Weather news-ಮಳೆ ಮುನ್ಸೂಚನೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಾಧ್ಯತೆ!

ಕರ್ನಾಟಕ ಮಳೆ ನಕ್ಷೆಯ ಮಾಹಿತಿಯ ಪ್ರಕಾರ KSNDMC ಸ್ಥಾಪಿಸಿರುವ ಗ್ರಾಮ ಪಂಚಾಯಿತಿ ಮಟ್ಟದ ಮಳೆ(rainfall) ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆ ದತ್ತಾಂಶ/ಅಂಕಿ-ಅಂಶಗಳ ಅನ್ವಯ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ವಿಜಯವುರ ಜಿಲ್ಲೆ ಇಂಡಿ ತಾಲ್ಲೂಕು, ನಿಂಬಾಳ ಕೆ.ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಧಿಕ 128.0 ಮಿ.ಮೀ ನಷ್ಟು ಮಳೆ ದಾಖಲಾಗಿದೆ.

Weather news-ಮಳೆ ಮುನ್ಸೂಚನೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ ಸಾಧ್ಯತೆ!
Weather news-2024

ಕರ್ನಾಟಕ ಮಳೆ ನಕ್ಷೆಯ ಮಾಹಿತಿಯ ಪ್ರಕಾರ KSNDMC ಸ್ಥಾಪಿಸಿರುವ ಗ್ರಾಮ ಪಂಚಾಯಿತಿ ಮಟ್ಟದ ಮಳೆ(rainfall) ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆ ದತ್ತಾಂಶ/ಅಂಕಿ-ಅಂಶಗಳ ಅನ್ವಯ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ವಿಜಯವುರ ಜಿಲ್ಲೆ ಇಂಡಿ ತಾಲ್ಲೂಕು, ನಿಂಬಾಳ ಕೆ.ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಧಿಕ 128.0 ಮಿ.ಮೀ ನಷ್ಟು ಮಳೆ ದಾಖಲಾಗಿದೆ.

ಉಳಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಧ್ಯಮದಿಂದ ಉತ್ತಮ ಮಳೆ ಬಂದಿರುತ್ತದೆ. ರಾಜ್ಯದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ರಾಜ್ಯದಾದ್ಯಂತ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಿದ್ದು ರಾಜ್ಯದ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣದಿಂದ ಅಧಿಕ ಮಳೆಯಾಗಿದ್ದು, ಕೆಲವೆಡೆ ಗುಡುಗು ಸಿಡಿಲು ಸಹಿತ ಬಿರುಗಾಳಿಯೊಂದಿಗೆ ಅತ್ಯಧಿಕ ಮಳೆಯಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ: Bele vime-2024: ನಿಮ್ಮ ಸರ್ವೆ ನಂಬರ್ ಹಾಕಿ ಬೆಳೆ ವಿಮೆ ಎಷ್ಟು ಜಮಾ ಅಗಿದೆ ಎಂದು ತಿಳಿಯುವುದು ಹೇಗೆ?

Tomorrow weather-ನಾಳೆ(11-06-2024ರ) ಬೆಳಿಗ್ಗೆ 8-00 ಗಂಟೆವರೆಗಿನ ರಾಜ್ಯದ ಮಳೆ ಮುನ್ಸೂಚನೆ ವಿವರ ಹೀಗಿದೆ:

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. 

ಕೊಡಗು, ಹಾಸನ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದರೆ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಮಹಾರಾಷ್ಟ್ರದ ಕರಾವಳಿ ಮೂಲಕ ಪ್ರವೇಶಿಸಿದ ಮುಂಗಾರು ಮಾರುತಗಳು ಮಧ್ಯ ಹಾರಾಷ್ಟ್ರದಿಂದ ದಕ್ಷಿಣಾಭಿಮುಖವಾಗಿ ಚಲಿಸಿ ಕರ್ನಾಟಕಕ್ಕೆ ಪ್ರವೇಶಿಸುವುದರಿಂದ ವಿಜಯಪುರ ಭಾರಿ ಮಳೆಯ ಮುನ್ಸೂಚೆನೆ ಇದೆ, ಕೊಪ್ಪಳ, ಯಾದಗಿರಿ, ಕಲಬುರ್ಗಿ ಜಿಲ್ಲೆಗಳಲ್ಲಿ ಸಹ ಉತ್ತಮ ಮಳೆಯ ಮುನ್ಸೂಚೆನೆ ಇದೆ. 

ಗದಗ, ಬಾಗಲಕೋಟೆ, ದಾವಣಗೆರೆ, ಬಳ್ಳಾರಿ, ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಇದನ್ನೂ ಓದಿ: adhar update-2024: ಇನ್ನು ಮುಂದೆ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಎಲ್ಲಾ ಹಣ ಪಡೆಯಲು ಈ ಕೆಲಸ ತಪ್ಪದೇ ಮಾಡಿ!

ಹಾವೇರಿ, ಧಾರವಾಡ, ಬೆಳಗಾವಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 

ಉಳಿದ ಕರ್ನಾಟಕದ ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದೆ.

ಈಗಿನಂತೆ ಜೂನ್ 11ರ ತನಕ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದ್ದು, ನಂತರ ಮಳೆಯ ಪ್ರಮಾಣ ಕಡಿಮೆಯಾಗಲಿದೆ.  ಜೂನ್ 12ರಿಂದ ದಕ್ಷಿಣ ಕರ್ನಾಟಕದ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದ್ದರೆ, ಕರಾವಳಿ ಭಾಗಗಳಲ್ಲಿ ಜೂನ್ 13ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.

ಇದನ್ನೂ ಓದಿ: Bele vime amount- 2ನೇ ಹಂತದಲ್ಲಿ ಎಕರೆಗೆ 18,000 ರೂ ಬೆಳೆ ವಿಮೆ ರೈತರ ಖಾತೆಗೆ ಬಿಡುಗಡೆ!

ರಾಜ್ಯದ 2024ರ ಪೂರ್ವ ಮುಂಗಾರು ಸಂಚಿತ ಮಳೆ ಪರಿಸ್ಥಿತಿ:

2024ರ ಪೂರ್ವ ಮುಂಗಾರು (ಮಾರ್ಚ್ 1 ರಿಂದ 31ನೇ ಮೆ) ವರೆಗೆ ವಾಡಿಕೆಯಾಗಿ 115 ಮಿ.ಮೀ ಮಳೆಯಾಗಬೇಕಿದ್ದು ವಾಸ್ತವಿಕ 151 ಮಿ.ಮೀ ಮಳೆಯಾಗಿದ್ದು ವಾಡಿಕೆಗೆ ಹೋಲಿಸಿದಾಗ ವಾಡಿಕೆಗೆ ಹೋಲಿಸಿದಾಗ ಶೇ.31ರಷ್ಟು ಅಧಿಕ ಮಳೆಯಾಗಿದೆ.

ರಾಜ್ಯದಲ್ಲಿ ಒಟ್ಟಾರೆ ಕಳೆದ 24 ಗಂಟೆಗಳಲ್ಲಿ 5.0 ಮಿ.ಮೀ ವಾಡಿಕೆ ಮಳೆಯಿದ್ದು ವಾಸ್ತವಿಕ 100 ಮಿ.ಮೀ ಮಳೆಯಾಗಿದ್ದು ವಾಡಿಕೆಗೆ ಹೋಲಿಸಿದಾಗ ಶೇ.87 ರಷ್ಟು ಅಧಿಕ ಮಳೆಯಾಗಿರುತ್ತದೆ.

2024 ಮುಂಗಾರು ಜೂನ್ 1ನೇ ಜೂನ್ ರಿಂದ 10ನೇ ಜೂನ್) ವರೆಗೆ ವಾಡಿಕೆಯಾಗಿ 51 ಮಿ.ಮೀ ಮಳೆಯಾಗಬೇಕಿದ್ದು ವಾಸ್ತವಿಕ 91 ಮಿ.ಮೀ ಮಳೆಯಾಗಿದ್ದು, ವಾಡಿಕೆಗೆ ಹೋಲಿಸಿದಾಗ ಶೇ.78 ರಷ್ಟು ವಾಡಿಕೆ ಮಳೆಯಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ: Yashaswini Yojana-2024: ಯಶಸ್ವಿನಿ ಯೋಜನೆ ಕಾರ್ಡದಾರರಿಗೆ ಭರ್ಜರಿ ಸಿಹಿ ಸುದ್ದಿ! 

Karnataka rainfall detaisl-10-06-2024ರ ಅನ್ವಯ ವಲಯವಾರು ಮಳೆ ಪ್ರಮಾಣ (ಮಿ.ಮೀ) ಗಳಲ್ಲಿ:

ಮಾಹಿತಿ ಕೃಪೆ: ಸಾಯಿ ಶೇಖರ್ ಬಿ & KSNDMC