Weather: ಮುಂದಿನ 7 ದಿನದಲ್ಲಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ!

weather: ಕರ್ನಾಟಕ ಮಳೆ ನಕ್ಷೆಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ವ್ಯಾಪ್ತಿಯಲ್ಲಿ ಅತ್ಯಧಿಕ 82.5 ಮೀಮೀ ಮಳೆ ದಾಖಲಾಗಿರುತ್ತದೆ. ಉಳಿದಂತೆ ಕೋಲಾರ, ಮೈಸೂರು, ದಕ್ಷಿಣಕನ್ನಡ, ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆ ದಾಖಲಾಗಿರುತ್ತದೆ.

ಕರ್ನಾಟಕ ಮಳೆ ನಕ್ಷೆಯ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ವ್ಯಾಪ್ತಿಯಲ್ಲಿ ಅತ್ಯಧಿಕ 82.5 ಮೀಮೀ ಮಳೆ ದಾಖಲಾಗಿರುತ್ತದೆ. ಉಳಿದಂತೆ ಕೋಲಾರ, ಮೈಸೂರು, ದಕ್ಷಿಣಕನ್ನಡ, ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆ ದಾಖಲಾಗಿರುತ್ತದೆ.

ಹಾಸನ, ಚಿಕ್ಕಮಂಗಳೂರು, ಚಿಕ್ಕಬಳ್ಳಾಪುರ ,ದಾವಣಗೆರೆ, ವಿಜಯನಗರ, ಬಳ್ಳಾರಿಯ ಕೆಲವು ಭಾಗಗಳಲ್ಲಿ ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆ ಬಂದಿರುತ್ತದೆ.

ನಾಳೆ ಬೆಳಗ್ಗೆ (06-11-2023) ಬೆಳಿಗ್ಗೆ 8-00 ಗಂಟೆವರೆಗಿನ ಕರ್ನಾಟಕದ ಮಳೆ ಮುನ್ಸೂಚನೆ ವಿವರ ಹೀಗಿದೆ:

ಪ್ರಸ್ತುತ ಕರ್ನಾಟಕ ಮಳೆ ಮುನ್ಸೂಚನೆ ನಕ್ಷೆಯ ಪ್ರಕಾರ ಮುಂದಿನ 7 ದಿನಗಳ ವರೆಗೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಉತ್ತಮದಿಂದ ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿರುತ್ತದೆ.

ಉಳಿದಂತೆ ನಾಳೆಯ ಬೆಳಗ್ಗೆ ವರೆಗಿನ ಮುನ್ಸೂಚನೆಯನ್ವ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇರುತ್ತದೆ. ಉತ್ತರ ಕನ್ನಡ ಮೋಡ, ಅಲ್ಲಲ್ಲಿ ತುಂತುರು, ಒಂದೆರಡು ಕಡೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಇದನ್ನೂ ಓದಿ: New ration card-  ಆಹಾರ ಇಲಾಖೆಯಿಂದ ಗ್ರಾಹಕರಿಗೆ ಸಿಹಿ ಸುದ್ದಿ!

ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯ ಮುನ್ಸೂಚನೆ ಇರುತ್ತದೆ. ಶಿವಮೊಗ್ಗ ಜಿಲ್ಲೆಯ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಪಾವಗಢ ಸಹ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. 

ದಾವಣಗೆರೆ ಮತ್ತು ಚಿತ್ರದುರ್ಗ  ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

Next 7 days weather forecast- ಮುಂದಿನ ಒಂದು ವಾರದ ಮಳೆ ಮುನ್ಸೂಚನೆ:

ದಿನಾಂಕ: 05-11-2023 ರಿಂದ 13-11-2023 ಮಳೆ ಮುನ್ಸೂಚನೆ ನಕ್ಷೆ:

ಇದನ್ನೂ ಓದಿ: Karnataka Drought Fund : ರಾಜ್ಯ ಸರಕಾರದಿಂದ 324 ಕೋಟಿ ರೂ. ಬರ ಪರಿಹಾರ ಬಿಡುಗಡೆ! ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆ?

ಪ್ರಸ್ತುತಯಿರುವ ಹವಾಮಾನ ಮುನ್ಸೂಚನೆಯಂತೆ ಈ ಮಳೆಯ ವಾತಾವರಣವು ನವೆಂಬರ್ 10ರ ವರೆಗೂ ಮುಂದುವರಿಯುವ ಲಕ್ಷಣಗಳಿವೆ. ಒಂದು ವಾರದ ಮಳೆ ಮುನ್ಸೂಚನೆ ಪ್ರಕಾರ ಈ ಮೇಲಿನ ನಕ್ಷೆಯಲ್ಲಿ ಕೆಂಪು ಬಣ್ಣದಿಂದ ಗುರುತಿಸಿದ ಜಿಲ್ಲೆಗಳಲ್ಲಿ(100 ಮೀಮೀ ದಿಂದ 125 ಮೀಮೀ ಮಳೆ ಸಾಧ್ಯತೆ) ಅಂದರೆ ಮೈಸೂರು, ಮಂಡ್ಯ, ರಾಮನಗರ, ಬೆಳಗಾವಿ, ಬೆಂಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಂಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ವಿಜಯನಗರ, ದಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ನೀಡಲಾಗಿದೆ.

ಇದರ ಜೊತೆಗೆ ಮಳೆ ಮುನ್ಸೂಚನೆ ನಕ್ಷೆಯಲ್ಲಿ ಹಳದಿ ಬಣ್ಣದಲ್ಲಿ(50 ಮೀಮೀ ದಿಂದ 80 ಮೀಮೀ ಮಳೆ ಸಾಧ್ಯತೆ)  ಗುರುತಿಸಿದ ಕೊಡಗು, ದಕ್ಷಿಣಕನ್ನಡ, ಉಡುಪಿ,ಉತ್ತರಕನ್ನಡ ಬೆಳಗಾವಿ ಅಲ್ಲಲ್ಲಿ, ವಿಜಾಪುರ, ಕೊಪ್ಪಳ, ಯಾದಗಿರಿ, ಗುಲ್ಬರ್ಗ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆ ಮುನ್ಸೂಚನೆ ನೀಡಲಾಗಿದೆ.

ಹಸಿರು ಬಣ್ಣದಿಂದ(25 ಮೀಮೀ ದಿಂದ 40 ಮೀಮೀ ಮಳೆ ಸಾಧ್ಯತೆ)  ಗುರುತಿಸಿದ ಉಳಿದ ಜಿಲ್ಲೆಗಳಲ್ಲಿ ಸಾಧಾರಣದಿಂದ ಅಲ್ಪ ಮಳೆ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Voter ID list-2023: ಚುನಾವಣಾ ಆಯೋಗದಿಂದ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಸರಿ ಇದೆಯೇ ಚೆಕ್ ಮಾಡಿ.

Varunamitra helpline- ನಿಮ್ಮ ಹಳ್ಳಿಯ ಮಳೆ ಮಾಹಿತಿ ಪಡೆಯಲು: 9243345433 ವರುಣಮಿತ್ರ ಸಹಾಯವಾಣಿ

ದಿನದ 24 ಗಂಟೆಯು ರೈತರು ಈ 9243345433  ವರುಣ ಮಿತ್ರ ಸಹಾಯವಣಿಗೆ ಕರೆ ನಿಮ್ಮ ಹಳ್ಳಿಯ ಮಳೆ ಮನ್ಸೂಚನೆಯನ್ನು ಸುಲಭವಾಗಿ ನಿಮ್ಮ ಮೊಬೈಲ್ ಮೂಲಕವೇ ಪಡೆಯಬವುದಾಗಿದೆ.