ಯುವನಿಧಿ(Yuva nidhi) ಯೋಜನೆ ಅನುಷ್ಥಾನ ಮಾಡುತ್ತಿರುವ ಇಲಾಖೆಯಿಂದ ನೂತನ ಪ್ರಕಟಣೆಯನ್ನು ಹೊರಡಿಸಿದ್ದು ಇನ್ನು ಮುಂದೆ ಈ ಯೋಜನೆಯಡಿ ಪ್ರತಿ ತಿಂಗಳು ಅರ್ಥಿಕ ಸಹಾಯಧನವನ್ನು ಪಡೆಯಲು ಈ ಯೋಜನೆಯ ಎಲ್ಲಾ ಅರ್ಹ ಫಲಾನುಭವಿಗಳು ಈ ಅಂಕಣದಲ್ಲಿ ತಿಳಿಸಿರುವ ಪ್ರಮಾಣ ಪತ್ರವನ್ನು ಪ್ರತಿ ತಿಂಗಳು ಸಹ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಈ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ.
ರಾಜ್ಯದಲ್ಲಿ ನೂತನ ಸರಕಾರ ಜಾರಿಗೆ ಬಂದ ಬಳಿಕ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಥಾನ ಮಾಡುತ್ತಿದ್ದು 5 ನೇ ಗ್ಯಾರಂಟಿ ಯೋಜನೆಯಾದ “ಯುವನಿಧಿ”(Yuva nidhi yojana-2024) ಈ ಯೋಜನೆಯ ಮೂಲಕ ನಿರುದ್ಯೋಗಿ ವಿದ್ಯಾವಂತ ಯುವ ಜನರಿಗೆ ನಿರುದ್ಯೋಗ ಭತ್ಯೆಯನ್ನು ಪ್ರತಿ ತಿಂಗಳು ಪಾವತಿ ಮಾಡಲಾಗುತ್ತಿದೆ.
Yuva nidhi status- ಯುವನಿಧಿ ಅರ್ಥಿಕ ನೆರವಿನ ವಿವರ(ಪ್ರತಿ ತಿಂಗಳಿಗೆ):
1) ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ: ರೂ 3,000/-
2) ಡಿಪ್ಲೋಮಾ ಹೊಂದಿದವರಿಗೆ: ರೂ 1,500/-
ಇದನ್ನೂ ಓದಿ: Parihara payment-ಈ ಕೆಲಸ ಮಾಡಿದ ಬಳಿಕ ನನ್ನ ಖಾತೆಗೆ ಬಂತು ರೂ 2,000 ಬೆಳೆ ನಷ್ಟ ಪರಿಹಾರ!
Yuva nidhi yojana-2024: ಯುವನಿಧಿ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ:
ಯುವನಿಧಿ ಯೋಜನೆ ಸೌಲಭ್ಯಕ್ಕೆ ಪ್ರತಿ ಮಾಹೆ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸುವುದನ್ನು ಯೋಜನೆ ಅನುಷ್ಥಾನ ಮಾಡುವ ಇಲಾಖೆಯಿಂದ ತಿಳಿಸಲಾಗಿದೆ.
ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ “ಯುವನಿಧಿ” ಯೋಜನೆಯಲ್ಲಿ ಪದವಿ / ಸ್ನಾತಕೊತ್ತರ ಪದವಿ ಮತ್ತು ಡಿಪ್ಲೊಮಾಗಳನ್ನು 2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದು ಹಾಗೂ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿವಸಗಳು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024 ರಂದು ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ.
2024ನೇ ಫೆಬ್ರವರಿ 29 ರವರೆಗೆ ಅವಕಾಶ:
ಅಭ್ಯರ್ಥಿಗಳು ಈ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ಮಾಹೆಯಲ್ಲಿ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆಯನ್ನು ಮಾಡಬೇಕಾಗಿರುತ್ತದೆ. ಪ್ರಸ್ತಕ ಮಾಹೆಯಲ್ಲಿ 2024ನೇ ಫೆಬ್ರವರಿ 29 ರವರೆಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಪ್ರಯೋಜನೆ ಪಡೆಯುತ್ತಿರುವ ಅರ್ಹ ಅಭ್ಯರ್ಥಿಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆಯನ್ನು ಮಾಡಲಾಗುವುದಿಲ್ಲ ಎಂಬುದಾಗಿ ತಿಳಿಯಪಡಿಸಲಾಗಿದೆ. ಈಗಾಗಲೇ ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಜನವರಿ 2024ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿದ್ದು, ಮುಂದಿನ ತಿಂಗಳು ಪ್ರಯೋಜನ ಪಡೆದುಕೊಳ್ಳಲು ಸ್ವಯಂ ಘೋಷಣೆ ಮಾಡಬೇಕಾಗಿದ್ದು ಎಸ್‌ಎಂಎಸ್ ಸಂದೇಶವನ್ನು ಅಭ್ಯರ್ಥಿಗಳಿಗೆ ರವಾನಿಸಲಾಗಿರುತ್ತದೆ.
ಹಾಗೂ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್ ಸೀಡೆಡ್ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು. ಅಭ್ಯರ್ಥಿಗಳು ಸ್ವಯಂ ಘೋಷಣೆ https://sevasindhugs.karnataka.gov.in/ ವಿಕ್ಷೀಸಬಹುದಾಗಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Yuvanidhi – Application for Monthly Unemployment Self Declaration- ಯುವನಿಧಿ ಯೋಜನೆ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆ ಮಾಡುವ ವಿಧಾನ:
ಈ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿ ಅರ್ಥಿಕ ನೆರವು ಪಡೆಯುತ್ತಿರುವ ಫಲಾನುಭವಿಗಳು ಇನ್ನು ಮುಂದೆಯು ಪ್ರತಿ ತಿಂಗಳು ಅರ್ಥಿಕ ನೆರವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆ ಮಾಡಬಹುದು.
Step-1: ಪ್ರಥಮದಲ್ಲಿ ಈ ಲಿಂಕ್ click here ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅನ್ನು ಭೇಟಿ ಮಾಡಬೇಕು. ನಂತರ “Apply for services” ಬಟನ್ ಮೇಲೆ ಕ್ಲಿಕ್ ಮಾಡಿ “Serach” ಆಯ್ಕೆಯಲ್ಲಿ “yuvanidhi” ಎಂದು ಸರ್ಚ್ ಮಾಡಬೇಕು.
Step-2: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ಇಲ್ಲಿ ಒಟ್ಟು 3 ಆಯ್ಕೆಗಳು ತೋರಿಸುತ್ತವೆ ಇದರಲ್ಲಿ ಎರಡನೇ ಆಯ್ಕೆ “Yuvanidhi – Application for Monthly Unemployment Self Declaration / ಯುವನಿಧಿ – ಮಾಸಿಕ ನಿರುದ್ಯೋಗ ಸ್ವಯಂ ಘೋಷಣೆಗೆ ಅರ್ಜಿ” ಮೇಲೆ ಕ್ಲಿಕ್ ಮಾಡಬೇಕು.
Step-3: ತದನಂತರ ನಿಮ್ಮ Aadhaar Number / ಆಧಾರ್ ಸಂಖ್ಯೆ, Yuvanidhi Registration Application Ref Number /ಯುವನಿಧಿ ನೋಂದಣಿ ಅರ್ಜಿ ಉಲ್ಲೇಖ ಸಂಖ್ಯೆ ,Provisional Degree/Diploma Certificate Registration number /ತಾತ್ಕಾಲಿಕ ಪದವಿ/ಡಿಪ್ಲೊಮಾ ಪ್ರಮಾಣಪತ್ರ ನೋಂದಣಿ ಸಂಖ್ಯೆ , Self Declaration Month / ಸ್ವಯಂ ಘೋಷಣೆ ತಿಂಗಳು ಅನ್ನು ಆಯ್ಕೆ ಮಾಡಿಕೊಂಡು ಕೊನೆಯಲ್ಲಿ Word verification ಸಂಖ್ಯೆಗಳನ್ನು ನಮೂದಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಗಮನಿಸಿ: ಸೇವಾ ಸಿಂಧು ವೆಬ್ಸೈಟ್ ಗೆ ಈಗಾಗಲೇ ನೋಂದಣಿ ಮಾಡಿಕೊಂಡಿರುವವರು ನೇರವಾಗಿ ಬಳಕೆದಾರ ಐಡಿ ಪಾಸ್ವರ್ಡ ಹಾಕಿ ಲಾಗಿನ್ ಆಗಬಹುದು ಮೊದಲ ಬಾರಿಗೆ ಸೇವಾ ಸಿಂಧು ವೆಬ್ಸೈಟ್ ಬಳಕೆ ಮಾಡುತ್ತಿರುವವರು ಬಳಕೆದಾರ ನೋಂದಣಿ ಮಾಡಿಕೊಂಡು ಲಾಗಿನ್ ಆಗಬೇಕು.
Yuva nidhi application status- ಯುವನಿಧಿ ಯೋಜನೆ ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:
Step-1: ಮೊದಲಿಗೆ ಈ ಲಿಂಕ್ Yuva nidhi application status check ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ಪೋರ್ಟಲ್ ಅನ್ನು ಭೇಟಿ ಮಾಡಬೇಕು. ನಂತರ “Apply for services” ಬಟನ್ ಮೇಲೆ ಕ್ಲಿಕ್ ಮಾಡಿ “Serach” ಆಯ್ಕೆಯಲ್ಲಿ “yuvanidhi” ಎಂದು ಸರ್ಚ್ ಮಾಡಬೇಕು.
Step-2: ತದನಂತರ “Yuvanidhi Application Status Check /ಯುವನಿಧಿ ಅರ್ಜಿ ಸ್ಥಿತಿ ಪರಿಶೀಲನೆ” ಎಂದು ತೋರಿಸುವ 3 ಆಯ್ಕೆಯ ಮೇಲೆ ಕ್ಲಿಕ್ ಮಾಡಿ Yuvanidhi Registration Application Ref Number /ಯುವನಿಧಿ ನೋಂದಣಿ ಅರ್ಜಿ ಉಲ್ಲೇಖ ಸಂಖ್ಯೆ ಅನ್ನು ಹಾಕಿ ನಂತರ “Select Month /ತಿಂಗಳು ಆಯ್ಕೆ ಮಾಡಿ “ಪಾವತಿ ವಿವರವನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ಯೋಜನೆಯಡಿ ಎಷ್ಟು ಹಣ ಪಾವತಿ ಅಗಿದೆ ಮತ್ತು ನಿಮ್ಮ ಅರ್ಜಿ ಸ್ಥಿತಿ ವಿವರ ತೋರಿಸುತ್ತದೆ.
ಪ್ರಮುಖ ಉಪಯುಕ್ತ ಲಿಂಕ್ ಗಳು:
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು: Apply Now
ಯುವನಿಧಿ ಯೋಜನೆಗೆ ಅರ್ಜಿ ಸ್ಥಿತಿ ಚೆಕ್ ಮಾಡಲು: Yuva nidhi application status check
ಯುವನಿಧಿ ಯೋಜನೆ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆ: click here
ಯುವನಿಧಿ ಯೋಜನೆ ಮಾರ್ಗಸೂಚಿ: Download Now