Tractor subsidy-2024: ಟ್ರ್ಯಾಕ್ಟರ್, ಪವರ್ ಟಿಲ್ಲರ್ ಸೇರಿದಂತೆ ಸಬ್ಸಿಡಿಯಲ್ಲಿ ಯಾವೆಲ್ಲ ಯಂತ್ರ ಪಡೆಯಬಹುದು? ಇಲ್ಲಿದೆ ಸಂಪೂರ್ಣ ವಿವರ!

ಕೃಷಿ ಇಲಾಖೆಯಿಂದ ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣೆ, ಕೃಷಿ ಯಾಂತ್ರೀಕರಣ ಉಪ ಅಭಿಯಾನ ಈ ಮೂರು ಯೋಜನೆಯಡಿ ಟ್ರ್ಯಾಕ್ಟರ್(tractor subsidy), ಪವರ್ ಟಿಲ್ಲರ್(power tiller), ರೋಟೊವೇಟರ್(rotavator), ಪಲ್ವರೈಸರ್, ಮಲ್ಟಿ ಆಯಿಲ್ ಸೀಡ್ಸ್ ಪ್ರೆಸ್ ಮಶೀನ್(oil extractor machine)ಸೇರಿದಂತೆ ಯಾವೆಲ್ಲ ಯಂತ್ರಗಳನ್ನು ಸಹಾಯಧನದಲ್ಲಿ ಪಡೆಯಬಹುದು ಎನ್ನುವ ಮಾಹಿತಿಯನ್ನು ತಿಳಿಸಲಾಗಿದೆ.

ರೈತರು ಕೃಷಿ ಚಟುವಟಿಕೆಗಳನ್ನು ಮಾಡಲು ಪ್ರಸ್ತುತ ಸನ್ನಿವೇಶದಲ್ಲಿ ಯಂತ್ರಗಳ ಬಳಕೆ ಅತೀ ಮುಖ್ಯ ಮತ್ತು ಅನಿರ್ವಾಯವು ಸಹ ಅಗಿದೆ ಅರ್ಥಿಕವಾಗಿ ನೆರವಿನಲ್ಲಿ ಕೃಷಿ ಯಂತ್ರಗಳನ್ನು ಖರೀದಿ ಮಾಡಲು ಪ್ರತಿ ವರ್ಷ ಕೃಷಿ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ ಈ ಯೋಜನೆಗಳ ಕುರಿತು ಒಂದಿಷ್ಟು ಮಾಹಿತಿ ಈ ಅಂಕಣದಲ್ಲಿ ತಿಳಿಸಲಾಗಿದೆ. 

ಇದನ್ನೂ ಓದಿ: Beautician training-ಉಚಿತ ಫಿಟ್ನೆಸ್ ಕೋಚ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

Agriculture machine subsidy in karnataka-ಸಹಾಯಧನದಲ್ಲಿ ಯಾವೆಲ್ಲ ಯಂತ್ರಗಳನ್ನು ಪಡೆಯಬಹುದು?

ಸಣ್ಣ ಟ್ರ್ಯಾಕ್ಟರ್(mini tractor), ಪವರ್ ಟಿಲ್ಲರ್(power tiller), ಬಿತ್ತನೆ/ನಾಟಿ ಯಂತ್ರಗಳು(paddy planting machine), ಸಿಂಪರಣಾ ಯಂತ್ರಗಳು(power sprayer), ಡೀಸೆಲ್ ಪಂಪಸೆಟ್ಸ್(diesel pump set), ಟ್ರಾಕ್ಟರ್ ಚಾಲಿತ ಎಂ.ಬಿ. ಪ್ಲೋ (ಫಿಕ್ಸ್ಡ್)(mb plough)  , ಟ್ರಾಕ್ಟರ್ ಚಾಲಿತ ಎಂ.ಬಿ. ಪ್ಲೋ (ರಿವರ್ಸಿಬಲ್) , ಟ್ರಾಕ್ಟರ್ ಚಾಲಿತ ಲೇಸರ್ ಭೂಮಿ ಮಟ್ಟ ಮಾಡುವ ಯಂತ್ರ, 

ರೋಟೊವೇಟರ್(rotavator), ಟ್ರ್ಯಾಕ್ಟರ್ ಚಾಲಿತ ಡಿಸ್ಕ ಫ್ಲೋ (2 ಡಿಸ್ಕ್), ಟ್ರ್ಯಾಕ್ಟರ್ ಚಾಲಿತ ಡಿಸ್ಕ ಫ್ಲೋ (3 ಡಿಸ್ಕ್), ಟ್ರಾಕ್ಟರ್ ಚಾಲಿತ ಡಿಸ್ಕ ಹ್ಯಾರೋ (10 ಡಿಸ್ಕ್), ಟ್ರಾಕ್ಟರ್ ಚಾಲಿತ ಡಿಸ್ಕ ಹ್ಯಾರೋ (14 ಡಿಸ್ಕ್), ಕಬ್ಬಿನ ರವದಿ ಪುಡಿ ಮಾಡುವ ಯಂತ್ರ, ಟ್ರ್ಯಾಕ್ಟರ್ ಚಾಲಿತ ರಿಡ್ಜರ್/ ಫರೊ ಓಪನರ್, ಟ್ರ್ಯಾಕ್ಟರ್ ಚಾಲಿತ ರಿಡ್ಜರ್/ ಫರೊ ಓಪನರ್, ಟ್ರ್ಯಾಕ್ಟರ್ ಚಾಲಿತ 9 ಟೈನ್ಸ್ ಸಂಯುಕ್ತ ಬಿತ್ತನೆ ಕೂರಿಗೆ, ಹ್ಯಾಂಡ್ ಪುಶ್ ಸೀಡರ್,

ಮೇವು ಕತ್ತರಿಸುವ ಯಂತ್ರ (ಹ್ಯಾಂಡ್), ಮೇವು ಕತ್ತರಿಸುವ ಯಂತ್ರ(chaff cutter machine) (2 ಹೆಚ್.ಪಿ), ಮೇವು ಕತ್ತರಿಸುವ ಯಂತ್ರ (3 ಹೆಚ್.ಪಿ), ಹ್ಯಾಂಡ್ ಪುಶ್ ಸೀಡರ್ ಕಂ ಫರ್ಟಿಲೈಜರ್, ಭತ್ತ ನಾಟಿ ಯಂತ್ರ, ಬ್ರಶ್ ಕಟ್ಟರ್, ರೋಟರಿ ಟಿಲ್ಲರ್ (5 ಹೆಚ್.ಪಿ), ರೋಟರಿ ಟಿಲ್ಲರ್ (7 ಹೆಚ್.ಪಿ), ರೋಟರಿ ಟಿಲ್ಲರ್ (5 ಹೆಚ್.ಪಿ), ಡೀಸೆಲ್ ಪಂಪಸೆಟ್ ( 3 ಹೆಚ್.ಪಿ),  ಡೀಸೆಲ್ ಪಂಪಸೆಟ್ ( 4 ಹೆಚ್.ಪಿ), ಡೀಸೆಲ್ ಪಂಪಸೆಟ್ ( 5 ಹೆಚ್.ಪಿ), ಡೀಸೆಲ್ ಪಂಪಸೆಟ್ ( 8-10 ಹೆಚ್.ಪಿ),            

ಇದನ್ನೂ ಓದಿ: Crop loan farmer list-ಬೆಳೆ ಸಾಲ ಮನ್ನಾ ಅಗಿರುವ ಪಟ್ಟಿಯನ್ನು ನೋಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

ಶೇಂಗಾ ಕಟಾವು ಯಂತ್ರ, ಶೇಂಗಾಕಾಯಿ ಬಿಡಿಸುವ ಯಂತ್ರ, ಬಹುಬೆಳೆ ಕಟಾವು ಯಂತ್ರ, ಬಹುಬೆಳೆ ಒಕ್ಕಣೆ ಯಂತ್ರ (10 ಹೆಚ್.ಪಿ), ಬಹುಬೆಳೆ ಒಕ್ಕಣೆ ಯಂತ್ರ (8 ಹೆಚ್.ಪಿ), ಬೇಲರ್ (ಟ್ರ್ಯಾಕ್ಟರ್ ಚಾಲಿತ)25-55 ಹೆಚ್.ಪಿ, ಪಲ್ವರೈಸರ್ (1 ಹೆಚ್.ಪಿ), ಪಲ್ವರೈಸರ್ (3 ಹೆಚ್.ಪಿ), ಫ್ಲೋರ್ ಮಿಲ್ (7.5 ಹೆಚ್.ಪಿ), ಫ್ಲೋರ್ ಮಿಲ್ (10 ಹೆಚ್.ಪಿ), ರಾಗಿ ಕ್ಲೀನಿಂಗ್ ಮಶಿನ್ (3 ಹೆಚ್.ಪಿ), ದಾಲ್ ಪ್ರೊಸೆಸ್ಸರ್ – ಬೇಳೆ ಮಾಡುವ ಯಂತ್ರ (2 ಹೆಚ್.ಪಿ), ಮಲ್ಟಿ ಆಯಿಲ್ ಸೀಡ್ಸ್ ಪ್ರೆಸ್ ಮಶೀನ್(oil extractor machine) , ಆಟೋಮೇಟಿಕ್ ಕೋಲ್ಡ್ ಆಯಿಲ್ ಪ್ರೆಸ್ ಮಶೀನ್,

Karnataka agriculture department mechanization scheme- ಕೃಷಿ ಯಾಂತ್ರೀಕರಣ ಯೋಜನೆಗಳಡಿ ಸವಲತ್ತುಗಳನ್ನು ಪಡೆಯಲು ಅರ್ಜಿ ಸಲ್ಲಿಕೆ ವಿಧಾನ, ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಮತ್ತು ಸಹಾಯಧನ ಮಂಜೂರಾತಿ ವಿವರ ಹೀಗಿದೆ: 

1) FRUITS (Farmers Registration and Unified Beneficiary Information System) Portal ತಂತ್ರಾಂಶದಲ್ಲಿ ನೊಂದಾಯಿತರಾದ ರೈತರು ಮಾತ್ರ ತಾವು ಇಚ್ಚಿಸುವ ಯಂತ್ರೋಪರಕರಣಗಳಿಗೆ ಕೆ-ಕಿಸಾನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

2) ರೈತರು ತಾವು ಇಚ್ಚಿಸುವ ಯಂತ್ರೋಪಕರಣಗಳಿಗೆ ಕೆ-ಕಿಸಾನ್ ಫೋರ್ಟಲ್‌ನ Citizen Centric login (kkisan.karnataka.gov.in) ಅಥವಾ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 

3) ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಅರ್ಜಿ ಸಲ್ಲಿಸಿದ್ದಲ್ಲಿ, ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ರೈತರು ಸಲ್ಲಿಸುವ ಅರ್ಜಿಗಳನ್ನು ಮತ್ತು ಅರ್ಜಿಗಳೊಂದಿಗೆ ಸಲ್ಲಿಸಿರುವ ಈ ಕೆಳಕಂಡ ದಾಖಲಾತಿಗಳನ್ನು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಪರಿಶೀಲಿಸಲಾಗುತ್ತದೆ. 

ಇದನ್ನೂ ಓದಿ: Ganesh chaturthi 2024: ನಿಮ್ಮ ಊರಿನಲ್ಲಿ ಗಣೇಶನನ್ನು ಕೂರಿಸುತ್ತಿದಿರೇ? ಆಗಿದ್ದರೆ ತಪ್ಪದೆ ಈ ಮಾಹಿತಿ ತಿಳಿಯಿರಿ!

⦁    ಅರ್ಜಿಯೊಂದಿಗೆ ಪಾಸ್ ಪೋರ್ಟ ಅಳತೆಯ ಪೋಟೋ,
⦁    ಪಹಣಿ,
⦁    ಜಾತಿ ಪ್ರಮಾಣ ಪತ್ರ (ಅವಶ್ಯಕತೆಯಿದ್ದಲ್ಲಿ),
⦁    ಟ್ರ್ಯಾಕ್ಟರ್ RC book (ಅವಶ್ಯಕತೆಯಿದ್ದಲ್ಲಿ),
⦁    ಬ್ಯಾಂಕ್ ಖಾತೆಯ ವಿವರ,
⦁    ಸವಲತ್ತನ್ನು ಪಡೆಯಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದಲ್ಲಿ, ಸಾಲ ಪಡೆದ ಬ್ಯಾಂಕಿನ ವಿವರ,
⦁    ರೈತರಿಂದ ರೂ.20/-ರ ಛಾಪಾ ಕಾಗದದ ಮೇಲೆ ಪಡೆದ ಸವಲತ್ತನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲವೆಂದು ಹಾಗೂ ಪರಬಾರೆ ಮಾಡುವುದಿಲ್ಲವೆಂದು ಘೋಷಣಾ ಪತ್ರ, 
⦁    ಜಂಟಿ ಖಾತೆಯಿದ್ದಲ್ಲಿ ವಾರಸುದಾರರ ವಂಶವೃಕ್ಷ ಮತ್ತು ನಿರಕ್ಷೇಪಣಾ ಪತ್ರ.
⦁    ಅರ್ಜಿದಾರರ ಅಧಾರ್ ಕಾರ್ಡ ಪ್ರತಿ.
⦁    ಬ್ಯಾಂಕ್ ಪಾಸ್ ಬುಕ್ ಪ್ರತಿ.

ಇದನ್ನೂ ಓದಿ: Mini tractor subsidy- ಸಬ್ಸಿಡಿಯಲ್ಲಿ ಮಿನಿ ಟ್ರಾಕ್ಟರ್, ಪವರ್ ಟಿಲ್ಲರ್, ಪವರ್ ವೀಡರ್ ಇತರೆ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!

4) ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೆ ಸ್ವೀಕೃತಿ ಪತ್ರವನ್ನು ನೀಡುವುದು ಹಾಗೂ ಸ್ವೀಕೃತವಾದ ಎಲ್ಲಾ ಅರ್ಜಿಗಳ ವಿವರಗಳನ್ನು ಜೇಷ್ಟತೆಯಲ್ಲಿ ಒಂದು ಪ್ರತ್ಯೇಕ ವಹಿಯಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ದಾಖಲಿಸಲಾಗುತ್ತದೆ.

5) ಜೇಷ್ಠತೆ ಆಧಾರದ ಮೇಲೆ ಅರ್ಜಿಗಳನ್ನು ಪರಿಶೀಲಿಸಿ ಅರ್ಜಿಗಳೊಂದಿಗೆ ಸಲ್ಲಿಸಿರುವ ದಾಖಲಾತಿಗಳು ತೃಪ್ತಿಕರವಾಗಿದ್ದಲ್ಲಿ, ಸದರಿ ಅರ್ಜಿಯನ್ನು ಕೆ-ಕಿಸಾನ ಪೋರ್ಟಲ್ ನ RSK Login ID ಯಲ್ಲಿ ಅಪ್ಲೋಡ್ ಮಾಡಿ ಸ.ಕೃ.ನಿ ಲಾಗಿನ್ ಐಡಿಗೆ ರವಾನಿಸಲಾಗುತ್ತದೆ. ತೃಪ್ತಿಕರವಾಗಿಲ್ಲದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಿ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗುತ್ತದೆ.

6) ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಅಧಿಕಾರಿಗಳು ತಮ್ಮ ಲಾಗಿನ್ ಐಡಿಗೆ ರವಾನೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ. ಪರಿಶೀಲಿಸಿದ ಅರ್ಜಿಗಳು ತೃಪ್ತಿಕರವಾಗಿದ್ದಲ್ಲಿ ಜೇಷ್ಠತಾ ಆಧಾರದ ಮೇಲೆ ಅರ್ಹಗೊಂಡ ರೈತರಿಂದ ಸದರಿ ಘಟಕಕ್ಕೆ ಇತರೆ ಇಲಾಖೆಗಳಾದ ತೋಟಗಾರಿಕೆ/ರೇಷ್ಮೆ ಇಲಾಖೆಯಿಂದ ಸಹಾಯಧನ ಪಡೆದಿರುವುದಿಲ್ಲವೆಂಬ ದೃಢೀಕರಣ ಪತ್ರದ ದಾಖಲಾತಿಗಳನ್ನು ಪಡೆದು ಯೋಜನೆವಾರು ಕ್ರಿಯಾ ಯೋಜನೆ ಅನ್ವಯ ಕೆ- ಕಿಸಾನ್ ನಲ್ಲಿ ನೀಡಿದ ಗುರಿಗಳ ಮಿತಿಗೊಳಪಟ್ಟು (ಯಾವುದೇ ಅನುದಾನ ಬಿಡುಗಡೆಗೆ ಕಾಯದೇ) ರೈತರನ್ನು ಆಯ್ಕೆ ಮಾಡಿ ಸಂಬಂಧಿಸಿದ ರೈತರಿಗೆ ತಮ್ಮ ಭಾಗದ ಮೊತ್ತವನ್ನು (ಪೂರ್ಣ ಮೊತ್ತ/ರೈತರ ವಂತಿಕೆ ಮಾತ್ರ) ಹತ್ತು ದಿನದೊಳಗಾಗಿ ಸಂಬಂಧಿಸಿದ ಸರಬರಾಜುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸೂಚಿಸಲಾಗುತ್ತದೆ.

ಇದನ್ನೂ ಓದಿ: Property tax-2024: ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿ ಈಗ ಭಾರೀ ಸುಲಭ!

7) ಆಯ್ಕೆ ಮಾಡಿದ ರೈತರು ತಮ್ಮ ಭಾಗದ ಮೊತ್ತವನ್ನು ತಮ್ಮ ಸ್ವಂತ ಬ್ಯಾಂಕ್ ಖಾತೆಯ ಮುಖಾಂತರ (ಪೂರ್ಣ ಮೊತ್ತ/ರೈತರ ವಂತಿಕೆ ಮಾತ್ರ) ಹತ್ತು ದಿನದೊಳಗಾಗಿ ಸಂಬಂಧಿಸಿದ ಸರಬರಾಜುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡದಿದ್ದಲ್ಲಿ ಸದರಿಯವರನ್ನು Pending list ನಲ್ಲಿ ಇಟ್ಟು ಮುಂದಿನ ಜೇಷ್ಟತೆ ಹೊಂದಿರುವ ರೈತರನ್ನು ಆಯ್ಕೆ ಮಾಡಲಾಗುತ್ತದೆ. 

8) ಆಯ್ಕೆಯಾದ ರೈತರಿಗೆ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಯಂತ್ರವನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ರೈತರು ರೈತ ವಂತಿಕೆ ಕೊಟ್ಟು ಯಂತ್ರ ಖರೀದಿ ಮಾಡಿದ ಬಳಿಕ ಯಂತ್ರ ಸರಬರಾಜು ಕಂಪನಿಗೆ ಯಂತ್ರದ ಸಹಾಯಧನ ಮೊತ್ತ ಜಮಾ ಅಗುತ್ತದೆ.

mechanization online application link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್: Apply Now