ಭಾರತೀಯರ ಎಲ್ಲರ ಬಳಿಯೂ ಕಡ್ಡಾಯವಾಗಿ ಆಧಾರ್ ಕಾರ್ಡ್(aadhar card)ಹೊಂದಿರುವುದು ಸರಕಾರದ ನಿಯಮವಾಗಿದ್ದು, ಪ್ರತಿಯೊಬ್ಬರು ಈ ದಾಖಲೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು, ಆಧಾರ್ ಕಾರ್ಡ್ ಅನ್ನು ಎಷ್ಟು? ಬಾರಿ ತಿದ್ದುಪಡಿ ಮಾಡಿಸಲು ಬರುತ್ತದೆ ಎನ್ನುವುದರ ಕುರಿತು ಸಂಪೂರ್ಣವಾಗಿ ಇಲ್ಲಿ ತಿಳಿಸಲಾಗಿದೆ.
ಆಧಾರ್ ಕಾರ್ಡ್ ಅನ್ನು ಹೊಂದುವುದು ಎಷ್ಟು ಮುಖ್ಯವು ಅದರಲ್ಲಿ ನಮೂದಿಸಿದ ಅಭ್ಯರ್ಥಿಯ ಹೆಸರು ತಂದೆ/ತಾಯಿಯ ಹೆಸರು, ಹುಟ್ಟಿದ ದಿನಾಂಕ, ಮನೆ ವಿಳಾಸ, ಲಿಂಗ ಇತರೆ ವಿವರಗಳು ಸರಿಯಾಗಿ ನಮೂದಿಸಿರುವುದು ಅಷ್ಟೇ ಮುಖ್ಯವಾಗಿದೆ.
ಇದನ್ನೂ ಓದಿ: SSP Date Extended- ಎಲ್ಲಾ ರೀತಿಯ ವಿದ್ಯಾರ್ಥಿವೇತನಕ್ಕೆ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ!
ಒಂದೊಮ್ಮೆ ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ವೈಯಕ್ತಿಕ ವಿವರಗಳು ತಪ್ಪಾಗಿದ್ದರೆ ಅದನ್ನು ಎಷ್ಟು? ಬಾರಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಅನೇಕ ಮಂದಿಗೆ ಈ ಮಾಹಿತಿ ತಿಳಿದಿರುವುದಿಲ್ಲ ಆಧಾರ್ ಕಾರ್ಡ್ ನ ಮಾಹಿತಿಯನ್ನು ಎಷ್ಟು ಬಾರಿಯಾದರು ಸರಿಪಡಿಸಿಕೊಳ್ಳಬೇಕು ಎಂದು ತಿಳಿದಿಕೊಂಡಿರುತ್ತಾರೆ.
Aadhar card details correction- ಆಧಾರ್ ಕಾರ್ಡ ನಲ್ಲಿರುವ ಮಾಹಿತಿ ಏಕೆ? ಸರಿಯಾಗಿರಬೇಕು:
1) ಯಾವುದೇ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಾಯಧನ ಆಧಾರಿತ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು/ಹಣವನ್ನು ಪಡೆಯಲು ಆಧಾರ್ ಕಾರ್ಡನಲ್ಲಿರುವ ಮಾಹಿತಿ ಸರಿಯಾಗಿರುವುದು ಕಡ್ಡಾಯವಾಗಿದೆ.
2) ಮಕ್ಕಳನ್ನು ಶಾಲೆ/ಕಾಲೇಜುಗಳಿಗೆ ದಾಖಲಿಸುವ ಸಮಯದಲ್ಲಿ
3) ಯಾವುದೇ ಸರಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಆಧಾರ್ ವಿವರ ಸರಿಯಾಗಿ ದಾಖಲಾಗಿರಬೇಕು.
4) ಪಾನ್ ಕಾರ್ಡ, ರೇಷನ್ ಕಾರ್ಡ್, ಪಾಸ್ ಪೋರ್ಟ್ ಗಳನ್ನು ಪಡೆಯಲು ಆಧಾರ್ ಕಾರ್ಡ್ ನಲ್ಲಿ ನಮೂದಿಸಿರುವ ವಿವರ ಸರಿಯಾಗಿರಬೇಕು.
ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ಇತರೆ ನಮೂದಿಸಿದ ಮಾಹಿತಿಯನ್ನು ಪದೇ ಪದೇ ಅನೇಕ ಸಲ ಬದಲಾಯಿಸಬಹುದು ಎಂದು ನೀವು ತಿಳಿದುಕೊಂಡಿದರೆ ಅದು ತಪ್ಪು ಭಾವನೆಯಾಗಿದೆ. ಏಕೆಂದರೆ ಆಧಾರ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಗೆ ಒಂದು ಮಿತಿ ನಿಗದಿಪಡಿಸಲಾಗಿದೆ ಅದರ ನಂತರ ಅದನ್ನು ಬದಲಾಯಿಸಲಾಗುವುದಿಲ್ಲ. ಆಧಾರ್ ಕಾರ್ಡ್‌ನಲ್ಲಿ ಯಾವ ಮಾಹಿತಿಯನ್ನು ಎಷ್ಟು ಸಲ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ತಿಳಿಯೋಣ ಬನ್ನಿ.
ಇದನ್ನೂ ಓದಿ: Diesel pumpset subsidy- ಶೇ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
Aadhar card correction- ಆಧಾರ್ ಕಾರ್ಡ್ ನಲ್ಲಿರುವ ಎಲ್ಲಾ ಬಗ್ಗೆಯ ತಿದ್ದುಪಡಿಗೆ ಒಂದು ಮಿತಿ ಇದೆ:
2019ಕ್ಕಿಂತ ಮೊದಲು ಆಧಾರ್ ಕಾರ್ಡ್‌ನಲ್ಲಿ ಯಾವುದೇ ಮಾಹಿತಿಯನ್ನು ಬದಲಾಯಿಸಲು ಯಾವುದೇ ಮಿತಿಯನ್ನು ಆಧಾರ್ ಪ್ರಾಧಿಕಾರದಿಂದ ನಿಗದಿಪಡಿಸಿರಲಿಲ್ಲ, ಆದರೆ ನಂತರ ವರ್ಷದಿಂದ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ಹುಟ್ಟಿದ ದಿನಾಂಕ ಮತ್ತು ಲಿಂಗದಲ್ಲಿನ ತಿದ್ದುಪಡಿಗೆ ನಿಯಮಿತ ಮಿತಿಯನ್ನು ನಿಗದಿಪಡಿಸಲಾಗಿದೆ.
Aadhar card name correction-ಆಧಾರ್ ಕಾರ್ಡ್‌ನಲ್ಲಿ ಹೆಸರನ್ನು ಎಷ್ಟು ಬಾರಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ:
ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು ತಪ್ಪಾಗಿ ದಾಖಲಾಗಿದ್ದಾರೆ ನೀವು ಅದನ್ನು ತಿದ್ದುಪಡಿ ಮಾಡಲು ಬಯಸಿದರೆ, ನೀವು ಅದನ್ನು ಎರಡು ಬಾರಿ ಮಾತ್ರ ನವೀಕರಿಸಬಹುದು ಅಥವಾ ಬದಲಾಯಿಸಬಹುದು. ಇದರ ನಂತರ ನಿಮ್ಮ ಹೆಸರನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.
ಇದನ್ನೂ ಓದಿ: Sukanya samriddhi- ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ!
ಆಧಾರ್ ಕಾರ್ಡನಲ್ಲಿರುವ ಹುಟ್ಟಿದ ದಿನಾಂಕವನ್ನು ಎಷ್ಟು ಬಾರಿ ಬದಲಾಯಿಸಬಹುದು/ತಿದ್ದುಪಡಿ ಮಾಡಿಕೊಳ್ಳಬಹುದು:
ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕವನ್ನು ಬದಲಾಯಿಸಬೇಕಾದರೆ ಒಮ್ಮೆ ಮಾತ್ರ ಬದಲಾಯಿಸಬಹುದು. ಹುಟ್ಟಿದ ದಿನಾಂಕದಲ್ಲಿ ಗರಿಷ್ಠ 3 ವರ್ಷಗಳ ಬದಲಾವಣೆ ಮಾಡಬಹುದು. ಅಂದರೆ ನಿಮ್ಮ ಹುಟ್ಟಿದ ದಿನಾಂಕ ಏನೇ ಇರಲಿ, ಅದಕ್ಕಿಂತ ಮೂರು ವರ್ಷ ಮುಂದೆ ಅಥವಾ ಹಿಂದಿನ ದಿನಾಂಕವನ್ನು ನೀವು ದಾಖಲಿಸಬಹುದು . ಈ ಕಾರಣದಿಂದ ಹುಟ್ಟಿದ ದಿನಾಂಕವನ್ನು ಭರ್ತಿ ಮಾಡುವಾಗ ಹೆಚ್ಚು ಮೊನ್ನೆಚ್ಚರಿಕೆವಹಿಸಿ.
Aadhar card address correction- ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ವಿಳಾಸವನ್ನು ಎಷ್ಟು ಬಾರಿ ಬದಲಾಯಿಸಲು ಅವಕಾಶವಿದೆ:
ಸಾರ್ವಜನಿಕರು ತಮ್ಮ ಆಧಾರ್ ಕಾರ್ಡನಲ್ಲಿ ವಿಳಾಸದ ವಿವರವನ್ನು ತಿದ್ದುಪಡಿ ಅಥವಾ ಬದಲಾವಣೆ ಮಾಡಲು ಬಯಸಿದರೆ ಇದಕ್ಕೆ ಯಾವುದೇ ಮಿತಿಯಿಲ್ಲ ಎಷ್ಟು ಬಾರಿಯಾದರು ಬದಲಾವಣೆ ಮಾಡಿಕೊಳ್ಳಬಹುದು ಆದರೆ ಪೂರಕ ದಾಖಲೆಯನ್ನು ಒದಗಿಸುವುದು ಕಡ್ಡಾಯವಾಗಿದೆ.
Aadhar card gender correction-ಆಧಾರ್ ಕಾರ್ಡ್‌ನಲ್ಲಿ ಲಿಂಗವನ್ನು ಬದಲಾಯಿಸಬಹುದೇ:
ಒಂದೊಮ್ಮೆ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಲಿಂಗ ತಪ್ಪಾಗಿದ್ದರೆ ನಮೂದಿಸಲಾಗಿದ್ದರೆ ಅದನ್ನು ನೀವು ತಿದ್ದುಪಡಿ ಮಾಡಿಕೊಳ್ಳಬಹುದು.
aadhar card download- ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಅಧಿಕೃತ ವೆಬ್ಸೈಟ್ : Click here