Tour packages-ಸರ್ಕಾರದಿಂದ ರೂ 15,000 ಸಾವಿರ ಸಹಾಯಧನದಲ್ಲಿ ಯಾತ್ರೆ ಮಾಡಲು ಅರ್ಜಿ!

September 18, 2024 | Siddesh
Tour packages-ಸರ್ಕಾರದಿಂದ ರೂ 15,000 ಸಾವಿರ ಸಹಾಯಧನದಲ್ಲಿ ಯಾತ್ರೆ ಮಾಡಲು ಅರ್ಜಿ!
Share Now:

ರಾಜ್ಯ ಸರಕಾರದಿಂದ ವಿವಿಧ ದಾರ್ಮಿಕ ಸ್ಥಳಗಳನ್ನು ಟ್ರೈನ್ ಮೂಲಕ ಭೇಟಿ ಮಾಡಲು ಇಚ್ಚೆಯಿರುವ ನಾಗರಿಕರಿಗೆ ಪ್ರತಿ ವರ್ಷ ಸಹಾಯಧನವನ್ನು(tour package)ನೀಡಲಾಗುತ್ತದೆ ಇದರಂತೆ ಈ ವರ್ಷವು ಸಹ ಈ ಯೋಜನೆಯಡಿ ಪ್ರವಾಸವನ್ನು ಕೈಗೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯಾತ್ರೆಯು ಎಲ್ಲಿಂದ ಪ್ರಾರಂಭವಾಗುತ್ತದೆ? ಯಾರೆಲ್ಲ ಯಾತ್ರೆಯಲ್ಲಿ ಭಾಗವಹಿಸಬಹುದು? ಯಾತ್ರೆ ಆರಂಭವಾಗುವ ದಿನಾಂಕ? ಯಾವೆಲ್ಲ ದಾರ್ಮಿಕ ಸ್ಥಳಗಳನ್ನು ಈ ಯಾತ್ರೆಯಲ್ಲಿ ಭೇಟಿ ಮಾಡಲಾಗುತ್ತದೆ? ಇತ್ಯಾದಿ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

Tour package important dates-ಪ್ರಮುಖ ದಿನಾಂಕಗಳು:

ಯಾತ್ರೆ ಪ್ರಾರಂಭವಾಗುವ ದಿನಾಂಕ: 28 ಸೆಪ್ಟಂಬರ್ 2024
ಯಾತ್ರೆ ಪ್ರಾರಂಭವಾಗುವ ದಿನಾಂಕ: 05 ಅಕ್ಟೋಬರ್ 2024

ಇದನ್ನೂ ಓದಿ: Anganwadi worker-2024: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

low budget tour package- ಯಾತ್ರಿಕರು ರೈಲು ಹತ್ತಲು ಅವಕಾಶವಿವರ ನಿಲ್ದಾಣಗಳು:

1) ಬೆಂಗಳೂರು(SMVT)
2) ತುಮಕೂರು
3) ಅರಸಿಕೆರೆ
4) ಬೀರೂರು
5) ದಾವಣಗೆರೆ
6) ಹಾವೇರಿ
7) ಬೆಳಗಾವಿ

ಇದನ್ನೂ ಓದಿ: PM Maandhan Yojana-2024: ಕೇಂದ್ರದ ಈ ಯೋಜನೆಯಡಿ ಪ್ರತಿ ತಿಂಗಳು ಸಿಗುತ್ತೆ ರೂ 3,000! ಇಲ್ಲಿದೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್!

ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ - ಭಾರತ್‌ ಗೌರವ್ ದ್ವಾರಕಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ದ್ವಾರಕಾ, ನಾಗೇಶ್ವರ, ಸೋಮನಾಥ ಹಾಗೂ ತ್ರಯಂಬಕೇಶ್ವರ ದೇವಾಲಯಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. 

ಈ ಪ್ಯಾಕೇಜ್‌ಗೆ ಒಟ್ಟು ₹30,000 ತಗುಲಲಿದ್ದು, ಈ ಪೈಕಿ ರಾಜ್ಯ ಸರ್ಕಾರದ ವತಿಯಿಂದ ಅಂದಾಜು ₹15,000 ಮೊತ್ತವನ್ನು ಭರಿಸಲಾಗುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್‌ ಮೊತ್ತವಾಗಿ ₹15,000 ಅನ್ನು ಮಾತ್ರ ಪಾವತಿಸಬೇಕಾಗುತ್ತದೆ. 

ಪ್ರವರ್ಗ ʼಸಿʼ ಅಧಿಸೂಚಿತ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು / ನೌಕರರು ಭಾರತ್‌ ಗೌರವ್‌ ದ್ವಾರಕಾ ಯಾತ್ರೆ ತೆರಳಲು ಇಚ್ಛಿಸಿದ್ದಲ್ಲಿ ದಾಖಲೆಗಳೊಂದಿಗೆ ಆಯುಕ್ತರ ಕಚೇರಿಗೆ ನೇರವಾಗಿ ಸೆಪ್ಟೆಂಬರ್‌ 20ರ ಒಳಗಾಗಿ ಮನವಿ ಸಲ್ಲಿಸಬಹುದಾಗಿದೆ. 

ಇದನ್ನೂ ಓದಿ: Akrama-sakrama yojane- ರಾಜ್ಯ ಸರಕಾರದಿಂದ ರೈತರಿಗೆ ಸಿಹಿಸುದ್ದಿ! ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮ ಯೋಜನೆ!

karnataka government tourism packages- ಸಹಾಯಧನ ವಿವರ:

ಪ್ರವಾಸದ ಒಟ್ಟು ಪ್ಯಾಕೇಜ್ ಮೊತ್ತ: 30,000/-
ರಾಜ್ಯ ಸರಕಾರ ಪಾವತಿಸುವ ಮೊತ್ತ: 15,000/-
ಯಾತ್ರಾರ್ಥಿಗಳು ಪಾವತಿಸಬೇಕಾದ ಮೊತ್ತ: 15,000/-

ಯಾತ್ರೆಯಲ್ಲಿ ನೀಡಲಾಗುವ ಸೌಲಭ್ಯಗಳು:

1) ಪ್ಯಾಕೇಜ್‌ನಲ್ಲಿ 3 ಟೈ‌ರ್ ಎ.ಸಿ. ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ

2) ಪ್ರಯಾಣಿಸುವಾಗ ಆಧುನಿಕ ಪ್ಯಾ೦ಟ್ರಿ ಕಾರಿನಲ್ಲಿ ತೆಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುವುದು

3) ಯಾತ್ರಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯಕೀಯ ಸಹಾಯ ವ್ಯವಸ್ಥೆ

ಇದನ್ನೂ ಓದಿ: labour card- ಕಾರ್ಮಿಕ ಕಾರ್ಡ ನೋಂದಣಿಗೆ ವೆಬ್ಸೈಟ್ ಲಿಂಕ್ ಬಿಡುಗಡೆ!

ಬುಕ್ಕಿಂಗ್‌ಗಾಗಿ: Apply Now
ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಥವಾ 9003140710, 8595931292, 8595931294, 9731641611, 8595931293, 8595931291 ಗೆ ಕರೆ ಮಾಡಿ ಟಿಕೆಟ್‌ ಬುಕ್‌ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: