Tomato farming: 30 ಗುಂಟೆಯಲ್ಲಿ ಟೊಮೆಟೊ ಬೆಳೆದು 5 ಲಕ್ಷ ಆದಾಯ ಪಡೆದ ರೈತ!

ಚಿತ್ರದುರ್ಗ(chitradurga) ಜಿಲ್ಲೆಯ ಸೀಗೆಹಳ್ಳಿ ಗ್ರಾಮದ ಜೆ ರಂಗಸ್ವಾಮಿ, ರೈತ 30 ಗುಂಟೆಯಲ್ಲಿ ಟೊಮೆಟೊ(Tomato farm) ಬೆಳೆದು 5 ಲಕ್ಷ ಆದಾಯ ಪಡೆದಿದ್ದಾರೆ. ಕಳೆದ ಎರಡು-ಮೂರು ತಿಂಗಳ ಹಿಂದೆ ಕೆಜಿಗೆ 2 ರೂ ಗು ಕೆಳದ ಟೊಮೆಟೊ ಈಗ 150 ರೂ ಗಡಿ ದಾಟಿದೆ ಈಗಾಗಿ ಸಧ್ಯ ಈ ಬೆಳೆ ಬೆಳೆದ ರೈತರಿಗೆ ಒಳ್ಳೆಯ ಲಾಭ ದೊರೆಯುತ್ತಿದೆ. ಈ ರೈತರು 30 ಗುಂಟೆಯಲ್ಲಿ ಜಾಗದಲ್ಲಿ ವೆಲ್ಕಂ ತಳಿಯ 6,500 ಸಾವಿರ ಟೊಮೆಟೊ ಸಸಿಗಳನ್ನು ಸ್ಥಳೀಯ ನರ್ಸರಿಯಿಂದ ತೆಗೆದುಕೊಂಡು ಬಂದು ನಾಟಿ ಮಾಡಿದ್ದೆವು ಇಲ್ಲಿಯವರೆಗೆ 5-6 ಭಾರಿ ಕೊಯ್ಲು ಮಾಡಿದ್ದೇವೆ ಸರಿ ಸೂಮಾರು 5 ಲಕ್ಷ ಆದಾಯ ದೊರೆತ್ತಿದೆ ಎಂದು ತಿಳಿಸಿದ್ದಾರೆ.

Tomato farming: 30 ಗುಂಟೆಯಲ್ಲಿ ಟೊಮೆಟೊ ಬೆಳೆದು 5 ಲಕ್ಷ ಆದಾಯ ಪಡೆದ ರೈತ!

ಟೊಮೆಟೊ ಟೊಮೆಟೊ.. ಸಧ್ಯ ಮಾರುಕಟ್ಟೆಯಲ್ಲಿ ದರ ವಿಚಾರದಲ್ಲಿ ಹೆಚ್ಚು ಸಂಚಲನ ಸೃಷ್ಟಿಸಿರುವ ತರಕಾರಿ ಈ ಕೆಂಪು ಸುಂದರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಅನೇಕ ದಿನಗಳಿಂದ ಟೊಮೆಟೊ ಬೆಳೆದು ನಷ್ಟ ಅನುಭವಿಸಿದ  ರೈತರಿಗೆ ಈ ಭಾರಿ ಉತ್ತಮ ಆದಾಯು ಸಿಗುತ್ತಿದೆ. ಈ ಹಿಂದಿನ ಎಂದು ಸಿಗದ ಬೆಲೆ ಈಗ ಮಾರುಕಟ್ಟೆಯಲ್ಲಿ ಟೊಮೆಟೊಗೆ ಸಿಗುತ್ತಿದೆ ಎನ್ನುತ್ತಾರೆ ರೈತ ಬಾಂಧವರು.

ಚಿತ್ರದುರ್ಗ(chitradurga) ಜಿಲ್ಲೆಯ ಸೀಗೆಹಳ್ಳಿ ಗ್ರಾಮದ ಜೆ ರಂಗಸ್ವಾಮಿ, ರೈತ 30 ಗುಂಟೆಯಲ್ಲಿ ಟೊಮೆಟೊ(Tomato farm) ಬೆಳೆದು 5 ಲಕ್ಷ ಆದಾಯ ಪಡೆದಿದ್ದಾರೆ. ಕಳೆದ ಎರಡು-ಮೂರು ತಿಂಗಳ ಹಿಂದೆ ಕೆಜಿಗೆ 2 ರೂ ಗು ಕೆಳದ ಟೊಮೆಟೊ ಈಗ 150 ರೂ ಗಡಿ ದಾಟಿದೆ ಈಗಾಗಿ ಸಧ್ಯ ಈ ಬೆಳೆ ಬೆಳೆದ ರೈತರಿಗೆ ಒಳ್ಳೆಯ ಲಾಭ ದೊರೆಯುತ್ತಿದೆ. ಈ ರೈತರು 30 ಗುಂಟೆಯಲ್ಲಿ  ಜಾಗದಲ್ಲಿ ವೆಲ್ಕಂ ತಳಿಯ 6,500 ಸಾವಿರ ಟೊಮೆಟೊ ಸಸಿಗಳನ್ನು ಸ್ಥಳೀಯ ನರ್ಸರಿಯಿಂದ  ತೆಗೆದುಕೊಂಡು ಬಂದು ನಾಟಿ ಮಾಡಿದ್ದೆವು ಇಲ್ಲಿಯವರೆಗೆ 5-6 ಭಾರಿ ಕೊಯ್ಲು ಮಾಡಿದ್ದೇವೆ ಸರಿ ಸೂಮಾರು 5 ಲಕ್ಷ ಆದಾಯ ದೊರೆತ್ತಿದೆ ಎಂದು ತಿಳಿಸಿದ್ದಾರೆ.

ಈ ರೈತರಿಗೆ ಒಟ್ಟು 4 ಎಕರೆ ಜಮೀನಿದ್ದು ಇದರಲ್ಲಿ ಒಂದು ಎಕರೆ ಅಡಿಕೆ, ಬಾಕಿ 30 ಗುಂಟೆಯಲ್ಲಿ ಟೊಮೆಟೊ(Tomato farming), 2.10 ಎಕರೆಯಲ್ಲಿ ಇತರೆ ಬೆಳೆಗಳನ್ನು ಬೆಳೆದಿದ್ದಾರೆ.ಇಲ್ಲಿಯವರೆಗೆ ಟೊಮೆಟೊ ಬೆಳೆಯಲು 50 ಸಾವಿರ ಖರ್ಚು ಬಂದಿದ್ದು ನಂತರ ಟೊಮೆಟೊ ಸಂಪೂರ್ಣ ಕಟಾವದ ಬಳಿದೆ ಇದೆ ಜಮೀನಿನಲ್ಲಿ ಬಳ್ಳಿ ಬೀನ್ಸ್ ಹಾಕುತ್ತೆವೆ ಅಗ ಇದೇ ಕೋಲು ಇತ್ಯಾದಿ ಪರಿಕರಗಳು ನಮಗೆ ನಿರ್ವಹಣೆ ಮಾಡಲು ಅನುಕೂಲವಾಗುತ್ತದೆ ಎಂದರು. 

ಈ ವೆಲ್ಕಂ ತಳಿಯು ಬೇಗ ಹಾಳಗುವುದಿಲ್ಲ ಇನ್ನೂ ಜಮೀನಿನಲ್ಲಿ ಬೆಳೆಯಿದ್ದು ಇದೇ ದರ ಇದಲ್ಲಿ ಇನ್ನು 2 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ರೈತ ಜೆ ರಂಗಸ್ವಾಮಿ.

ಜೆ ರಂಗಸ್ವಾಮಿ,ರೈತರ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಟೊಮೆಟೊ(Tomato rate) ಇಷ್ಟು ಬೆಲೆ ಏರಿಕೆಗೆ ಕಾರಣವೇನು?

ನಮ್ಮ ದೇಶದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಜನವರಿ-ಫೆಬ್ರುವರಿಯಲ್ಲಿ ತಿಂಗಳಲ್ಲಿ ನಾಟಿ ಮಾಡಿದ ಟೊಮೆಟೊ ಬೆಳೆಯು ಜೂನ್-ಜುಲೈನಲ್ಲಿ ಮಾರುಕಟ್ಟೆಗೆ ಬರಬೇಕಿತ್ತು. ಹೆಚ್ಚು ಸಮಯದವರೆಗೆ ಚಳಿ ಅಧಿಕ ಬೇಸಿಗೆ,ತಾಪಮಾಣದಿಂದ ಮತ್ತು ಮುಂಗಾರು ಮಳೆ ವಿಳಂಬದ ಕಾರಣ ನಿರೀಕ್ಷಿತ ಪ್ರಮಾಣದ ಇಳುವರಿ ಬರದಿರುವುದು ಸಹ ಬೆಲೆ ಏರಿಕೆಗೆ ಕಾರಣ. ಇದರ ಜೊತೆಗೆ ಕರ್ನಾಟಕದ ಕೋಲಾರ ಜಿಲ್ಲೆ ಸೇರಿದಂತೆ, ಆಂಧ್ರಪ್ರದೇಶದ ಟೊಮೆಟೊ ತಾಕುಗಳಲ್ಲಿ ಬಿಳಿ ನೋಣ ಭಾದೆ ಮತ್ತು ಶಿಲೀಂಧ್ರ ರೋಗಗಳು ಕಾಣಿಸಿಕೊಂಡ ಕಾರಣ ಇಳುವರಿ ಕಡಿಮೆಯಾಗಿರುತ್ತದೆ. ಇದೇ ಸಮಯದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಟೊಮೆಟೊ ಬೆಳೆಗಳಿಗೂ ಶಿಲೀಂಧ್ರ ರೋಗಗಳಿಗೆ ತುತ್ತಾಗಿವೆ. ಮಧ್ಯ ಭಾರತ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಅಕಾಲಿಕ ಮಳೆಯ ಕಾರಣದಿಂದ ಟೊಮೆಟೊ ಬೆಳೆ ನಾಶವಾಗಿದೆ. ಒಟ್ಟಾರೆಯಾಗಿ ಟೊಮೆಟೊ ಇಳುವರಿ ಕಡಿಮೆಯಾಗಿದ್ದರಿಂದ, ಬೆಲೆಯು ಅಧಿಕ ಪ್ರಮಾಣದಲ್ಲಿ ಒಂದೇ ಭಾರಿಗೆ ಏರಿಕೆಯಾಗಿದೆ.

ನಮ್ಮ ದೇಶದಲ್ಲಿ ಟೊಮೆಟೊ ಬೆಳೆಯುವ ಟಾಪ್ 10 ರಾಜ್ಯಗಳು(29-06-2023 ರ ದರ ವಿವರ)-Top 10 tomato producing states in india. 

1. ಮಧ್ಯ ಪ್ರದೇಶ(Madhyapradesh) : ಟೊಮೆಟೊ ದರ: 80-100 ರೂ. , ವಾರ್ಷಿಕ ಉತ್ಪಾದನೆ: 2,970 ಸಾವಿರ ಟನ್ ಉತ್ಪಾದನಾ ಪಾಲು: 14.63%

2. ಆಂಧ್ರಪ್ರದೇಶ(Andhrapradesh): ಟೊಮೆಟೊ ದರ: 50-70 ರೂ. ವಾರ್ಷಿಕ ಉತ್ಪಾದನೆ: 2,217 ಸಾವಿರ ಟನ್ ಉತ್ಪಾದನಾ ಪಾಲು: 10.92%

3. ಕರ್ನಾಟಕ(Karnataka): ದರ: 70-99 ರೂ. ವಾರ್ಷಿಕ ಉತ್ಪಾದನೆ: 2,077 ಸಾವಿರ ಟನ್ ಉತ್ಪಾದನಾ ಪಾಲು: 10.23%

4. ತಮಿಳುನಾಡು(Tamilnadu): ಟೊಮೆಟೊ ದರ: 75-95 ರೂ. ವಾರ್ಷಿಕ ಉತ್ಪಾದನೆ: 1489 ಸಾವಿರ ಟನ್, ಉತ್ಪಾದನಾ ಪಾಲು:7.34%

5. ಓಡಿಶಾ(Odisha): ಟೊಮೆಟೊ ದರ: 75-95 ರೂ, ವಾರ್ಷಿಕ ಉತ್ಪಾದನೆ: 1,432 ಸಾವಿರ ಟನ್, ಉತ್ಪಾದನಾ ಪಾಲು: 7.06%

6. ಗುಜರಾತ್(Gujarat): ದರ : 80-100 ರೂ. ವಾರ್ಷಿಕ ಉತ್ಪಾದನೆ: 1,395 ಸಾವಿರ ಟನ್ ಉತ್ಪಾದನಾ ಪಾಲು: 6.87%

7. ಪಶ್ಚಿಮ ಬಂಗಾಳ(West bengal): ಟೊಮೆಟೊ ದರ: 80-100 ರೂ, ವಾರ್ಷಿಕ ಉತ್ಪಾದನೆ: 1,284 ಸಾವಿರ ಟನ್ ಉತ್ಪಾದನಾ ಸಾಲು: 6.33%

8. ಛತ್ತೀಸಗಡ(chhattisgarh): ಟೊಮೆಟೊ ದರ: 70-90 ರೂ. ವಾರ್ಷಿಕ ಉತ್ಪಾದನೆ: 1,149 ಸಾವಿರ ಟನ್,ಉತ್ಪಾದನಾ ಪಾಲು: 5.66%

9. ಮಹಾರಾಷ್ಟ್ರ(Maharashtra): ಟೊಮೆಟೊ ದರ: 75-96 ರೂ. ವಾರ್ಷಿಕ ಉತ್ಪಾದನೆ: 1125 ಸಾವಿರ ಟನ್, ಉತ್ಪಾದನಾ ಸಾಲು: 5.54%

10. ಬಿಹಾರ(Bihar): ಟೊಮೆಟೊ ದರ: 60-80 ರೂ.  ವಾರ್ಷಿಕ ಉತ್ಪಾದನೆ: 951 ಸಾವಿರ ಟನ್ ,ಉತ್ಪಾದನಾ ಪಾಲು: 4.68%

(2021-22ರ ಅಂಕಿಅಂಶ, ಕೃಪೆ: ರಾಷ್ಟ್ರೀಯ ತೋಟಗಾರಿಕಾ ಮಂಡಳಿ-National Horticulture board)

ಇದನ್ನೂ ಓದಿ: Tomato bili nona: ಟಮೋಟೋ ಬೆಳೆಯಲ್ಲಿ ಬಿಳಿನೊಣದ ನಿರ್ವಹಣೆಗೆ ಈ ಕ್ರಮ ಅನುಸರಿಸಿ.

How to Grow Tomatoes-ಟೊಮೆಟೊ ಬೆಳೆಯುವ ವಿಧಾನ:

ಟೊಮ್ಯಾಟೊ ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯುವ ಜನಪ್ರಿಯ ತರಕಾರಿಯಾಗಿದೆ. ಈ ತರಕಾರಿಯು ಎ, ಬಿ ಹಾಗೂ ಸಿ. ಜೀವಸತ್ವಗಳನ್ನು ಒದಗಿಸುತ್ತದೆ.

ಟೊಮೆಟೊ ಬೆಳೆಯಲು ಸೂಕ್ತ ಮಣ್ಣು : 

ಇದನ್ನು ಎಲ್ಲಾ ವಿಧವಾದ ಮಣ್ಣುಗಳಲ್ಲಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವ ಮಧ್ಯಮ ಕಪ್ಪು ಹಾಗೂ ಮರಳು ಮಿಶ್ರಿತ ಗೋಡುಮಣ್ಣು ಈ ಬೆಳೆಗೆ ಸೂಕ್ತ ತಗ್ಗುಪ್ರದೇಶ, ನೀರು ನಿಲ್ಲುವ ಮತ್ತು ಆಮ್ಲಯುಕ್ತ ಮಣ್ಣಿನ ಪ್ರದೇಶ ಈ ಬೆಳೆಗೆ ಯೋಗ್ಯವಲ್ಲ. ಉತ್ತಮ ಬೆಳೆಗೆ ಮಣ್ಣಿನ ರಸಸಾರ 6 ರಿಂದ 7 ಇರಬೇಕು. ಸೊರಗು ರೋಗಪೀಡಿತ ಮಣ್ಣು ಸೂಕ್ತವಲ್ಲ.

ಬಿತ್ತನೆ ಕಾಲ : 

ಇದನ್ನು ವರ್ಷದ ಮೂರು ಮುಖ್ಯ ಕಾಲಗಳಲ್ಲಿ ಅಂದರೆ, ಜೂನ್-ಜುಲೈ, ಅಕ್ಟೋಬರ್-ನವಂಬರ್ ಮತ್ತು ಜನೆವರಿ- ಫೆಬ್ರುವರಿಯಲ್ಲಿ ಬೆಳೆಯಬಹುದು. ವಾರ್ಷಿಕ ಮಳೆ ಪ್ರಮಾಣ 75 ರಿಂದ 90 ಸೆಂ.ಮೀ. ಇರುವಲ್ಲಿ ಹಾಗೂ ಜುಲೈನಿಂದ ಅಕ್ಟೋಬರ್‌ವರೆಗೆ ನಿರ್ದಿಷ್ಟ ಮಳೆ ಬೀಳುವ ಪ್ರದೇಶಗಳಲ್ಲಿ ಈ ಬೆಳೆಯನ್ನು ಫಲಪ್ರದವಾಗಿ ಬೆಳೆಯಬಹುದು. ಹೆಚ್ಚು ಮಳೆ ಬೀಳುವ ಹಾಗೂ ಮಲೆನಾಡು ಪ್ರದೇಶದಲ್ಲಿ ಈ ಬೆಳೆ ಉತ್ತಮ ಇಳುವರಿ ಕೊಡುವುದಿಲ್ಲ. ಬೇಸಿಗೆಯಲ್ಲಿ (ಜನವರಿ- ಫೆಬ್ರವರಿ) ಎಲೆ ಮುದುಡು ರೋಗಕ್ಕೆ ತುತ್ತಾಗುವುದರಿಂದ ಅವಶ್ಯವಿರುವ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸಸಿಮಡಿಯಿಂದಲೇ ಪ್ರಾರಂಭಿಸಬೇಕು. ಮಳೆಯಾಶ್ರಿತ ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಲು ಜುಲೈ ಮಧ್ಯದಿಂದ ಅಗಸ್ಟ್ ಮಧ್ಯದವರೆಗೂ ಉತ್ತಮ ಕಾಲ.

ನಾಟಿ ಮಾಡುವ ವಿಧಾನ : 

ಭೂಮಿಯನ್ನು ಆಳವಾಗಿ ಉಳುಮೆ ಮಾಡಿ, ಹೆಂಟೆಗಳನ್ನು ಒಡೆದು, ಹದಮಾಡಿ, ನಿರ್ದಿಷ್ಟಪಡಿಸಿದ ಪೂರ್ಣ ಪ್ರಮಾಣದ ಕೊಟ್ಟಿಗೆ/ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ನಂತರ 90 ಸೆಂ. ಮೀ. ಅಂತರದಲ್ಲಿ ಸಾಲು (ಹರಿ)ಗಳನ್ನು ಮಾಡಿ, ಶಿಫಾರಸ್ಸು ಮಾಡಿದ ಶೇ 50 ರಷ್ಟು ಸಾರಜನಕ ಹಾಗೂ ಪೂರ್ತಿ ಪ್ರಮಾಣದ ರಂಜಕ, ಪೊಟ್ಯಾಷ್ ಗೊಬ್ಬರವನ್ನು ಮಣ್ಣಿನಲ್ಲಿ ಹಾಕಿ ಚೆನ್ನಾಗಿ ಬೆರೆಸಬೇಕು. ನಂತರ ತೆಳುವಾಗಿ ನೀರನ್ನು ಒದಗಿಸಿ 45 ಸೆಂ. ಮೀ. ಅಂತರದಲ್ಲಿ ಸಾಲಿನ ಒಂದು ಪಕ್ಕದಲ್ಲಿ ಪ್ರತಿ ಗುಣಿಗೆ ಒಂದು ಸಸಿಯಂತೆ ನಾಟಿ ಮಾಡಬೇಕು.

ನಾಟಿ ಮಾಡುವಾಗ ಪ್ರತಿ 16 ಟೊಮ್ಯಾಟೊ ಸಾಲುಗಳಿಗೆ 1 ಸಾಲು ಆಫ್ರಿಕನ್ ಚೆಂಡು ಹೂವನ್ನು ನಾಟಿಮಾಡಬೇಕು. ಸಾಮಾನ್ಯವಾಗಿ 40 ದಿನ ಬೆಳೆದ ಚೆಂಡು ಹೂವಿನ ಸಸಿಗಳನ್ನು ಹಾಗೂ 25 ದಿನ ಬೆಳೆದ ಟೊಮ್ಯಾಟೊ ಸಸಿಗಳನ್ನು ನಾಟಿ ಮಾಡಲು ಬಳಸಬೇಕು, ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ 250 ಕಿ.ಗ್ರಾಂ ಪ್ರಮಾಣದಲ್ಲಿ ಎಣ್ಣೆಯಿರುವ ಬೇವಿನ ಹಿಂಡಿಯನ್ನು ಮತ್ತು 5 ಟನ್ ಹಸಿರೆಲೆಗೊಬ್ಬರವನ್ನು ಹಾಕುವುದರಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ.

ಗೊಬ್ಬರ ಪ್ರಮಾಣ ಪ್ರತಿ ಎಕರೆಗೆ:

ಗೊಟ್ಟಿಗೆ ಗೊಬ್ಬರ: 15 ಟನ್ 
ಸಾರಜನಕ: 100 ಕೆಜಿ
ರಂಜಕ: 100 ಕೆಜಿ
ಪೊಟ್ಯಾಷ್: 100 ಕೆಜಿ.

ಇದನ್ನೂ ಓದಿ: Anna Bhagya Yojane: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಅಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕೆ? ಇಲ್ಲಿದೆ ವೆಬ್‌ಸೈಟ್‌ ಲಿಂಕ್‌.

ನೀರಾವರಿ ಮತ್ತು ಅಂತರ ಬೇಸಾಯ: 

ಹವಾಗುಣ ಮತ್ತು ಭೂಮಿಯ ಗುಣಧರ್ಮಕ್ಕನುಗುಣವಾಗಿ 5 ರಿಂದ 7 ದಿನಗಳಿಗೊಮ್ಮೆ ನೀರನ್ನು ಹಾಯಿಸಬೇಕು. ನಾಟಿ ಮಾಡಿದ ನಾಲ್ಕು ಐದು ವಾರಗಳ ನಂತರ 30 ಸೆಂ. ಮೀ. ಎತ್ತರದವರೆಗೆ ಬೆಳೆದ ಸಸಿಗಳಲ್ಲಿ ಕವಲು ಟೊಂಗೆಗಳನ್ನು ತೆಗೆದು ನಂತರ ಅವುಗಳಿಗೆ 1.2-1.5 ಸೆಂ. ಮೀ. ಉದ್ದದ ಕೋಲುಗಳನ್ನು ಆಧಾರಕ್ಕಾಗಿ ಕೊಡಬೇಕು ಇದರಿಂದ ಒಳ್ಳೆಯ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಾಧ್ಯ. ಉಳಿದ ಶೇ. 50 ರಷ್ಟು ಸಾರಜನಕವನ್ನು ನಾಟಿ ಮಾಡಿದ 4 ವಾರಗಳ ನಂತರ ಮೇಲುಗೊಬ್ಬರವಾಗಿ ಕೊಟ್ಟು ಮಣ್ಣನ್ನು ಏರಿಸಿ, ಭೂಮಿಯನ್ನು ಕಳೆರಹಿತವಾಗಿ ಇಡಬೇಕು.

ಕೊಯ್ದು ಮತ್ತು ಇಳುವರಿ: 

ನಾಟಿ ಮಾಡಿದ 60-65 ದಿನಗಳ ನಂತರ ಈ ಬೆಳೆಯು ಕೊಯ್ಲುಗೆ ಸಿದ್ಧವಾಗುತ್ತದೆ. ತಳಿ ಹಾಗೂ ಕಾಲಕ್ಕಗನುಸಾರವಾಗಿ 6-8 ವಾರಗಳವರೆಗೆ ಕೊಯ್ದು ಮುಂದುವರೆಯುವದು. ಪ್ರತಿ ಹೆಕ್ಟೇರಿಗೆ ಸುಧಾರಿತ ತಳಿಗಳಲ್ಲಿ 25-30 ಟನ್ ಹಣ್ಣುಗಳನ್ನು ಪಡೆಯಬಹುದು. ಸಂಕರಣ ತಳಿಗಳಲ್ಲಿ 60-75 ಟನ್ ಹಣ್ಣುಗಳನ್ನು ಪಡೆಯಬಹುದು.

ಮಾಹಿತಿ ಕೃಪೆ: ವಿಜಯಕರ್ನಾಟಕ & ಸಮಗ್ರ ತೋಟಗಾರಿಕೆ ಕೈಪಿಡಿ