Voter id application- ಮತದಾರರು ಪಟ್ಟಿಯಲ್ಲಿ ನಿಮ್ಮ ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ!

ಚುನಾವಣೆ ಆಯೋಗದಿಂದ ಮತದಾರರ ಪಟ್ಟಿಗೆ(Voter id) ಹೆಸರನ್ನು ಸೇರಿಸಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Voter id application- ಮತದಾರರು ಪಟ್ಟಿಯಲ್ಲಿ ನಿಮ್ಮ ಹೆಸರು ಬಿಟ್ಟು ಹೋಗಿದ್ದರೆ ಸೇರ್ಪಡೆಗೆ ಅರ್ಜಿ ಸಲ್ಲಿಸಲು ಅವಕಾಶ!
Voter id list-2024

ಚುನಾವಣೆ ಆಯೋಗದಿಂದ ಮತದಾರರ ಪಟ್ಟಿಗೆ(Voter id) ಹೆಸರನ್ನು ಸೇರಿಸಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

"ಕರ್ನಾಟಕ ಮುಖ್ಯ ಚನಾವಣಾಧಿಕಾರಿ" ರವರ ಅಧಿಕೃತ ವೆಬ್ಸೈಟ್ ನಲ್ಲಿ ಅಂತಿಮ ಮತದಾರರ ಪಟ್ಟಿ-2024 ಅನ್ನು ಬಿಡುಗಡೆ ಮಾಡಲಾಗಿದ್ದು ಈ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವ ಸಾರ್ವಜನಿಕರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸಾರ್ವಜನಿಕರು ರಾಜ್ಯ ಮತ್ತು ದೇಶ ಮಟ್ಟದಲ್ಲಿ ನಡೆಯುವ ವಿವಿಧ ಬಗ್ಗೆಯ ಚುನಾವಣೆಗಳಲ್ಲಿ ತಮ್ಮ ಮತವನ್ನು ಚಲಾಯಿಸಲು ಗುರುತಿನ ಚೀಟಿ(Voter Id) ಹೊಂದಿರುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: BPL card Application- ಹೊಸ ಬಿ.ಪಿ.ಎಲ್ ಕಾರ್ಡ ಪಡೆಯಲು ಅರ್ಜಿ ಆಹ್ವಾನ!

Voter id list-2024: ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಈ ಕ್ರಮ ಅನುಸರಿಸಿ:

ಅಂತಿಮ ಮತದಾರರ ಪಟ್ಟಿಯನ್ನು ಪ್ರತಿಯೊಬ್ಬ ಮತದಾರರು, ಪರಿಶೀಲಿಸಿ ತಮ್ಮ ಹೆಸರು ಮತ್ತು ತಮ್ಮ ಕುಟುಂಬ ಸದಸ್ಯರುಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿ ನಮೂದು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಒಂದು ವೇಳೆ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿದ್ದಲ್ಲಿ ಕೂಡಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಅವಕಾಶವಿದ್ದು, VOTER HELPLINE APP ಅನ್ಲೈನ್ ಅರ್ಜಿ ಸಲ್ಲಿಸಿ ಅಥವಾ ಸಂಬಂಧಪಟ್ಟ ತಮ್ಮ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ಅವಶ್ಯಕ ದಾಖಲೆಗಳೊಂದಿಗೆ ತಮ್ಮ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: RTC adhar link status- ನಿಮ್ಮ ಜಮೀನಿನ ಪಹಣಿಗೆ ಆಧಾರ್ ಜೋಡಣೆ ಅಗಿದಿಯಾ? ಎಂದು ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಬಿಡುಗಡೆ.

VOTER HELPLINE APP ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್: Download Now

Voter list-2024 check: ಮತದಾರರ ಪಟ್ಟಿ ಬಿಡುಗಡೆ:

ಚುನಾವಣಾ ಆಯೋಗದಿಂದ ಈಗಾಗಲೇ ಅಂತಿಮ ಮತದಾರರ ಪಟ್ಟಿಯನ್ನು  "ಕರ್ನಾಟಕ ಮುಖ್ಯ ಚನಾವಣಾಧಿಕಾರಿ" ರವರ ಅಧಿಕೃತ ವೆಬ್ಸೈಟ್ ನಲ್ಲಿ ಜನವರಿ 22,2024 ರಂದು ಪ್ರಕಟಿಸಲಾಗಿದ್ದು ಸಾರ್ವಜನಿಕರು ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಲು ಈ ಕೆಳಗೆ ತಿಳಿಸಿರುವ ವಿಧಾನವನ್ನು  ಅನುಸರಿಸಬಹುದು.

Step-1: ಮೊದಲಿಗೆ ಈ ಲಿಂಕ್ Voter list check ಮೇಲೆ ಒತ್ತಿ ಆಧಿಕೃತ ವೆಬ್ಸೈಟ್ "ಕರ್ನಾಟಕ ಮುಖ್ಯ ಚನಾವಣಾಧಿಕಾರಿ" ರವರ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು. ತದನಂತರ ಈ ಪುಟದ ಬಲ ಬದಿಯ ಮೇಲೆ ತೋರಿಸುವ "ಅಂತಿಮ ಮತದಾರರ ಪಟ್ಟಿ-2024" ಆಯ್ಕೆಯ ಮೇಲೆ ಮೇಲೆ ಕ್ಲಿಕ್ ಮಾಡಬೇಕು. 

Step-2: ಇದಾದ ಬಳಿಕ "ಅಂತಿಮ ಮತದಾರರ ಪಟ್ಟಿ-2024" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ವಿಧಾನಸಭಾ ಕ್ಷೇತ್ರ, ಭಾಷೆ ಅನ್ನು ಆಯ್ಕೆ ಮಾಡಿಕೊಂಡರೆ ಕೆಳಗಡೆ ನಿಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಯ ಪಟ್ಟಿ ತೋರಿಸುತ್ತದೆ.

ಇದನ್ನೂ ಓದಿ: Copra msp price- ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಗೆ ಪುನಃ ನೋಂದಣಿಗೆ ಅವಕಾಶ! ಎಷ್ಟು ದಿನ ಅವಕಾಶ ನೀಡಲಾಗಿದೆ?

Step-3: ಇಲ್ಲಿ ನಿಮ್ಮ ಮತಗಟ್ಟೆಯನ್ನು ಹುಡುಕಿ ಮೇಲೆ ತೋರಿಸುವ ಕ್ಯಾಪ್ಚ್ ಕೋಡ್ ನಮೂದಿಸಿ "DraftRoll - 2024" ವಿಭಾಗದಲ್ಲಿರುವ Download ಐಕಾನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮತಗಟ್ಟೆಯ ಎಲ್ಲಾ ಮತದಾರರ ಅಂತಿಮ ಪಟ್ಟಿ ತೋರಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇದಿಯಾ? ಇಲ್ಲವಾ? ಎಂದು ಚೆಕ್ ಮಾಡಿಕೊಳ್ಳಬೇಕು.

voter id helpline number- ಹೆಚ್ಚಿನ ಮಾಹಿತಿಗಾಗಿ:

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅಧಿಕೃತ ವೆಬ್ಸೈಟ್: Click here

ಸಹಾಯವಾಣಿ: 1950 ಅಥವಾ 180042551950

ಇದನ್ನೂ ಓದಿ: Scholarship application- ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ!