ಆಧಾರ್ ಕಾರ್ಡನಲ್ಲಿ ಜನ್ಮ ದಿನಾಂಕ ಬದಲಾವಣೆ, ಹೆಸರು ಬದಲಾವಣೆ, ವಿಳಾಸ ಬದಲಾವಣೆ, ಮೊಬೈಲ್ ನಂಬರ್ ತಿದ್ದುಪಡಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸುವವರಿಗೆ(Aadhar card correction) ಅಂಚೆ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ ಪ್ರಕಟವಾಗಿದೆ.
ಆಧಾರ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೇಸೆಯಲ್ಲಿ ಆಧಾರ್ ಕಾರ್ಡ ತಿದ್ದುಪಡಿ(Aadhar card) ಮತ್ತು ನೋಂದಣಿಗೆ ಸಂಬಂಧಪಟ್ಟಂತೆ ಅಂಚೆ ಇಲಾಖೆಯಿಂದ ಬೃಹತ ಮೇಳವನ್ನು ಆರಂಭಿಸಿದ್ದು ತಿದ್ದುಪಡಿ ಮಾಡಿಕೊಳ್ಳುವವರು ಹಾಗೂ ಮಕ್ಕಳಿಗೆ ಹೊಸ ಆಧಾರ್ ಕಾರ್ಡ ಅನ್ನು ಮಾಡಿಕೊಳ್ಳ ಇಚ್ಚೆ ಹೊಂದಿರುವವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಮಕ್ಕಳಿಗೆ ಇಲ್ಲಿಯವರೆಗೆ ಆಧಾರ್ ಕಾರ್ಡ ಅನ್ನು ಮಾಡಿಸದವರು ಹಾಗೂ ಆಧಾರ್ ಕಾರ್ಡನಲ್ಲಿ ತಪ್ಪಾಗಿ ದಾಖಲಾಗಿರುವ ವಿವಿಧ ರೀತಿಯ ವಿವರವನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಈ ನೋಂದಣಿ ಮೇಳದಲ್ಲಿ ಅವಕಾಶವಿರುತ್ತದೆ.
ಇದನ್ನೂ ಓದಿ: PM-Kisan App: ಇ-ಕೆವೈಸಿ ಸ್ಟೇಟಸ್ ಮತ್ತು ಹಣ ಜಮಾ ವಿವರ ತಿಳಿಯಲು! ಪಿ ಎಂ ಕಿಸಾನ್ ಮೊಬೈಲ್ ಆಪ್!
How to Apply For Aadhar card correction-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ಈ ಹಿಂದೆ ಆಧಾರ್ ಕಾರ್ಡನಲ್ಲಿರು ವಿವರವನ್ನು ವಿವಿಧ ಕಡೆಗಳಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿತ್ತು ಆದರೆ ಪ್ರಸ್ತುತ ನಿಯಮದ ಪ್ರಕಾರ ಕೆಲವು ಆಯ್ದೆ ಸ್ಥಳ/ಕಚೇರಿಗಳಲ್ಲಿ ಮಾತ್ರ ಹೊಸ ಆಧಾರ್ ಕಾರ್ಡ ಪಡೆಯಲು ಮತ್ತು ಆಧಾರ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಈ ಕಾರಣದಿಂದ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
Documents For Aadhar card correction-ಆಧಾರ್ ಕಾರ್ಡ ನಲ್ಲಿ ವಿವಿಧ ಬಗ್ಗೆಯ ತಿದ್ದುಪಡಿಗೆ ಒದಗಿಸಬೇಕಾದ ಅಗತ್ಯ ದಾಖಲೆಗಳು: (ಇವುಗಳಲ್ಲಿ ಯಾವುದಾದರೂ ಒಂದು)
A) ಜನ್ಮ ದಿನಾಂಕ ಬದಲಾವಣೆ:
1) ಜನನ ಪ್ರಮಾಣ ಪತ್ರ
2) ಪಾಸ್‌ಪೋರ್ಟ್
3) ಅಂಕ ಪಟ್ಟಿ
4) ಸರ್ವೀಸ್ ಫೋಟೋ
ಇದನ್ನೂ ಓದಿ: Lineman Job- ಏಪ್ರಿಲ್ ಅಂತ್ಯಕ್ಕೆ 3 ಸಾವಿರ ಲೈನ್‌ಮೆನ್ ನೇಮಕ: ಕೆ ಜೆ ಜಾರ್ಜ್
B) ಹೆಸರು ಬದಲಾವಣೆ:
1) ವಾಹನ ಚಾಲನಾ ಪ್ರಮಾಣಪತ್ರ
2) ಪಾಸ್‌ಪೋರ್ಟ್
3) ಅಂಕ ಪಟ್ಟಿ
4) ಮದುವೆ ಪ್ರಮಾಣ ಪತ್ರ
5) ಪಾನ್ ಕಾರ್ಡ್
6) ರೇಷನ್ ಕಾರ್ಡ್
7) ವೋಟರ್ ಐಡಿ
ಇದನ್ನೂ ಓದಿ: Yashashwini Card- ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕ ಮುಂದೂಡಿಕೆ!
C) ವಿಳಾಸ ಬದಲಾವಣೆ:
1) ಪಾಸ್ ಪೋರ್ಟ್
2) ಅಂಚೆ/ಬ್ಯಾಂಕ್ ಪಾಸ್ ಬುಕ್
3) ರೇಷನ್ ಕಾರ್ಡ್
4) ವೋಟರ್ ಐಡಿ
5) ಮದುವೆ ಪ್ರಮಾಣ ಪತ್ರ
ಇದನ್ನೂ ಓದಿ: Yashashwini Card- ಯಶಸ್ವಿನಿ ಕಾರ್ಡ ಪಡೆಯಲು ಕೊನೆಯ ದಿನಾಂಕ ಮುಂದೂಡಿಕೆ!
D) ಮಕ್ಕಳಿಗೆ ಆಧಾರ್ ಮಾಡಲು ಬೇಕಾಗುವ ದಾಖಲೆಗಳು:
1) ಜನ್ಮ ದಾಖಲೆ
2) ತಂದೆ/ತಾಯಿಯ ಆಧಾರ್
3) ತಂದೆ/ತಾಯಿ
ಸೂಚನೆ: ಮಗುವಿನೊಂದಿಗೆ ಅಂಚೆ ಕಚೇರಿಯನ್ನು ಭೇಟಿ ಮಾಡಬೇಕು ಮತ್ತು ಮೊಬೈಲ್ ನಂ. ಬದಲಾಯಿಸಲು ಯಾವುದೇ ದಾಖಲೆ ಅವಶ್ಯವಿರುವುದಿಲ್ಲ.
Online Aadhar Card Status-ಆನ್ಲೈನ್ ನಲ್ಲಿ ಆಧಾರ್ ಕಾರ್ಡ ವಿವರವನ್ನು ಪಡೆಯುವ ವಿಧಾನ:
ಒಮ್ಮೆ ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ಬಳಿಕ ಈ Aadhar Card status ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕೇಂದ್ರದ ಆಧಾರ್ ಪ್ರಾಧಿಕಾರದ ಜಾಲತಾಣವನ್ನು ಪ್ರವೇಶ ಮಾಡಿ ನಿಮ್ಮ ಆಧಾರ್ ಕಾರ್ಡನ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.