ: Ration card list-2023: ಜಿಲ್ಲಾವಾರು ವಿತರಣೆಯಾಗದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ!

Secondary agriculture-ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ:

ರೈತರರಿಗೆ ಸಂಬಂದಪಟ್ಟ ಎಲ್ಲಾ ಇಲಾಖೆ ಮತ್ತು ಮಂಡಳಿಗಳು, ರಾಜ್ಯದ ಎಲ್ಲಾ ಕೃಷಿ ವಿಶ್ವ ವಿದ್ಯಾಲಯಗಳ ಸಹಯೋಗದಲ್ಲಿ ಕೃಷಿ ಇಲಾಖೆಯಿಂದ ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ ಮಾಡಲಾಗಿದ್ದು ಇದರ ಮೂಲಕ ಶೇ 50 ಸಹಾಯಧನದಲ್ಲಿ ಈ ಕೆಳಗಿನ ಯೋಜನೆಗಳನ್ನು ಅನುಷ್ಥಾನ ಮಾಡಲಾಗುತ್ತದೆ. ಆಸಕ್ತ ಫಲಾನುಭವಿಗಳು ಈ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು.

Secondary agriculture yojana-ಯಾವೆಲ್ಲ ಪ್ರಯೋಜನ ಪಡೆಯಬವುದು:

ಸಾವಯವ ಗೊಬ್ಬರ ತಯಾರಿಕೆ
ಎರೆಹುಳು ಗೊಬ್ಬರ ತಯಾರಿಕೆ 
ಜೈವಿಕ ಗೊಬ್ಬರ ಉತ್ಪಾದನೆ
ಕಾಂಪೋಸ್ಟ್ ಗೊಬ್ಬರ ತಯಾರಿಕೆ
ತೋಟಗಾರಿಕೆ ಹೂವು ಹಣ್ಣು ಬೆಳೆಗಳ ನರ್ಸರಿ
ನೀರು ಮತ್ತು ಮಣ್ಣು ಪರೀಕ್ಷೆ ಮಾಡುವಂತಹ ಘಟಕ
ಪಶು ಆಹಾರ ಮತ್ತು ಮೇವು ಉತ್ಪಾದನಾ ಘಟಕ
ಹೂವು  ಹಣ್ಣು ಸಾಂಬಾರು ಪದಾರ್ಥ ಇತ್ಯಾದಿ ವಸ್ತುಗಳನ್ನು ಪೂರ್ವ ಸಿದ್ಧತೆಗೊಳಿಸಿ  ಮಾರುಕಟ್ಟೆಗೆ ತಲುಪಿಸುವುದು

ಇದನ್ನೂ ಓದಿ: Ayushman Bharat Yojana: ಈ ಕಾರ್ಡ ನಿಮ್ಮ ಬಳಿಯಿದ್ದಲ್ಲಿ 5 ಲಕ್ಷದವರೆಗೆ ಅರ್ಥಿಕ ನೆರವು ಪಡೆಯಬವುದು!
ಉಪ್ಪಿನಕಾಯಿ ತಯಾರಿಕಾ ಘಟಕ, 
ಜಾಮ್ ಅರಿಶಿಣ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಕಾ ಘಟಕ
ಜೇನು ಸಾಕಾಣಿಕೆ, ಅಣಬೆ ಬೇಸಾಯ
ಅಡಿಕೆ ತೆಂಗು ಬಾಳೆ ನಾರಿನ ಉತ್ಪನ್ನಗಳ ತಯಾರಿಕೆ 
ಬಿದಿರು ಉತ್ಪನ್ನಗಳ ತಯಾರಿಕೆ 
ಅಲೋವೆರಾ ಉತ್ಪನ್ನಗಳ ತಯಾರಿಕೆ
ರೇಷ್ಮೆ ಉತ್ಪನ್ನಗಳ ತಯಾರಿಕೆ
ಹೊಸ ತಳಿಯ ಕುರಿಮರಿ ಹೋ ರಿ ಸಾಕಾಣಿಕೆ
ಅತ್ತಿಬೆಲೆ ಉಳಿಕೆಯ ಉತ್ಪನ್ನಗಳ ತಯಾರಿಕೆ, ಬಯೋಗ್ಯಾಸ್ ಉತ್ಪಾದನಾ ಘಟಕ
ಅಡಿಕೆ ಹಾಳೆ ಉತ್ಪನ್ನಗಳ ತಯಾರಿಕ ಘಟಕ, ಜೀವಾಮೃತ ತಯಾರಿಕಾ ಘಟಕ, ಕಬ್ಬಿನ ಜ್ಯೂಸ್  ತಯಾರಿಕಾ ಘಟಕ.

ಇದನ್ನೂ ಓದಿ: Bara parihara-ಈ ದಿನಾಂಕದ ಒಳಗಾಗಿ FID ನಂಬರ್ ಮತ್ತು ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಜೋಡಣೆ ಮಾಡಿಕೊಂಡರೆ ಮಾತ್ರ ಬರ ಪರಿಹಾರ ಸಿಗಲಿದೆ!

Secondary agriculture application-ಎಲ್ಲಿ ಅರ್ಜಿ ಸಲ್ಲಿಸಬೇಕು:

ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಬೇಕಾಗುವ ದಾಖಲಾತಿಗಳು:
ಆರ್ ಟಿ ಸಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಪಾಸ್ಪೋರ್ಟ್ ಸೈಜ್ ಫೋಟೋ 2, ಜಾಬ್ ಕಾರ್ಡ್ ( ಇದ್ದರೆ ಮಾತ್ರ)

Secondary agriculture helpline-ಹೆಚ್ಚಿನ ಮಾಹಿತಿ ಪಡೆಯಲು:

ಸೆಕೆಂಡರಿ ಕೃಷಿ ನಿರ್ದೇಶನಾಲಯ ಅಧಿಕೃತ ವೆಬ್ಸೈಟ್ : click here 
ದೂರವಾಣಿ ಸಂಖ್ಯೆಗಳು: click here

ಇದನ್ನೂ ಓದಿ: New Ration card- ಸರಕಾರದಿಂದ ಹೊಸ ರೇಷನ್ ಕಾರ್ಡ ವಿತರಣೆಗೆ ದಿನಾಂಕ ನಿಗದಿ!