Skill India Apprenticeship Recruitment-2024: ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ 680 ಹುದ್ದೆಗಳ ನೇಮಕಾತಿ ಅರ್ಜಿ ಅಹ್ವಾನ!

ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ (Integral Coach Factory) ವಿವಿಧ ವಿಭಾಗಗಳಲ್ಲಿ ಖಾಲಿ ಇರುವಂತೆ ಅಪ್ರೆಂಟಿಸ್ ಶಿಪ್ ತರಬೇತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಜೂನ್ 21ರ ಗಡುವು ನೀಡಲಾಗಿದೆ.

Skill India Apprenticeship Recruitment-2024: ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ 680 ಹುದ್ದೆಗಳ ನೇಮಕಾತಿ ಅರ್ಜಿ ಅಹ್ವಾನ!
Skill India Apprenticeship Recruitment-2024

ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ (Integral Coach Factory) ವಿವಿಧ ವಿಭಾಗಗಳಲ್ಲಿ ಖಾಲಿ ಇರುವಂತೆ ಅಪ್ರೆಂಟಿಸ್ ಶಿಪ್ ತರಬೇತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಜೂನ್ 21ರ ಗಡುವು ನೀಡಲಾಗಿದೆ.

ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮಷೀನಿಸ್ಟ, ಪೈಂಟರ್, ವೆಲ್ಡರ್ ಸೇರಿದಂತೆ ವಿವಿಧ ವಿಭಾಗದ ಒಟ್ಟು 680 ಅಭ್ಯರ್ಥಿಗಳಿಗೆ ಈ ಒಂದು ನೇಮಕಾತಿಯಲ್ಲಿ ಅಪ್ರೆಂಟಿಸ್ಶಿಪ್ ಮಾಡಲು ಉತ್ತಮ ಅವಕಾಶವಿದೆ. ಅಭ್ಯರ್ಥಿಗಳ ವರ್ಗಗಳಿಗೆ ಅನುಗುಣವಾಗಿ ಸ್ಥಾನಗಳನ್ನು ಮೀಸಲಿಡಲಾಗಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಂಪೂರ್ಣ ವಿವರವಾದ, ತರಬೇತಿ ಅವಧಿ, ಅರ್ಜಿ ಶುಲ್ಕ, ವಯೋಮಿತಿ, ಸ್ಟೈಪೆಂಡ ಸೇರಿದಂತೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಲೇಖನವನ್ನು ಕೊನೆಯವರೆಗೂ ಓದಿ ಹಾಗೂ ಕೊನೆಯ ದಿನಾಂಕದ ಒಳಗಾಗಿಯೇ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: KEA Recruitment -2024: ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ವಿವಿಧ 4002 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಪ್ ಡೇಟ್ ಬಿಡುಗಡೆ!

Educational Qualification - ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳ ವಿವರ: 

ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಖಾಲಿ ಇರುವಂತಹ 680 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಶೇಕಡ 50ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ಇದರ ಜೊತೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಐಟಿಐ ಮುಗಿಸಿರುವುದು ಕಡ್ಡಾಯವಾಗಿರುತ್ತದೆ. ಈ ಒಂದು ನೇಮಕಾತಿಯಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವಂತಹ ಫೆತಾಲಜಿ, ರೇಡಿಯೋಲಜಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಜ್ಞಾನ ವಿಷಯದಲ್ಲಿ 12ನೇ ತರಗತಿ ಪಾಸ್ ಆಗಿರಬೇಕು. 

Age limit-ವಯೋಮಿತಿ ಅರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 15 ವರ್ಷದಿಂದ 24 ವರ್ಷದ ಒಳಗಿರಬೇಕು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ಅನ್ವಯವಾಗಲಿದೆ. 

ಇದನ್ನೂ ಓದಿ: Crop insurance last date-2024: ಜಿಲ್ಲಾವಾರು ಬೆಳೆ ವಿಮೆ ಮಾಡಿಸಲು ಕೊನೆಯ ದಿನಾಂಕ ಬಿಡುಗಡೆ!

Training Period - ತರಬೇತಿಯ ಅವಧಿ : - ಈ ನೇಮಕಾತಿಯಲ್ಲಿ ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ 

• ಫಿಟ್ಟರ್, ಎಲೆಕ್ಟ್ರಿಷಿಯನ್ ಮತ್ತು ಮಷಿನಿಷ್ಟ, ಕಾರ್ಪೆಂಟರ್ ಅಂಡ್ ಪೇಂಟರ್ ವಿಭಾಗದ ಹುದ್ದೆಗಳಿಗೆ 2 ವರ್ಷಗಳ ತರಬೇತಿಯನ್ನು ನೀಡಲಾಗುತ್ತದೆ. 
• ವೆಲ್ಡರ್ ಮೆಡಿಕಲ್ ಲ್ಯಾಪ್ ಟೆಕ್ನಿಷಿಯನ್ ಹುದ್ದೆಗಳಿಗೆ ಒಂದು ವರ್ಷ ಮೂರು ತಿಂಗಳ ತರಬೇತಿಯನ್ನು ನೀಡಲಾಗುತ್ತದೆ.
• ಉಳಿದ ಎಲ್ಲಾ ಹುದ್ದೆಗಳಿಗೆ ಒಂದು ವರ್ಷದ ತರಬೇತಿಯನ್ನು ನೀಡಲಾಗುತ್ತದೆ.

Skill India Apprenticeship Recruitment 2024-ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ಸ್ಟೈಪೆಂಡ್:
 
ಈ ನೇಮಕಾತಿಯಲ್ಲಿ ಆಯ್ಕೆಯಾಗುವ 10ನೇ ತರಗತಿಯಲ್ಲಿ ಉತ್ತೀರ್ಣರಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಾಸಿಕ 6000 ರೂ. ಸ್ಟೈಪೆಂಡ ನೀಡಲಾಗುತ್ತದೆ. 12ನೇ ತರಗತಿ ಹಾಗೂ ಐಟಿಐ ಮುಗಿಸಿರುವಂತಹ ಅಭ್ಯರ್ಥಿಗಳಿಗೆ ರೂ. 7,000 ಸ್ಟೈಪೆಂಡ ನೀಡಲಾಗುತ್ತದೆ. 

ಇದನ್ನೂ ಓದಿ: Free mashroom training-ಉಚಿತ 10 ದಿನದ ಅಣಬೆ ಬೇಸಾಯ ತರಬೇತಿಗೆ ಅರ್ಜಿ ಆಹ್ವಾನ!

Application fee-ಅರ್ಜಿ ಶುಲ್ಕ: 

• Gen, OBC, EWS ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು - 100ರೂ. ಅರ್ಜಿ ಶುಲ್ಕ 
• ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವಿಲ್ಲ.

ಅರ್ಜಿ ಸಲ್ಲಿಸಲು ಜೂನ್ 21, 2024 ಕೊನೆಯ ದಿನಾಂಕವಾಗಿರುತ್ತದೆ.

Useful website links-ನೇಮಕಾತಿಯ ಪ್ರಮುಖ ಲಿಂಕ್ ಗಳು: 

• ಅರ್ಜಿ ಸಲ್ಲಿಸುವ ಲಿಂಕ್ : Click here
• ಅಧಿಸೂಚನೆ : Download

ಇದನ್ನೂ ಓದಿ: BPNL Recruitment 2024: 10th ಪಾಸಾದವರಿಗೆ ಪಶುಪಾಲನಾ ನಿಗಮದಲ್ಲಿ 5250 ಹುದ್ದೆಗಳಿಗೆ ಬೃಹತ್ ನೇಮಕಾತಿಗೆ ಅರ್ಜಿ ಅಹ್ವಾನ!